Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50ರ ದುರಸ್ಥಿಗೆ ಆಗ್ರಹಿಸಿ ಎಂಎಲ್ಸಿ ಸುನೀಲಗೌಡ ಪಾಟೀಲ ಬರೆದ ಪತ್ರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಅವರು ವಿಜಯಪುರ- ಚಿತ್ರದುರ್ಗ ಮತ್ತು ವಿಜಯಪುರ- ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50ರ ದುರಸ್ಥಿಗೆ ಆಗ್ರಹಿಸಿ ಬರೆದ ಪತ್ರಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಸ್ಪಂದಿಸಿದ್ದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲಿಖಿತವಾಗಿ ಪತ್ರ ಬರೆಯುವ ಮೂಲಕ ಸ್ಪಂದಿಸಿದ್ದಾರೆ.ಶಾಸಕ ಸುನೀಲಗೌಡ ಪಾಟೀಲ ಅವರು 24.11.2025 ರಂದು ಕೇಂದ್ರ ಸಚಿವ ನಿತೀನ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು. ಮಹಾರಾಷ್ಟ್ರದ ಸೋಲಾಪುರದಿಂದ ಪ್ರಾರಂಭವಾಗಿ ರಾಜ್ಯದ ವಿಜಯಪುರ ಮೂಲಕ ಚಿತ್ರದುರ್ಗ ಮೂಲಕ ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಆಂತಾರಾಜ್ಯ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾಗಿರುವ ಈ ರಸ್ತೆ ಹದಗೆಟ್ಟಿದೆ. ವಿಜಯಪುರದಿಂದ ಚಿತ್ರದುರ್ಗದವರೆಗೆ ರಸ್ತೆಯ ಮೇಲ್ಪದರು ಕಿತ್ತು ಹೋಗಿದೆ. ವಿಜಯಪುರ- ಸೋಲಾಪುರ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಶಿಕ್ಷಕರ ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ಉದ್ದೇಶದಿಂದ ನನ್ನ ಮತಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾದ “ಗುರು ಸ್ಪಂದನ” ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಝಳಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಚಡಚಣ ತಾಲೂಕಿನ “ಗುರು ಸ್ಪಂದನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ರಾಷ್ಟ್ರ ರಕ್ಷಕರಂತೆ ಸಮಾಜ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಜವಾಬ್ದಾರಿ ಹೊತ್ತಿದ್ದಾರೆ ಎಂದರು.ಗ್ರಾಮೀಣ ಭಾಗದ ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ವಿಜಯಪುರ ಜಿಲ್ಲಾ ಉಪನಿರ್ದೇಶಕರ ಕಚೇರಿ ಶಿಕ್ಷಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನವನ್ನೂ ಕೂಡಾ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ವ್ಯಕ್ತಪಡಿಸಿದರು.ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ನೌಕರರ ಸೇವಾ ಪುಸ್ತಕವು ಶಿಕ್ಷಕರ ಸಂವಿಧಾನಕ್ಕೆ ಸಮಾನವಾಗಿದ್ದು, ಅದರಲ್ಲಿ ಸಂಪೂರ್ಣ ಹಾಗೂ ಸರಿಯಾದ ಮಾಹಿತಿ ಇರಬೇಕು. ಶಿಕ್ಷಣ ಸಚಿವರ ಸಮ್ಮುಖದಲ್ಲಿಯೇ ಗ್ರಾಮೀಣ ನೌಕರರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ…
ವಿದ್ಯಾರ್ಥಿಗಳು ವೈದ್ಯರಾಗುವ ಕನಸು ನನಸಾಗಲು ಸಹಾಯ ಹಸ್ತ ಚಾಚಿದ ಸಚಿವ ಎಂ.ಬಿ.ಪಾಟೀಲ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಬ್ಬರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ವಿದ್ಯಾರ್ಥಿಗಳು ವೈದ್ಯರಾಗುವ ಕನಸು ನನಸಾಗಲು ಸಹಾಯ ಹಸ್ತ ಚಾಚಿದ್ದಾರೆ.ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಆರ್ಥಿಕ ಸಮಸ್ಯೆಯಿಂದಾಗಿ ಇಬ್ಬರು ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದರು. ಈ ಮಾಹಿತಿ ತಿಳಿದ ಸಚಿವರು ಬಿ.ಎಲ್.ಡಿ.ಇ ಸಂಸ್ಥೆಯ ವತಿಯಿಂದ ಇಬ್ಬರೂ ವಿದ್ಯಾರ್ಥಿಗಳಿಗೆ ಕೋರ್ಸಿಗೆ ಅಗತ್ಯವಾಗಿರುವ ಕಾಲೇಜು ಪ್ರವೇಶ ಶುಲ್ಕ, ಊಟ ಹಾಗೂ ವಸತಿ ಬೇಕಾಗುವ ಒಟ್ಟು ಮೊತ್ತವನ್ನು ನೀಡಿದ್ದಾರೆ.ಶನಿವಾರ ಬೆಳಿಗ್ಗೆ ಸಚಿವ ಎಂ. ಬಿ. ಪಾಟೀಲ ಅವರು ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಜೊತೆ ಸೇರಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಿದರು.ತಿಕೋಟಾ ತಾಲೂಕಿನ ಅರಕೇರಿ ಎಲ್. ಟಿ-1ರ ವಿದ್ಯಾರ್ಥಿನಿ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಪ್ರೀತಿ ಅಂದ್ರೆ ಎರಡು ದೇಹಗಳನ್ನು ಒಂದೇ ಜೀವವನ್ನಾಗಿಸೋದು ಎನ್ನೋದು ಎಲ್ಲರ ಅಂಬೋಣ. ಅದು ಕೊಡುವ ರೋಮಾಂಚನದ ಭಾವವನ್ನು ಇನ್ನಾವದೂ ಕೊಡಲಾರದು. ಇನ್ನಾವುದರಲ್ಲಿ ಅದು ಸಿಗಲು ಸಾಧ್ಯವೇ ಇಲ್ಲ. ಪ್ರೀತಿಗೆ ಕರಗದ ಮನಸ್ಸಿಲ್ಲ. ಎಲ್ಲರಿಂದ ಪೆದ್ದು ಎಂದು ಕರೆಸಿಕೊಳ್ಳುವವರಿಗೂ ಒಂದು ಕಿರುನಗೆ ಬಿಸಾಕಿದರೆ ಸಾಕು. ಒಂದು ಕಣ್ಸನ್ನೆ ಮಾಡಿದರೆ ಸಾಕು. ಇದುವರೆಗೂ ಸೈಲೆಂಟಾಗಿದ್ದ ಅವರ ಮನಸ್ಸು ವೈಬ್ರೇಟ್ ಮೋಡಿನಲ್ಲಿ ವಿಹರಿಸುತ್ತೆ.ಈ ಪ್ರೀತಿಯನ್ನು ಹೊಸ ಮುತ್ತಿನಂತೆ ಎದೆಚಿಪ್ಪಿನಲ್ಲಿ ಕೂಡಿಟ್ಟುಕೊಂಡು ಬದುಕಿನ ಒಂದಲ್ಲ ಒಂದು ಹಂತದಲ್ಲಿ ಎಲ್ಲರೂ ಅನುಭವಿಸಿಯೇ ಇರುತ್ತಾರೆ. ಪ್ರೀತಿಯ ಗಾಳಕ್ಕೆ ಸಿಗದವರು ತುಂಬಾ ವಿರಳ. ಪ್ರೀತಿಯ ಉಸಾಬರಿಯೇ ಬೇಡ ನನ್ನ ಪಾಡಿಗೆ ನಾನಿರುತ್ತೇನೆ ಎಂದು ಗಟ್ಟಿಯಾಗಿ ನಿಂತವನ ಮುಂದೆ ಅದೆಲ್ಲಿಂದಲೋ ಬಂದ ನೀನು ಅದೊಂದು ದಿನ ನನ್ನ ಕಣ್ಣಿಗೆ ಬಿದ್ದೆ, ನೀನು ಕಣ್ಣಿಗೆ ಬಿದ್ದ ಕ್ಷಣದಿಂದ ನಿಂತಲ್ಲೇ ನಿಲ್ಲಲಾರದ ಕೂತಲ್ಲೇ ಕೂರಲಾರದ ಪರಿಸ್ಥಿತಿ. ಅರೆ ಗಳಿಗೆಯಲ್ಲಿ ನೀನು ಅದೇನು ಜಾದೂ ಮಾಡಿದೆ. ನನ್ನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ವಿಜಯಪುರ, ಬೆಂಗಳೂರಿನ ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಹಾಗೂ ವೀ ಕೇರ್ ಸೊಸೈಟಿ ಅವರ ಸಹಯೋಗದಲ್ಲಿ ಎಂ.ಎಸ್.ಎಂ.ಇ ಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ರ‍್ಯಾಂಪ್ ಯೋಜನೆಯಡಿ ಉದ್ಯಮಿಗಳಿಗೆ ನೀಡುವ ಸೇವೆಗಳ ವ್ಯಾಪ್ತಿ ಗುಣಮಟ್ಟ ಮತ್ತು ತಲುಪುವಿಕೆಯನ್ನು ಹೆಚ್ಚಿಸುವ ಪ್ರಕ್ರಿಯೆ ಬಿಡಿಎಸ್ಪಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಡಿ.೧೭ ರಂದು ಬಾಗಲಕೋಟ ಹಾಗೂ ಜಮಖಂಡಿ ಬೈಪಾಸ್ ರಸ್ತೆಯಲ್ಲಿರುವ ರೂಡಸೆಟ್ ಸಂಸ್ಥೆಯಲ್ಲಿ ನಡೆಯಿತು.ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಾದ ಸಿದ್ದಯ್ಯ ಬಿ ಮಾತನಾಡಿ, ಹೊಸ ಉದ್ಯಮಿದಾರರು ಬ್ಯಾಂಕಿನ ಸಾಲ-ಸೌಲಭ್ಯಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ. ಉದ್ದಿಮೆದಾರರ ಬಳಿ ಸೂಕ್ತ ದಾಖಲಾತಿಗಳಿದ್ದಲ್ಲಿ, ಬ್ಯಾಂಕಿನಿಂದ ಸುಲಭವಾಗಿ ಸಾಲ ಸೌಲಭ್ಯ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಸಹಾಯಕ ಶಾಖಾ ವ್ಯವಸ್ಥಾಪಕರಾದ ಸದಾಶಿವ, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸತೀಶ ಕಾಪಸೆೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ತಾಲೂಕಿನ ಹೆಸ್ಕಾಂನ ಗ್ರಾಮೀಣ ಉಪ ವಿಭಾಗ ಕಚೇರಿಯಲ್ಲಿ ಡಿ.೨೦ರ ಮಧ್ಯಾಹ್ನ ೩ ಗಂಟೆಗೆ ವಿದ್ಯುತ್ ವಿತರಣೆಗೆ ಸಂಬಂಧಿಸಿದಂತೆ ಗ್ರಾಹಕರ ಅಹವಾಲು, ಕುಂದು-ಕೊರತೆ ಸಭೆ ಆಯೋಜಿಸಲಾಗಿದೆ.ಸಭೆಗೆ ಗ್ರಾಹಕರು ಪಾಲ್ಗೊಂಡು ವಿದ್ಯುತ್‌ಗೆ ಸಂಬಂಧಿಸಿದ ತಮ್ಮ ಕುಂದು-ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ವಿಜಯಪುರ ತಾಲೂಕಿನ ಹೆಸ್ಕಾಂನ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ತಾಲೂಕಿನ ಹೆಸ್ಕಾಂನ ಗ್ರಾಮೀಣ ಉಪ ವಿಭಾಗ ಕಚೇರಿಯಲ್ಲಿ ಡಿ.೨೦ರ ಮಧ್ಯಾಹ್ನ ೩.೩೦ ಗಂಟೆಗೆ ವಿದ್ಯುತ್ ವಿತರಣೆಗೆ ಸಂಬಂಧಿಸಿದಂತೆ ಗ್ರಾಹಕರ ಅಹವಾಲು ಸ್ವೀಕರಿಸಲು ಕುಂದು-ಕೊರತೆ ಸಭೆ ಆಯೋಜಿಸಲಾಗಿದೆ.ಸಭೆಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಪಾಲ್ಗೊಂಡು ವಿದ್ಯುತ್‌ಗೆ ಸಂಬಂಧಿಸಿದ ತಮ್ಮ ಕುಂದು-ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಬಬಲೇಶ್ವರ ತಾಲೂಕಿನ ಹೆಸ್ಕಾಂನ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ನಿರ್ಧಾರ | ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಖರೀದಿಸಲು ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ನಿರ್ಧರಿಸಿ, ತೊಗರಿ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚಿಸಿದ್ದಾರೆ.ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ಜಿಲ್ಲಾ ಟಾಸ್ಕಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ನೊಂದಣಿ ಪ್ರಾರಂಭಿಸಿ, ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯ ೯೮ ಖರೀದಿ ಕೇಂದ್ರಗಳಲ್ಲಿ ತೊಗರಿ ಖರೀದಿಯನ್ನು ಪ್ರಾರಂಭಿಸುವಂತೆ ಅವರು ಸೂಚನೆ ನೀಡಿದ್ದಾರೆ.ಖರೀದಿ ಕೇಂದ್ರಗಳಲ್ಲಿ ಪ್ರತಿ ಕ್ವೀಂಟಲಿಗೆ ೮೦೦೦ ರೂ.ಗಳಂತೆ ಪ್ರತಿ ರೈತರಿಂದ ಪ್ರತಿ ಎಕರೆಗೆ ೪ ಕ್ವಿಂಟಲ್‌ನಂತೆ ಫ್ರುಟ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ತೊಗರಿ ಬೆಳೆದ ವಿಸ್ತೀರ್ಣಕ್ಕೆ ಅನುಗುಣವಾದ ಪ್ರಮಾಣದಲ್ಲಿ ತೊಗರಿಯನ್ನು ಖರೀದಿಸಲಾಗುತ್ತದೆ. ನೊಂದಣಿ ಕಾರ್ಯ ೮೦ ದಿನಗಳವರೆಗೆ ನಡೆಯಲಿದ್ದು, ಖರೀದಿ ಪ್ರಕ್ರಿಯೆ ೯೦…
ಬಾಲ ಮಂದಿರಕ್ಕೆ ದಿಢೀರ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಕಿವಿಮಾತು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಬಾಲಕರ ಬಾಲ ಮಂದಿರಕ್ಕೆ ಶುಕ್ರವಾರ ಸಂಜೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ದಿಢೀರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಾಲ ಮಂದಿರದ ಮೂಲಭೂತ ಸೌಕರ್ಯ ಪರಿಶೀಲಿಸಿದ ಅವರು, ಬಾಲ ಮಂದಿರದಲ್ಲಿರುವ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ,ಯಾವುದೇ ಕಾರಣಕ್ಕೂ ಮಕ್ಕಳಿಗೆ ತೊಂದರೆಯಾಗದAತೆ ನೋಡಿಕೊಳ್ಳಬೇಕು. ಶೌಚಾಲಯಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಸ್ನಾನಕ್ಕೆ ಬಿಸಿ ನೀರು, ಉತ್ತಮ ಆಹಾರ ಸೇರಿದಂತೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಮಕ್ಕಳಿಗೆ ಒದಗಿಸಬೇಕು. ಕೌಶಲ್ಯತೆಯನ್ನು ಹೆಚ್ಚಿಸಲು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಬಾಲಮಂದಿರದ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಮಕ್ಕಳ ಯೋಗಕ್ಷೇಮ ವಿಚಾರಿಸಿದರು.ಸತತ ಅಧ್ಯಯನಶೀಲತೆ ರೂಢಿಸಿಕೊಳ್ಳಬೇಕು. ಎಲ್ಲಾ ವಿಷಯಗಳನ್ನು ಕರಗತ ಮಾಡಿಕೊಳ್ಳಬೇಕು. ಶ್ರಮವಹಿಸಿ ಓದಿ ಉನ್ನತ…
ಉದಯರಶ್ಮಿ ದಿನಪತ್ರಿಕೆ ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ ಎಳ್ಳಮವಾಸ್ಶೆ ನಿಮಿತ್ಶ ಶುಕ್ರವಾರ ರೈತರು ಹೊಲಗಳಿಗೆ ತೆರಳಿ ಭೂಮಿತಾಯಿಗೆ ಚರಗ ಚೆಲ್ಲಿ ವಿಶೇಷ ಪೂಜೆ ಸಲ್ಲಿಸಿ, ಈ ಹಬ್ಬವು ಸವ೯ರಿಗೂ ಸುಖ, ಶಾಂತಿ, ನೆಮ್ಮದಿ-ಸಮೃದ್ದಿ ತರಲಿ ಎಂದು ಪ್ರಾಥಿ೯ಸಿದರು.ನಂತರ ಸಜ್ಜಿ, ಜೋಳದ ಕಡಬು,ಭರ್ತ, ಪುಂಡಿ ಪಲ್ಯ, ಹಿಂಡಿ (ಕಾಳು) ಪಲ್ಯ. ಜತೆಗೆ ಶೇಂಗಾ ಹೋಳಿಗೆ, ಅನ್ನ-ಸಾರು ಸವಿದರು.ಈ ವೇಳೆ ಮಲ್ಲಿಕಾಜು೯ನ ಮನಗೂಳಿ, ಆರ್.ಜಿ.ಮಾನಶೆಟ್ಟಿ,ಬಂಗಾರಹಟ್ಟಿ ಪಿಡ್ಲ್ಶುಡಿ ಎಇಇ ಸಿದ್ರಾಮ ಮೋದಿ, ಹೊನ್ನಳ್ಳಿ ಕನಾ೯ಟಕ ಗ್ರಾಮೀಣ ಬ್ಶಾಂಕ್ ವ್ಶವಸ್ಥಾಪಕ ಆರ್.ಜಿ.ಗೂಗಲ್ಲ್, ಕ್ಶಾಸಿಯರ್ ಪರಸುರಾಮ ನಾಯ್ಕೋಡಿ, ಬಸವರಾಜ ಮಾನಶೇಟ್ಟಿ, ಪಿಗ್ಮಿಏಜಂಟ ಮೌನೇಶ ಗೌಂಡಿ, ಪತ್ರಕತ೯ ಮಲ್ಲು ಕೆಂಭಾವಿ, ನಡಗೇರಪ್ಪ ತಳವಾರ, ಡಿ.ಬಿ.ಸೀತನೂರ, ಶಿವಪ್ಪ ಕರಿಕಲ್ಲ್ , ಮಾಂತಮ್ಮ ಮನಗೂಳಿ, ಕನ್ಶಾಕುಮಾರಿ ಮನಗೂಳಿ, ಸುಜಾತಾ ಮಾನಶೇಟ್ಟಿ, ಮಾಹಾನಂದ ಮಾನಶೇಟ್ಟಿ, ಜಯಶ್ರೀ ಕರಿಕಲ್ಲ್, ಶರಣು ಕೋರವಾರ, ಸೇರಿದಂತೆ ಮತ್ತಿತ್ತರಿದ್ದರು.
