Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಸಮೀಪದ ಹುಣಶ್ಯಾಳ ಗ್ರಾಮದ ಟಿಪ್ಪುಸುಲ್ತಾನ ಹೈದರಸಾಬ ಸಿಪಾಯಿ ಅವರನ್ನು ಕೆಪಿಸಿಸಿ ಅಧ್ಯಕ್ಷರ ನರ್ಧೇಶನದ ಮೇರೆಗೆ ಹಾಗೂ ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಅವರ ಶಿಫಾರಸ್ಸಿನಂತೆ ದೇವರಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಘಟನಾ ಕಾರ್ಯದರ್ಶಿಯನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್. ಲೋಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಹಣ ಪಡೆದು ವಿದ್ಯಾರ್ಥಿಗಳಿಗೆ ಇಷ್ಟವಾದ ಕೇಂದ್ರ | ಸಂಭಾಷಣೆ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಬೇಕಾದ ಕೇಂದ್ರಗಳ ವ್ಯವಸ್ಥೆ ಮಾಡಿ ಕೊಡುವುದಾಗಿ ಸುಮಾರು ೩೦ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ, ಅವರು ಕೇಳಿದ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷಾ ದಾಖಲಾತಿ ನೀಡುವ ಭರವಸೆಯನ್ನು ಸಿಂದಗಿ ಸರಕಾರಿ ಆದರ್ಶ ಶಾಲೆಯ ಶಿಕ್ಷಕ ರಮೇಶ ಚಟ್ಟರಕಿ ನೀಡಿದ್ದರು ಎಂಬ ಸಂಭಾಷಣೆ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದೀಗ ಬೆಳಕಿಗೆ ಬಂದಿದೆ.ಈ ಕುರಿತು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಈ ವಿಷಯದ ಕುರಿತು ವೈರಲ್ ಆಗಿದೆ. ಅದಕ್ಕೆ ಸಂಬಂಧಿಸಿದಂತೆ ಶಿಕ್ಷಕ ರಮೇಶ ಚೆಟ್ಟರಕಿ ಅವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಮತ್ತು ಮೇಲಾಧಿಕಾರಿಗಳ ಆದೇಶದ ಮೇರೆಗೆ ಶಾಲೆಯ ಶಿಕ್ಷಕನ ಈ ಕಾರ್ಯಕ್ಕೆ ಏನು ಮಾಡಿದ್ದಾರೆ ಎಂದು ಮುಖ್ಯೋಪಾಧ್ಯಾಯರಿಗೂ ಒಂದು ನೋಟಿಸ್ ನೀಡಿ ಎಂದು ಹೇಳಿದ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಸರಕಾರಿ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘ ನಿ. ೨೦೨೬-೨೦೩೧ನೆಯ ಸಾಲಿನ ಅವಧಿಗೆ ಅಧ್ಯಕ್ಷರಾಗಿ ಝಡ್.ಎಸ್.ಮುನಿಯಾರ, ಉಪಾಧ್ಯಕ್ಷರಾಗಿ ಎ.ಡಿ.ಭೂಸನೂರ. ನಿರ್ದೇಶಕರಾಗಿ ಅಲ್ತಾಫ್ ಸಾಲೋಟಗಿ. ಡಿ.ಎಲ್.ಮರ್ತೂರ. ಝಡ್.ಎಸ್. ಬಗಲಿ. ಎಂ.ಎ.ನಾಯ್ಕೋಡಿ. ಎಂ.ಎಚ್.ಮರ್ತೂರ. ಆರ್.ಎಂ.ಹಳ್ಳಿ ಮಹಿಳಾ ನಿರ್ದೇಶಕರಾಗಿ ಎನ್.ಆರ್.ಮಕಾನದಾರ. ಆರ್.ಜಿ.ತಾಂಬೋಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುಣಾವಣಾಧಿಕಾರಿ ವಿ.ಆರ್.ಜತ್ತಿ ತಿಳಸಿದ್ದಾರೆ.

Read More

೨೧ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಜಿಲ್ಲಾ ಸಮ್ಮೇಳನವನ್ನು ಏಪ್ರಿಲ್ ಪ್ರಥಮ ವಾರದಲ್ಲಿ ಹಮ್ಮಿಕೊಳ್ಳಲು ನಿಶ್ಚಯಿಸಲಾಗಿತ್ತು. ಆದರೆ ಪ್ರಥಮ ವಾರದಲ್ಲಿ ಪರೀಕ್ಷೆಗಳು ಹಾಗೂ ಮೌಲ್ಯಮಾಪನ, ದ್ವಿತೀಯ ವಾರದಲ್ಲಿ ಅಂಬೇಡ್ಕರ್ ಜಯಂತಿ, ಮೂರನೇ ವಾರದಲ್ಲಿ ಬಸವ ಜಯಂತಿಯ ಕಾರ್ಯಕ್ರಮಗಳು ಇರುವುದರಿಂದ ಏಪ್ರಿಲ್ ಕೊನೆಯ ವಾರ ೨೭ ಮತ್ತು ೨೮ರಂದು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು ಅಧಿಕೃತ ದಿನಾಂಕವನ್ನು ಮುಂದಿನ ಸಭೆಯಲ್ಲಿ ತಿಳಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ೨೧ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸುದೀರ್ಘ ೧೪ವರ್ಷಗಳ ಅವಧಿಯ ನಂತರ ಸಿಂದಗಿ ತಾಲೂಕಿಗೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಭಾಗ್ಯ ಒದಗಿ ಬಂದಿದ್ದು, ಸಮ್ಮೇಳನದ ಯಶಸ್ಸಿಗೆ ಎಲ್ಲ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು, ಮಹಿಳೆಯರು, ಹಿರಿಯ ಮತ್ತು ಕಿರಿಯ ಕವಿಗಳು, ಸಾಹಿತ್ಯಾಸಕ್ತರು ಮತ್ತು ಮಕ್ಕಳು ಕಂಕಣಬದ್ಧರಾಗಬೇಕು. ಸಾಹಿತ್ಯ ಪರಿಷತ್ತಿನ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಎ.ಡಿ.ಕೋರವಾರ ಆಗ್ರಹಿಸಿದ್ದಾರೆ.ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗೋಲಗೇರಿ ಗ್ರಾಮವು ಸುಮಾರು ೮ಸಾವಿರ ಜನರನ್ನು ಹೊಂದಿರುವ ಗ್ರಾಮವಾಗಿದೆ. ಎರಡನೇ ಶ್ರೀಶೈಲ ಎಂದೇ ಖ್ಯಾತಿಯಾಗಿರುವ ಶ್ರೀ ಗೊಲ್ಲಾಳೇಶ್ವರ ದೇವಸ್ಥಾನವು ಗೋಲಗೇರಿಯಲ್ಲಿದೆ. ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ದರ್ಶನ ಪಡೆಯಲು ಬರುತ್ತಾರೆ. ಈ ಗ್ರಾಮಕ್ಕೆ ಸರ್ಕಾರದ ಯೋಜನೆಯಲ್ಲಿ ಸಾಕಷ್ಟು ಅನುದಾನ ಬಂದರೂ ಸಹ ಈ ಗ್ರಾಮದಲ್ಲಿ ಮಾತ್ರ ಕುಡಿಯುವ ನೀರು ಮಾತ್ರ ಪೂರೈಕೆಯಾಗುತ್ತಿಲ್ಲ. ಜಲಜೀವನ ಮಿಷನ್ ಅಡಿಯಲ್ಲಿ ಸುಮಾರು ರೂ.೩ಕೋಟಿ ವೆಚ್ಚದ ಕಾಮಗಾರಿಯಾಗಿದೆ. ಆದರೆ ಆ ಕಾಮಗಾರಿಯು ಅರ್ಥಪೂರ್ಣವಾಗಿಲ್ಲ ಮತ್ತು ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ.ಇದರ ಕುರಿತಾಗಿ ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಮನಕ್ಕೂ ತಂದಿದ್ದೇವೆ. ಜಿಲ್ಲಾ ಪಂಚಾಯಿತ್ ಅನುದಾನದಲ್ಲಿ ಸುಮಾರು ೪ತೆರೆದೆ ಬಾವಿಗಳು ಇದಾವೆ. ಆದರೆ ಅದು ನೀರನ್ನು ರಾಜಕಾರಣಿಗಳ ಪಾಲಾಗಿದ್ದು, ಸಾರ್ವಜನಿಕರಿಗೆ ಉಪಯೋಗ ಇಲ್ಲದಂತಾಗಿದೆ ಜಿಲ್ಲಾ ಪಂಚಾಯತ್ ಮುಖ್ಯ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಜಾಲವಾದ ಗ್ರಾಮದ ರೈತರ ಜಮೀನುಗಳಿಗೆ ಏಕದರ ನಿಗದಿಮಾಡಿ ಖರೀದಿಸುವಂತೆ ಆಗ್ರಹಿಸಿ ರೈತರ ಸಂಘ ಹಾಗೂ ಡಿಎಸ್‌ಎಸ್ ಪದಾಧಿಕಾರಿಗಳು ಪ್ರತಿಭಟನೆ ಕೈಗೊಂಡರು.ಗ್ರಾಮದ ರೈತರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಉತ್ತರ ಕರ್ನಾಟಕ ರೈತರ ಸಂಘದ ರಾಜ್ಯಾಧ್ಯಕ್ಷ ಶಂಕರಗೌಡ ಹಿರೇಗೌಡ ಮಾತನಾಡಿ, ಜಾಲವಾದ ಗ್ರಾಮದಲ್ಲಿ ಹರಿಯಾಣ ಮೂಲದ ಆರ್‌ಇಝಡ್ ಟ್ರಾನ್ಸಮಿಷನ್ ಸೋಲಾರ್ ಪಾರ್ಕ್ ಲಿಮಿಟೆಡ್ ಕಾರ್ಪೊರೇಟ್ ಕಂಪನಿಯು ರೈತರಿಗೆ ನಿಗದಿತ ಏಕರೂಪದ ಬೆಲೆ ನೀಡದೆ ವಂಚಿಸಿದೆ. ಈ ಕಂಪನಿಯು ತನ್ನ ನೀತಿಗಳಿಗೆ ಅನುಗುಣವಾಗಿ ನಿಗದಿತ ಅರ್ಹತಾ ಮಾನದಂಡಗಳಿಗೆ ಒಳಗೊಂಡAತೆ ಕರ್ನಾಟಕ ರಾಜ್ಯದಲ್ಲಿ ಬಿಆರ್‌ಐಜೆ ಯೋಜನೆಗೆ ರೈತರ ಭೂಮಿ ಖರೀದಿಸಿ ಸ್ಥಳೀಯ ನಿರಾಶ್ರಿತರಿಗೆ ಪ್ರತಿಯೊಂದು ಕುಟುಂಬಕ್ಕೆ ತಮ್ಮ ಕಂಪನಿಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ಸರ್ಕಾರಿ ನಿಯಮಗಳ ಪ್ರಕಾರ ದೃಢಪಡಿಸಿ, ಈಗ ಸ್ಥಳೀಯ ರೈತರಿಗೆ ಅನ್ಯಾಯ ಮಾಡಿದೆ.ರಾಜಕೀಯ ಬಲ ಮತ್ತು ಕಾನೂನಿನ ಅರಿವುಳ್ಳ ರೈತರಿಗೆ ಪ್ರತಿ ಎಕರೆಗೆ ೨೮ ರಿಂದ ೩೦ ಲಕ್ಷ ರೂಪಾಯಿ ಕೊಟ್ಟು ಜಮೀನು ಖರೀದಿಸಿದೆ. ಆದರೆ ಅಮಾಯಕ ರೈತರಿಗೆ…

Read More

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಸಿಂದಗಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶ್ರೀಗಳು ಕರೆ ಉದಯರಶ್ಮಿ ದಿನಪತ್ರಿಕೆ ಪಡಗಾನೂರ(ದೇವರಹಿಪ್ಪರಗಿ): ನಿಸ್ವಾರ್ಥವೆಂಬುದು ಧರ್ಮವಾಗಿದ್ದು, ಸ್ವಾರ್ಥವೆಂಬುದು ಅಧರ್ಮವಾಗಿದೆ. ಸ್ವಾರ್ಥವನ್ನು ತೆಗೆದುಹಾಕಿ ಎಲ್ಲರೂ ಸಾರ್ಥಕವಾದ ಜೀವನವನ್ನು ನಡೆಸಬೇಕು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ ಸಿಂದಗಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶ್ರೀಗಳು ಹೇಳಿದರು.ತಾಲ್ಲೂಕಿನ ಪಡಗಾನೂರ ಗ್ರಾಮದ ಸೋಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಜರುಗಿದ ಧರ್ಮಸಭೆ ಹಾಗೂ ಸಾಮೂಹಿಕ ವಿವಾಹದ ಸಾನಿಧ್ಯ ವಹಿಸಿ, ಗ್ರಾಮಸ್ಥರಿಂದ ಗುರುವಂದನ ಸ್ವೀಕರಿಸಿ ಮಾತನಾಡಿದರು. ನಿಸ್ವಾರ್ಥ ಕಾಯಕ ನಮ್ಮನ್ನು ನಾಯಕರನ್ನಾಗಿಸುತ್ತದೆ ಎಂದರು.ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ), ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ), ಮಾಜಿಶಾಸಕ ಶರಣಪ್ಪ ಸುಣಗಾರ ಮಾತನಾಡಿದರು.ಕಡಗಂಚಿಯ ಸಾವಿರದೇವರ ಸಂಸ್ಥಾನ ಮಠದ ವೀರಭದ್ರ ಸ್ವಾಮೀಜಿ ನೇತೃತ್ವದಲ್ಲಿ ಹಾಗೂ ಸೋಮೇಶ್ವರ ದೇವಸ್ಥಾನ ಕಮೀಟಿಯ ಅಧ್ಯಕ್ಷ ಅಯ್ಯಪ್ಪಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಸುಮಂಗಲೆಯರಿಂದ ಕುಂಭ ಕಳಶ,ಪಲ್ಲಕ್ಕಿಗಳ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ಇಂಗಳೇಶ್ವರ ಭೃಂಗೇಶ್ವರ ಶ್ರೀ, ಬಸವನಬಾಗೇವಾಡಿ ಶಿವಪ್ರಕಾಶಶ್ರೀ,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕೋರವಾರ ಗ್ರಾಮದ ಸದ್ಯ ಬೆಂಗಳೂರು ಸದ್ದುಗುಂಟೆ ಪಾಳ್ಯ ಠಾಣೆಯಲ್ಲಿ ಸಿಪಿಐ ಆಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ ಛಾಯಾಗೋಳ ೨೦೨೫ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.ವಿಜಯಪುರ, ಬಬಲೇಶ್ವರ, ಮನಗೂಳಿ, ಹುಕ್ಕೇರಿ, ಹುಬ್ಬಳ್ಳಿಗಳಲ್ಲಿ ಪಿಎಸ್‌ಐ ಆಗಿ ಸೇವೆ ಸಲ್ಲಿಸಿ ನಂತರ ಪದೋನ್ನತಿ ಹೊಂದಿ ಯಮಕನಮರಡಿ, ಕಲಬರ‍್ಗಿಯಲ್ಲಿ ಸೇವೆ ಸಲ್ಲಿಸಿ ಈಗ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಕಳೆದ ವರ್ಷ ಕೇಂದ್ರೀಯ ಗೃಹ ಮಂತ್ರಿಗಳ ಇಲಾಖೆಯ ಪ್ರಶಸ್ತಿ ಪಡೆದಿದ್ದರು.

Read More

ಸ್ವಾತಂತ್ರ್ಯ ಸೇನಾನಿ ಪದ್ಮಾವತಿ ವಾಮನರಾವ್ ದೇಸಾಯಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿದ ವಿಶ್ರಾಂತ ಸಂಪಾದಕ ಮನೋಜ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ದೇಶದ ಸ್ವತಂತ್ರ್ಯಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಪದ್ಮಾವತಿ ಬಾಯಿ ಅತ್ಯಂತ ಕಷ್ಟದ ಜೀವನ ನಡೆಸಿದರು. ಗಂಡನ ಮನೆಯ ನೂರಾರು ಎಕರೆ ಭೂಮಿ ಕಳೆದುಕೊಂಡು, ವಿದ್ಯುತ್, ನೀರು, ಶೌಚಾಲಯವಿಲ್ಲದ ಅತ್ಯಂತ ಕಿರಿದಾದ ಕೋಣೆಯಲ್ಲಿ ವಾಸವಿದ್ದು, ತಮ್ಮ ಕೊನೆಯ ಜೀವನ ಕಳೆದರು ಎಂದು ಸ್ವಾತಂತ್ರ್ಯ ಸೇನಾನಿ ಪದ್ಮಾವತಿ ಬಾಯಿ ಅವರ ಮೊಮ್ಮಗ, ವಿಶ್ರಾಂತ ಸಂಪಾದಕ, ಮನೋಜ ಪಾಟೀಲ ಹೇಳಿದರು.ನಗರದ ಬಸವ ಭವನದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ಸೇನಾನಿ ಪದ್ಮಾವತಿ ವಾಮನರಾವ್ ದೇಸಾಯಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಮಖಂಡಿಯಲ್ಲಿ ಪೇಶ್ವೆಗಳ ಸಂಸ್ಥಾನ ಇದ್ದುದರಿಂದ ಎಲ್ಲ ಕಾಗದ ಪತ್ರಗಳು, ದಾಖಲೆಗಳು ಮಹರಾಷ್ಟ್ರದ ಪುಣೆಯಲ್ಲಿವೆ. ಕರ್ನಾಟಕದಲ್ಲಿ ಪೇಸ್ವೆಗಳ ಆಡಳಿತದ ಯಾವ ದಾಖಲೆಗಳು ಸಿಗುತ್ತಿಲ್ಲ. ಮೊದಲು ಕನ್ನಡಕ್ಕೆ ಪ್ರಾಶಸ್ತ್ರವಿರಲಿಲ್ಲ, ಮರಾಠಿ ಪ್ರಭಾವವಿತ್ತು. ಈಗಲೂ ಪೇಶ್ವಾಯಿ ಸಂಸ್ಥಾನಗಳ ದಾಖಲೆಗಳು ಬೇಕಾದಲ್ಲಿ ಪುಣೆಗೆ ಹೋಗಬೇಕಾದ ಅನಿವಾರ್ಯತೆಯಿದೆ. ದಾಖಲೆಗಳಿಲ್ಲದ…

Read More

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹರಿದ 2 ಟಿಎಂಸಿ ನೀರು | ಶಾಸಕ ಲಕ್ಷ್ಮಣ ಸವದಿ ಭಗೀರಥ ಪ್ರಯತ್ನಕ್ಕೆ ಸಿಕ್ಕ ಫಲ ಉದಯರಶ್ಮಿ ದಿನಪತ್ರಿಕೆ ಅಥಣಿ: ತೀವ್ರ ಬೇಸಿಗೆಯ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಅಥಣಿ ಮತಕ್ಷೇತ್ರದ ಜನತೆ ಹಾಗೂ ರೈತ ಸಮುದಾಯಕ್ಕೆ ಈಗ ಸಮಾಧಾನದ ಸುದ್ದಿ ಸಿಕ್ಕಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಸುಮಾರು 2 ಟಿಎಂಸಿ ನೀರು ಹರಿದು ಬರುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.ಇತ್ತೀಚೆಗೆ ಪ್ಪರಗಿ ಬ್ಯಾರೇಜ್‌ನ ಗೇಟ್ ಮುರಿದು ನೀರು ಕೆಳಭಾಗಕ್ಕೆ ಹರಿದು ಹೋಗಿದ್ದರಿಂದ, ಅಥಣಿ ಭಾಗದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗುವ ಭೀತಿ ಎದುರಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಅಥಣಿ ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರು, ರೈತರ ಮೇಲಿನ ಅಪಾರ ಕಾಳಜಿಯಿಂದ ತಕ್ಷಣ ಕಾರ್ಯಪ್ರವೃತ್ತರಾದರು.ಮಹಾರಾಷ್ಟ್ರ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಕೃಷ್ಣಾ ನದಿಗೆ ನೀರು ಬಿಡುವಂತೆ ಮನವರಿಕೆ…

Read More