Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಿಸಿಲ ತಾಪಕ್ಕೆ ಜಾನುವಾರು ನೀರು ಸೀಗದೇ ತತ್ತರ | ರೈತರಿಂದ ನೀರಿಗಾಗಿ ಹೋರಾಟ ವಿಜಯಪುರ : ಮೊದಲಿನಿಂದಲು ಬೆಸಿಗೆ ವೇಳೆ ಜಾನುವಾರುಗಳಿಗೆ ಕುಡಿಯಲು ನೀರಿಗಾಗಿ ಉರಿ ಬಿಸಿಲಿನಲ್ಲಿ ಕುಳಿತು ಅನೇಕ ಬಾರಿ ಹೋರಾಟ ಮಾಡಿ, ಹಲವಾರು ಬಾರಿ ಮನವಿ ಸಲ್ಲಿಸಿದರು ಗೋಳಾಟ ತಪ್ಪಿಲ್ಲ, ವಿಜಯಪುರ ಜಿಲ್ಲೆಯ ಕಾಲುವೆಗಳಿಗೆ ನೀರು ಹರಿಸದೆ ನಾರಾಯಣಪುರ ಕಾಲುವೆಗೆ ನೀರು ಹರಿಸುತ್ತಿರುವುದು ಖಂಡನೀಯ, ವಿಜಯಪುರ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದ ಕೋಲಾರ ತಾಲುಕಿನ ಅಧ್ಯಕ್ಷರಾದ ಸೋಮು ಬಿರಾದಾರ ರೈತರೊಡನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಜಿಲ್ಲೆಯ ಅನೇಕ ರೈತರು ತಮ್ಮ ಬೆಲೆಬಾಳುವ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಆಲಮಟ್ಟಿ ಜಲಾಶಯಕ್ಕೆ ಹಾಗೂ ಎನ್.ಟಿ.ಪಿ.ಸಿ ಸೇರಿದಂತೆ ಕೆ.ಐ.ಡಿ.ಬಿ ಗೆ ಸಾವಿರಾರು ಎಕರೆ ಜಮೀನು ಕಳೆದುಕೊಂಡು ಜಿಲ್ಲೆಗೆ ನೀರಾವರಿ ಆಗುವ ಭರವಸೆಯನ್ನು ಹೊಂದಿದ ರೈತರಿಗೆ ಸರಿಯಾದ ಸಮಯಕ್ಕೆ ನೀರು ಸಿಗದೇ ಕಂಗಾಲಾಗಿರುವ ರೈತ ಇದ್ದ ಅಲ್ಪ ಸ್ವಲ್ಪ…
ಕಲಕೇರಿ: ಗ್ರಾಮದ ಅಂಬೇಡ್ಕರ್ ವ್ರತ್ತದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ದೇವರಹಿಪ್ಪರಗಿ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಾಜಿ ಶಾಸಕ ಶರಣಪ್ಪ ಸುಣಗಾರ ಮತಯಾಚನೆ ಮಾಡಿದರು.ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ತೆರೆದ ವಾಹನದಲ್ಲಿ ಮೆರವಣಿಗೆಯೊಂದಿಗೆ ರೋಡ್ ಶೋ ನಡೆಸಿದರು.ಗ್ರಾಮದ ಅಂಬೇಡ್ಕರ್ ವೃತ್ತ, ಅಸ್ಕಿ ರಸ್ತೆ, ಹನುಮಾನ ದೇವಸ್ಥಾನ, ವಂಕಟೇಶ್ವರ ನಗರ, ಟಿಪ್ಪುಸುಲ್ತಾನ ಚೌಕ್ ಮಾರ್ಗವಾಗಿ ಮುಖ್ಯ ಬಜಾರದವರೆಗೆ ಮೆರವಣಿಗೆಯಲ್ಲಿ ತೇರಳಿ ನಂತರ ಅಲ್ಲಿ ಬಹಿರಂಗ ಸಭೆಯನ್ನು ನಡೆಸಲಾಯಿತು. ಈ ವೇಳೆ ಕಾಂಗ್ರೇಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಮಾತನಾಡಿ, ಬಿಜೆಪಿ ಸರಕಾರದ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದು, ಈ ಬಾರಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ, ಪೊಳ್ಳು ಭರವಸೆಗಳನ್ನು ನೀಡಿ ಜನರಿಗೆ ದಾರಿ ತಪ್ಪಿಸುವ ಕೆಲಸವನ್ನು ಮಾಡುವುದರಲ್ಲಿ ಬಿಜೆಪಿಯವರು ನಿರತರಾಗಿದ್ದಾರೆ. ಆದ್ದರಿಂದ ಈ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.ಕಾಂಗ್ರೇಸ್ ಪಕ್ಷದ ಮುಖಂಡರಾದ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ, ಸುಭಾಷ ಛಾಯಾಗೋಳ, ಬಿ ಎಸ್ ಪಾಟೀಲ ಯಾಳಗಿ,…
ಚಿಮ್ಮಡ: ಭ್ರಷ್ಟಾಚಾರ, ಮಹಿಳೆಯರ ಅಸಹಾಯಕರ ಮೇಲೆ ದಬ್ಬಾಳಿಕೆ ನಡೆಸುವುದೇ ಮೂಲಮಂತ್ರವಾಗಿಸಿಕೊAಡಿರುವ ಬಿಜೆಪಿ ಆಟ ಇನ್ನು ನಡೆಯುವುದಿಲ್ಲವೆಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ ಹೇಳಿದರು.ಗುರುವಾರದಂದು ಚಿಮ್ಮಡ ಗ್ರಾಮದ ಪ್ರಮುಖ ಬೀದಿ, ವಿವಿಧ ವಾರ್ಡಗಳ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿ, ತೆರೆದ ವಾಹನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಹೆದರಿಸಿ ಬೆದರಿಸಿ ಮತ ಪಡೆಯುವ ಕಾಲ ಹೋಯಿತು, ಜನತೆ ನೀಡಿದ ಅವಕಾಶವನ್ನು ೪೦ ಫರಸೆಂಟ್ ಭ್ರಷ್ಠಾಚಾರದೊಂದಿಗೆ ಲೂಟಿ ಹೊಡೆದು ಈಗ ಸುಳ್ಳು ಭರವಸೆಗಳನ್ನು ನೀಡುತ್ತ ಮತ್ತೆ ಬಂದಿದೆ. ಪದೇ ಪದೇ ಮತದಾರರನ್ನು ಮೋಸ ಗೊಳಿಸಲಾಗದು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರೈತರು, ನೇಕಾರರು, ಬಡವರು ನಿಶ್ಚಿಂತೆಯಿAದ ಜೀವನ ನಡೆಸುತಿದ್ದರು ಈ ಭ್ರಷ್ಠ ಬಿಜೆಪಿ ಸರಕಾರ ಎಲ್ಲ ವರ್ಗಗಳ ಜನತೆಯ ಚಿಂತೆಗೀಡು ಮಾಡಿದೆ ಎಂದರು.ತೇರದಾಳ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಸಿದ್ದು ಕೊಣ್ಣೂರ ಮಾತನಾಡಿ, ಕ್ಷೇತ್ರದ ಹಿರಿಯರ, ಯುವಕರ ಆಶಯದಂತೆ ಸ್ಥಳೀಯ ಅಭ್ಯರ್ಥಿಯಾಗಿರುವ ನನಗೆ ಕಾಂಗ್ರೆಸ್ ಟಿಕೇಟ ದೊರೆತಿದ್ದು ತಮ್ಮ ಮನೆ…
ಬಸವನಬಾಗೇವಾಡಿ: ತಾಲೂಕಿನ ಮುಳ್ಳಾಳ ಗ್ರಾಮದಿಂದ ಸುಮಾರು ೧೨ ಕಿಮೀ ಅಂತರದಲ್ಲಿರುವ ಉಕ್ಕಲಿ ಗ್ರಾಮದ ಅವ್ವಪ್ಪ ಮುತ್ಯಾನ ದೇವಸ್ಥಾನದವರೆಗೆ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಶಿವಾನಂದ ಪಾಟೀಲರು ಮತ್ತೊಮ್ಮೆ ಆಯ್ಕೆಯಾಗಲಿ ಎಂದು ಪ್ರಾರ್ಥಿಸಿ ಗುರುವಾರ ಮುಳ್ಳಾಳ ಗ್ರಾಮದ ಶಶಿಧರ ಮುಳ್ಳಾಳ ದೀರ್ಘದಂಡ ನಮಸ್ಕಾರ ಹಾಕಿದರು.ಮುಳ್ಳಾಳ ಗ್ರಾಮದ ತಮ್ಮ ಮನೆಯಿಂದ ಬೆಳಗ್ಗೆ ಎಂಟು ಗಂಟೆಗೆ ದೀರ್ಘದಂಡ ನಮಸ್ಕಾರ ಹಾಕಲು ಆರಂಭಿಸಿದ ಶಶಿಧರ ಮುಳ್ಳಾಳ ಉಕ್ಕಲಿ ಗ್ರಾಮದ ಅವ್ವಪ್ಪ ಮುತ್ಯಾನ ದೇವಸ್ಥಾನಕ್ಕೆ ಮಧ್ಯಾನ್ಹ ೧೨ ಗಂಟೆಗೆ ಸುಮಾರಿಗೆ ತಲುಪಿದರು. ನಂತರ ಮಾತನಾಡಿದ ಅವರು, ಒಂದು ದಶಕದ ಅವಽಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಶಾಸಕರು ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಇಂತಹ ಶಾಸಕರು ಮತ್ತೊಮ್ಮೆ ಆಯ್ಕೆಯಾಗಬೇಕೆಂದು ಭಗವಂತನಲ್ಲಿ ಪ್ರಾರ್ಥಿಸಿ ದೀರ್ಘದಂಡ ನಮಸ್ಕಾರ ಹಾಕುತ್ತಿರುವುದಾಗಿ ಹೇಳಿದರು.ನಂತರ ಕಾಂಗ್ರೆಸ್ ವಿಧಾನಸಭಾ ಕಾರ್ಯಾಲಯದಲ್ಲಿ ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಡೋಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಮ್ಯಾಗೇರಿ ದೀರ್ಘದಂಡ ನಮಸ್ಕಾರ ಹಾಕಿದ ಶಶಿಧರ ಮುಳ್ಳಾಳ ಅವರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಅಬ್ದುಲ ನದಾಫ, ಬಸವರಾಜ…
ಮುದ್ದೇಬಿಹಾಳ: ಪಕ್ಷವನ್ನು ಅಧಿಕಾರಕ್ಕೆ ತರುವ ದೃಷ್ಠಿಕೋನದಿಂದ ಸ್ವಯಂ ಪ್ರೇರಿತವಾಗಿ ಅನೇಕ ಯುವಕರು ಕಾಂಗ್ರೇಸ್ ಪಕ್ಷದ ತತ್ವಸಿದ್ದಾಂತವನ್ನು ಮೈಗೂಡಿಸಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವದು ನಮ್ಮ ಗೆಲುವಿನ ಮುನ್ಸೂಚನೆ, ನಮ್ಮ ಕಾರ್ಯಕರ್ತರೆ ನಮಗೆ ಜೀವಾಳ ನಮ್ಮ ಪಕ್ಷ ಸಮಾಜಮುಖಿಯಾದ ಕಾರ್ಯವನ್ನು ಮಾಡಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಕಾಂಗ್ರೇಸ್ ಯಂಗ್ ಸೇವಾದಳ ಬ್ರೀಗೇಡ್ ತಾಲೂಕಾ ಅಧ್ಯಕ್ಷ ಅಬ್ದುಲ್‌ಸಲಾಂ ಮುಲ್ಲಾ ಹೇಳಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಮಾಜಿ ಸಚಿವ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಗೃಹ ಕಚೇರಿಯಲ್ಲಿ ಕಾಂಗ್ರೇಸ್ ಯಂಗ್ ಸೇವಾದಳ ಬ್ರೀಗೇಡ್ ತಾಲೂಕಾ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.ಈ ಹಿಂದೆ ನಾಡಗೌಡರು ಮತಕ್ಷೇತ್ರದಲ್ಲಿ ಅನೇಕ ಮಹತ್ತರವಾದ ಅಭಿವೃದ್ಧಿಯನ್ನು ಮಾಡಿದ್ದಾರೆ, ಆದರೆ ಎ.ಎಸ್.ಪಾಟೀಲರು ನಾಡಗೌಡರು ಅಭಿವೃದ್ಧಿಯನ್ನು ಮಾಡಿಲ್ಲಾ ಎಂದು ಹೇಳುತ್ತಾ ಮತಕ್ಷೇತ್ರದಲ್ಲಿ ಬರಿ ಸುಳ್ಳುಗಳ ಆಶ್ವಾಸನೆ ಕೋಡುತ್ತಾ ಹೊರಟಿದ್ದಾರೆ, ೫೦೦೦ ಸಾವಿರ ಮನೆಗಳನ್ನು ಮಂಜೂರು ಮಾಡಿಸಿದ್ದೇನೆಂದು ಹೇಳಿದ್ದಾರೆ, ಆ ಮನೆಗಳು ಎಲ್ಲಿ ಇವೆ ಎಂದು ಪ್ರಶ್ನೆ ಮಾಡಿದ ಅವರು ಕ್ಷೇತ್ರದಲ್ಲಿ ಯುವಕರನ್ನು ಹಾಳು ಮಾಡುವ ರಾಜಕೀಯ…
ಮುದ್ದೇಬಿಹಾಳ : ಸಧ್ಯದ ರಾಜ್ಯದ ಬಿಜೆಪಿ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಬಂಜಾರ, ಭೋವಿ, ಕೊರಮ, ಕೊರಚ, ಕೊರವ ಸಮಾಜಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗುಳಿವಂತೆ ಮಾಡಿದ್ದು ಈ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಲ್ಲದೇ ಸಂವಿದಾನÀ ವಿರೋಧಿಯಾಗಿದೆ. ಇದು ಕೇವಲ ಬಿಜೆಪಿಯ ಚುನಾವಣಾ ಗಿಮಿಕ್ ಅಷ್ಟೇ. ಕಾರಣ ಬಂಜಾರ ಸಮಾಜ ಬಾಂಧವರು ಇಂತಹ ಡೋಂಗಿ ಬಿಜೆಪಿ ಪಕ್ಷಕ್ಕೆ ಮತ ನೀಡಬಾರದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ವಾಗ್ದಾಳಿ ನಡೆಸಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಮಾಜಿ ಸಚಿವ, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಗ್ರಹ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂವಿಧಾನ ವಿರೋಧಿ ಒಳ ಮೀಸಲಾತಿಯ ಶಿಫಾರಸ್ಸು ಮಾಡಿದ್ದು, ಪರಿಶಿಷ್ಟ ಜಾತಿಯಲ್ಲಿರುವ ೯೯ ಸಮುದಾಯಗಳ ಬೆನ್ನಿಗೆ ಚೂರಿ ಹಾಕಿ ನಮ್ಮ ನಮ್ಮಲ್ಲಿಯೇ ಒಡಕನ್ನುಂಟು ಮಾಡುವ ಕೆಲಸ ಮಾಡಿದೆ. ಈ ಒಳಮಿಸಲಾತಿ ಸಿಪಾರಸ್ಸು ಮಾಡಲು ಸಂವಿಧಾನದಲ್ಲಿ ಅವಕಾಶ ಇಲ್ಲದಿದ್ದರೂ ರಾಜ್ಯ ಸರ್ಕಾರ…
ಇಂಡಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಒದಗಿಸಿಕೊಡುವದಕ್ಕಾಗಿ ಕೂಡಲಸಂಗಮದಿAದ ಬೆಂಗಳೂರಿನವರೆಗೆ ಸುಮಾರು 700 ಕಿಲೋ ಮೀಟರ್ ಮಾಡಿದ ಪಾದಯಾತ್ರೆ ಫಲ ನೀಡಿದೆ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಶ್ರೀಗಳು ಅಭಿಪ್ರಾಯಪಟ್ಟರು.ಅವರು ಬುಧವಾರ ಸಾಯಂಕಾಲ ಇಂಡಿ ಪಟ್ಟಣದಲ್ಲಿ ಸಮಾಜದ ಮುಖಂಡರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.1994 ರಲ್ಲಿ ನಡೆದ ಪಂಚಮಸಾಲಿ ಸಮಾರಂಭದಲ್ಲಿ ಸಮಾಜಕ್ಕೆ ಮೀಸಲಾತಿ ಒದಗಿಸಿಕೊಡಬೇಕೆಂದು ಆಗ್ರಹಿಸಲಾಗಿತ್ತು. ಅಂದಿನಿAದ ಇಂದಿನವರೆಗೆ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ ಕಳೆದ 2 ವರ್ಷಗಳಿಂದ ನಡೆದ ಹೋರಾಟ ತೀವ್ರ ಸ್ವರೂಪ ತಾಳಿತ್ತು. ಇದಕ್ಕೆ ವಿಜಯಾನಂದ ಕಾಶಪ್ಪನವರ, ಬಸನಗೌಡ ಪಾಟೀಲ, ವಿನಯ ಕುಲಕರ್ಣಿ, ಡಾ, ಸಾರ್ವಬೌಮ ಬಗಲಿ, ರವಿಕಾಂತ ಪಾಟೀಲ ಮುಂತಾದವರ ಸಹಕಾರದೊಂದಿಗೆ ಜನೇವರಿ 14 ರಿಂದ ಕೈಕೊಂಡಿರುವ ಪಾದಯಾತ್ರೆ ಮೊದಲು ಕೇವಲ 10 ಸಾವಿರ ಜನರಿಂದ ಕೂಡಿದ್ದು, ಬೆಂಗಳೂರು ತಲುಪುವದರೊಳಗಾಗಿ 10 ಲಕ್ಷಕ್ಕೆ ಮುಟ್ಟಿರುವದು ಒಂದು ಇತಿಹಾಸ ಎಂದರು.ಬೆAಗಳೂರಿನಲ್ಲಿ ನಡೆದ ಪಂಚಮಸಾಲಿ ಸಮಾವೇಶ…
ವಿಜಯಪುರ: ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಲೇ ಅಭ್ಯರ್ಥಿ ವಿಜುಗೌಡ ಪಾಟೀಲ ಅವರ ಮಕ್ಕಳು ಪಿಸ್ತೂಲ್ ಮೂಲಕ ಗುಂಡು ಹಾರಿಸಿ ವಿಜಯೋತ್ಸವ ತಮ್ಮ ಸಂಸ್ಕೃತಿ ಏನೆಂದು ತೋರಿಸಿದ್ದಾರೆ. ಆದರೆ ಇದೀಗ ಮೊಸಳೆ ಕಣ್ಣೀರು ಹಾಕಿ ಬಿಜೆಪಿ ಅಭ್ಯರ್ಥಿ ಮತ ಯಾಚನೆಗೆ ಮುಂದಾಗಿದ್ದಾರೆ. ಕ್ಷೇತ್ರವನ್ನು ಬಿಹಾರ ಮಾದರಿ ರೂಪಿಸಲು ಹೊರಟಿರುವ ಇಂಥವರನ್ನು ಜನರು ಆಯ್ಕೆ ಮಾಡಿಕೊಳ್ಳುವ ಅಗತ್ಯವಿದೆಯೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ವಕ್ತಾರ ಸಂಗಮೇಶ ಬಬಲೇಶ್ವರ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಪ್ರಶ್ನಿಸಿದರು.ಗುರುವಾರ ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ವಿಜುಗೌಡ ಪಾಟೀಲ ಅವರ ಪುತ್ರ ಸಮರ್ಥ ಅವರು ಗಾಳಿಯಲ್ಲಿ ಗುಂಡು ಹಾರಿಸಿದ ಹಾಗೂ ವಾಹನದಲ್ಲಿ ಕುಳಿತು ಗುಂಡು ಹಾರಿಸಿದ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಜುಗೌಡ ಅವರ ಮಗ ತಮ್ಮ ತಂದೆಗೆ ಟಿಕೆಟ್ ಘೋಷಣೆ ಆಗುತ್ತಲೇ ಗಾಳಿಯಲ್ಲಿ ಗುಂಡು ಹಾರಿಸಿ ವಿಜಯೋತ್ಸವ ಆಚರಿಸಿದ್ದಾರೆ. ಅವರ ಈ ವರ್ತನೆ ಬಿಹಾರ ಮಾದರಿ ರೂಪಿಸುವುದನ್ನು ಹೇಳುತ್ತದೆ ಎಂದು ಆತಂಕ…
ಆಲಮೇಲ: ತಾಲೂಕಿನ ಅಲಹಳ್ಳಿ, ಆಸಂಗಿಹಾಳ ತಾರಾಪೂರ, ತಾವರಖೇಡ, ಕಡಣಿ ಆಲಮೇಲ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಗುರುವಾರ ಮನೆ ಮನೆಗೆ ತೆರಳಿ ಕರಪತ್ರ ವಿತರಿಸಿ ಮತ ಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ, ಗ್ರಾಪಂ ಮಾಜಿ ಸದಸ್ಯ ಗಾಲೀಬಸಾಹೇಬ ನಾಗಾವಿ ಮಾತನಾಡಿ, ಶಾಸಕ ರಮೇಶ ಭೂಸನೂರ ಅವರು ತಮ್ಮ ಅಧಿಕಾರಾವಧಿಯಲ್ಲಿ ಪ್ರತಿ ಹಳ್ಳಿಗಳಿಗೂ ಮೂಲಭೂತ ಸೌಕರ್ಯ ಒದಗಿಸಿದ್ದಾರೆ. ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಎಲ್ಲ ಜಾತಿ, ದರ್ಮಗಳನ್ನೂ ಗೌರವಿಸಿ, ಯಾರಲ್ಲೂ ಬೇಧ-ಭಾವ ಮಾಡದೇ ಸಮಾನವಾಗಿ ಕಾಣುತ್ತ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದಾರೆ. ಅವರನ್ನು ಈ ಚುನಾವಣೆಯಲ್ಲಿ ಮತ್ತೆ ಗೆಲ್ಲಿಸುವ ಮೂಲಕ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ತಾವೆಲ್ಲ ಕೈ ಜೋಡಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.ಸಿದ್ದಯ್ಯ ಮುತ್ಯಾ, ಶಿವಾನಂದ ನಾಗಾವಿ, ಸಾಹೇಬಗೌಡ ಕಟ್ಟಿ, ಶಾಂತಮಲ್ಲ ನಾವಿ, ಸಂದೀಪ ಭಿಂಗೆ, ಭೀಮರಾಯ ಅತಾಪಿ, ಶಿವಶರಣ ಕೊಪ್ಪ, ಮಲ್ಲು ದೇಸುಣಗಿ, ಈರಣ್ಣ ಕೇರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
