Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಎಲ್ಲ ಜ್ಞಾನಗಳ ತಾಯಿ ಹಾಗೂ ಎಲ್ಲ ಸಂಗತಿಗಳ ಪೂರ್ವಜರು ಜಾನಪದ ಹಾಗೂ ಜನಪದರು ಆಗಿದೆ ಎಂದು ಅಲಮೇಲ ಹೆಚ್. ಎ. ನಂದಿ ಪದವಿ ಕಾಲೇಜಿನ ಪ್ರಾಚಾರ್ಯ ಶಿವಾನಂದ ಉಪ್ಪಾರ ಅಭಿಪ್ರಾಯ ಪಟ್ಟರು.ಅವರು ಇಂಡಿ ತಾಲೂಕಿನ ನಾದ ಕೆ ಡಿ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆ ಹಾಗೂ ಕನ್ನಡ ಜಾನಪದ ಪರಿಷತ್ ಇಂಡಿ ಅವರ ಸಹಯೋಗದಲ್ಲಿ ಆಯೋಜಿಸಿದ್ದ ಸಂಭ್ರಮ ಶನಿವಾರ ಹಾಗೂ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಜಾನಪದದಲ್ಲಿ ಮಹಿಳೆಯರು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.ಜಾನಪದ ಗರತಿ ಹಾಡಿದ್ದು ಅಂತರಂಗದಿಂದ ಬಂದ ಸಾಹಿತ್ಯವಾಗಿದೆ. ಜಾನಪದ ಉಳಿಯಲಿಕ್ಕೆ ಮುಂದಿನ ಪೀಳಿಗೆಗೆ ಅದರ ರುಚಿ ಹಚ್ಚಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸರಕಾರಿ ಪದವಿ ಪೂರ್ವ ಕಾಲೇಜು ಗೋಳಸಾರ ದ ಪ್ರಾಚಾರ್ಯರಾದ ದಾಕ್ಷಾಯಣಮ್ಮಾ ಅವರು ಸಂಭ್ರಮ ಶನಿವಾರ ಮಕ್ಕಳಿಗೆ ಶಾಲೆಯೆಡೆಗೆ ಆಕರ್ಷಣೆ ಆಗಲಿಕೆ ಹಾಗೂ ಮಕ್ಕಳಿಗೆ ಕಲಿಕೆಯಲ್ಲಿನ ಏಕತಾನತೆ ಹೋಗಲಾಡಿಸಿ ಮಕ್ಕಳಲ್ಲಿ ವೈವಿಧ್ಯತೆ ಉಂಟಾಗಲು ಸಾಧ್ಯವಾಗುತ್ತದೆ ಎಂದರು.ಇಂಡಿ ತಾಲೂಕ ಕನ್ನಡ…
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ ಗುಳೇದಗುಡ್ಡ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿಯೊಂದು ಮಗು ಗುಣಾತ್ಮಕ ಶಿಕ್ಷಣದೊಂದಿಗೆ ಸಮಾಜಮುಖಿಯಾಗಲು ಶಿಕ್ಷಕರು ಸಿದ್ಧಗೊಳಿಸಬೇಕು. ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಉತ್ತಮ ಫಲಿತಾಂಶ ಬರುವಂತೆ ಶ್ರಮಿಸಬೇಕೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ ಗುಳೇದಗುಡ್ಡ ಹೇಳಿದರು.ನಗರದ ದರಬಾರ್ ಪ್ರೌಡಶಾಲೆಯಲ್ಲಿ ನಗರ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯೋಪಾಧ್ಯಯರ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ವರ್ಷ 94ರಷ್ಟು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದ್ದು, ಈ ಸಲವೂ ಈಗಿನಿಂದಲೇ ಮಕ್ಕಳಲ್ಲಿ ಇಷ್ಟಪಟ್ಟು ಒದುವುದನ್ನು ರೂಡಿಸಿ ಪರೀಕ್ಷೆಗೆ ಸಿದ್ಧಪಡಿಸಬೇಕು. ಅದರಲ್ಲೂ ವಿಶೇಷವಾಗಿ ಎಫ್‌ಎಲ್‌ಎನ್ ಹಾಗೂ ಎಲ್‌ಬಿಎ ಕುರಿತು ವಿಶೇಷ ಕಾಳಜಿ ವಹಿಸಬೇಕು. ಪ್ರತಿ ಮಗು ಕನಿಷ್ಠ ಕಲಿಕಾಮಟ್ಟ ತಲುಪಬೇಕು. ಎಲ್ಲ ಮಕ್ಕಳು ಶಾಲೆಗೆ ದಾಖಲಾಗಬೇಕು ದಾಖಲಾದ ಎಲ್ಲ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯಬೇಕೆಂಬ ಗುರಿ ಹೊಂದಬೇಕು. ಈ ನಿಟ್ಟಿನಲ್ಲಿ ಧಾರವಾಡದ ಅಪರ ಆಯುಕ್ತರು ನೀಡಿದ ಮಾರ್ಗದರ್ಶನದಲ್ಲಿ ಶಾಲೆಗಳಲ್ಲಿ ಅನುಷ್ಠನಗೊಳಿಸಬೇಕೆಂದು ತಿಳಿಸಿದರು.ನಗರವಲಯದ ಕ್ಷೇತ್ರಶಿಕ್ಷಣಾಧಿಕಾರಿ ರಾಘವೇಂದ್ರ…
ತೊರವಿ ಗ್ರಾಮ ಪಂಚಾಯತಿಗೆ ಜಿಪಂ ಸಿಇಒ ರಿಷಿ ಆನಂದ್ ಭೇಟಿ ವಿಜಯಪುರ: ಯುವಕರನ್ನು ಸಂಘಟಿಸಿ, ಅವರ ಶಕ್ತಿ, ಪ್ರತಿಭೆ ಹಾಗೂ ನಾಯಕತ್ವ ಗುಣಗಳನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವುದೇ ‘ಭಾರತ್ ಜೋಡೋ ಯುವ ಸಂಘ’ ಯೋಜನೆಯ ಗುರಿಯಾಗಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ‘ಭಾರತ್ ಜೋಡೋ ಯುವ ಸಂಘ’ದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಹೇಳಿದರು.ತಿಕೋಟಾ ತಾಲೂಕಿನ ತೊರವಿ ಗ್ರಾಮ ಪಂಚಾಯತಿಗೆ ಶುಕ್ರವಾರ ಭೇಟಿ ನೀಡಿ ಭಾರತ ಜೋಡೋ ಯುವ ಸಂಘ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.ಸಂಘದ ನೋಂದಣಿ ಪ್ರಕ್ರಿಯೆ, ಯೋಜನೆಯ ಉದ್ದೇಶ, ಯುವಕರಿಗೆ ದೊರೆಯುವ ಅವಕಾಶಗಳು ಹಾಗೂ ಸಂಘದ ಮೂಲಕ ಕೈಗೊಳ್ಳಬಹುದಾದ ವಿವಿಧ ಸಮಾಜಮುಖಿ ಚಟುವಟಿಕೆಗಳ ಕುರಿತು ಯುವಕರಿಗೆ ಸಂಪೂರ್ಣ ಮಾಹಿತಿ ನೀಡಿದರು.ಯುವಕರು ಕೇವಲ ಯೋಜನೆಯ ಫಲಾನುಭವಿಗಳಾಗದೆ, ಗ್ರಾಮೀಣಾಭಿವೃದ್ಧಿ ಮತ್ತು ಸಾಮಾಜಿಕ ಪರಿವರ್ತನೆಯ ಸಕ್ರಿಯ ಪಾಲುದಾರರಾಗಬೇಕು. ವಿವಿಧ ಜಾತಿ, ಧರ್ಮ ಹಾಗೂ ಸಮುದಾಯಗಳ ಯುವಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಸೌಹಾರ್ದ,…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಐತಿಹಾಸಿಕ ರಾಮತೀರ್ಥ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಪಡಗಾನೂರ ಕ್ರಾಸ್ ಮೂಲಕ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು ಕೂಡಲೇ ದುರಸ್ತಿಗೊಳಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.ಪಟ್ಟಣದ ನಿವಾಸಿ ಶಿವಾನಂದ ಕುಂಬಾರ ಈ ಕುರಿತು ಮಾತನಾಡಿ, ಮುಳಸಾವಳಗಿ, ಶಿವಣಗಿ, ಇಂಗಳಗಿ ಗ್ರಾಮಗಳ ಮಧ್ಯೆದಲ್ಲಿನ ರಾಮತೀರ್ಥ ಪ್ರಸಿದ್ಧ ಧಾರ್ಮಿಕ ತಾಣವಾಗಿದ್ದು, ಪ್ರತಿವರ್ಷ ಶ್ರಾವಣ ಮಾಸದ ಮೂರನೆಯ ಸೋಮವಾರ ಜಾತ್ರೆ ಜರುಗುತ್ತದೆ. ಇದು ರಾಮತೇರ ಜಾತ್ರೆ ಎಂದೇ ಜನಜನಿತವಾಗಿದೆ. ಇಲ್ಲಿಗೆ ದೇವರಹಿಪ್ಪರಗಿಯ ಕಲ್ಮೇಶ್ವರ, ಕರಿಸಿದ್ಧೇಶ್ವರ ಸಹಿತ ಪಡಗಾನೂರ, ಇಂಗಳಗಿ, ನಿವಾಳಖೇಡ, ಹಡಗಲಿ, ಮುಳಸಾವಳಗಿ ದೇವರ ಪಲ್ಲಕ್ಕಿಗಳು ಆಗಮಿಸಿ ಭಕ್ತರಿಗೆ ದರ್ಶನ ನೀಡುತ್ತವೆ.ಜಾತ್ರೆಯ ಅಂಗವಾಗಿ ಸಾವಿರಾರು ಜನರು ಕಾಲುನಡಿಗೆ, ದ್ವಿಚಕ್ರ ಸಹಿತ ವಿವಿಧ ವಾಹನಗಳ ಮೂಲಕ ಆಗಮಿಸುತ್ತಾರೆ. ಆದರೆ ಈ ರಸ್ತೆ ಈಗ ಸಂಪೂರ್ಣ ಹಾಳಾಗಿ ನಡೆಯಲು ಬಾರದಂತಾಗಿದೆ. ಜೊತೆಗೆ ರಸ್ತೆಯ ಎಡಬಲಗಳಲ್ಲಿ ಮುಳ್ಳು ಕಂಟಿಗಳು ಬೆಳೆದು ತೊಂದರೆ ಉಂಟು ಮಾಡುತ್ತಿವೆ ಎನ್ನುತ್ತಾರೆ.ಜಾತ್ರೆಯ ಮುನ್ನ ಮುಳಸಾವಳಗಿ, ಶಿವಣಗಿ ಗ್ರಾಮ ಪಂಚಾಯಿತಿ ಹಾಗೂ ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸದ್ಭಾವನಾ ದಿನಾಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದ ಅಭಿವೃದ್ಧಿಗೆ ರಾಷ್ಟ್ರೀಯ ಏಕತೆ ಮತ್ತು ಕೋಮು ಸಾಮರಸ್ಯ ಅತ್ಯಗತ್ಯ ಎಂದು ಪ್ರಾಚಾರ್ಯ ಡಾ.ಅನೀಲ ಭಿ.ನಾಯಕ ಹೇಳಿದರುನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎನ್ ಎಸ್ ಎಸ್ ಘಟಕ ೧ & ೨ ರ ಸಹಯೋಗದಲ್ಲಿ ಆ.೨೦ ರಂದು ಹಮ್ಮಿಕೊಳ್ಳಲಾಗಿದ್ದ ಸದ್ಭಾವನಾ ದಿನಾಚರಣೆಯಲ್ಲಿ ಮಾತನಾಡಿದರು. ಸದ್ಭಾವನಾ ದಿನದಂದು ವೈವಿಧ್ಯಮಯ ನಂಬಿಕೆಗಳ ಭಾರತೀಯರಲ್ಲಿ ರಾಷ್ಟ್ರೀಯ ಏಕತೆ, ಶಾಂತಿ, ಸಹಾನುಭೂತಿ ಮತ್ತು ಕೋಮು ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ತರನ್ನಮ್ ಜಬೀನ್ ಖಾನ್ ಅವರು ಸದ್ಭಾವನಾ ದಿನಾಚರಣೆಯ ಮಹತ್ವ ಮತ್ತು ಪ್ರಸ್ತುತತೆಯ ಕುರಿತು ಮಾತನಾಡಿದರು.ಈ ವೇಳೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು, ವೈವಿಧ್ಯತೆಯನ್ನು ಗೌರವಿಸಲು ಮತ್ತು ಭಾರತದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸಲು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕ ಡಾ.…
ಶಾಸಕ ಯಶವಂತರಾಯಗೌಡ ಪಾಟೀಲ ರಿಂದ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಗೆ ನೀರನ್ನು ಬಿಡಲಾಗುತ್ತಿದ್ದು ತಾಲೂಕಿನಲ್ಲಿರುವ ಎಲ್ಲ ಕೆರೆಗಳನ್ನು ತುಂಬಿ ಹಳ್ಳ ಕೊಳ್ಳಗಳಿಗೆ ನೀರನ್ನು ಬಿಟ್ಟು ಯಾವದೇ ಗ್ರಾಮಕ್ಕೂ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗಬಾರದೆಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಪ್ರವಾಸಿಮಂದಿರಲದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರಿನ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.ಕೃಷ್ಣಾ ಕಾಲುವೆಯ ಕೊನೆಯ ಭಾಗದ ವರೆಗೂ ನೀರು ಹರಿಸಿ ಯಾವ ಗ್ರಾಮಕ್ಕೂ ಕುಡಿಯುವ ನೀರಿನ ತೊಂದರೆ ಆಗಬಾರದು. ಅವಶ್ಯವೆನಿಸಿದಂತೆ ಅಧಿಕಾರಿ ಸರಿಯಾದ ವ್ಯವಸ್ಥೆ ಮಾಡಬೇಕು ಎಂದರು.ಹಿರೇರೂಗಿ ಗ್ರಾಮದ ಜನರು ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸುವಂತೆ ಪ್ರತಿಭಟನೆ ಮಾಡಿದ್ದು ಅವರಿಗೆ ನೀರು ಪೂರೈಸಲು ಕೃಷ್ಣಾ ಮೇಲ್ದಂಡೆ ಯೋಜನೆ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.ಇಒ ಮಹಾದೇವಪ್ಪ ಏವೂರ ಮಾತನಾಡಿ ತಾಲೂಕಿನಲ್ಲಿ ಮಳೆಯ ಕೊರತೆ ಇದೆ. ಅಗಸ್ಟ ತಿಂಗಳಲ್ಲಿ ೬೪ ಮಿ ಮಿ ಮಳೆ ಆಗಬೇಕಾಗಿತ್ತು. ಆದರೆ ಕೇವಲ…
ಬಳಬಟ್ಟಿ ಗ್ರಾಮದ ತೋಟದ ಮನೆಯಲ್ಲಿ ಹೃದಯ ವಿದ್ರಾವಕ ಘಟನೆ | ಸಾವಿನ ಬಗ್ಗೆ ಅನುಮಾನ ವ್ಯಕ್ತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ತೋಟದ ಮನೆಯ ಸಮೀಪದ ತೆರೆದ ಬಾವಿಯಲ್ಲಿ ಇಬ್ಬರು ಬಾಲಕಿಯರ ಶವಗಳು ಪತ್ತೆಯಾಗಿದ್ದು, ಮಕ್ಕಳ ತಂದೆ ಸಾಬಣ್ಣ (40) ನಾಪತ್ತೆಯಾಗಿದ್ದಾರೆ. ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.ಮೃತ ಬಾಲಕಿಯರನ್ನು 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಸಾಕ್ಷಿ ಹಾಗೂ 10 ವರ್ಷದ ರಕ್ಷಿತಾ (10) ಎಂದು ಗುರುತಿಸಲಾಗಿದೆ. ಇಬ್ಬರು ಬಾಲಕಿಯರು ನಿನ್ನೆ ಸಂಜೆ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದ ವೇಳೆ ತಡರಾತ್ರಿ ಬಾವಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.ವರಮಹಾಲಕ್ಷ್ಮಿ ಪೂಜೆಯ ಹಿನ್ನೆಲೆಯಲ್ಲಿ ಸಾಬಣ್ಣ ಅವರ ಪತ್ನಿ ಲಕ್ಷ್ಮೀಬಾಯಿ ಇಬ್ಬರು ಮಕ್ಕಳನ್ನು ಕರೆದುಕೊಂಡು ತಮ್ಮ ಸಹೋದರನ ಮನೆಗೆ ತೆರಳಿದ್ದರು. ಮತ್ತೊಂದು ಮಗುವನ್ನು ಅಜ್ಜ-ಅಜ್ಜಿಯ ಬಳಿ ಬಿಟ್ಟಿದ್ದರು. ಸಾಕ್ಷಿ ಹಾಗೂ ರಕ್ಷಿತಾ ಇಬ್ಬರನ್ನು ತಂದೆ ಸಾಬಣ್ಣ…
ಏಕಾಏಕಿ ದುಬಾರಿಯಾಗಿರುವ ಸಕ್ಕರೆ ದರ | ಗ್ರಾಹಕರ ಜೇಬಿಗೆ ಕತ್ತರಿ | ದರ ನಿಯಂತ್ರಣಕ್ಕೆ ಗ್ರಾಹಕರ ಆಗ್ರಹ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ್ ಎಮ್ ಇಟ್ಟಿಬಾಗಲಕೋಟೆˌ (ಜಮಖಂಡಿ): ಸಕ್ಕರೆ ಎಂದರೆ ಸಿಹಿ; ಆದರೆ ಇತ್ತೀಚಿನ ಬೆಲೆ ಏರಿಕೆ ಮಾತ್ರ ಗ್ರಾಹಕರ ಪಾಲಿಗೆ ಕಹಿಯಾಗತೊಡಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. ಸಕ್ಕರೆ ದರ 70ರ ಗಡಿ ತಲುಪಿದ್ದು, ಸಾಮಾನ್ಯ ಜನರ ದಿನಸಿ ಬಜೆಟ್‌ಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ. ಕೆಲವೇ ದಿನಗಳ ಅಂತರದಲ್ಲಿ 15ರಿಂದ 20ರಷ್ಟು ದರ ಏರಿಕೆಯಾಗಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಗ್ರಾಮೀಣ ಭಾಗದಲ್ಲಿ 65ರಿಂದ 70ರ ವರೆಗೆ ಹಾಗೂ ಪಟ್ಟಣ ಪ್ರದೇಶಗಳಲ್ಲಿ 75ರಿಂದ 80ರ ವರೆಗೆ ಸಕ್ಕರೆ ಮಾರಾಟವಾಗುತ್ತಿರುವುದು ಕಂಡುಬರುತ್ತಿದೆ. ಒಂದು ವರ್ಷದ ಹಿಂದೆ ಕೆ.ಜಿ.ಗೆ 40ರಿಂದ 45ರ ಆಸುಪಾಸಿನಲ್ಲಿದ್ದ ಸಕ್ಕರೆ ದರ, ನಂತರ 50ರ ಗಡಿ ದಾಟಿತ್ತು. ಕಳೆದ ವಾರದವರೆಗೂ 50ರಿಂದ 55ರ ವರೆಗೆ ಲಭ್ಯವಾಗುತ್ತಿದ್ದ ಸಕ್ಕರೆ ಇದೀಗ ಏಕಾಏಕಿ ದುಬಾರಿಯಾಗಿರುವುದು ಗ್ರಾಹಕರನ್ನು ಬೆಚ್ಚಿಬೀಳಿಸಿದೆ. ಅದರಲ್ಲೂ ಕಳೆದ ಎರಡು–ಮೂರು ದಿನಗಳಲ್ಲಿ ದರದಲ್ಲಿ…
ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಉದ್ಯೋಗ ಭರವಸಾ ಕೋಶ, ಐಕ್ಯೂಎಸಿ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ‘ದೀಪಿಕಾ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ’ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು.ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಜಮಖಂಡಿ ಪ್ರತಿನಿಧಿ ಶೀತಲ ಕೆ. ಮಾಲಗಾಂವೆ ಮಾತನಾಡಿ, ಕರ್ನಾಟಕದ ಹೆಣ್ಣುಮಕ್ಕಳು ಆರ್ಥಿಕ ಅಡಚಣೆಯಿಲ್ಲದೆ ಉನ್ನತ ಶಿಕ್ಷಣ ಮುಂದುವರಿಸಲು ದೀಪಿಕಾ ವಿದ್ಯಾರ್ಥಿವೇತನ ನೆರವಾಗಲಿದೆ. ಅರ್ಹ ವಿದ್ಯಾರ್ಥಿನಿಯರಿಗೆ ಕೋರ್ಸ್ ಅವಧಿಯವರೆಗೆ ಪ್ರತಿ ವರ್ಷ 30 ಸಾವಿರ ವಿದ್ಯಾರ್ಥಿವೇತನ ದೊರೆಯಲಿದೆ. ಮೂರು ವರ್ಷದ ಪದವಿ ಕೋರ್ಸ್‌ಗೆ 90 ಸಾವಿರ ಹಾಗೂ ಎರಡು ವರ್ಷದ ಡಿಪ್ಲೊಮಾ ಕೋರ್ಸ್‌ಗೆ 60 ಸಾವಿರದವರೆಗೆ ನೆರವು ಸಿಗಲಿದೆ ಎಂದು ತಿಳಿಸಿದರು.ಸಂಯೋಜಕ ಯಾಸೀನ ಆರ್. ಬಾಗವಾನ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಹಾಗೂ ಸರ್ಕಾರಿ ಕಾಲೇಜಿನಲ್ಲಿ 12ನೇ ತರಗತಿ ಪೂರ್ಣಗೊಳಿಸಿ, ಮೊದಲ ಬಾರಿಗೆ ಪದವಿ, ವೃತ್ತಿಪರ ಪದವಿ ಅಥವಾ ಡಿಪ್ಲೊಮಾ ಪ್ರವೇಶ ಪಡೆದ ವಿದ್ಯಾರ್ಥಿನಿಯರು ಅರ್ಹರಾಗುತ್ತಾರೆ. ಅರ್ಜಿ ಸಲ್ಲಿಸುವಾಗ ಆಧಾರ್, ಅಂಕಪಟ್ಟಿ,…
ಕುಡಿಗನೂರ ಗ್ರಾಮದ ರಸ್ತೆ ಕಾಮಗಾರಿ ಪೂರ್ಣಕ್ಕೆ ಇನ್ಯಾವ ಮುಹೂರ್ತ? | ಗಡುವು ಮುಗಿದರೂ ಇತ್ತ ಸುಳಿಯದ ಗುತ್ತಿಗೆದಾರ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸಾರ್ವಜನಿಕರು ಉದಯರಶ್ಮಿ ದಿನಪತ್ರಿಕೆ ಕಲಬುರಗಿ: ಜಿಲ್ಲೆಯ ಆಫ್ಜಲ್ಪುರ ತಾಲೂಕಿನ ಕುಡಿಗನೂರ ಗ್ರಾಮದ ಪ್ರಮುಖ ರಸ್ತೆ ಕಾಮಗಾರಿ ಆರಂಭವಾಗಿ ನಿಗದಿತ ಗಡುವು ಮುಗಿದು ತಿಂಗಳುಗಳೇ ಕಳೆದರೂ ಇಂದಿಗೂ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತು ಸಾರ್ವಜನಿಕರು ನಿತ್ಯ ನರಕ ಅನುಭವಿಸುವಂತೆ ಆಗಿದೆ.ಈ ರಸ್ತೆಯುದ್ದಕ್ಕೂ ಬಿದ್ದಿರುವ ಕಲ್ಲುಗಳು, ತೆರೆದ ಗುಂಡಿಗಳು ಹಾಗೂ ಧೂಳಿನಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ಇಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಮಳೆ ಬಂದರೆ ಕೆಸರುಗದ್ದೆಯಾಗಿ ಪರಿವರ್ತನೆಯಾಗುವ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ವ್ಯಾಪಾರಸ್ಥರು ಮತ್ತು ಶಾಲಾ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಅಧಿಕಾರಿಗಳ ಬೇಜವಾಬ್ದಾರಿತನ: ಆದರೆ ಕಾಮಗಾರಿಗಳ ಅವಧಿ ಮುಗಿದರೂ ಪೂರ್ಣಗೊಳ್ಳದಿರುವದು ಅಧಿಕಾರಿಗಳ ನಿರ್ಲಕ್ಷವೇ ಇಲ್ಲ ಗುತ್ತಿಗೆದಾರ ಅಧಿಕಾರಿಗಳಿಗಿಂತ ಪ್ರಭಲನೆ ಎನ್ನುವ ಪ್ರಶ್ನೆ ತಾಲೂಕಿನ ಜನತೆಗೆ ಕಾಡುತ್ತಿದೆ. ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ದಿವ್ಯ…
