ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಶ್ರೀ ಅಮೋಘಸಿದ್ದೇಶ್ವರ ಪ್ರೌಢ ಶಾಲೆಯ ಇಬ್ಬರು ಶಿಕ್ಷಕಿಯರಿಗೆ ಕನ್ನಡ ರಾಜ್ಯೋತ್ಸವ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ. ನಾಡು, ನುಡಿ, ನೆಲ, ಜಲ, ಸಾಂಸ್ಕೃತಿಕ, ಸಾಹಿತ್ಯ, ಸಾಮಾಜಿಕ ಸಂಶೋಧನೆ, ಶಿಕ್ಷಣ, ಕೃಷಿ, ಯೋಗ, ಪತ್ರಿಕೋದ್ಯಮ, ವೈದ್ಯಕೀಯ, ನೃತ್ಯ, ಕಲಾ ಮತ್ತು ನಾಟಕ ಸಿನಿಮಾ ಕ್ಷೇತ್ರದಲ್ಲಿ ಅನುಪಮ ಗಣನೀಯವಾದ ಸೇವೆಯನ್ನು ಗುರುತಿಸಿ ಕಡಲಬಾಳು ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ ಸಾಧಕರ ಶ್ರೀ ಪ್ರಕಾಶನ(ರಿ) ಕರ್ನಾಟಕ ಕೊಡಮಾಡಲ್ಪಡುವ ಈ ಪ್ರಶಸ್ತಿಗೆ ಶ್ರೀಮತಿ ಲಕ್ಷ್ಮಿ ಮಲ್ಲಿಕಾರ್ಜುನ ಝಳಕಿ(ವಿಜ್ಞಾನ) ಹಾಗೂ ಶ್ರೀಮತಿ ಶೈಲಶ್ರೀ ಬಸನಗೌಡ ಪಾಟೀಲ(ಇಂಗ್ಲೀಷ್) ಶಿಕ್ಷಕಿಯರು ಆಯ್ಕೆಯಾಗಿದ್ದಾರೆ.

