Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025 ದಿನದಂದು ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಕ್ರೀಡೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಲ್ಕು ಜನರಿಗೆ ಗೌರವ ಸನ್ಮಾನ ಮಾಡಲು ಕೋರ್ ಕಮಿಟಿ ನಿರ್ಧರಿಸಿದೆ.ಕೆಂಗಲಗುತ್ತಿ ಶಿಕ್ಷಕ ಹಣಮಂತ ಕಾತರಕಿ, ವಿಜಯಪುರ ಎ.ಎಸ್.ಐ ನೌಕರ ಮೌಲಾಸಾಬ ಮೈನುದ್ದೀನಸಾಬ ಇಂಗಳೇಶ್ವರ, ನವಿಮುಂಬೈನ ಓಟಗಾರ ಶ್ರೇಯಸ ಯಶವಂತ ರಾವ ಹಾಗೂ ವಿಜಯಪುರ ನಗರದ ಹೆಡ್ ಕಾನಸ್ಟೇಬಲ್ ಭೀಮಾಶಂಕರ ಮಾಡಗ್ಯಾಳ ಅವರನ್ನು ಕಾರ್ಯಕ್ರಮದ ದಿನ ಗೌರವ ಸನ್ಮಾನ ನಡೆಯಲಿದೆ.ಈ ನಾಲ್ಕೂ ಜನ ಸಾಧಕರು ಶಿಕ್ಷಣ, ಪ್ರವಾಸೋದ್ಯಮ, ಪರಿಸರ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅವರದೇ ಆದ ಕೊಡುಗೆ ನೀಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ವಚ್ಚ, ಸುಂದರ, ಸದೃಢ ವಿಜಯಪುರಕ್ಕಾಗಿ ಡಿಸೆಂಬರ್ 7 ರಂದು ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಂದ ಮನವಿ ಬಂದಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 4, 5 ಹಾಗೂ 6 ರಂದು ಮೂರು ದಿನಗಳ ಕಾಲ ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.ಮೊದಲು ಬರುವ ಕೇವಲ 1000(ಒಂದು ಸಾವಿರ) ಜನರಿಗೆ ಅವಕಾಶ ಮಾತ್ರ ನೋಂದಣಿಗೆ ಅವಕಾಶ ಒದಗಿಸಲಾಗಿದೆ. ಕ್ರೀಡಾಪಟುಗಳು, ಸಾರ್ವಜನಿಕರು ಹಾಗೂ ಪರಿಸರಾಸಕ್ತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.ಈಗಾಗಲೇ 21 ಕಿ. .ಮೀ ವಿಭಾಗದಲ್ಲಿ 538, 10 ಕಿ. ಮೀ. ವಿಭಾಗದಲ್ಲಿ, 264 ಹಾಗೂ 5 ಕಿ. ಮೀ ಓಟದಲ್ಲಿ 19,331 ಸೇರಿದಂತೆ ಒಟ್ಟು 20 ಸಾವಿರಕ್ಕೂ ಹೆಚ್ಚು ಓಟಗಾರರು ಆನಲೈನ್ ಮೂಲಕ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿದ್ದಾರೆ ಎಂದು ನೋಂದಣಿ ಸಮಿತಿಯ ಡಾ. ರಾಜು ಯಲಗೊಂಡ, ವೀರೇಂದ್ರ ಗುಚ್ಚಟ್ಟಿ ಹಾಗೂ ವಿನಯ ಕಂಚ್ಯಾಣಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹೂವು ಬಿಟ್ಟ ಕಬ್ಬಿನ ತೂಕ ಇಳಿಕೆ | ಕಬ್ಬು ಕಟಾವು ಗ್ಯಾಂಗ್‌ಗೆ ಬಾರಿ ಡಿಮ್ಯಾಂಡ್ | ಆತಂಕದಲ್ಲಿ ರೈತರು ಉದಯರಶ್ಮಿ ದಿನಪತ್ರಿಕೆ ವರದಿ: ಎಸ್ ಎಮ್ ಇಟ್ಟಿಜಮಖಂಡಿ: ಕಬ್ಬಿಗೆ ಸೂಕ್ತ ದರ ನಿಗದಿಗೆ ಆಗ್ರಹಿಸಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದ ಕಬ್ಬು ಬೆಳೆಗಾರರು, ಈಗ ಕಟಾವಿಗೆ ಗ್ಯಾಂಗ್‌ಮನ್‌ಗಳನ್ನು ಕಾಯುವಂತಾಗಿದೆ. ಅಷ್ಟೇ ಅಲ್ಲ ಹೆಚ್ಚಿಗೆ ದುಡ್ಡು ಕೇಳಿದರೂ ನೀಡಿ ಕಾರ್ಖಾನೆಗೆ ಕಬ್ಬು ಸಾಗಿಸುವ ಒತ್ತಡದಲ್ಲಿ ಸಿಲುಕಿದ್ದಾರೆ. ಹೌದು, ಜಿಲ್ಲೆಯಲ್ಲಿ ಎಲ್ಲ ಸಕ್ಕರೆ ಕಾರ್ಖಾನೆಗಳು ಒಮ್ಮೆಲೆ ಆರಂಭವಾದ ಬಳಿಕ ಕಬ್ಬು ಬೆಳೆಗಾರರು ಎದುರಿ ಸುತ್ತಿರುವ ಹೊಸ ಸಂಕಷ್ಟ ಇದು.”ತಿಂಗಳುಗಟ್ಟೆ ಕೆಲಸ ಬಿಟ್ಟು ಕಬ್ಬಿನ ದರಕ್ಕಾಗಿ ರಸ್ತಾದಾಗ ಕುಳಿತು ಪ್ರತಿಭಟನೆ ಮಾಡಿದ್ದ ಆಯ್ರೀ. ಈಗ ಕಾರ್ಖಾನೆಗೆ ಕಬ್ಬ ಕಳಸಬೇಕಂದ್ರ ಕಡ್ಯಾಕ (ಕಟಾವು) ಗ್ಯಾಂಗ್‌ಮನ್‌ಗಳು ಹೆಚ್ಚಿಗೆ ಹಣ ಕೇಳಾಕ ಶುರು ಮಾಡ್ಯಾರಿ,” ಎಂದು ಕಬ್ಬು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.ಜಮೀನುಗಳು ರಸ್ತೆಯಿಂದ ಒಂದಿಷ್ಟು ದೂರ ಇದ್ದರೆ ಕಾರ್ಖಾನೆಯವರು ನೀಡುವ ಹಣ ಬಿಟ್ಟು ಪ್ರತಿ ಲೋಡ್ ಗೆ ಗ್ಯಾಂಗ್‌ಮನ್ ಗಳಿಗೆ…
ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಶಿಶುನಿಕೇತನ ಸಿ.ಬಿ.ಎಸ್.ಇ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯಾವ ದೇಶ ತನ್ನ ಇತಿಹಾಸವನ್ನು ಮರೆಯುತ್ತದೆಯೋ ಅದಕ್ಕೆ ಭವಿಷ್ಯವಿಲ್ಲ. ಇಡೀ ಜಗತ್ತಿಗೆ ಶಿಕ್ಷಣ ಕೊಟ್ಟ ದೇಶ ನಮ್ಮ ಭಾರತ. ನಮ್ಮತನವನ್ನು ಉಳಿಸಿಕೊಂಡು ಶಿಕ್ಷಣ ಕೊಟ್ಟಿದೆ ಎಂದು ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಶಿಶುನಿಕೇತನ ಸಿ.ಬಿ.ಎಸ್.ಇ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಶಿಕ್ಷಣವು ವೈಜ್ಞಾನಿಕ ತಳಹದಿಯ ಮೇಲಿದೆ. ಅದನ್ನು ನಾಶಪಡಿಸುವ ಕೆಲಸ ಬ್ರಿಟಿಷರಿಂದ ನಡೆದಿತ್ತಾದರೂ ಸಾಧ್ಯವಾಗಲಿಲ್ಲ. ಇದೀಗ ಹೊಸ ಶಿಕ್ಷಣ ಪದ್ಧತಿ ನಮ್ಮತನದ ಶಿಕ್ಷಣ ಕಲ್ಪಿಸಲಿದೆ ಎಂದರು.ವಿಜಯಪುರ ಜಿಲ್ಲೆಯ ಅತ್ಯಂತ ಹಳೆಯದಾದ ಶ್ರೀ ಸಿದ್ದೇಶ್ವರ ಸಂಸ್ಥೆಯಡಿ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವ ಸಂಗನಬಸವ ಶಿಶುನಿಕೇತನ ಶಾಲೆಯು ಉತ್ತರ ಕರ್ನಟಕದಲ್ಲಿ ಅತೀ ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆಯಾಗಿದೆ. ಈ ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿ ಮಾಡಿದವರು ಡಾ.ಫ.ಗು.ಹಳಕಟ್ಟಿ ಹಾಗೂ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಶಾಲಾ ಎಸ್ ಡಿ ಎಂ ಸಿಯವರು ಹಾಗೂ ಶಾಲಾ ಶಿಕ್ಷಕರು ಪ್ರಾಮಾಣಿಕವಾಗಿ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿದಾಗ ಶಾಲಾ ಅಭಿವೃದ್ಧಿಯಾಗಲು ಸಾಧ್ಯ ಎಂದು ಗ್ರಾಮ ಸಂಪನ್ಮೂಲ ವ್ಯಕ್ತಿ ಅಶ್ವಿನಿ ಬಗಲಿ ಹೇಳಿದರು.ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-2 ಮರಡಿ ಶಾಲೆಯಲ್ಲಿ 2023-24ನೇ ಸಾಲಿನ ಸಮಗ್ರ ಶಿಕ್ಷಣ ಅಭಿಯಾನದ ಯೋಜನೆಯ ಸಾಮಾಜಿಕ ಪರಿಶೋಧನಾ ವರದಿಯ ಶಾಲಾ ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸರಕಾರದ ಯೋಜನೆಯ ಸದುಪಯೋಗ ಪಡೆದುಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಶ್ರಮಿಸಬೇಕೆಂದು ಹೇಳಿದರು.ಶಿಕ್ಷಕ ಡಿ.ಎಸ್. ಬಗಲಿ ಮಾತನಾಡಿ, ಸರ್ಕಾರದಿಂದ ಬಂದ ಅನುದಾನವನ್ನು ಪ್ರಾಮಾಣಿಕವಾಗಿ ಬಳಕೆಮಾಡಿ ಶಾಲೆಯ ಭೌತಿಕ ಹಾಗೂ ಗುಣಮಟ್ಟದ ಶಿಕ್ಷಣ ಕೊಡುವುದು ನಮ್ಮ ಕರ್ತವ್ಯವಾಗಿದೆ ಎಂದರು.ಇದಕ್ಕೆ ಪೋಷಕರ ಸಹಕಾರ ಅಗತ್ಯವಾಗಿ ಬೇಕು ಎಂದು ಹೇಳಿದರು.ಶಿಕ್ಷಕ ಬಸವರಾಜ ಕರಜಗಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಪರಿಸರ, ಉತ್ತಮ ಸಂಸ್ಕಾರ ನೀಡುವುದು ಅತೀ ಮುಖ್ಯವಾಗಿದೆ. ಉಚಿತ ಶಿಕ್ಷಣ, ಉಚಿತ ಪಠ್ಯಪುಸ್ತಕ, ಉಚಿತ ಸಮವಸ್ತ್ರ, ಬಿಸಿಯೂಟ, ಬಾಳೆಹಣ್ಣು,…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಶಾಲಾ ಹಂತದ ಕ್ರೀಡಾಕೂಟಗಳಿಂದ ಮಕ್ಕಳಲ್ಲಿ ಗೆಲುವಿನ ಹಠ, ಛಲ, ಸ್ಫೂರ್ತಿ ಸಿಗುತ್ತದೆ ಎಂದು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಬಿ ಪತಂಗಿ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಎಂ.ಜಿ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ 2ನೇ ವರ್ಷದ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಶಾಲಾ ಹಂತದ ಕ್ರೀಡಾಕೂಟಗಳು ಮಕ್ಕಳ ಮಾನಸಿಕ, ದೈಹಿಕ ಹಾಗೂ ಶಾರೀರಿಕ ಬೆಳವಣಿಗಯಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.ಸಿ.ಆರ್.ಪಿ ಸಂಗಮೇಶ ಮಾತನಾಡಿ, ಮಕ್ಕಳ ಸಮತೋಲನ ಬೆಳವಣಿಗೆಯಲ್ಲಿ ಕ್ರೀಡಾಕೂಟಗಳ ಪಾತ್ರ ಹಿರಿದಾಗಿದೆ ಎಂದರು.ಮಹಿಳಾ ಕ್ರಿಕೆಟ್ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯ ರಾಜೇಶ್ವರಿ ಗಾಯಕವಾಡ ದೇಶದ ಕೀರ್ತಿಯನ್ನು ಬೆಳಗಿದಂತೆ ಮುಂದಿನ ದಿನಮಾನಗಳಲ್ಲಿ ಎಂ.ಜಿ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ದೇಶದ ಕೀರ್ತಿಯನ್ನು ಬೆಳಗಬೇಕು ಎಂದು ಹಾರೈಸಿದರು.ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.ಭರ್ಜರಿ ಬ್ಯಾಟಿಂಗ್, ಬಾಲಿಂಗ್ಕ್ರೀಡಾಕೂಟಗಳ ಉದ್ಘಾಟನಾ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ ಬಾಲಿಂಗ್ ಮಾಡುವ ಮೂಲಕ ಕ್ರಿಕೆಟ್…
ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು ಸ್ವಾಗತಕರ. ಆದರೆ ಸರ್ಕಾರ ಇನ್ನುವರೆಗೂ ಮೆಕ್ಕೆಜೋಳ ಖರೀದಿ ಕೇಂದ್ರಗಳು ಆರಂಭ ಮಾಡದಿರುವುದು ದುರದೃಷ್ಟಕರ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಬಣದ ತಾಲೂಕು ಅಧ್ಯಕ್ಷ ರಹಿಮನಸಾಬ್ ಕನಕಾಲ ಹೇಳಿದ್ದಾರೆ.ಈ ಕುರಿತು ಶನಿವಾರ ಪ್ರಕಟಣೆ ಮೂಲಕ ತಿಳಿಸಿದ ಅವರು, ದೇವರ ಹಿಪ್ಪರಗಿ ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಆದರಿಂದ ರೈತರ ಸಹಾಯಕ್ಕಾಗಿ ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕೆಂದು ರಹಿಮನಸಾಬ್ ಕನಕಾಲ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವರದಿ: ದೇವೇಂದ್ರ ಹೆಳವರವಿಜಯಪುರ: ಈ ಅಜ್ವಿಗೆ ವಯಸ್ಸು ನೂರರ ಮೇಲಾಗಿದೆ. ಬೆನ್ನು ಬಾಗಿಲ್ಲ. ಕಣ್ಣಿಗೆ ಕನ್ನಡಕ ಇಲ್ಲ. ಕೆಲಸ ಮಾಡುವ ಉತ್ಸಾಹ ಕುಗ್ಗಿಲ್ಲ. ಶರೀರ ಮುಪ್ಪಾದರೂ ನಿತ್ಯದ ಕಾಯಕ ಬಿಟ್ಟಿಲ್ಲ.ನೂರು ವಸಂತಗಳನ್ನು ಕಂಡ ಈ ಶತಾಯುಷಿ ಅಜ್ವಿಯ ಹೆಸರು ಸುಂದರವ್ವ ರಾಮಚಂದ್ರ ಭಜಂತ್ರಿ. ವಿಜಯಪುರ ನಗರದ ಇಬ್ರಾಹಿಂಪುರ ಬಡಾವಣೆಯ ನಿವಾಸಿ. ಸುಂದರವ್ವಜ್ಜಿ ಊರಿನ ಎಲ್ಲರಿಗೂ ಚಿರಪರಿತ.ಸುಂದರವ್ವಜ್ಜಿಗೆ ಹತ್ತು ಮಕ್ಕಳು. ಆರು ಜನ ಹೆಣ್ಣುಮಕ್ಕಳು. ನಾಲ್ವರು ಗಂಡುಮಕ್ಕಳು. ಇವರಲ್ಲಿ ಒಬ್ಬ ಮಗ ಕಲಬುರ್ಗಿ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿ(ಎಎಸ್ ಐ)ಯಾಗಿದ್ದಾರೆ.ಪತಿ ರಾಮಚಂದ್ರ ಮೂವತ್ತು ವರ್ಷಗಳ ಹಿಂದೆಯೇ ತೀರಿಹೋಗಿದ್ದಾರೆ. ಪತಿಯ ನಿಧನ ನಂತರ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ್ದಾಳೆ. ಗಿರಿಮೊಮ್ಮಕ್ಕಳನ್ನು ಕಂಡಿರುವ ಈ ಸುಂದರವ್ವಜ್ಜಿಗೆ ೧೨೦ ಕ್ಕೂ ಹೆಚ್ಚು ಮೊಮ್ಮಕ್ಕಳು ಮರಿಮೊಮ್ಮಕ್ಕಳು ಇದ್ದಾರೆ.ವಯಸ್ಸು ನೂರಾದರೂ ಸುಂದರವ್ವಜ್ಜಿ ಈವರೆಗೂ ತನ್ನ ಕಾಯಕ ಮಾತ್ರ ಬಿಟ್ಟಿಲ್ಲ. ಇನ್ನೂ ಮೈ ಬಾಗಿಸಿ ನಿತ್ಯ ಕೆಲಸ ಮಾಡುತ್ತಾಳೆ.ಇಳಿವಯಸ್ಸಿನಲ್ಲೂ ಸುಂದರವ್ವಜ್ಜಿ ದಣಿವರಿಯದೇ ಕೆಲಸ ಮಾಡುವುದನ್ನು ನೋಡಿ ಇಡೀ ಗ್ರಾಮಸ್ಥರು ಬೆರಗಾಗಿ ಹೋಗಿದ್ದಾರೆ.ಮನೆಯಲ್ಲಿ…
ಕುಟುಂಬದ ಸದಸ್ಯರಿಗೆ ಸಾ0ತ್ವನ ಹೇಳಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಉದಯರಶ್ಮಿ ದಿನಪತ್ರಿಕೆ ಮಂಗಳೂರು: ಇತ್ತೀಚಿಗೆ ಅಕಾಲಿಕವಾಗಿ ನಿಧಾನರಾಗಿರುವ ವಿಡಿಯೋ ಜರ್ನಲಿಸ್ಟ್ ನಾಗರಾಜ್ ಅವರ ಬಿಜೈ ಕಾಪಿಕಾಡ್ ನಿವಾಸಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ರಾಜ್ಯ ಸಂಘದಿಂದ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು. ಅಲ್ಲದೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ಆರ್ಥಿಕ ನೆರವು ಕೊಡಿಸುವ ಭರವಸೆ ನೀಡಿದರು.ಹಿರಿಯ ಪತ್ರಕರ್ತ ಹನೀಫ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಏನ್, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ನಿರ್ದೇಶಕ ಶ್ರೀನಿವಾಸ್ ನಾಯಕ್ ಇಂದಾಜೆ, ಸಂಘದ ನಿಕಟಪೂರ್ವ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟಾ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಉಪಸ್ಥಿತರಿದ್ದರು.
ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ಡಿಜಿಟಲ್ ಯುಗದಲ್ಲಿ ಮಾಧ್ಯಮ ಕೌಶಲಗಳು ಬಹಳ ಪ್ರಾಮುಖ್ಯತೆ ಪಡೆದಿದ್ದು, ವಿದ್ಯಾರ್ಥಿನಿಯರು ಈ ಕೌಶಲ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ, ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಇವರ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ‘ವಿಡಿಯೋಗ್ರಾಫಿ ಕೌಶಲಗಳು’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಒಂದು ಫೋಟೋ ಮತ್ತು ವಿಡಿಯೋ ಯಾವುದೇ ಘಟನೆ, ಪರಿಸ್ಥಿತಿ ಮತ್ತು ದೃಶ್ಯದ ನಿಜವಾದ ಸ್ವರೂಪವನ್ನು ಅತ್ಯಂತ ಸ್ಪಷ್ಟವಾಗಿ ಪ್ರತಿಬಿಂಬಿಸುವ ಶಕ್ತಿಯನ್ನು ಹೊಂದಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಈ ರೀತಿಯ ದೃಶ್ಯ–ಮಾಧ್ಯಮ ಕೌಶಲಗಳು ಅಪಾರ ಮಹತ್ವವನ್ನು ಪಡೆದಿವೆ. ಈ ಕೌಶಲಗಳು ಜ್ಞಾನವನ್ನು…
