ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ವಿಜಯಪುರ, ಬೆಂಗಳೂರಿನ ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಹಾಗೂ ವೀ ಕೇರ್ ಸೊಸೈಟಿ ಅವರ ಸಹಯೋಗದಲ್ಲಿ ಎಂ.ಎಸ್.ಎಂ.ಇ ಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ರ‍್ಯಾಂಪ್ ಯೋಜನೆಯಡಿ ಉದ್ಯಮಿಗಳಿಗೆ ನೀಡುವ ಸೇವೆಗಳ ವ್ಯಾಪ್ತಿ ಗುಣಮಟ್ಟ ಮತ್ತು ತಲುಪುವಿಕೆಯನ್ನು ಹೆಚ್ಚಿಸುವ ಪ್ರಕ್ರಿಯೆ ಬಿಡಿಎಸ್ಪಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಡಿ.೧೭ ರಂದು ಬಾಗಲಕೋಟ ಹಾಗೂ ಜಮಖಂಡಿ ಬೈಪಾಸ್ ರಸ್ತೆಯಲ್ಲಿರುವ ರೂಡಸೆಟ್ ಸಂಸ್ಥೆಯಲ್ಲಿ ನಡೆಯಿತು.
ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಾದ ಸಿದ್ದಯ್ಯ ಬಿ ಮಾತನಾಡಿ, ಹೊಸ ಉದ್ಯಮಿದಾರರು ಬ್ಯಾಂಕಿನ ಸಾಲ-ಸೌಲಭ್ಯಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ. ಉದ್ದಿಮೆದಾರರ ಬಳಿ ಸೂಕ್ತ ದಾಖಲಾತಿಗಳಿದ್ದಲ್ಲಿ, ಬ್ಯಾಂಕಿನಿಂದ ಸುಲಭವಾಗಿ ಸಾಲ ಸೌಲಭ್ಯ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಸಹಾಯಕ ಶಾಖಾ ವ್ಯವಸ್ಥಾಪಕರಾದ ಸದಾಶಿವ, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸತೀಶ ಕಾಪಸೆೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗಂಗಾಧರ ದೇಸಾಯಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ಸಂತೋಷ ಸಜ್ಜನ ಉಪಸ್ಥಿತರಿದ್ದರು.

