ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಿಂದಗಿ ನಗರದ ಶಾಖಾ ವ್ಯಾಪ್ತಿಯಲ್ಲಿ ಮೇಘಾ ಮಾರ್ಟ್ ಕಟ್ಟಡ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ೧೦೦ಕೆವ್ಹಿಎ ಮನಗೂಳಿ ಹಾಗೂ ೧೦೦ಕೆವ್ಹಿಎ ಮನಗೂಳಿ ಐಪಿಡಿಎಸ್ ವಿದ್ಯುತ್ ಪರಿವರ್ತಕ ಸ್ಥಳಾಂತರ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ಎಫ್-೦೧ ಸಿಂದಗಿ ನಗರ ಮಾರ್ಗದ ಮೇಲೆ ಬರುವ ಬಸವ ನಗರ, ಡಿಸಿಸಿ ಬ್ಯಾಂಕ್, ಶಾಸಕರ ಮನೆಯ ಸುತ್ತಮುತ್ತಲಿನ ಪ್ರದೇಶ ಹಾಗೂ ಬಸವೇಶ್ವರ ಬ್ಯಾಂಕ್, ಗೌಡರ ಓಣಿ, ತೆಕ್ಕಿಯಾ ಗಲ್ಲಿ ಮತ್ತು ಕಾಗಿ ಆಸ್ಪತ್ರೆಯವರೆಗೆ ಜ.೦೨ರಂದು ಬೆಳಿಗ್ಗೆ ೦೯ಗಂಟೆಯಿAದ ಸಾಯಂಕಾಲ ೬:೩೦ಗಂಟೆಯವರೆಗೆ ವಿದ್ಯುತ್ ವ್ಯತ್ಯೆಯವಾಗುವುದರಿಂದ ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪ-ವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
