Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಲೋಕ್‌ಅದಾಲತ್ ಮೂಲಕ ಪ್ರಕರಣಗಳನ್ನು ಬಗೆಹರೆಸಿಕೊಳ್ಳಿ
(ರಾಜ್ಯ ) ಜಿಲ್ಲೆ

ಲೋಕ್‌ಅದಾಲತ್ ಮೂಲಕ ಪ್ರಕರಣಗಳನ್ನು ಬಗೆಹರೆಸಿಕೊಳ್ಳಿ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಚಿನ್ ಕೌಶಿಕ್ ಸಲಹೆ

ಉದಯರಶ್ಮಿ ದಿನಪತ್ರಿಕೆ

ಮುದ್ದೇಬಿಹಾಳ: ಲೋಕ್‌ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಎರಡೂ ಪಕ್ಷಗಳು ತಮ್ಮ ಪ್ರಕರಣದ ತೀರ್ಮಾನವನ್ನು ತಾವೇ ತೆಗೆದುಕೊಂಡಂತಾಗುತ್ತದೆ. ಹಾಗಾಗಿ ಹೆಚ್ಚೆಚ್ಚು ಪ್ರಕರಣಗಳನ್ನು ಲೋಕ್‌ಅದಾಲತ್ ಮೂಲಕ ಬಗೆಹರೆಸಿಕೊಳ್ಳಲು ಪಕ್ಷಗಾರರು ಮುಂದೆ ಬರಬೇಕು ಎಂದು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅವರು ಸಲಹೆ ನೀಡಿದರು.
ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮೀತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟಿçÃಯ ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿ ಅವರು ಮಾತನಾಡಿದರು.
ಇಲ್ಲಿ ಇತ್ಯರ್ಥವಾದ ಪ್ರಕರಣಗಳ ವ್ಯಾಜ್ಯ ಮುಂದುವರೆಯುವದಿಲ್ಲ. ಮೇಲ್ಮನವಿ ಹೋಗಲು ಅವಕಾಶಗಳಿರುವದಿಲ್ಲ. ಮತ್ತು ಮುಖ್ಯವಾಗಿ ಎರಡೂ ಪಕ್ಷ ತಮ್ಮ ತೀರ್ಪನ್ನು ತಾವೇ ಆರಿಸಿಕೊಂಡು ಗೆದ್ದಂತಾಗುತ್ತದೆ. ಎಲ್ಲ ಪಕ್ಷಗಾರರು ಲೋಕ್‌ಅದಾಲತ್ ನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಅವರು ಮಾತನಾಡಿ, ಪಕ್ಷಗಾರರಲ್ಲಿ ಯಾವುದೇ ದ್ವೇಶ ಹುಟ್ಟಿಕೊಳ್ಳಬಾರದು. ತಮ್ಮ ತಮ್ಮಲ್ಲಿಯೇ ನ್ಯಾಯ ಸುರಳೀತವಾಗಿ ಮುಕ್ತಾಯವಾಗಬೇಕು ಎಂಬ ಉದ್ದೇಶದಿಂದ ಪ್ರತೀ ೩ ತಿಂಗಳಿಗೊಮ್ಮೆ ಲೋಕ್‌ಅದಾತ್ ನಡೆಸಲಾಗುತ್ತದೆ. ಈ ಅದಾಲತ್‌ಗಳಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಪ್ರಕರಣಗಳು ನಮ್ಮ ನ್ಯಾಯಾಲಯಗಳ ಸಂಕೀರ್ಣದಲ್ಲಿ ಮುಕ್ತಾಯವಾಗುತ್ತಿರೋದು ನಮಗೆಲ್ಲ ಹೆಮ್ಮೆ. ಇದಕ್ಕೆ ಎಲ್ಲ ವಕೀಲರು ಮತ್ತು ನ್ಯಾಯಾಧೀಶರು ಸಹಕಾರ ನೀಡುತ್ತಿದ್ದಾರೆ. ಈ ಸಹಕಾರ ಬರುವ ದಿನಗಳಲ್ಲಿಯೂ ಇರಲಿ ಎಂದರು.
ಸದರಿ ಲೋಕ ಅದಾಲತ್ ನಲ್ಲಿ ಮೂರು ನ್ಯಾಯಾಲಯಗಳಿಗೆ ಸಂಬAಧಿಸಿದAತೆ ನ್ಯಾಯಾಲಯದಲ್ಲಿ ಒಟ್ಟು ೭೭೪೧ಬಾಕಿ ಇರುವ ಪ್ರಕರಣಗಳಲ್ಲಿ ೨೩೧೬ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಸದರಿ ಪ್ರಕರಣಗಳಲ್ಲಿ ಒಟ್ಟು ೧೫೩೩ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್‌ಬೌನ್ಸ್ ಪ್ರಕರಣಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್‌ಎಸಿ ಇಪಿ ಪ್ರಕರಣಗಳು, ಎಮ್‌ವ್ಹಿಸಿ ಇಪಿ ಪ್ರಕರಣಗಳು ಮತ್ತು ಅಪರಾಧ ದಂಡ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಮತ್ತು ಪೂರ್ವದಾವೆ ಪ್ರಕರಣಗಳಲ್ಲಿ, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಹಾಗೂ ಬ್ಯಾಂಕಿನ ಪ್ರಕರಣಗಳ ಪೈಕಿ ಒಟ್ಟು ೯೬೫ ಪ್ರಕರಣಗಳಲ್ಲಿ ೨೦೪ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಇತ್ಯರ್ಥಗೊಂಡ ಪ್ರಕರಣಗಳನ್ನು ೫ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್, ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ರವೀಂದ್ರಕುಮಾರ.ಬಿ.ಕಟ್ಟಿಮನಿ ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್ ಇವರುಗಳು ರಾಜೀಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ್ ಪಡಿಸಿದರು.
ಪ್ರಕರಣ ಇತ್ಯರ್ಥಕ್ಕಾಗಿ ಅಪರ್ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ, ನ್ಯಾಯಾಂಗ ಸಂಧಾನಕಾರರಾಗಿ ಎನ್.ಬಿ.ಮುದ್ನಾಳ, ರವಿ ನಾಲತವಾಡ ಹಾಗೂ ರಶ್ಮಿ ಕುಲಕರ್ಣಿ ಶ್ರಮಿಸಿದರೆ, ನ್ಯಾ.ಸಂಘದ ಉಪಾಧ್ಯಕ್ಷ ಎಚ್.ಜಿ.ನಾಗೋಡ, ಪುರಸಭೆ ಮತ್ತು ಕೆಎಸ್‌ಆರ್‌ಟಿಸಿಗಳ ಕಾನೂನು ಸಲಹೆಗಾರ ಬಿ.ಎ.ನಾಡಗೌಡರ, ಹಿರಿಯ ನ್ಯಾಯವಾದಿಗಳಾದ ಎಂ.ಎಚ್.ಹಾಲಣ್ಣವರ, ವಿ.ಎಂ.ನಾಗಠಾಣ, ಜೆ.ಎ.ಚಿನಿವಾರ, ಸಿ.ಆರ್.ಜೋಶಿ, ಎಂ.ಎ.ಮುದ್ದೇಬಿಹಾಳ, ಎಸ್.ಎಂ.ಗುಡದಿನ್ನಿ, ಎಂ.ಎಸ್.ನಾವದಗಿ, ಆರ್.ಬಿ.ಪಾಟೀಲ, ಎಸ್.ಆರ್.ಸಜ್ಜನ, ಎನ್.ಜಿ.ಕುಲಕರ್ಣಿ, ಎನ್.ಆರ್.ಮೊಕಾಶಿ, ಎಮ್.ಆರ್.ಪಾಟೀಲ, ಸಿ.ಎಂ.ಅಸ್ಕಿ, ಎಸ್.ಬಿ.ಬಾಚಿಹಾಳ, ವಿ.ಜಿ.ಮದರಕಲ್ಲ, ವಾಯ್.ವಿ.ವಡವಡಗಿ, ನ್ಯಾಯವಾದಿಗಳಾದ ಬಸವರಾಜ ಚಿನಿವಾರ, ಎಸ್.ಎಂ.ಕಿಣಗಿ, ಎಸ್.ಆರ್.ಜೋಗಿ, ಚೇತನ ಶಿವಶಿಂಪಿ, ಎನ್.ಆಯ್.ಕೇಸಾಪೂರ, ಎಸ್.ಸಿ.ಹಿರೇಮಠ, ಬಿ.ಎಮ್.ಮುಂದಿನಮನಿ, ಆಯ್.ಎಸ್.ಹಗಟಗಿ, ಎಲ್.ಎಸ್.ಮೇಟಿ, ಬಿ.ವೈ.ಮೇಟಿ, ಯಾಸೀನ ಬಿದರಕುಂದಿ, ಸಾಬಣ್ಣ ಚಳ್ಳಗಿ, ಎಸ್.ಆರ್.ಅಮರಣ್ಣವರ, ಆರ್.ಎಸ್.ತುಪ್ಪದ, ಎಂ.ಎಸ್.ಹಜೇರಿ, ಮಾರುತಿ ಭೋವಿ, ವಿಜು ಹಿರೇಮಠ, ಎಂ.ಬಿ.ಹೊಸಮನಿ, ನಾಗನಗೌಡ ಪಾಟೀಲ, ಎಂ.ಎಲ್.ರಿಸಾಲದಾರ, ಪಿ.ಬಿ.ಗೌಡರ, ರಾಯನಗೌಡ ಬಿರಾದಾರ, ಎಚ್.ಎಚ್.ಬಡಿಗೇರ, ಹಸೀನಾ ಅನಂತಪೂರ, ಶ್ರೀದೇವಿ ರಾಜೂರ, ರೇಣುಕಾ ಪಾಟೀಲ, ಎಂ.ಎ.ಲಿAಗಸೂರ, ಎಂ.ಬಿ.ಅಸ್ಕಿ, ಬಿ.ಪಿ.ಮ್ಯಾಗೇರಿ, ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ್ ಮಹಾಂತೇಶ ಹಚರೆಡ್ಡಿ, ಶಿರಸ್ತೇದಾರರುಗಳಾದ ವಾಯ್.ಎಂ.ತಳವಾರ, ಸುರೇಶ ಬಳಗಾನೂರ, ಜ್ಯೋತಿ ಹಕಾರಿ, ಸಾಯಬಣ್ಣ ಪೂಜಾರ, ಎಸ್.ಜಿ.ವನಕುದುರಿ, ಸಿಬ್ಬಂದಿಗಳಾದ ಪ್ರಸನ್ನ ಎಸ್, ರಾಮು ಕಮ್ಮಾರ, ಗೀತಾ ರಾಂಪೂರ, ನರ್ಮದಾ ಮರೋಳ, ಸಿದ್ದಲಿಂಗ ಎಸ್, ಬಸವರಾಜ ಬೂದಿಹಾಳ, ಪದ್ಮಾವತಿ ಗಾಯಕವಾಡ, ಎ.ಎಸ್.ಮುಜಾವರ, ರೇಣುಕಾ ಜಾನಮಟ್ಟಿ, ಮಧು ಧರ್ಮಗಿರಿ, ಜ್ಯೋತಿ ಹೆಬ್ಬಾಳ, ಚನ್ನಮ್ಮ ಬಾಗೇವಾಡಿ, ಮೀನಾಕ್ಷಿ ದೊಡಮನಿ, ಅಮೀದಾ ನದಾಫ, ವಿಜು ಶಿವಣಗಿ, ಮಂಜುಳಾ ಗಾಡದ, ನೀಲಮ್ಮ ಇರಕಲ್ಲ, ಆಯ್.ಆರ್.ಹಿರೇಮಠ, ನಾಗಮ್ಮ ಹೂಗಾರ, ಜ್ಯೋತಿ ಮಳಗಿ, ಸಂಗು ರೆಡ್ಡಿ, ನಾಗು ಮದಿಹಳ್ಳಿ, ಅನಸೂಯಾ ಕರಡಿ ಕೋರ್ಟ್ ಪಿಸಿಗಳಾದ ರಫೀಕ ಚಪ್ಪರಬಂದ್ ಮತ್ತು ಅರ್ಜುನ ಚವ್ಹಾಣ ಶ್ರಮಿಸಿದರು.

ದೂರಾಗಿದ್ದ ದಂಪತಿ ಒಂದಾದರು

ಕೌಟುಂಬಿಕ ವ್ಯಾಜ್ಯವೊಂದರಲ್ಲಿ ದೂರಾದ ದಂಪತಿಗಳು ಕಳೆದ ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆಯುತ್ತಿದ್ದರು. ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ರಾಮಮೂರ್ತಿ ಎನ್ ಅವರ ಮಾನವೀಯ ನಿಲುವು, ನ್ಯಾಯವಾದಿಗಳಾದ ಎಲ್.ಆರ್.ನಾಲತವಾಡ, ಕೆ.ಜಿ.ಶಿವಯೋಗಿಮಠ ಇವರ ಸಮರ್ಪಿತ ಪ್ರಯತ್ನದಿಂದ ಉಂಟಾದ ಮನಃಪರಿವರ್ತನೆ ಕುಟುಂಬವನ್ನು ಉಳಿಸುವ ಮಹತ್ವದ ಕ್ಷಣವಾಗಿ ಪರಿಣಮಿಸಿತು.
ಕಹಿ ಅನುಭವಗಳು ಸಂವಾದದ ಮೂಲಕ ಕರಗಿದ್ದು, ನಂಬಿಕೆ ಮತ್ತು ಪ್ರೀತಿಗೆ ಮತ್ತೊಮ್ಮೆ ಅವಕಾಶ ನೀಡುವ ನಿರ್ದಾರವನ್ನು ದಂಪತಿಗಳು ಕೈಗೊಂಡರು. ಕುಟುಂಬಗಳ ಏಕತೆ ಕಾಪಾಡುವಲ್ಲಿ ಲೋಕ್ ಅದಾಲತ್ ಕೇವಲ ನ್ಯಾಯ ನೀಡುವ ವೇದಿಕೆಯಲ್ಲ, ಬದುಕಿಗೆ ಹೊಸ ದಾರಿ ತೋರಿಸುವ ಮಾನವೀಯ ನ್ಯಾಯಮಂದಿರವಾಗಿದೆ ಎಂದು ಸಾರ್ವಜನಿಕರು ಪ್ರಶಂಸಿಸಿದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.