ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025 ದಿನದಂದು ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಕ್ರೀಡೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಲ್ಕು ಜನರಿಗೆ ಗೌರವ ಸನ್ಮಾನ ಮಾಡಲು ಕೋರ್ ಕಮಿಟಿ ನಿರ್ಧರಿಸಿದೆ.
ಕೆಂಗಲಗುತ್ತಿ ಶಿಕ್ಷಕ ಹಣಮಂತ ಕಾತರಕಿ, ವಿಜಯಪುರ ಎ.ಎಸ್.ಐ ನೌಕರ ಮೌಲಾಸಾಬ ಮೈನುದ್ದೀನಸಾಬ ಇಂಗಳೇಶ್ವರ, ನವಿಮುಂಬೈನ ಓಟಗಾರ ಶ್ರೇಯಸ ಯಶವಂತ ರಾವ ಹಾಗೂ ವಿಜಯಪುರ ನಗರದ ಹೆಡ್ ಕಾನಸ್ಟೇಬಲ್ ಭೀಮಾಶಂಕರ ಮಾಡಗ್ಯಾಳ ಅವರನ್ನು ಕಾರ್ಯಕ್ರಮದ ದಿನ ಗೌರವ ಸನ್ಮಾನ ನಡೆಯಲಿದೆ.
ಈ ನಾಲ್ಕೂ ಜನ ಸಾಧಕರು ಶಿಕ್ಷಣ, ಪ್ರವಾಸೋದ್ಯಮ, ಪರಿಸರ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅವರದೇ ಆದ ಕೊಡುಗೆ ನೀಡಿದ್ದಾರೆ.

