ಚಿಮ್ಮಡ: ಭ್ರಷ್ಟಾಚಾರ, ಮಹಿಳೆಯರ ಅಸಹಾಯಕರ ಮೇಲೆ ದಬ್ಬಾಳಿಕೆ ನಡೆಸುವುದೇ ಮೂಲಮಂತ್ರವಾಗಿಸಿಕೊAಡಿರುವ ಬಿಜೆಪಿ ಆಟ ಇನ್ನು ನಡೆಯುವುದಿಲ್ಲವೆಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ ಹೇಳಿದರು.
ಗುರುವಾರದಂದು ಚಿಮ್ಮಡ ಗ್ರಾಮದ ಪ್ರಮುಖ ಬೀದಿ, ವಿವಿಧ ವಾರ್ಡಗಳ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿ, ತೆರೆದ ವಾಹನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಹೆದರಿಸಿ ಬೆದರಿಸಿ ಮತ ಪಡೆಯುವ ಕಾಲ ಹೋಯಿತು, ಜನತೆ ನೀಡಿದ ಅವಕಾಶವನ್ನು ೪೦ ಫರಸೆಂಟ್ ಭ್ರಷ್ಠಾಚಾರದೊಂದಿಗೆ ಲೂಟಿ ಹೊಡೆದು ಈಗ ಸುಳ್ಳು ಭರವಸೆಗಳನ್ನು ನೀಡುತ್ತ ಮತ್ತೆ ಬಂದಿದೆ. ಪದೇ ಪದೇ ಮತದಾರರನ್ನು ಮೋಸ ಗೊಳಿಸಲಾಗದು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರೈತರು, ನೇಕಾರರು, ಬಡವರು ನಿಶ್ಚಿಂತೆಯಿAದ ಜೀವನ ನಡೆಸುತಿದ್ದರು ಈ ಭ್ರಷ್ಠ ಬಿಜೆಪಿ ಸರಕಾರ ಎಲ್ಲ ವರ್ಗಗಳ ಜನತೆಯ ಚಿಂತೆಗೀಡು ಮಾಡಿದೆ ಎಂದರು.
ತೇರದಾಳ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಸಿದ್ದು ಕೊಣ್ಣೂರ ಮಾತನಾಡಿ, ಕ್ಷೇತ್ರದ ಹಿರಿಯರ, ಯುವಕರ ಆಶಯದಂತೆ ಸ್ಥಳೀಯ ಅಭ್ಯರ್ಥಿಯಾಗಿರುವ ನನಗೆ ಕಾಂಗ್ರೆಸ್ ಟಿಕೇಟ ದೊರೆತಿದ್ದು ತಮ್ಮ ಮನೆ ಮಗನಾಗಿ ಸೇವೆ ಸಲ್ಲಿಸಲು ಕಟಿಬದ್ದನಾಗಿದ್ದೇನೆ. ಎಲ್ಲರೂ ತಮ್ಮ ಮತ ನೀಡುವ ಮೂಲಕ ಆಶೀರ್ವಾದ ಮಾಡಿ ತಮ್ಮ ಋಣ ತೀರಿಸುವ ಅವಕಾಶ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ತೇರದಾಳ ಗ್ರಾಮೀಣ ಘಟಕದ ಅಧ್ಯಕ್ಷ ಲಕ್ಷö್ಮಣ ದೇಸಾರಟ್ಟಿ, ಉಮೇಶ ಪೂಜಾರಿ, ಪ್ರವೀಣ ಪೂಜಾರಿ ಮಾತನಾಡಿದರು.
ಬಿ.ಎಸ್. ಪಾಟೀಲ, ಅಶೋಕ ಧಡುತಿ, ಮಹಾಲಿಂಗ ಮಾಯನ್ನವರ ಸೇರಿದಂತೆ ಸಾವಿರಾರು ಜನ ಕಾರ್ಯಕರ್ತರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮದ ಅಪಾರ ಜನತೆ ಅಭ್ಯರ್ಥಿ ಸಿದ್ದು ಕೊಣ್ಣೂರ ರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುತ್ತ ಪುಷ್ಪವೃಷ್ಠಿ ಮಾಡುವ ಮೂಲಕ ಬರಮಾಡಿಕೊಂಡು ಗ್ರಾಮದಲ್ಲಿ ಮತಯಾಚನೆ ನಡೆಸಿದರು.
Subscribe to Updates
Get the latest creative news from FooBar about art, design and business.
ಭ್ರಷ್ಠಾಚಾರ, ದಬ್ಬಾಳಿಕೆಯೇ ಬಿಜೆಪಿ ಮೂಲಮಂತ್ರ :ರಕ್ಷಿತಾ ಈಟಿ
Related Posts
Add A Comment