ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೋ) ದಿಂದ ಪ್ರಸಕ್ತ ವರ್ಷದ ಪದವಿ ಸ್ನಾತಕೋತ್ತರ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರವೇಶ ಆರಂಭವಾಗಿದ್ದು ಜನೆವರಿ 31 ಕೊನೆಯ ದಿನವಾಗಿದೆ.
ಪ್ರವೇಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ನಗರದ ರಾಮಮಂದಿರ ರಸ್ತೆಯ ಬಿ.ಎಲ್. ಡಿ.ಇ.ಸಂಸ್ಥೆಯ ಜೆ.ಎಸ್.ಎಸ್.ಶಿಕ್ಷಣ ಮಹಾವಿದ್ಯಾಲಯ ಆವರಣದಲ್ಲಿರುವ ಇಗ್ನೋ ಅಧ್ಯಯನ ಕೇಂದ್ರ 1307 ರಲ್ಲಿ ಸಂಪರ್ಕಿಸಬಹುದು.
ಅಲ್ಲದೆ www.ignouadmission.samarth.edu.in ಕ್ಕೆ ಲಾಗಿನ್ ಆಗಿ ಆನ್ಲೈನ್ ಮೂಲಕ ನೊಂದಣಿ ಪಡೆಯಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9980691291 ಗೆ ಸಂಪರ್ಕಿಸುವಂತೆ ಇಗ್ನೋ ಕೇಂದ್ರ ಸಂಯೋಜಕ ಡಾ. ಮಂಜುನಾಥ ಕೋರಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
