ಮುದ್ದೇಬಿಹಾಳ: ಪಕ್ಷವನ್ನು ಅಧಿಕಾರಕ್ಕೆ ತರುವ ದೃಷ್ಠಿಕೋನದಿಂದ ಸ್ವಯಂ ಪ್ರೇರಿತವಾಗಿ ಅನೇಕ ಯುವಕರು ಕಾಂಗ್ರೇಸ್ ಪಕ್ಷದ ತತ್ವಸಿದ್ದಾಂತವನ್ನು ಮೈಗೂಡಿಸಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವದು ನಮ್ಮ ಗೆಲುವಿನ ಮುನ್ಸೂಚನೆ, ನಮ್ಮ ಕಾರ್ಯಕರ್ತರೆ ನಮಗೆ ಜೀವಾಳ ನಮ್ಮ ಪಕ್ಷ ಸಮಾಜಮುಖಿಯಾದ ಕಾರ್ಯವನ್ನು ಮಾಡಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಕಾಂಗ್ರೇಸ್ ಯಂಗ್ ಸೇವಾದಳ ಬ್ರೀಗೇಡ್ ತಾಲೂಕಾ ಅಧ್ಯಕ್ಷ ಅಬ್ದುಲ್‌ಸಲಾಂ ಮುಲ್ಲಾ ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಮಾಜಿ ಸಚಿವ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಗೃಹ ಕಚೇರಿಯಲ್ಲಿ ಕಾಂಗ್ರೇಸ್ ಯಂಗ್ ಸೇವಾದಳ ಬ್ರೀಗೇಡ್ ತಾಲೂಕಾ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ನಾಡಗೌಡರು ಮತಕ್ಷೇತ್ರದಲ್ಲಿ ಅನೇಕ ಮಹತ್ತರವಾದ ಅಭಿವೃದ್ಧಿಯನ್ನು ಮಾಡಿದ್ದಾರೆ, ಆದರೆ ಎ.ಎಸ್.ಪಾಟೀಲರು ನಾಡಗೌಡರು ಅಭಿವೃದ್ಧಿಯನ್ನು ಮಾಡಿಲ್ಲಾ ಎಂದು ಹೇಳುತ್ತಾ ಮತಕ್ಷೇತ್ರದಲ್ಲಿ ಬರಿ ಸುಳ್ಳುಗಳ ಆಶ್ವಾಸನೆ ಕೋಡುತ್ತಾ ಹೊರಟಿದ್ದಾರೆ, ೫೦೦೦ ಸಾವಿರ ಮನೆಗಳನ್ನು ಮಂಜೂರು ಮಾಡಿಸಿದ್ದೇನೆಂದು ಹೇಳಿದ್ದಾರೆ, ಆ ಮನೆಗಳು ಎಲ್ಲಿ ಇವೆ ಎಂದು ಪ್ರಶ್ನೆ ಮಾಡಿದ ಅವರು ಕ್ಷೇತ್ರದಲ್ಲಿ ಯುವಕರನ್ನು ಹಾಳು ಮಾಡುವ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂಧರ್ಭದಲ್ಲಿ ಸಿದ್ದಣ್ಣ ಮೇಟಿ, ವೇಂಕಟೇಶ್ ಪಾಟೀಲ್, ಗುರು ತಾರನಾಳ, ಬಬ್ಲು ನಾಯ್ಕೋಡಿ, ಸಮೀವುಲ್ಲಾ ದೇಸಾಯಿ, ದದ್ದು ದಖನಿ, ಮಹಿಬೂಬ ಯಲಗಾರ, ತೌಶೀಪ್ ಯಲ;ಗಾರ, ಅಲ್ಲಾಬಕ್ಷ ಕೋಟಿ, ಇಬ್ರಾಹೀಂ ಪಠಾಣ್, ಇಮ್ರಾನ್ ಹುಣಚಗಿ, ಅಸ್ತಾಪ್ ಪಡನೂರಿ, ಸಮನ್ ಹಡಗಲಿ, ಮುರ್ತುಜ್ ದಖನಿ, ಮುಸದಿಕ್ ಕೋಣ್ಣೂರ, ಯಾಸೀನ್ ಬನಾಸಿ, ಶೌಕತ್ ನಾಗರಾಳ, ಹನೀಪ್ ನಾಯ್ಕೊಡಿ, ಲಾಲಸಾಬ್ ನಾಯ್ಕೋಡಿ, ಕಯ್ಯೂಮ್ ಮುಲ್ಲಾ, ಅನೇಕ ಯುವಕರು ಕಾಂಗ್ರೇಸ್ ಪಕ್ಷವನ್ನು ಸೇರ್ಪಡೆಗೊಂಡರು.
Related Posts
Add A Comment