ಬರಡೋಲ ಗ್ರಾಮದ ವಿಠ್ಠಲ ನಗರದಲ್ಲಿ ವಿಠ್ಠಲ ರುಕ್ಮಿಣಿ & ಹನುಮಾನ ದೇವರ ಶಿಖರ ಕಳಸಾರೋಹಣ | ಅಭಿನವ ಮುರುಗೇಂದ್ರ ಶ್ರೀ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವರದಿ: ಮಲಿಕ್ ಎಲ್.ಜಮಾದಾರ
ಚಡಚಣ: ದೇವಸ್ಥಾನಗಳು ಕಟ್ಟಿಸಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕೇವಲ ಶಿಖರ ಕಳಸಾರೋಹಣ ಮಾಡುವುದಲ್ಲ ಬದಲಿಗೆ ಅಲ್ಲಿನ ಪವಿತ್ರ ಸ್ಥಳದಲ್ಲಿ ಸತ್ಸಂಗ ಮತ್ತು ಭಕ್ತಿಮಾರ್ಗ, ಭಜನ ಸಂಲ್ಪದ ಸಂಕೇತವನ್ನು ಜೀವಂತಗೊಳಿಸುವುದಾಗಿದೆ ಎಂದು ಶಿರಶ್ಯಾಡದ ಅಭಿನವ ಮುರುಗೇಂದ್ರ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಬರಡೋಲ ಗ್ರಾಮ ವಿಠ್ಠಲ ನಗರದಲ್ಲಿ ಸೆ.08 ರಂದು ಅಯೋಜಿಸಲಾದ ವಿಠ್ಠಲ ರುಕ್ಮಿಣಿ ಮತ್ತು ಹಾಗೂ ಹನುಮಾನ ದೇವರ ಶಿಖರ ಕಳಸಾರೋಹಣ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಿಠ್ಠಲ ರುಕ್ಮಿಣಿ ಹಾಗೂ ಹನುಮಾನ ದೇವರ ಬೃಹತ್ ಶಿಖರವಾಗಬೇಕೆಂಬ ಎಲ್ಲರ ಮಹಾದಾಸೆ ಇಂದು ಸಾಕಾರಗೊಂಡಿದೆ ಇದಕ್ಕೆ ಕಾರಣ ನಿಮ್ಮಲ್ಲಿರುವ ಅಚಲ ಭಕ್ತಿ,ನಾಮಸ್ಮರಣೆ ನಿಮ್ಮ ಪರಿಶ್ರಮ ಮತ್ತು ನಿಮ್ಮ ನಿರಂತರ ಪ್ರಯತ್ನ.ವಿಠ್ಠಲ ನಗರವು ಮೊದಲ ದೊಡ್ಡಿ ಎಂದು ಕರೆಯಲಾಗುತ್ತಿತ್ತು ಆದರೆ ಇಂದು ಸದಾ ವಿಠ್ಠಲನ ಧ್ಯಾನ ವಿವಿಧ ಸತ್ಸಂಗ, ಭಜನೆಯಂತಹ ಕಾರ್ಯಕ್ರಮಗಳಿಂದ ಪ್ರಸಿದ್ದಿ ಪಡೆದು ಕೊಂಪಿಯಾಗಿದ್ದನ್ನು ಹಂಪಿಯಾಗಿ ಮಾರ್ಪಟ್ಟಿದೆ. ಎಂದರು.
ಇದೆಲ್ಲದ್ದಕ್ಕೂ ಕಾರಣೀಭೂತ ಭಗವಂತ ಅವನು ಪ್ರಕೃತಿಯ ಕಣಕಣದಲಿದ್ದಾನೆ ಇಂತಹ ದೇವಸ್ಥಾನಗಳ ಮೂಲಕ ನಿರಂತರ ನಾಮಸ್ಮರಣೆ ಮೂಲಕ ಭಗವಂತನನ್ನು ಕಾಣಲು ಸಾಧ್ಯ ಆದ್ದರಿಂದ ಇಲ್ಲಿ ನಿರಂತರವಾಗಿ ಭಕ್ತಿ,ಸತ್ಸಂಗ,ಪ್ರವಚನ ಶ್ರದ್ದಾ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಪವಿತ್ರ ಮಾನವ ಜನ್ಮದಲ್ಲಿ ನಿಸ್ವಾರ್ಥತೆಯಿಂದ ಸತ್ಕಾರ್ಯಗಳನ್ನ ಮಾಡುತ್ತ ಜೀವನವನ್ನು ಪಾವನಗೊಳಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪಂಢರಪೂರದ ಹ.ಭ.ಪ. ಅಂಬಾದಾಸ ಕರಂಡೆ ಮಹಾರಾಜರು ಮಾತನಾಡಿ, ೫೦ ವರ್ಷಗಳ ಸುದೀರ್ಘ ಇತಿಹಾಸ ಇರುವ ಹನುಮಾನ ಮಂದಿರಕ್ಕೆ ನೂತನ ಶಿಖರ ಕಳಸಾರೋಹಣಕ್ಕೆ ಕಾರ್ಯಕ್ರಮಕ್ಕೆ ಡಿ.ಎನ.ಭೋಸಲೆ ಅವರ ಕೊಡಗೆ ಅಪಾರವಾದ್ದು ಅದರಂತೆ ಈ ಪವಿತ್ರ ಸ್ಥಳದಲ್ಲಿ ನಿತ್ಯ, ಭಕ್ತಿ ಪ್ರವಚನ ,ಭಜನೆ ನಾಮಸ್ಮರಣೆ ನಿರಂತರವಾಗಿರಲಿ ಎಂದು ಹೇಳಿದರು.
ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಡಕಧೋಂಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ವೇಳೆಯಲ್ಲಿ ಕುಂಬ ಕಳಸ ಸುಮಂಗಲೆಯರ ಆರತಿಯೊಂದೊಗೆ ಭವ್ಯ ವೈಭವ ಮೆರವಣಿಗೆ ಮೂಲಕ ಕಳಸವನ್ನು ವಿಠ್ಠಲ ರುಕ್ಮಿಣಿ ಹಾಗೂ ಹನುಮಾನ ದೇವಸ್ಥಾನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಅಮೃತಾನಂದ ಮಹಾಸ್ವಾಮಿಗಳು, ಗುರು ಗುರುಪಾದೇಶ್ವರ ಶಿವಾಚಾರ್ಯರು, ಜ್ಯೋತಿಪ್ರಕಾಶ ಮಹಾಸಿದ್ಧಯೋಗಿಗಳು ಆನಂದ, ಮಹಾಂತೇಶ ಸ್ವಾಮಿಗಳು ತದ್ದೇವಾಡಿ, ವಿಶ್ವನಾಥ ಸ್ವಾಮಿಗಳು, ಕಮಲಾಕರ ಗುರೂಜಿ, ಮಾಜಿ ಜಿ.ಪಂ.ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಭೀ.ಸ.ಕಾ.ಮರಗೂರ ನಿರ್ದೇಶಕ ಎಂ.ಆರ್. ಪಾಟೀಲ, ಸಂಜೀವ ಐಹೊಳ್ಳಿ, ಮಾಜಿ ಜಿ.ಪಂ.ಸದಸ್ಯ ಭೀಮು ಸಾಹುಕಾರ ಬಿರಾದಾರ, ನಾಗಣ್ಣಗೌಡ ಸಿ. ಚೌಧರಿ , ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಂಗಾಧರ ಸಂಭಣ್ಣಿ, ಮಹೇಂದ್ರಕುಮಾರ, ರಾಜುಗೌಡ ಝಳಕಿ, ರವಿ ಭೀಸೆ, ನ್ಯಾಯವಾದಿ ಗಜಾನಂದ ಪವಾರ, ಬಾಪುರಾಯ ಬಿರಾದಾರ ಸಂತೋಷ ಪಾಟೀಲ, ತುಕಾರಾಮ ಶಿಂಧೆ, ಪಾಂಡುರಂಗ ಶಿಂಧೆ, ಶಿವಾಜಿ ಶಿಂಧೆ, ವಿಠ್ಠಲ ಕಾರಾಜನಗಿ, ಲಾಲಸಾಬ ಜಮಾದಾರ, ಅಪ್ಪುಗೌಡ ಪಾಟೀಲ, ಚಂದ್ರಕಾಂತ ನಂದಗೊಂಡ ಸೇರಿದಂತೆ ವಿವಿಧ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
ಲಾಲಸಾಬ ಬಡಿಗೇರ ಕಾರ್ಯಕ್ರಮ ನಿರ್ವಹಿಸಿದರು.

“ವಿಠ್ಠಲ ರುಕ್ಮಿಣಿ ಹಾಗೂ ಹನುಮಾನ ದೇವರ ಶಿಖರ ಕಳಸಾರೋಹಣ ಬಹು ದಿನಗಳ ಕನಸು ಇಂದು ಈಡೇರಿದಂತಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಬೇಡಿಗೆ ಈಡೇರಿದಂತಾಗಿದೆ. ಅದಕ್ಕೆ ಕಾರಣ ಇಲ್ಲಿನ ಅಚಲ ಭಕ್ತಿ, ನಿರಂತರ ನಾಮಸ್ಮರಣೆ, ಇದೇ ರೀತಿ ಇಲ್ಲಿ ಭಕ್ತಿಭಾವ ಎಂದಿಗೂ ಹಸಿರಾಗಿರಲಿ ಎಂದು ಆಶಿಸುವೆ.”
– ಡಿ.ಎನ್.ಭೋಸಲೆ
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲರ ಆಪ್ತ ಕಾರ್ಯದರ್ಶಿ

