Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಇಂದು ಮುಕ್ತಾಯಗೊಂಡ ಹುಲಜಯಂತಿ ಜಾತ್ರೆಗೆ ಇಂಡಿ ಘಟಕದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ೨೨ ಲಕ್ಷ ರೂ ಆದಾಯವಾಗಿದೆ ಎಂದು ಘಟಕ ವ್ಯವಸ್ಥಾಪಕ ರೇವಣಸಿದ್ದ ಖೈನೂರ ತಿಳಿಸಿದ್ದಾರೆ.ಇಂದು ಹುಲಜಂತಿ ಜಾತ್ರೆ ನಿಮಿತ್ಯ ಹೋದ ಬಸ್ಸಿನ ಕೊನೆಗೆ ಬಂದ ಬಸ್ಸಿಗೆ ಪೂಜೆ ಸಲ್ಲಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂಡಿಯಿಂದ ಹುಲಜಯಂತಿಗೆ ೪೫ ಬಸ್ಸುಗಳು ೨೪೧ ಟ್ರೀಪ್ ಗಳು ಸೇರಿ ಒಟ್ಟು ೨೨ ಲಕ್ಷ ಆದಾಯ ಬಂದಿದ್ದು ಇದು ವಿಜಯಪುರ ಜಿಲ್ಲೆಯಲ್ಲಿ ಡಿಪೋಗಳಲ್ಲಿ ಹುಲಜಂತಿ ಜಾತ್ರೆಗೆ ಇಂಡಿ ಡಿಪೋ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.ಇಂಡಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಿಂದ ಅಂದಾಜು ೪೦ ಸಾವಿರಕ್ಕೂ ಅಧಿಕ ಪ್ರಾಯಾಣಿಕರು ಪ್ರಯಾಣ ಮಾಡಿರುವದಾಗಿ ತಿಳಿಸಿದ್ದಾರೆ.ಆನಂದ ಬಡಿಗೇರ, ಎಂ.ಆರ್.ಪಾರ್ಥನಳ್ಳಿ, ಎನ್.ಎಸ್.ಹೊಟಗೊಂಡ, ಎಲ್,ಆರ್.ರಾಠೋಡ, ಜಿ.ಎಂ.ಸೋನಾವನೆ,ಟಿ.ಕೆ.ರಾಠೋಡ, ವಾಯ್.ಬಿ.ಬಿಸೆ, ಗಂಗಾಧರ ಸಾಲೇಗಾಂವ , ರಾವುತಪ್ಪ ಹೊನಕಟ್ಟಿ, ಜಿ.ಕೆ.ಸರಸಂಬಿ ಮತ್ತಿತರಿದ್ದರು.
ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ ಆರ್ ಹೆಗ್ಗಣದೊಡ್ಡಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬ್ರಿಟಿಷರ ವಿರುದ್ಧ ರೋಚಕ ಹಾಗೂ ಐತಿಹಾಸಿಕ ಜಯ ಸಾಧಿಸಿದ ವೀರರಾಣಿ ಚೆನ್ನಮ್ಮಳ ಕ್ರಾಂತಿಕಾರಿ ಹೋರಾಟವು ೧೮೫೭ ರ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಪ್ರೇರಣೆಯಾಯಿತು ಎಂದು ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ ಆರ್ ಹೆಗ್ಗಣದೊಡ್ಡಿ ಅಭಿಪ್ರಾಯಪಟ್ಟರು. ಪಟ್ಟಣದ ತಹಶೀಲದಾರ ಕಚೇರಿಯಲ್ಲಿ ತಾಲೂಕಾಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಣಿ ಚೆನ್ನಮ್ಮಾಜಿಯ ೧೪೭ನೇ ಜಯಂತೋತ್ಸವ ಹಾಗೂ ೧೦೧ ನೇಯ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ಭಾರತವನ್ನು ಬ್ರಿಟಿಷರ ಸಂಕೋಲೆಯಿಂದ ಬಿಡಿಸಲು ಅಸಂಖ್ಯಾತ ಸ್ವಾತಂತ್ರವೀರರ ತ್ಯಾಗ ಬಲಿದಾನಗಳು ಕಾರಣವಾಗಿವೆ. ಈ ಸಂಗ್ರಾಮದಲ್ಲಿ ತೆರೆಮರೆಯ ಹಿಂದೆ ತಮ್ಮ ರಕ್ತ ಚೆಲ್ಲಿ ಮೌನ ಹೋರಾಟ ಮಾಡಿ ಮರೆಯಾದವರೆಷ್ಟೋ! ಅಂಥವರ ಬಲಿದಾನದ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಯಪಡಿಸುವ ಅಗತ್ಯವಿದೆ ಎಂದ ಅವರು, ರಾಣಿ ಚೆನ್ನಮ್ಮ ವಿಜಯೋತ್ಸವ ಕೇವಲ ಕಿತ್ತೂರಿನ ವಿಜಯೋತ್ಸವವಾಗಿರದೆ ಸಮಸ್ತ ಕನ್ನಡ ನಾಡಿನ ವಿಜಯೋತ್ಸವವಾಗಿತ್ತು ಎಂದರು. ತಹಶೀಲದಾರ ಕರೆಪ್ಪ ಬೆಳ್ಳಿ ಹಾಗೂ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗ್ರಾಮೀಣ ಭಾಗದ ಜನರಿಗೆ ನಿತ್ಯ ಸಂಚರಿಸಲು ಗ್ರಾಮೀಣ ರಸ್ತೆಗಳ ಸುಧಾರಣೆ ಅವಶ್ಯಕವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ತಾಲೂಕಿನ ಖಾನಾಪುರ ಗ್ರಾಮದಲ್ಲಿ ನಡೆದ ಜಿಲ್ಲಾ ಪಂಚಾಯತ ವಿಜಯಪುರ ಪಂ.ರಾ.ಇಂ. ಉಪ ವಿಭಾಗ ಸಿಂದಗಿ ಸನ್ ೨೦೨೩-೨೪ ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆ ಅಡಿಯಲ್ಲಿ ಖಾನಾಪುರ ಗ್ರಾಮದಿಂದ ಮಾರಿಹಳ್ಳ ಹೋಗುವ ರಸ್ತೆಗೆ ೧೦ ಲಕ್ಷದ ವೆಚ್ಚದ ರಸ್ತೆಗೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶಾಸಕ ಅಶೋಕ ಮನಗೂಳಿ ನಂತರ ಮಾತನಾಡಿದ ಅವರು, ಗ್ರಾಮೀಣ ರಸ್ತೆ ಸುಧಾರಣೆಗೆ ತಾಲೂಕಿನಲ್ಲಿ ಅನೇಕ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಗಮನಕ್ಕಿದ್ದು ವಿವಿಧ ಯೋಜನೆಗಳಡಿ ಅನುದಾನ ತರುವ ಮೂಲಕ ಹಂತ-ಹಂತವಾಗಿ ರಸ್ತೆ ಸುಧಾರಣೆಗೆ ಆದ್ಯತೆ ನೀಡುವುದಾಗಿ ಹೇಳಿದರಲ್ಲದೇ ಸರಕಾರದಿಂದ ಅನುದಾನ ತಂದು ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸುವದಾಗಿ ಹೇಳಿದರು.ಇದೇ ಸಂದರ್ಭದಲ್ಲಿ ಶ್ರೀ ಮೌನಯೋಗಿ ಕಲ್ಯಾಣದಯ್ಯ ಸ್ವಾಮಿಗಳು, ಕಾಂಗ್ರೆಸ್ ಮುಖಂಡರಾದ ವಿಜುಗೌಡ ನಿಂಗನಗೌಡ ಬಿರಾದಾರ, ರವಿರಾಜ್ ದೇವರಮನಿ, ಬಸನಗೌಡ ಉಳ್ಳೆಸೂರ, ರುದ್ರಣ್ಣಸಾಹುಕಾರ ಮಾನಶೆಟ್ಟಿ, ಮಹೇಶ್ ಮನಗೂಳಿ,…
ವಿಜಯಪುರದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಅವರು ತೋರಿದ ಧೈರ್ಯ, ಶೌರ್ಯ ಹಾಗೂ ಸಾಹಸ ನಮ್ಮೆಲ್ಲರಿಗೂ ಪ್ರೇರಣೆಯ ಜೊತೆಗೆ ಸ್ಫೂರ್ತಿದಾಯಕವಾಗಿದೆ ಎಂದು ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ನಡೆದ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾಣಿ ಚನ್ನಮ್ಮ ಅವರ ಸಾಹಸಮಯ ಯಶೋಗಾಥೆಯನ್ನು ಮುಂದಿನ ಜನಾಂಗಕ್ಕೆ ತಿಳಿಸಿಕೊಡುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಭಾಷಣ, ಕ್ವಿಜ್, ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು. ಅವರ ಆದರ್ಶಮಯ ಜೀವನ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದು ಹೇಳಿದರು.ಪ್ರಕಾಶ ಎನ್. ನರಗುಂದ ಅವರು ವಿಶೇಷ ಉಪನ್ಯಾಸ ನೀಡಿದರು.ಬಿ.ಎಂ. ಪಾಟೀಲ ಅವರು ಮಾತನಾಡಿದರು.ಗೀತಾ ಕುಲಕರ್ಣಿ ಅವರು ಸುಗಮ ಸಂಗೀತ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸುವರ್ಣ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ ಇವರ ಸಹಯೋಗದೊಂದಿಗೆ ಅಕ್ಟೋಬರ್ ೨೭ರಂದು ಜಿಲ್ಲಾಮಟ್ಟದ ಚಿತ್ರಕಲಾ ಸ್ಫರ್ಧೆಯನ್ನು ನಗರದ ಗಗನ ಮಹಲ್ ಆವರಣದಲ್ಲಿ ಆಯೋಜಿಸಲಾಗಿದೆ.ಈ ಚಿತ್ರಕಲಾ ಸ್ಪರ್ಧೆಯು ಅಕ್ಟೋಬರ್ ೨೭ರ ಬೆಳಿಗ್ಗೆ ೯.೩೦ ರಿಂದ ೧೧ರವರೆಗೆ ನಡೆಯಲಿದ್ದು, ೬ ರಿಂದ ೮ನೇ ತರಗತಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಮಾಲಿನ್ಯ ನಿಲ್ಲಿಸಿ ವಿಷಯ ಕುರಿತು ಹಾಗೂ ೯ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಚ್ಛ ಸುಂದರ ನನ್ನ ಕನಸಿನ ಪರಿಸರದ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.ಪೋಸ್ಟರ್ ಬಿಡುಗಡೆ : ಗುರುವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಚಿತ್ರಕಲಾ ಸ್ಫರ್ಧೆಯ ಪೋಸ್ಟರ್‌ಗಳನ್ನು ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಬಿಡುಗಡೆಗೊಳಿಸಿದರು.ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಕ್ಟೋಬರ್ ೩೦ರಂದು ಬಾಗಲಕೋಟೆಯಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಸಾಧಕರಿಗೆ ನವೆಂಬರ್ ೧ರಂದು ಸನ್ಮಾನ ಮಾಡಲು ಉದ್ದೇಶಿಸಲಾಗಿದೆ.ಕಲೆ, ಸಾಹಿತ್ಯ, ರಂಗಭೂಮಿ, ಸುಗಮ ಸಂಗೀತ, ಜನಪದ, ಸಂಗೀತ, ಶಿಲ್ಪಕಲೆ, ನೃತ್ಯ, ಚಿತ್ರಕಲೆ, ಸಮಾಜ ಸೇವೆ, ಕೃಷಿ, ವೈದ್ಯಕೀಯ, ಪತ್ರಿಕೋದ್ಯಮ, ಸಂಕೀರ್ಣ, ಇತರೆ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯ ವಿವರಗಳನ್ನು ಒಳಗೊಂಡಂತೆ ತಮ್ಮ ಸ್ವ-ಪರಿಚಯ ಮತ್ತು ದಾಖಲೆಗಳೊಂದಿಗೆ ದಿನಾಂಕ : ೨೭-೧೦-೨೦೨೫ ರೊಳಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ, ಸ್ಟೇಶನ್ ರಸ್ತೆ ವಿಜಯಪುರ ಕಚೇರಿಗೆ ಸಲ್ಲಿಸಬಹುದಾಗಿದೆ.ಈ ಕುರಿಂತೆ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ: ೦೮೩೫೨-೨೫೧೨೬೧ ಸಂಖ್ಯೆಗೆ ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ಅಪರ ಜಿಲ್ಲಾಧಿಕಾರಿ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ವಿಜಯಪುರ ನಗರದ ಪ್ರಮುಖ ಬೀದಿಗಳಲ್ಲಿರುವ ಎಲ್ಲ ಅಂಗಡಿಗಳಿಗೆ ಕಡ್ಡಾಯವಾಗಿ ಕನ್ನಡದಲ್ಲಿ ಶೇ.೬೦ ರಷ್ಟು ನಾಮಫಲಕಗಳ ಅಳವಡಿಸುವ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅ.೨೭ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಬಿಎಲ್‌ಡಿಇ ಆಸ್ಪತ್ರೆಯಿಂದ ಗಾಂಧಿ ವೃತ್ತದವರೆಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಈ ಅಭಿಯಾನದಲ್ಲಿ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಐಡಿ ಕಾರ್ಡ್ನೊಂದಿಗೆ ಭಾಗವಹಿಸಬೇಕು. ಈ ಕುರಿತು ಹಾಜರಾತಿ ಪುಸ್ತಕವನ್ನು ನಿರ್ವಹಣೆ ಮಾಡಲಾಗುತ್ತಿದ್ದು, ಅಭಿಯಾನಕ್ಕೆ ಗೈರಾದ ಅಧಿಕಾರಿಗಳ ಹೆಸರುಗಳನ್ನು ಮರುದಿನ ಎಲ್ಲ ಪತ್ರಿಕೆಗಳಲ್ಲಿ ಪ್ರಕಟಣೆಗೆ ಕ್ರಮ ವಹಿಸಲಾಗುವುದು ಎಂದು ಅವರು ಅಪರ ಜಿಲ್ಲಾಧಿಕಾರಿ ಸೋಮಲಿಂಗ್ ಗೆಣ್ಣೂರ ಅವರು ಎಚ್ಚರಿಕೆ ನೀಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರಜೋಳ ಗ್ರಾಮದ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆಯಲ್ಲಿ ಇಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯವರಿಂದ ಕಾರ್ಖಾನೆಯಲ್ಲಿನ ವೇ ಬ್ರಿಡ್ಜ್ ಗಳನ್ನು ತಪಾಸಣೆ ಮಾಡಲಾಯಿತು.ಇತ್ತೀಚೆಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಸೂಚನೆ ನೀಡಿದ ಹಿನ್ನಲೆಯಲ್ಲಿ ಬುಧವಾರ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಚೌಗಲಾ ಸೇರಿದಂತೆ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕರು ಮತ್ತು ರೈತ ಮುಖಂಡರ ಸಮ್ಮುಖದಲ್ಲಿ ಕಾರ್ಖಾನೆಯ ವೇ ಬ್ರಿಡ್ಜ್ ತಪಾಸಣೆ ಮಾಡಲಾಯಿತುಈ ಸಂದರ್ಭದಲ್ಲಿ ರೈತ ಮುಖಂಡರಾದ ಪಡೆಯಪ್ಪ ಕೊಡೆಕಲ್ ಸೇರಿದಂತೆ ವಿವಿಧ ರೈತರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಣಿ ಚನ್ನಮ್ಮಳ ಜೀವನವು ಧೈರ್ಯ ದೇಶಭಕ್ತಿಯ ಪ್ರತೀಕ.ಕಿತ್ತೂರು ರಾಣಿ ಚನ್ನಮ್ಮಳ ಜೀವನವು ಧೈರ್ಯ ತ್ಯಾಗ ಮತ್ತು ದೇಶಭಕ್ತಿಯ ಪ್ರತೀಕವಾಗಿದೆ. ಅವರ ಆದರ್ಶ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ ಹೇಳಿದರು.ಅವರು ಇಂಡಿ ನಗರದಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ 247 ನೇ ಜಯಂತಿ ಹಾಗೂ ವಿಜಯಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಇಂಡಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ವಿ ಎಚ್ ಬಿರಾದಾರ, ನಿವೃತ್ತ ಪ್ರೌಢಶಾಲೆ ಸಹ ಶಿಕ್ಷಕ ಆರ್ ಬಿ ಬಿರಾದಾರ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಹಿಕ್ಕನಗುತ್ತಿ ಲಿಂಗಾಯತ ಮಾಹಾಮಠದ ಪ್ರಭುಲಿಂಗ ಶರಣರು ಮಾತನಾಡಿದರು.ಈ ಸಂದರ್ಭದಲ್ಲಿ ಇಂಡಿ ತಾಲೂಕು ದಂಡಾಧಿಕಾರಿ ಎಸ್ ಬಿ ಕಡಕಬಾವಿ, ಗ್ರೇಡ್ -2 ತಹಶೀಲ್ದಾರ ಧನಪಾಲ್ ಶೆಟ್ಟಿ ದೇವೂರ, ಮಾದೇವಪ್ಪ ಏವೂರ ಆರ್ ಬಿ ಗದ್ಯಾಳ ಇಂಡಿ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ನಂದೀಪ್ ರಾಠೋಡ,…
ಇಂದು (೨೪ ಅಕ್ಟೋಬರ, ಶುಕ್ರವಾರ) ವಿಶ್ವಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ ಖೊದ್ನಾಪೂರ(ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಇಡೀ ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ಕೊನೆಯ ಮಾತು ಹೀಗಿತ್ತು. “ನನ್ನನ್ನು ಮಣ್ಣು ಮಾಡುವಾಗ ನನ್ನ ಕೈಗಳನ್ನು ಮಾತ್ರ ಆಚೆ ಇರಿಸಿ ಮಣ್ಣು ಮಾಡಿ” ಎಂದು. ಈ ಮಾತಿನ ಅರ್ಥ ಈಷ್ಟೇ. ಅದರಿಂದ ಎಲ್ಲರೂ ತಿಳಿಯಲಿ ಪ್ರಲಂಚವೇ ಗೆದ್ದ ನನ್ನ ಕೈಯಲ್ಲಿ ಕೊನೆಗೆ ಏನೂ ಇರಲಿಲ್ಲವೆಂದು. ಅದಕ್ಕಂತಲೇ ಗೌತುಮ ಬುದ್ಧ ಅವರು, “ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಿಮ್ಮನ್ನು ನೀವು ಗೆಲ್ಲುವುದು ಉತ್ತಮವಾಗಿದೆ. ಇದು ನಿಜವಾದ ವಿಜಯವಾಗಿದೆ. ಇದನ್ನು ನಿಮ್ಮಿಂದ ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯು ಒಂದು ಅಂತರ ಸರ್ಕಾರಿಯ ಸಂಘಟನೆಯಾಗಿದ್ದು, ಅದು ರಾಷ್ಟ್ರ-ರಾಷ್ಟ್ರಗಳ ಮಧ್ಯೆ ಶಾಂತಿ, ಸಹಕಾರ ಸುಭದ್ರತೆ, ಉತ್ತಮ ಅಂತರಾಷ್ಟ್ರೀಯ ಸಂಬಂಧಗಳು ಏರ್ಪಡುವಂತೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಚಟುವಟಿಕೆಗಳ ನಿರ್ವಹಣೆಗಾಗಿ ಇರುವ ಕೇಂದ್ರವಾಗಿದೆ. ವಿಶ್ವಸಂಸ್ಥೆಯ ಸ್ಥಾಪನೆಯ ಹಿನ್ನೆಲೆಎರಡನೇಯ ಜಾಗತಿಕ ಯುದ್ಧದ ನಂತರ ರಾಷ್ಟçಗಳ ಮಧ್ಯೆ ಮುಂದೆ…
