ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಶಾಲಾ ಹಂತದ ಕ್ರೀಡಾಕೂಟಗಳಿಂದ ಮಕ್ಕಳಲ್ಲಿ ಗೆಲುವಿನ ಹಠ, ಛಲ, ಸ್ಫೂರ್ತಿ ಸಿಗುತ್ತದೆ ಎಂದು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಬಿ ಪತಂಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಎಂ.ಜಿ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ 2ನೇ ವರ್ಷದ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಶಾಲಾ ಹಂತದ ಕ್ರೀಡಾಕೂಟಗಳು ಮಕ್ಕಳ ಮಾನಸಿಕ, ದೈಹಿಕ ಹಾಗೂ ಶಾರೀರಿಕ ಬೆಳವಣಿಗಯಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಸಿ.ಆರ್.ಪಿ ಸಂಗಮೇಶ ಮಾತನಾಡಿ, ಮಕ್ಕಳ ಸಮತೋಲನ ಬೆಳವಣಿಗೆಯಲ್ಲಿ ಕ್ರೀಡಾಕೂಟಗಳ ಪಾತ್ರ ಹಿರಿದಾಗಿದೆ ಎಂದರು.
ಮಹಿಳಾ ಕ್ರಿಕೆಟ್ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯ ರಾಜೇಶ್ವರಿ ಗಾಯಕವಾಡ ದೇಶದ ಕೀರ್ತಿಯನ್ನು ಬೆಳಗಿದಂತೆ ಮುಂದಿನ ದಿನಮಾನಗಳಲ್ಲಿ ಎಂ.ಜಿ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ದೇಶದ ಕೀರ್ತಿಯನ್ನು ಬೆಳಗಬೇಕು ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಭರ್ಜರಿ ಬ್ಯಾಟಿಂಗ್, ಬಾಲಿಂಗ್
ಕ್ರೀಡಾಕೂಟಗಳ ಉದ್ಘಾಟನಾ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ ಬಾಲಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗಳಿಗೆ ಚಾಲನೆ ನೀಡಿದರೆ, ಪ.ಪಂ ಅಧ್ಯಕ್ಷರಾದ ಸಿ.ಎಸ್ ಗಿಡ್ಡಪ್ಪಗೋಳ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಸಿ.ಎಸ್ ಗಿಡ್ಡಪ್ಪಗೋಳ, ಆರ್.ಬಿ ಪಕಾಲಿ, ಇಸ್ಮಾಯಿಲ್ ತಹಶೀಲ್ದಾರ್, ಮೋದಿನಪಟೇಲ್ ಖಾನ್, ಬಿ.ಡಿ ಕಲಾದಗಿ, ಅಲ್ ಹಾಜ್ ಹಸನಡೋಂಗ್ರಿ ಗಿರಗಾವಿ, ಮಹೇಬೂಬ ಅತ್ತಾರ, ಕಾಸೀಮಸಾಬ ಗಿರಗಾವಿ, ಸಲೀಮ ಅತ್ತಾರ, ಇಕ್ಬಾಲ್ ನದಾಫ, ಹನೀಫ್ ಮಕಾನದಾರ, ಬುಡ್ಡಾ ಮುನ್ನಾಭಾಯಿ, ಚಾಂದ ಗಿರಗಾವಿ, ಖಲಂದರ್ ಕಂಕರಪೀರ, ಎಂ.ಆರ್ ಕಲಾದಗಿ, ಅಲ್ಲಾಭಕ್ಷ ಕಾಖಂಡಕಿ, ರಿಯಾಜ ಕಂಕರಪೀರ, ಸಲೀಮ ಸಾರವಾಡ, ಅನ್ಸರ್ ಜಮಖಂಡಿ, ಗೈಬುಸಾಬ ಕಂಕರಪೀರ ಹಾಗೂ ಇನ್ನಿತರರು ಇದ್ದರು.

