ಉದಯರಶ್ಮಿ ದಿನಪತ್ರಿಕೆ
ಬಸವನ ಬಾಗೇವಾಡಿ: ಸ್ವಾತಂತ್ರ ಸಂಗ್ರಾಮದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಕಿತ್ತೂರು ರಾಣಿ ಚನ್ನಮ್ಮಳು ಧೈರ್ಯ, ಸಾಹಸ, ದೇಶಪ್ರೇಮ ಮತ್ತು ತ್ಯಾಗಕ್ಕೆ ಪ್ರತೀಕವಾಗಿದ್ದಳು. ಅವರ ಜೀವನವು ಇಡೀ ಸ್ತ್ರೀ ಸಂಕುಲಕ್ಕೆ ಧೈರ್ಯದಿಂದ ನಾಯಕತ್ವ ವಹಿಸುತ್ತಾ, ಅನ್ಯಾಯದ ವಿರುದ್ಧ ಹೋರಾಡಲು ಪ್ರೇರಣೆಯಾಗಿದ್ದರು ಎಂದು ಪ್ರಾಂಶುಪಾಲ ಡಾ. ನೀಲಪ್ಪ ಹೊಸಮನಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ “ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ” ದಲ್ಲಿ ಅವರು ಮಾತನಾಡುತ್ತಿದ್ದರು.
ಕರ್ನಾಟಕ ಇತಿಹಾಸದಲ್ಲಿಯೇ ವೀರ ವನಿತೆಯಾಗಿ ಪ್ರಸಿದ್ಧಿ ಪಡೆದ ರಾಣಿ ಚನ್ನಮ್ಮ ಅವರು ಕಿತ್ತೂರು ಸಂಸ್ಥಾನದ ಹಕ್ಕು & ಸ್ವಾಭಿಮಾನಕ್ಕಾಗಿ ಹೋರಾಡಿದಳು. ಬ್ರಿಟಿಷರ ನೀತಿಯನ್ನು ವಿರೋಧಿಸಿ ಸಶಸ್ತ್ರದೊಂದಿಗೆ ಹೋರಾಡಿದ ಧೀಮಂತ ವೀರ ಮಹಿಳೆ ಆಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಂ.ಎಸ್. ಖೋದನಾಪುರ, ಡಾ. ಹೆಚ್. ಎಂ. ನಾಟಿಕಾರ, ಪ್ರೊ. ರೇಣುಕಾ ಅಂಬಲಿ. ಪ್ರೊ. ಶ್ರೀಶೈಲ ಬಳವಾಟ, ಪ್ರೊ. ಶಿವಪುತ್ರ ಜಾಲವಾದಿ, ಪ್ರೊ. ಲೀಲಾವತಿ ಸಿ., . ಇಸ್ಮಾಯಿಲ್ ಶಫಿಯುಲ್ಲ, ಪ್ರೊ. ಪ್ರಿಯಾಂಕಾ ಜಿಂದೆ, ಲಕ್ಷ್ಮಣಗೌಡ ಪಾಟೀಲ್, ಶ್ರೀಶೈಲ ಪೂಜಾರಿ, ವಿಜಯ ಜಾಧವ, ಎಸ್.ಎಸ್. ವಡೋಡಗಿ, ರವಿ ಗೌಡರ, ರಾಘವೇಂದ್ರ ಗುರಜಾಲ, ಡಾ. ಮೀನಾಜ ಸಿಂದಗೇರಿ ಇನ್ನಿತರರು ಉಪಸ್ಥಿತರಿದ್ದರು.

