ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಎ.ಡಿ.ಕೋರವಾರ ಆಗ್ರಹಿಸಿದ್ದಾರೆ.
ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗೋಲಗೇರಿ ಗ್ರಾಮವು ಸುಮಾರು ೮ಸಾವಿರ ಜನರನ್ನು ಹೊಂದಿರುವ ಗ್ರಾಮವಾಗಿದೆ. ಎರಡನೇ ಶ್ರೀಶೈಲ ಎಂದೇ ಖ್ಯಾತಿಯಾಗಿರುವ ಶ್ರೀ ಗೊಲ್ಲಾಳೇಶ್ವರ ದೇವಸ್ಥಾನವು ಗೋಲಗೇರಿಯಲ್ಲಿದೆ. ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ದರ್ಶನ ಪಡೆಯಲು ಬರುತ್ತಾರೆ. ಈ ಗ್ರಾಮಕ್ಕೆ ಸರ್ಕಾರದ ಯೋಜನೆಯಲ್ಲಿ ಸಾಕಷ್ಟು ಅನುದಾನ ಬಂದರೂ ಸಹ ಈ ಗ್ರಾಮದಲ್ಲಿ ಮಾತ್ರ ಕುಡಿಯುವ ನೀರು ಮಾತ್ರ ಪೂರೈಕೆಯಾಗುತ್ತಿಲ್ಲ. ಜಲಜೀವನ ಮಿಷನ್ ಅಡಿಯಲ್ಲಿ ಸುಮಾರು ರೂ.೩ಕೋಟಿ ವೆಚ್ಚದ ಕಾಮಗಾರಿಯಾಗಿದೆ. ಆದರೆ ಆ ಕಾಮಗಾರಿಯು ಅರ್ಥಪೂರ್ಣವಾಗಿಲ್ಲ ಮತ್ತು ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ.
ಇದರ ಕುರಿತಾಗಿ ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಮನಕ್ಕೂ ತಂದಿದ್ದೇವೆ. ಜಿಲ್ಲಾ ಪಂಚಾಯಿತ್ ಅನುದಾನದಲ್ಲಿ ಸುಮಾರು ೪ತೆರೆದೆ ಬಾವಿಗಳು ಇದಾವೆ. ಆದರೆ ಅದು ನೀರನ್ನು ರಾಜಕಾರಣಿಗಳ ಪಾಲಾಗಿದ್ದು, ಸಾರ್ವಜನಿಕರಿಗೆ ಉಪಯೋಗ ಇಲ್ಲದಂತಾಗಿದೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಳಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬಸನಗೌಡ ಮೇಲಿನಮನಿ, ವಾಸುದೇವ ಪತ್ತಾರ, ಶಾಂತಗೌಡ ಪಾಟೀಲ ಇದ್ದರು.

