ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿಎಸ್‌ಎನ್‌ಎಲ್ ನೆಟವರ್ಕ್ ಸಮಸ್ಯೆಯಾಗಿ ಜನರಿಗೆ ವ್ಯಾಪಕ ತೊಂದರೆಯಾಗಿದೆ, ಈ ನೆಟವರ್ಕ್ ಸಮಸ್ಯೆಯನ್ನು ನಿವಾರಣೆ ಮಾಡುವಂತೆ ನಾನೇ ಸ್ವತ: ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿರುವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಎಸ್‌ಎನ್‌ಎಲ್ ನೆಟವರ್ಕ್ ತೊಂದರೆ ವಿಜಯಪುದಲ್ಲಿಯೂ ವ್ಯಾಪಕವಾಗಿದೆ, ಈ ಬಗ್ಗೆ ಅನೇಕ ಗ್ರಾಹಕರು ತೊಂದರೆ ಎದುರಿಸುತ್ತಿದ್ದಾರೆ, ಈ ಸಮಸ್ಯೆಯ ಬಗ್ಗೆ ಅನೇಕ ಗ್ರಾಹಕರು ಸಹ ನನ್ನ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಅಧಿಕಾರಿಗಳನ್ನು ನಾನು ಈ ವಿಷಯವಾಗಿ ತರಾಟೆಗೆ ತೆಗೆದುಕೊಂಡಿದ್ದು, `ಇಂದು ದೂರ ಸಂಪರ್ಕ ಒಂದು ಜೀವನದ ಅವಿಭಾಜ್ಯ ಅಂಗವಾಗಿದೆ, ಕೇವಲ ಸಂಪರ್ಕ ಅಷ್ಟೇ ಅಲ್ಲದೇ ದೈನಂದಿನ ವ್ಯಾಪಾರ-ವಹಿವಾಟುಗಳು ಅಂತರ್ಜಾಲ ಕೇಂದ್ರಿತವಾಗಿವೆ, ಜನಸಾಮಾನ್ಯರು ಸಹ ಯುಪಿಐ ಮೂಲಕವೇ ಪೇಮೆಂಟ್ ಮಾಡುವುದು ಸಾಮಾನ್ಯವಾಗಿದೆ, ಆದರೆ ನೆಟವರ್ಕ್ ಇಲ್ಲದೇ ಗ್ರಾಹಕರು ಎದುರಿಸುತ್ತಿರುವ ಸಂಕಷ್ಟ ನಿಮಗೆ ಅರ್ಥವಾಗುವುದಿಲ್ಲವೇ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿರುವೆ, ಶೀಘ್ರದಲ್ಲಿಯೇ ಎದುರಾಗಿರುವ ತಾಂತ್ರಿಕ ಸಮಸ್ಯೆ ನಿವಾರಣೆ ಮಾಡುವ ಭರವಸೆಯನ್ನು ಅಧಿಕಾರಿಗಳ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

