ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ವಿವಿಧ ಡಿಎಸ್ಎಸ್ ಮುಖಂಡರು ಕೇಕ್ ಕತ್ತರಿಸು ಮೂಲಕ ಗುರುವಾರ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನವನ್ನು ಆಚರಿಸಿ ಡಾ.ಬಿ.ಆರ್.ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡರಾದ ಅಶೋಕ ಚಲವಾದಿ, ಅರವಿಂದ ಸಾಲವಾಡಗಿ ಮಾತನಾಡಿ, ಡಾ.ಅಂಬೇಡ್ಕರ ಅವರಿಗೆ ಸಂವಿಧಾನ ಬರೆಯಲು ಸ್ಪೂರ್ತಿ ನೀಡಿದ ಸಂಗತಿಗಳಲ್ಲಿ ಭೀಮಾ ಕೋರೆಗಾಂವ್ ವಿಜಯ ಕೂಡ
ಒಂದಾಗಿದೆ. ಪುಣೆ ಪ್ರದೇಶದಲ್ಲಿ ಪೇಶ್ವೆಗಳ ದೊಡ್ಡ ಸೈನ್ಯದ ಜೊತೆ ಕೋರೆಗಾಂವ್ ವೀರರು ಅವಿರತವಾಗಿ ಹೋರಾಟ ನಡೆಸಿ ಎರಡನೇ ಬಾಜಿರಾಯನ ಮಗನನ್ನು ಕೊಂದ ನೆನಪಿಗೆ ಈ ವಿಜಯೋತ್ಸವ ಆಚರಿಸಲಾಗುತ್ತಿದೆ. ಕ್ರೂರ ಜಾತಿ ಪದ್ಧತಿ, ಅಸ್ಪೃಶ್ಯತೆಯ ನಡುವೆಯೂ ದಲಿತರು ನಡೆಸಿದ ಹೋರಾಟ ಅಂಬೇಡ್ಕರ ಅವರ ಬದುಕಿಗೆ ತಿರುವು ಕೊಟ್ಟ ಸಂಗತಿಯಾಗಿದೆ.ಈ ಘಟನೆಯ ಹಿನ್ನೆಲೆ, ವಿದ್ಯಮಾನಗಳ ಕುರಿತು ಇಂದಿನ ತಲೆಮಾರಿಗೆ ತಲುಪಿಸುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡರಾದ ತಮ್ಮಣ್ಣ ಕಾನಾಗಡ್ಡಿ, ಪ್ರಭು ದಳವಾಯಿ, ರಮೇಶ ಸಾಲೋಡಗಿ, ಸತ್ಯಪ್ಪ ಕಟ್ಟಿಮನಿ, ಮೌನೇಶ ಹೆಬ್ಬಾಳ, ಗಂಗಾ ನಂದಿ, ಜಯಶ್ರೀ ನಡುವಿನಮನಿ, ಪ್ರಗತಿ ಕಿರಿಶ್ಯಾಳ, ಮಹಾದೇವಿ ದೊಡಮನಿ, ಆಶಾ ಸೋಲಾಪುರಕರ ಇತರರು ಇದ್ದರು.

