ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಗರದ ಭಗೀರಥ ಡೆವಲಪರ್‌ಗಳ ಮಾಲೀಕ ಅನೀಲ ಡಿ. ಅವಳೆ ಅವರ ಆಶ್ರಯದಲ್ಲಿ ಯೋಗ ತರಬೇತಿ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಆಚಾರ್ಯ ರಾಮಕೃಷ್ಣ ಗುರೂಜಿ ಅವರು ಮಾತನಾಡಿ, ದೈನಂದಿನ ಯೋಗಾಭ್ಯಾಸವು ವ್ಯಕ್ತಿತ್ವ ವಿಕಾಸಕ್ಕೆ ಅತ್ಯಂತ ಸಹಕಾರಿಯಾಗಿದ್ದು, ಒತ್ತಡ ನಿವಾರಣೆ, ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಲು ನೇರವಾಗಿ ನೆರವಾಗುತ್ತದೆ ಎಂದು ಹೇಳಿದರು.
ನಿವೃತ್ತ ಇಂಜಿನಿಯರ್ ಆರ್.ಎಲ್. ಹಳ್ಳೂರ ಅವರು ಅತಿಥಿಯಾಗಿ ಭಾಗವಹಿಸಿದ್ದರು.
ಆರ್.ಕೆ. ಮೋಕಾಶಿ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಬಿ.ಎಸ್. ಸಜ್ಜನ ಚಿಗರಿ, ವಕೀಲ ಜಿ.ಬಿ. ಕೋಳೂರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

