ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಂಗವಾಗಿ ತಾಲೂಕಾಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂಸ್ಮರಣಾ ದಿನಾಚರಣೆಯನ್ನು ಆಚರಿಸಲಾಯಿತು.
ಪೂಜೆಯನ್ನು ಪ್ರಭಾರಿ ತಹಸೀಲ್ದಾರ ಅವ್ವಪ್ಪ ಅಮರವಾಡಗಿ ಅವರು ನೆರವೇರಿಸಿದರು. ನಿವೃತ್ತ ಉಪನ್ಯಾಸಕ ಕೆ.ಬಿ.ಕಡೆಮನಿ ಅವರು ಅಮರಶಿಲ್ಪಿ ಜಕಣಾಚಾರಿ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಎಸ್.ಎಚ್.ಅರಕೇರಿ, ಉಪತಹಸೀಲ್ದಾರ ಬಿ.ಆರ್.ಪೋಲೇಶಿ, ಶಿರಸ್ತೇದಾರ ಬಿ.ಆರ್.ಬಳೂರಗಿ, ವಿಶ್ವಕರ್ಮ ಸಮಾಜದ ಮುಖಂಡರಾದ ರಾಜೇಂದ್ರ ಪತ್ತಾರ, ಜಗನ್ನಾಥ ಪತ್ತಾರ, ಮುತ್ತು ಪತ್ತಾರ,ಪ್ರಭು ಬಡಿಗೇರ, ರಾಮು ಬಡಿಗೇರ, ಬಸವರಾಜ ಬಡಿಗೇರ, ಸುಭಾಸ ಬಡಿಗೇರ, ಮಂಜುನಾಥ ಬಡಿಗೇರ, ಚನ್ನಪ್ಪ ಪತ್ತಾರ, ಬಸನಗೌಡ ಪಾಟೀಲ, ತಹಸೀಲ್ದಾರ ಕಚೇರಿಯ ಸಿಬ್ಬಂದಿ ಇತರರಿದ್ದರು.

