ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕೋರವಾರ ಗ್ರಾಮದ ಸದ್ಯ ಬೆಂಗಳೂರು ಸದ್ದುಗುಂಟೆ ಪಾಳ್ಯ ಠಾಣೆಯಲ್ಲಿ ಸಿಪಿಐ ಆಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ ಛಾಯಾಗೋಳ ೨೦೨೫ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ವಿಜಯಪುರ, ಬಬಲೇಶ್ವರ, ಮನಗೂಳಿ, ಹುಕ್ಕೇರಿ, ಹುಬ್ಬಳ್ಳಿಗಳಲ್ಲಿ ಪಿಎಸ್‌ಐ ಆಗಿ ಸೇವೆ ಸಲ್ಲಿಸಿ ನಂತರ ಪದೋನ್ನತಿ ಹೊಂದಿ ಯಮಕನಮರಡಿ, ಕಲಬರ‍್ಗಿಯಲ್ಲಿ ಸೇವೆ ಸಲ್ಲಿಸಿ ಈಗ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಕಳೆದ ವರ್ಷ ಕೇಂದ್ರೀಯ ಗೃಹ ಮಂತ್ರಿಗಳ ಇಲಾಖೆಯ ಪ್ರಶಸ್ತಿ ಪಡೆದಿದ್ದರು.

