ಆಲಮೇಲ: ತಾಲೂಕಿನ ಅಲಹಳ್ಳಿ, ಆಸಂಗಿಹಾಳ ತಾರಾಪೂರ, ತಾವರಖೇಡ, ಕಡಣಿ ಆಲಮೇಲ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಗುರುವಾರ ಮನೆ ಮನೆಗೆ ತೆರಳಿ ಕರಪತ್ರ ವಿತರಿಸಿ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ, ಗ್ರಾಪಂ ಮಾಜಿ ಸದಸ್ಯ ಗಾಲೀಬಸಾಹೇಬ ನಾಗಾವಿ ಮಾತನಾಡಿ, ಶಾಸಕ ರಮೇಶ ಭೂಸನೂರ ಅವರು ತಮ್ಮ ಅಧಿಕಾರಾವಧಿಯಲ್ಲಿ ಪ್ರತಿ ಹಳ್ಳಿಗಳಿಗೂ ಮೂಲಭೂತ ಸೌಕರ್ಯ ಒದಗಿಸಿದ್ದಾರೆ. ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಎಲ್ಲ ಜಾತಿ, ದರ್ಮಗಳನ್ನೂ ಗೌರವಿಸಿ, ಯಾರಲ್ಲೂ ಬೇಧ-ಭಾವ ಮಾಡದೇ ಸಮಾನವಾಗಿ ಕಾಣುತ್ತ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದಾರೆ. ಅವರನ್ನು ಈ ಚುನಾವಣೆಯಲ್ಲಿ ಮತ್ತೆ ಗೆಲ್ಲಿಸುವ ಮೂಲಕ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ತಾವೆಲ್ಲ ಕೈ ಜೋಡಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಸಿದ್ದಯ್ಯ ಮುತ್ಯಾ, ಶಿವಾನಂದ ನಾಗಾವಿ, ಸಾಹೇಬಗೌಡ ಕಟ್ಟಿ, ಶಾಂತಮಲ್ಲ ನಾವಿ, ಸಂದೀಪ ಭಿಂಗೆ, ಭೀಮರಾಯ ಅತಾಪಿ, ಶಿವಶರಣ ಕೊಪ್ಪ, ಮಲ್ಲು ದೇಸುಣಗಿ, ಈರಣ್ಣ ಕೇರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಬೂಸನೂರ ಗೆಲ್ಲಿಸಿ :ನಾಗಾವಿ
Related Posts
Add A Comment