ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಲು, ಕಲಿಕಾ ವಾತಾವರಣವನ್ನು ಹಬ್ಬದ ರೀತಿಯಲ್ಲಿ ಸೃಷ್ಟಿಸುವುದು ಕಲಿಕಾ ಹಬ್ಬದ ಉದ್ದೇಶ, ಇದು ಸರಕಾರಿ ಶಾಲೆಗಳಲ್ಲಿ ಮಾತ್ರ ಆಚರಿಸುತ್ತಿರುವುದು ವಿಶೇಷ ಎಂದು ಹಿರಿಯ ಶಿಕ್ಷಕ ಆರ್.ವಿ.ಪಾಟೀಲ್ ಹೇಳಿದರು.
ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೇವಾಡ ಸರಕಾರಿ ಶಾಲೆಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ತಾಳಿಕೋಟೆಯ S.K.ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ S.D. ಕರ್ಜಗಿ ಸರ್ ಭಾಗವಹಿಸಿ ಮಾತನಾಡಿ ಪ್ರತಿಭೆ ಬಡತನದಲ್ಲಿ ಹುಟ್ಟಿ ಅರಮನೆಯಲ್ಲಿ ಪ್ರಜ್ವಲಿಸುತ್ತದೆ. ಹಾಗಾಗಿ ಸರಕಾರಿ ಶಾಲೆಯಲ್ಲಿ ಕಲಿತ ನಿವೆಲ್ಲ ಬಡಕುಟುಂಬದವಾರದೂ ಮುಂದೊಂದು ದಿನ ದೊಡ್ಡ ವ್ಯಕ್ತಿಗಳಾಗಿ ಬೆಳಯುತ್ತಿರಿ ಎಂದು ಅಬ್ರಾಹಂ ಲಿಂಕನ್ ಜೀವನಗಾಥೆಯನ್ನು ಉಲ್ಲೇಖಿಸಿ ಪ್ರೇರಣಾತ್ಮಕ ಮಾತುಗಳನ್ನು ಹೇಳಿದರು.
ಶಿಕ್ಷಣ ರತ್ನ ಪ್ರಶಸ್ತಿ ಪಡೆದ ಟ ಬಿ.ವಿ.ಹಿರೇಮಠ ಹಾಗೂ ಜ್ಞಾನಜ್ಯೋತಿ ಪ್ರಶಸ್ತಿ ಪಡೆದ ಎಸ್.ಎಮ್.ಬಿರಾದಾರ ಶಿಕ್ಷಕರಿಗೆ ಅಗರಖೇಡ ಕ್ಲಸ್ಟರ್ ನ ಗುರು ಬಳಗದಿಂದ ಹಾಗೂ ಗುಬ್ಬೇವಾಡ ಶಾಲೆಯ ಶಿಕ್ಷಕ ವೃಂದದಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗುಬ್ಬೇವಾಡ ಶಾಲೆಯ ಮುಖ್ಯ ಗುರುಗಳಾದ ಎಮ್.ಬಿ.ಹಾವಳಗಿ, ಶಿಕ್ಷಕರಾದ ಎಸ್.ಆರ್.ಅರವತ್ತು, ಎಸ್.ಡಿ.ರಾಠೋಡ, ಎನ್.ಎಮ್.ಕ್ಷತ್ರಿ, ಎಮ್.ಎಸ್.ಮಾಳಿ, ವಿ.ಬಿ.ಹೊನವಾಡ, ಶಾಬುದ್ದೀನ್ ಕಸಾಯಿ, ಸುನೀಲ ಮರಗೂರ, ಶ್ರೀಮತಿ ಎಮ್.ಬಿ.ವಾಲಿಕಾರ, ಶ್ರೀಮತಿ ವಿದ್ಯಾ ಮರಗೂರ, ಪಂಚಾಯತಿ ಸದಸ್ಯರಾದ ಅಮೃತ ಮರಗೂರ, ಅಗರಖೇಡ ಕ್ಲಸ್ಟರ್ ನ ಮುಖ್ಯ ಗುರುಗಳಾದ, ಎಮ್.ಆಯ್.ಉಮರಾಣಿ, ಎಸ್.ಬಿ.ರಾವಜಿ, ಕೆ.ಆಯ್.ಉಮರಾಣಿ, ಎಚ್.ಬಿ.ಕಾಗವಾಡ, ಎಸ್.ಬಿ.ಸಾಲೊಟಗಿ, ಡಿ.ಎಸ್.ಲಚ್ಯಾಣ, ಕೆ.ಎಸ್.ಬೋಳಸೂರ, ಭಾಗವಹಿಸಿದ್ದರು.
ಸಿಆರ್ಪಿ ಮಹೇಶ್ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಜೆ.ಚಿಂಚೋಳಿ ಸ್ವಾಗತಿಸಿದರು, ಬಿ.ವಿ.ಹಿರೇಮಠ ನಿರೂಪಿಸಿದರು.

