ಕಲಕೇರಿ: ಗ್ರಾಮದ ಅಂಬೇಡ್ಕರ್ ವ್ರತ್ತದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ದೇವರಹಿಪ್ಪರಗಿ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಾಜಿ ಶಾಸಕ ಶರಣಪ್ಪ ಸುಣಗಾರ ಮತಯಾಚನೆ ಮಾಡಿದರು.
ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ತೆರೆದ ವಾಹನದಲ್ಲಿ ಮೆರವಣಿಗೆಯೊಂದಿಗೆ ರೋಡ್ ಶೋ ನಡೆಸಿದರು.
ಗ್ರಾಮದ ಅಂಬೇಡ್ಕರ್ ವೃತ್ತ, ಅಸ್ಕಿ ರಸ್ತೆ, ಹನುಮಾನ ದೇವಸ್ಥಾನ, ವಂಕಟೇಶ್ವರ ನಗರ, ಟಿಪ್ಪುಸುಲ್ತಾನ ಚೌಕ್ ಮಾರ್ಗವಾಗಿ ಮುಖ್ಯ ಬಜಾರದವರೆಗೆ ಮೆರವಣಿಗೆಯಲ್ಲಿ ತೇರಳಿ ನಂತರ ಅಲ್ಲಿ ಬಹಿರಂಗ ಸಭೆಯನ್ನು ನಡೆಸಲಾಯಿತು.
ಈ ವೇಳೆ ಕಾಂಗ್ರೇಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಮಾತನಾಡಿ, ಬಿಜೆಪಿ ಸರಕಾರದ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದು, ಈ ಬಾರಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ, ಪೊಳ್ಳು ಭರವಸೆಗಳನ್ನು ನೀಡಿ ಜನರಿಗೆ ದಾರಿ ತಪ್ಪಿಸುವ ಕೆಲಸವನ್ನು ಮಾಡುವುದರಲ್ಲಿ ಬಿಜೆಪಿಯವರು ನಿರತರಾಗಿದ್ದಾರೆ. ಆದ್ದರಿಂದ ಈ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ಕಾಂಗ್ರೇಸ್ ಪಕ್ಷದ ಮುಖಂಡರಾದ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ, ಸುಭಾಷ ಛಾಯಾಗೋಳ, ಬಿ ಎಸ್ ಪಾಟೀಲ ಯಾಳಗಿ, ಡಾ.ನಂದಕುಮಾರ ಭೈರಿ, ಶ್ರೀನಾಥ ಪೂಜಾರಿ, ಗೌರಮ್ಮ ಮುತ್ತತ್ತಿ, ಶಿವರಾಜ್ ದೇಶಮುಖ ಲಕ್ಕಪ್ಪ ಬಡಗೇರ ಸಂಗಮೇಶ ಛಯಾಗೋಳ ಮಾತನಾಡಿದರು.
ಈ ವೇಳೆ ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳಾದ ಸಂತೋಷ ದೊಡ್ಡಮನಿ, ಬಾಳನಗೌಡ ಬಿರಾದಾರ, ರಂಜಾನ್ ನಧಾಪ್, ಸರಿತಾ ನಾಯಕ್, ಜಾಂಗೀರ ಸಿರಸಗಿ, ಬಶೀರ್ ಶೇಠ್ ಭೇಪಾರಿ, ದವಲಸಾಬ ನಾಯ್ಕೊಡಿ, ಮೆಹಬೂಬ್ ಮೇಲಿನಮನಿ, ಬಬಲು ನಾಯ್ಕೊಡಿ, ಅರವಿಂದ ಬೇನಾಳ, ಮೈನು ಮನಿಯಾರ, ರಮೇಶ ಮೋಪಗಾರ, ಸೇರಿದಂತೆ ಪಕ್ಷದ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment