ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದಸ್ತು ಬರಹಗಾರರಿಗೆ ನೋಂದಣಿ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕು ಮತ್ತು ಕಾವೇರಿ 0.3 ತಂತ್ರಾಂಶ ಜಾರಿಗೆ ತರುವುದನ್ನು ಕೈ ಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪರವಾನಿಗೆ ಪಡೆದ ಜಿಲ್ಲೆಯ ದಸ್ತು ಬರಹಗಾರರ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಮುಷ್ಕರ ನಡೆಸಿದರು.
ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಪ ನೋಂದಣಿ ಇಲಾಖೆ ಎದುರು ಮುಷ್ಕರ ನಡೆಸಿದ ಪದಾಧಿಕಾರಿಗಳು, ಸರ್ಕಾರದ ನಡೆಯಿಂದಾಗಿ ದಸ್ತು ಬರಹಗಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಕೂಡಲೇ ತೊಂದರೆದಾಯಕ ತೀರ್ಮಾನಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿದರು.
ದಸ್ತು ಬರಹಗಾರರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಡಿ.ಎಸ್. ಸಾವಳಗಿ ಮಾತನಾಡಿ, ರಾಜ್ಯಾದ್ಯಂತ ದಿನಕ್ಕೊಂದು ಕಾನೂನು ರೂಪಿಸುತ್ತಿರುವ ಹಿನ್ನೆಲೆ ದಸ್ತು ಬರಹಗಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಕೇರಳ ಮಾದರಿಯಲ್ಲಿ ದಸ್ತು ಬರಹಗಾರರಿಗೆ ಪ್ರತ್ಯೇಕವಾಗಿ ಲಾಗಿನ್ ನೀಡಬೇಕು. ಈಗ ಚಾಲ್ತಿಯಲ್ಲಿರುವ ಸಿಟಿಜನ್ ಲಾಗಿನ್ ಹಿಂಪಡೆಯಬೇಕು. ಪ್ರತಿ ನೋಂದಣಿ ಕಾಗದಕ್ಕೆ ಅಧಿಕೃತ ದಸ್ತ ಬರಹಾರರ ಮೊಹರು ಕಡ್ಡಾಯಗೊಳಿಸಬೇಕೆಂದು ಆಗ್ರಹಿಸಿದರು.
ಒಕ್ಕೂಟದ ಪ್ರಮುಖರಾದ ಎಚ್.ಆರ್. ಬಾಗವಾನ, ಪಾರಸ ಹೊಸಮನಿ, ಆರ್.ಎಸ್. ಡಂಕಿನ, ಬಿ.ಎಸ್. ಬಿರಾದಾರ ಮತ್ತಿತರರು ಮಾತನಾಡಿದರು. ಸಂತೋಷ ಅಥಣಿ, ರವಿ ತ ಏಲಿ, ರಾಜು ಜೋಳದ, ಎಂ.ಎಸ್. ಸಾವಳಗಿ, ಡಿ.ಬಿ. ಡೊಮನಾಳ, ಸಂದೀಪ ಕಾಗವಾಡ, ಜಿ.ವಿ. ಕುಲಕರ್ಣಿ, ಶ್ರೀನಿವಾಸ ಪಾಟೀಲ, ಎನ್.ಎಚ್. ಹಳ್ಳಿ, ಫಯಾಜ್ ಬೌಡಿವಾಲೆ, ಬಾಬು ಬೌಡಿವಾಲೆ, ನಂಗರಾಜ್ ಕೋಲಕಾರ, ದಶರಥ ತಳವಾರ, ಸಿದ್ದಪ್ಪ ದಾಶ್ಯಾಳ, ವೈ.ಜೆ. ಚವಾಣ್, ಎನ್.ಜಿ. ಹಿರೇಮಠ, ಡಿ.ಎಚ್. ತೊಗರಿ, ಎಸ್.ಬಿ. ಕಡಿ, ಮುತ್ತು ಶಿವಶರಣ, ಎಂ.ಎಂ. ಕಟಗಿ, ಡಿ.ಎಸ್. ಹಿರೇಮಠ, ದತ್ತು ಶಿವಶರಣ, ಎಚ್.ಎಸ್. ನಾಯ್ಕೋಡಿ, ಆರ್.ಎ. ನಾಡಗೌಡ, ಉಮೇಶ ಹಾರಿವಾಳ ಮತ್ತಿತರರಿದ್ದರು.

