Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಅಯ್ಯಪ್ಪ ಸ್ವಾಮಿಯ ವೃತಾಚರಣೆ, ನಿಯಮ, ಪರಂಪರೆ ಐತಿಹಾಸಿಕವಾದದ್ದು. ೭೦ರ ದಶಕದಿಂದ ಶುರುವಾದ ಪರಂಪರೆ ಸಧ್ಯ ಕರ್ನಾಟಕದಿಂದ ಪ್ರತೀ ವರ್ಷ ಕೋಟ್ಯಾಂತರ ಮಾಲಾಧಾರಿಗಳು ಅಯ್ಯಪ್ಪನ ದರ್ಶನ ಪಡೆಯುತ್ತಾರೆ ಎಂದು ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ರಾಮು ಕರಾಂಡ ಗುರುಸ್ವಾಮಿಗಳು ಹೇಳಿದರು.ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಮಹಾಪೂಜೆ ಹಾಗೂ ಪಡಿಪೂಜೆಯ ಬಳಿಕ ಮಾಧ್ಯದವರನ್ನುದ್ದೇಶಿಸಿ ಅವರು ಮಾತನಾಡಿದರು.ಮಂಡಲ ಕಾಲ ವೃತಾಚರಣೆ ಮಾಡುವದರಿಂದ ನಮ್ಮ ದೇಹ, ಮನಸ್ಸು ಪರಿಶುದ್ಧವಾಗುತ್ತದೆ. ಮನಸ್ಸಿಗೆ ನೆಮ್ಮದಿ, ಆನಂದ, ಸಂತೋಷ, ಸಂಮೃದ್ಧಿ ಪ್ರಾಪ್ತಿಯಾಗುತ್ತದೆ. ಅಯ್ಯಪ್ಪ ಅಂದರೆ ಕಲಿಯುಗದ ವರದ. ಬೇಡಿದ ವರಗಳನ್ನು ತಕ್ಷಣ ನೀಡುವ ದೇವರು. ಹಾಗಾಗಿ ಕೋಟ್ಯಾಂತರ ಜನ ನಂಬಿ ಅವರ ಮೊರೆ ಹೋಗಿ, ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡು ಶರಣಾಗುತ್ತಾರೆ ಎಂದರು.ಸತತ ೩೨ನೇ ವರ್ಷದ ಮಾಲಾಧಾರಿ ಶಿವು ಕಿರಶ್ಯಾಳ ಗುರುಸ್ವಾಮಿ ಅವರು ಮಾತನಾಡಿ, ಕಳೆದ ೧೭ ವರ್ಷಗಳಿಂದ ಈ ಆವರಣದಲ್ಲಿ ಮಹಾಪೂಜೆ ನೆರವೇರಿಸುತ್ತ ಬರುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಂಗವಾಗಿ ತಾಲೂಕಾಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂಸ್ಮರಣಾ ದಿನಾಚರಣೆಯನ್ನು ಆಚರಿಸಲಾಯಿತು.ಪೂಜೆಯನ್ನು ಪ್ರಭಾರಿ ತಹಸೀಲ್ದಾರ ಅವ್ವಪ್ಪ ಅಮರವಾಡಗಿ ಅವರು ನೆರವೇರಿಸಿದರು. ನಿವೃತ್ತ ಉಪನ್ಯಾಸಕ ಕೆ.ಬಿ.ಕಡೆಮನಿ ಅವರು ಅಮರಶಿಲ್ಪಿ ಜಕಣಾಚಾರಿ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಎಸ್.ಎಚ್.ಅರಕೇರಿ, ಉಪತಹಸೀಲ್ದಾರ ಬಿ.ಆರ್.ಪೋಲೇಶಿ, ಶಿರಸ್ತೇದಾರ ಬಿ.ಆರ್.ಬಳೂರಗಿ, ವಿಶ್ವಕರ್ಮ ಸಮಾಜದ ಮುಖಂಡರಾದ ರಾಜೇಂದ್ರ ಪತ್ತಾರ, ಜಗನ್ನಾಥ ಪತ್ತಾರ, ಮುತ್ತು ಪತ್ತಾರ,ಪ್ರಭು ಬಡಿಗೇರ, ರಾಮು ಬಡಿಗೇರ, ಬಸವರಾಜ ಬಡಿಗೇರ, ಸುಭಾಸ ಬಡಿಗೇರ, ಮಂಜುನಾಥ ಬಡಿಗೇರ, ಚನ್ನಪ್ಪ ಪತ್ತಾರ, ಬಸನಗೌಡ ಪಾಟೀಲ, ತಹಸೀಲ್ದಾರ ಕಚೇರಿಯ ಸಿಬ್ಬಂದಿ ಇತರರಿದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ವಿವಿಧ ಡಿಎಸ್ಎಸ್ ಮುಖಂಡರು ಕೇಕ್ ಕತ್ತರಿಸು ಮೂಲಕ ಗುರುವಾರ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನವನ್ನು ಆಚರಿಸಿ ಡಾ.ಬಿ.ಆರ್.ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡರಾದ ಅಶೋಕ ಚಲವಾದಿ, ಅರವಿಂದ ಸಾಲವಾಡಗಿ ಮಾತನಾಡಿ, ಡಾ.ಅಂಬೇಡ್ಕರ ಅವರಿಗೆ ಸಂವಿಧಾನ ಬರೆಯಲು ಸ್ಪೂರ್ತಿ ನೀಡಿದ ಸಂಗತಿಗಳಲ್ಲಿ ಭೀಮಾ ಕೋರೆಗಾಂವ್ ವಿಜಯ ಕೂಡಒಂದಾಗಿದೆ. ಪುಣೆ ಪ್ರದೇಶದಲ್ಲಿ ಪೇಶ್ವೆಗಳ ದೊಡ್ಡ ಸೈನ್ಯದ ಜೊತೆ ಕೋರೆಗಾಂವ್ ವೀರರು ಅವಿರತವಾಗಿ ಹೋರಾಟ ನಡೆಸಿ ಎರಡನೇ ಬಾಜಿರಾಯನ ಮಗನನ್ನು ಕೊಂದ ನೆನಪಿಗೆ ಈ ವಿಜಯೋತ್ಸವ ಆಚರಿಸಲಾಗುತ್ತಿದೆ. ಕ್ರೂರ ಜಾತಿ ಪದ್ಧತಿ, ಅಸ್ಪೃಶ್ಯತೆಯ ನಡುವೆಯೂ ದಲಿತರು ನಡೆಸಿದ ಹೋರಾಟ ಅಂಬೇಡ್ಕರ ಅವರ ಬದುಕಿಗೆ ತಿರುವು ಕೊಟ್ಟ ಸಂಗತಿಯಾಗಿದೆ.ಈ ಘಟನೆಯ ಹಿನ್ನೆಲೆ, ವಿದ್ಯಮಾನಗಳ ಕುರಿತು ಇಂದಿನ ತಲೆಮಾರಿಗೆ ತಲುಪಿಸುವ ಅಗತ್ಯವಿದೆ ಎಂದರು.ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡರಾದ ತಮ್ಮಣ್ಣ ಕಾನಾಗಡ್ಡಿ, ಪ್ರಭು ದಳವಾಯಿ, ರಮೇಶ ಸಾಲೋಡಗಿ, ಸತ್ಯಪ್ಪ ಕಟ್ಟಿಮನಿ, ಮೌನೇಶ ಹೆಬ್ಬಾಳ, ಗಂಗಾ ನಂದಿ, ಜಯಶ್ರೀ ನಡುವಿನಮನಿ,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಿಂದಗಿ ನಗರದ ಶಾಖಾ ವ್ಯಾಪ್ತಿಯಲ್ಲಿ ಮೇಘಾ ಮಾರ್ಟ್ ಕಟ್ಟಡ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ೧೦೦ಕೆವ್ಹಿಎ ಮನಗೂಳಿ ಹಾಗೂ ೧೦೦ಕೆವ್ಹಿಎ ಮನಗೂಳಿ ಐಪಿಡಿಎಸ್ ವಿದ್ಯುತ್ ಪರಿವರ್ತಕ ಸ್ಥಳಾಂತರ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ಎಫ್-೦೧ ಸಿಂದಗಿ ನಗರ ಮಾರ್ಗದ ಮೇಲೆ ಬರುವ ಬಸವ ನಗರ, ಡಿಸಿಸಿ ಬ್ಯಾಂಕ್, ಶಾಸಕರ ಮನೆಯ ಸುತ್ತಮುತ್ತಲಿನ ಪ್ರದೇಶ ಹಾಗೂ ಬಸವೇಶ್ವರ ಬ್ಯಾಂಕ್, ಗೌಡರ ಓಣಿ, ತೆಕ್ಕಿಯಾ ಗಲ್ಲಿ ಮತ್ತು ಕಾಗಿ ಆಸ್ಪತ್ರೆಯವರೆಗೆ ಜ.೦೨ರಂದು ಬೆಳಿಗ್ಗೆ ೦೯ಗಂಟೆಯಿAದ ಸಾಯಂಕಾಲ ೬:೩೦ಗಂಟೆಯವರೆಗೆ ವಿದ್ಯುತ್ ವ್ಯತ್ಯೆಯವಾಗುವುದರಿಂದ ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪ-ವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಕಲಚೇತನರು ಸಹ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಎಲ್ಲರಂತೆ ಅವರಲ್ಲಿಯೂ ಸಾಮರ್ಥ್ಯ, ಪ್ರತಿಭೆಯಿದೆ ಎಂದು ತಾಲೂಕು ಪಂಚಾಯತ್ ಇಒ ರಾಮು ಅಗ್ನಿ ಹೇಳಿದರು.ಸಿಂದಗಿ ಪಟ್ಟಣದ ಚೆನ್ನವೀರ ಸ್ವಾಮೀಜಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಹಳೆ ಸಿಡಿಪಿಒ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ, ವಿಜಯಪುರ ಜಿಲ್ಲಾ ಸಮಿತಿ ಹಾಗೂ ಸಿಂದಗಿ ತಾಲೂಕು ಘಟಕ ವತಿಯಿಂದ ಹಮ್ಮಿಕೊಂಡ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು. ತಾಪಂ ಇಲಾಖೆಯಲ್ಲಿ ಶೇ.೧೫ರಷ್ಟು ಮೀಸಲಾತಿ ಕ್ರಿಯಾಯೋಜನೆ ಮಾಡಿ ಸಾಧನ ಸಲಕರಣೆಗಳನ್ನು ವಿತರಣೆ ಮಾಡಿದ್ದೇವೆ ಎಂದರು.ಈ ವೇಳೆ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘು ಹುಬ್ಬಳ್ಳಿ ಮಾತನಾಡಿ, ವಿಕಲಚೇತನರು ಸಮಾಜದಲ್ಲಿ ಅತ್ಯಂತ ಕೆಳಮಟ್ಟದಲ್ಲಿದ್ದು, ಅವರ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕೆನ್ನುವ ಸಲುವಾಗಿ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.ಈ ವೇಳೆ ವಿಕಲಚೇತನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜಯಪುರ ಪ್ರಕಾಶ ಬಿರಾದಾರ, ಸಿಂದಗಿಯ ತಶ್ವೀನ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಬೆಂಗಳೂರಿನ ಯಲಹಂಕಾ ಬಳಿಯ ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ವಾಸವಾಗಿರುವ ಕುಟುಂಬಗಳ ಒತ್ತುವರಿ ತೆರವು ಕಾರ್ಯಾಚರಣೆ ಮಾಡುವಾಗ ಮುತವರ್ಜಿ ವಹಿಸುವ ಕಾಂಗ್ರೆಸ್ ಸರಕಾರ ಮುಳಗಡೆಯ ಸಂತ್ರಸ್ತರ ತ್ಯಾಗವನ್ನು ಮರೆತಂತೆ ಕಾಣುತ್ತದೆ ಅವರಿಗೆ ಸೂರು ನೀಡುವದರಲ್ಲಿ ಹಿಂದೆಟು ಹಾಕಿರುವ ಇಂಥಹ ಸರಕಾರಕ್ಕೆ ನಾಚಿಕೆ ಬರಬೇಕು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಆರೋಪಿಸಿದರು.ಪಟ್ಟಣದ ಅವರ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಮುಳಗಡೆಯಾಗಿ ನಿರಾಶ್ರಿತರಾಗಿರುವ ಮುಸ್ಲಿಂ ಸಮುದಾಯದ ದಲಿತ ಸಮುದಾಯದ ಅತ್ಯಂತ ಹಿಂದುಳಿದ ವರ್ಗಗಳ ಬಡಜನರು ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಕಳೆದ ೨೫ ವರ್ಷಗಳಿಂದ ಪತ್ರಾಸ ಸೆಡ್‌ನಲ್ಲಿ ಬಿಸಿಲು ಮಳೆ ಚಳಿ ಎನ್ನದೇ ಕುಟುಂಬ ಸಮೇತರಾಗಿ ವಾಸವಾಗಿರುವವರಿಗೆ ಮೂಲಭೂತ ಸೌಲಭ್ಯ ಒದಗಿಸಿ ಒಂದು ಸೂರು ಒದಗಿಸಿ ಕೊಡುವ ಸೌಜನ್ಯ ತೋರದೇ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮತ್ತು ಈ ಕ್ಷೇತ್ರವನ್ನು ಪ್ರತಿನಿಧಿಸುವ ಸಚಿವ ಶಿವಾನಂದ ಪಾಟೀಲ ತಕ್ಷಣವೇ ರಾಜಿನಾಮೆ ಕೊಡಬೇಕು ಎಂದು ಒತ್ತಾಯಿಸಿದರು.ಕಾಂಗ್ರೆಸ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಲು, ಕಲಿಕಾ ವಾತಾವರಣವನ್ನು ಹಬ್ಬದ ರೀತಿಯಲ್ಲಿ ಸೃಷ್ಟಿಸುವುದು ಕಲಿಕಾ ಹಬ್ಬದ ಉದ್ದೇಶ, ಇದು ಸರಕಾರಿ ಶಾಲೆಗಳಲ್ಲಿ ಮಾತ್ರ ಆಚರಿಸುತ್ತಿರುವುದು ವಿಶೇಷ ಎಂದು ಹಿರಿಯ ಶಿಕ್ಷಕ ಆರ್.ವಿ.ಪಾಟೀಲ್ ಹೇಳಿದರು.ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೇವಾಡ ಸರಕಾರಿ ಶಾಲೆಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ತಾಳಿಕೋಟೆಯ S.K.ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ S.D. ಕರ್ಜಗಿ ಸರ್ ಭಾಗವಹಿಸಿ ಮಾತನಾಡಿ ಪ್ರತಿಭೆ ಬಡತನದಲ್ಲಿ ಹುಟ್ಟಿ ಅರಮನೆಯಲ್ಲಿ ಪ್ರಜ್ವಲಿಸುತ್ತದೆ. ಹಾಗಾಗಿ ಸರಕಾರಿ ಶಾಲೆಯಲ್ಲಿ ಕಲಿತ ನಿವೆಲ್ಲ ಬಡಕುಟುಂಬದವಾರದೂ ಮುಂದೊಂದು ದಿನ ದೊಡ್ಡ ವ್ಯಕ್ತಿಗಳಾಗಿ ಬೆಳಯುತ್ತಿರಿ ಎಂದು ಅಬ್ರಾಹಂ ಲಿಂಕನ್ ಜೀವನಗಾಥೆಯನ್ನು ಉಲ್ಲೇಖಿಸಿ ಪ್ರೇರಣಾತ್ಮಕ ಮಾತುಗಳನ್ನು ಹೇಳಿದರು.ಶಿಕ್ಷಣ ರತ್ನ ಪ್ರಶಸ್ತಿ ಪಡೆದ ಟ ಬಿ.ವಿ.ಹಿರೇಮಠ ಹಾಗೂ ಜ್ಞಾನಜ್ಯೋತಿ ಪ್ರಶಸ್ತಿ ಪಡೆದ ಎಸ್.ಎಮ್.ಬಿರಾದಾರ ಶಿಕ್ಷಕರಿಗೆ ಅಗರಖೇಡ ಕ್ಲಸ್ಟರ್ ನ ಗುರು ಬಳಗದಿಂದ ಹಾಗೂ ಗುಬ್ಬೇವಾಡ ಶಾಲೆಯ ಶಿಕ್ಷಕ ವೃಂದದಿಂದ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಗುಬ್ಬೇವಾಡ ಶಾಲೆಯ ಮುಖ್ಯ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಕಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಶಾಲೆ ಹಾಗೂ ಕಾಲೇಜುಗಳು ಮಕ್ಕಳ ಶಿಕ್ಷಣ, ಶಿಸ್ತು ಮತ್ತು ಸಂಸ್ಕಾರಗಳನ್ನು ಬೆಳೆಸುವ ಪವಿತ್ರ ಕೇಂದ್ರಗಳು. ಇಂತಹ ಶಿಕ್ಷಣ ಕೇಂದ್ರಗಳು ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳಿಗೆ ಅಶ್ಲೀಲ ಹಾಗೂ ಅಸಭ್ಯ ಗೀತೆಗಳಿಗೆ ನೃತ್ಯ ಮಾಡಿಸುವ ಪ್ರವೃತ್ತಿ ಅತ್ಯಂತ ಖಂಡನೀಯವಾಗಿದೆ ಎಂದು ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಅಧ್ಯಕ್ಷ ನಾಗರಾಜ ಕುಂಬಾರ ಹೇಳಿದರು.ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಅಶ್ಲೀಲ ಗೀತೆಗಳಿಗೆ ನೃತ್ಯ ಮಾಡುವುದನ್ನು ನಿಷೇಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದಿಂದ ತಹಶೀಲ್ದಾರ ಸಂತೋಷ ಮ್ಯಾಗೇರಿ ರವರಿಗೆ ಬುಧವಾರ ಮನವಿ ಸಲ್ಲಿಸಿ ಮಾತನಾಡಿದರು.ಆದರೆ ಕೆಲವು ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಒಳ್ಳೆಯ ದೇಶ ಭಕ್ತಿ ಗೀತೆ, ಭಾವ ಗೀತೆ, ಕನ್ನಡ ನಾಡ ನುಡಿ ಗೀತೆಗಳ ನೃತ್ಯಗಳಿಗೆ ಆದ್ಯತೆ ನೀಡದೆ ಅಶ್ಲೀಲ ಗೀತೆಗಳಿಗೆ ನೃತ್ಯ ಮಾಡಿಸುತ್ತಿರುವುದು ಪ್ರತಿ ವರ್ಷ ಕಂಡು ಬಂದಿರುತ್ತದೆ. ಕಾರಣ ಈ ವರ್ಷದಿಂದ ಯಾವುದೇ ಶಾಲಾ…
ಲೇಖನ*- *ಡಾ ಶಶಿಕಾಂತ ಪಟ್ಟಣ*ರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಇವತ್ತು ರಾಜಕಾರಣ ಮತ್ತು ಪ್ರಾಮಾಣಿಕತೆ ಎಂಬುದು ತದ್ವಿರುದ್ಧ ಪದಗಳು. ಇದಕ್ಕೆ ಮಾದರಿ ಎಂದರೆ ಮಾಜಿ ಸಚಿವ ಶ್ರೀ ಎಸ್ ಕೆ ಕಾಂತಾತನ್ನ ಬದುಕಿನುದ್ದಕ್ಕೂ ಸಂಘರ್ಷ ಸಮನ್ವಯತೆಯ ಸಾಕಾರ ರೂಪದಲ್ಲಿ ತಮ್ಮನ್ನು ತೊಡಗಿಸಿಕೊಂಡ ನಾನು ಕಂಡರ ಅತ್ಯಂತ ಅಪರೂಪದ ಪ್ರಾಮಾಣಿಕ ರಾಜಕಾರಣಿ ಎಂದು ಕರೆದರೆ ತಪ್ಪಾಗಲಾರದು. ಈಗಲೂ ಬಾಡಿಗೆ ಮನೆಯಲ್ಲಿ ಕಾಲ ಕಳೆಯುವ ಸರಳ ಸಜ್ಜನಿಕೆಯ ಸ್ನೇಹ ಜೀವಿ. ಮಂತ್ರಿ ಪದವಿ ಇದ್ದಾಗ ಕಾರ್ಮಿಕರ ಪರವಾಗಿ ನಿಂತ ಶ್ರೀ ಎಸ್ ಕೆ ಕಾಂತಾ ಕರ್ನಾಟಕವು ಕಂಡ ಅಪರೂಪದ ಪ್ರಬುದ್ಧ ಶ್ರೇಷ್ಠ ರಾಜಕಾರಣಿ.ಪ್ರಶಸ್ತಿ ಹಣವನ್ನು ಕಾರ್ಮಿಕ ನಿಧಿಗೆ ಮರಳಿ ನೀಡಿದ ಮಹಾನುಭಾವರುಕಳೆದ ವರ್ಷ ಡಿ ದೇವರಾಜ ಅರಸು ಪ್ರಶಸ್ತಿ ಅವರಿಗೆ ದೊರಕಿತು. ಶ್ರೀ ಸಿದ್ಧರಾಮಯ್ಯ ಶ್ರೀ ಬಸವರಾಜ ಹೊರಟ್ಟಿ ಅಂತಹ ಅನೇಕ ಹಿರಿಯ ನಾಯಕರ ಮಧ್ಯೆ ಸದು ವಿನಯದ ಶ್ರೀ ಎಸ್ ಕೆ ಕಾಂತಾ ಅವರು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ತಮಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೋ) ದಿಂದ ಪ್ರಸಕ್ತ ವರ್ಷದ ಪದವಿ ಸ್ನಾತಕೋತ್ತರ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರವೇಶ ಆರಂಭವಾಗಿದ್ದು ಜನೆವರಿ 31 ಕೊನೆಯ ದಿನವಾಗಿದೆ.ಪ್ರವೇಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ನಗರದ ರಾಮಮಂದಿರ ರಸ್ತೆಯ ಬಿ.ಎಲ್. ಡಿ.ಇ.ಸಂಸ್ಥೆಯ ಜೆ.ಎಸ್.ಎಸ್.ಶಿಕ್ಷಣ ಮಹಾವಿದ್ಯಾಲಯ ಆವರಣದಲ್ಲಿರುವ ಇಗ್ನೋ ಅಧ್ಯಯನ ಕೇಂದ್ರ 1307 ರಲ್ಲಿ ಸಂಪರ್ಕಿಸಬಹುದು.ಅಲ್ಲದೆ www.ignouadmission.samarth.edu.in ಕ್ಕೆ ಲಾಗಿನ್ ಆಗಿ ಆನ್ಲೈನ್ ಮೂಲಕ ನೊಂದಣಿ ಪಡೆಯಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9980691291 ಗೆ ಸಂಪರ್ಕಿಸುವಂತೆ ಇಗ್ನೋ ಕೇಂದ್ರ ಸಂಯೋಜಕ ಡಾ. ಮಂಜುನಾಥ ಕೋರಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
