ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಮನುಷ್ಯನ ಪ್ರತಿದಿನದ ಒತ್ತಡದ ಬದುಕಿಗೆ ಯೋಗ ಅವಶ್ಯಕ ಪ್ರತಿಯೊಬ್ಬರು ಯೋಗ ಅಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಬನಶಂಕರಿ ಲಿಂಗಾಯತ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಶ್ರೀ ಬನಶಂಕರಿ ಸಿ.ಬಿ.ಎಸ್.ಸಿ ಸ್ಕೂಲನ ಕಾರ್ಯದರ್ಶಿ ಕುಮಾರಿ ಎಸ್ ಎಸ್ ಶೇಗುಣಸಿ ಹೇಳಿದರು.
ತಾಲೂಕಿನ ಸಾವಳಗಿಯ ಶಾಲಾ ಆವರಣದಲ್ಲಿ ನಡೆದ ಯೋಗ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನಸ್ಸಿನ ತಳಮಳ ಅತಿಯಾದ ಕೋಪ ಗ್ಯಾಸ್ಟ್ರಿಕ್ ಅಲರ್ಜಿ ಅಂತಹ ಕಾಯಿಲೆಗಳಿಂದ ಮುಕ್ತಿಯಾಗಿ ಜೀವನ ನಡೆಸಲು ಯೋಗ ಒಂದು ಸರಳ ವಿಧಾನ. ನಿತ್ಯ ಜೀವನದಲ್ಲಿ ನಾವು ಯೋಗ ಅಳವಡಿಸಿಕೊಳ್ಳುವ ಮೂಲಕ ಸುಂದರವಾಗಿ ಜೀವನ ಸಾಗಿಸಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು, ಹಾಗೂ ಮಕ್ಕಳು ಸೇರಿದಂತೆ ಎಲ್ಲರೂ ಯೋಗಾಸನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

