ಮುದ್ದೇಬಿಹಾಳ : ಸಧ್ಯದ ರಾಜ್ಯದ ಬಿಜೆಪಿ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಬಂಜಾರ, ಭೋವಿ, ಕೊರಮ, ಕೊರಚ, ಕೊರವ ಸಮಾಜಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗುಳಿವಂತೆ ಮಾಡಿದ್ದು ಈ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಲ್ಲದೇ ಸಂವಿದಾನÀ ವಿರೋಧಿಯಾಗಿದೆ. ಇದು ಕೇವಲ ಬಿಜೆಪಿಯ ಚುನಾವಣಾ ಗಿಮಿಕ್ ಅಷ್ಟೇ. ಕಾರಣ ಬಂಜಾರ ಸಮಾಜ ಬಾಂಧವರು ಇಂತಹ ಡೋಂಗಿ ಬಿಜೆಪಿ ಪಕ್ಷಕ್ಕೆ ಮತ ನೀಡಬಾರದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ವಾಗ್ದಾಳಿ ನಡೆಸಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಮಾಜಿ ಸಚಿವ, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಗ್ರಹ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂವಿಧಾನ ವಿರೋಧಿ ಒಳ ಮೀಸಲಾತಿಯ ಶಿಫಾರಸ್ಸು ಮಾಡಿದ್ದು, ಪರಿಶಿಷ್ಟ ಜಾತಿಯಲ್ಲಿರುವ ೯೯ ಸಮುದಾಯಗಳ ಬೆನ್ನಿಗೆ ಚೂರಿ ಹಾಕಿ ನಮ್ಮ ನಮ್ಮಲ್ಲಿಯೇ ಒಡಕನ್ನುಂಟು ಮಾಡುವ ಕೆಲಸ ಮಾಡಿದೆ. ಈ ಒಳಮಿಸಲಾತಿ ಸಿಪಾರಸ್ಸು ಮಾಡಲು ಸಂವಿಧಾನದಲ್ಲಿ ಅವಕಾಶ ಇಲ್ಲದಿದ್ದರೂ ರಾಜ್ಯ ಸರ್ಕಾರ ಹಿಂಬಾಗಿಲಿನಿAದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿದೆ. ಬಿಜೆಪಿ, ಆರ್‌ಎಸ್‌ಎಸ್ ದೇಶದ ದಲಿತರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಈ ಇದೊಂದು ರಾಜ್ಯದಲ್ಲಿ ಅಸಂವಿಧಾನಿಕ ಒಳ ವರ್ಗೀಕರಣ ಶಿಫಾರಸ್ಸಾಗಿದೆ. ಪರಿಶಿಷ್ಟ ಜಾತಿಯಲ್ಲಿರುವ ಸಮಾನ ಅವಕಾಶ ವಂಚಿತ ಶೋಷಿತ ತಳ ಸಮುದಾಯಗಳನ್ನು ಮರು ವರ್ಗೀಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಆದರೂ ಸಹ ರಾಜ್ಯ ಸರ್ಕಾರ ಮೀಸಲಾತಿಯ ಮೂಲ ಪರಿಕಲ್ಪನೆಯಾದ ಸಾಮಾಜಿಕ ಶೈಕ್ಷಣಿಕ, ಹಿಂದುಳಿದಿರುವಿಕೆಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಯಾವ ಪ್ರಮಾಣದಲ್ಲಿ ಯಾವ ಯಾವ ಜಾತಿಗಳು ಹಿಂದುಳಿದಿವೆ ಎಂಬುದನ್ನು ವೈಜ್ಞಾನಿಕವಾಗಿ ಮಾನದಂಡಗಳ ಮೂಲಕ ಅಧ್ಯಾಯನ ಮಾಡಿ, ವಸ್ತು ನಿಷ್ಠ ವರದಿ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ಪರಿಗಣಿಸಿದೇ ಕೇವಲ ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಪಟ್ಟಿಯನ್ನು ತಿದ್ದಿ, ತೇಪೆಹಚ್ಚಿ, ಮರು ವರ್ಗೀಕರಿಸಿ ಮೇಲ್ನೋಟಕ್ಕೆ ಐದು ಗುಂಪುಗಳನ್ನಾಗಿ ಮಾಡುತ್ತಿರುವುದು ಕಾರ್ಯಸಾಧುವಲ್ಲ, ಇದು ಅವೈಜ್ಞಾನಿಕ, ಅಸಂವಿಧಾನಿಕ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ವಸ್ತುನಿಷ್ಠವಾಗಿ ಅಧ್ಯಯನ ಮಾಡಿಲ್ಲ, ರಾಜ್ಯ ಸರ್ಕಾರ ಮಾಡಿರುವ ಮೀಸಲಾತಿ ಪ್ರಮಾಣದ ಹಂಚಿಕೆ ಅವೈಜ್ಞಾನಿಕವಾಗಿದೆ. ಸಹೋದರ ಸಮುದಾಯಗಳನ್ನು ಅಸ್ಪೃಶ್ಯರು, ಸ್ಪೃಶ್ಯರು ಎಂಬ ಶಬ್ಧಗಳಿಂದ ಕರೆಯುವ ಮೂಲಕ ಸರ್ಕಾರವೇ ಅಧಿಕೃತವಾಗಿ ಅಸ್ಪೃಶ್ಯತೆ ಆಚರಣೆಗೆ ಕರೆ ನೀಡಿದಂತಾಗಿದೆ. ಸಧ್ಯ ಚುನಾವಣೆ ಇದೇ ಎನ್ನುವ ಕಾರಣಕ್ಕೆ ನಾವೆಲ್ಲ ಮೌನದಿಂದಿದ್ದೇವೆ ಚುನಾವಣೆ ಬಳಿಕ ರಾಜ್ಯದಲ್ಲಿ ನಮ್ಮದೇ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲಿದೆ ನಂತರ ಈ ಮೀಸಲಾತಿ ವಿಷಯದಲ್ಲಿ ಅಸ್ಪೃಶ್ಯರು, ಸ್ಪೃಶ್ಯರು ಎಂಬ ಶಬ್ಧಗಳಿಂದ ನಿಂದಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇವರೊಂದಿಗೆ ಶಾಮಿಲಾಗಿರುವ ಕೆಲ ರಾಜಕೀಯ ಬಿಜೆಪಿ ಮುಖಂಡರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸುವ ಮೂಲಕ ಜೈಲಿಗೆ ಕಳುಹಿಸುತ್ತೇವೆ ಈ ರೀತಿಯಲ್ಲಿ ಸಮುದಾಯಗಳನ್ನು ವಿಂಗಡಿಸುವುದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ.
ಒಂದು ಸಮುದಾಯವನ್ನು ಓಲೈಕೆ ಮಾಡಲು ಹೊರಟ ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ನಾಡಿನ ಬಂಜಾರ, ಭೋವಿ, ಕೊರಚ, ಕೊರಮ, ಮತ್ತಿತರರ ಸೂಕ್ಷ್ಮ ಸಮುದಾಯಗಳಿಗೆ ಅನ್ಯಾಯವಾಗಿದೆ ಇಂತಹ ಪಕ್ಷಕ್ಕೆ ಮುದ್ದೇಬಿಹಾಳ ಮತಕ್ಷೇತ್ರದ ಎಲ್ಲ ತಾಂಡಾಗಳ ಬಂಜಾರ ಸಮಾಜ ಬಾಂಧವರು ಬಿಜೆಪಿ ಮತ ಹಾಕದೇ ಸರಳ ಸಜ್ಜನ ರಾಜಕಾರಿಣಿ ಎಂದೆ ಬಿಂಬಿತವಾಗಿರುವ ಕಾಂಗ್ರೇಸ್ ಪಕ್ಷದ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಬೆಂಬಲಿಸುವ ಮೂಲಕ ಮತ ನೀಡಿ ೩೫ಸಾವಿರಕ್ಕಿಂತ ಹೆಚ್ಚು ಮತಗಳಿಂತ ಗೆಲ್ಲುವಂತೆ ಮಾಡಬೇಕು ರಾಜ್ಯದಲ್ಲಿ ಈ ಬ್ರಷ್ಟ ಹಾಗೂ ಕೋಮುವಾದಿ ಬಿಜೆಪಿ ಸರಕಾರವನ್ನು ಈ ಬಾರಿ ಕಿತ್ತೇಸೆದು ಬಡವರ ದೀನ ದಲೀತ, ಮಹಿಳೆಯರ, ರೈತರ ಹಿಂದುಳಿದ ವರ್ಗದವರ ಪರವಾದ ಕಾಂಗ್ರೇಸ್ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಮತದಾರರು ಈಗಾಗಲೇ ತಿರ್ಮಾನಿಸಿದ್ದಾರೆ ಹಾಗಾಗಿ ಮೇ ೧೩ ನಂತರ ನಮ್ಮ ಕಾಂಗ್ರೇಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೇ ಇದರಲ್ಲಿ ಯಾವೂದೇ ಸಂಶಯವಿಲ್ಲ ಎಂದರು.
ಈ ವೇಳೆ ಬಂಜಾರ ಸಮಾಜದ ಹಿರಿಯ ಮುಖಂಡ ಚಿದಾನಂದ ಸಿತಿಮನಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ ಕೆ ಬಿರಾದಾರ, ಸಂತೋಷ ಚವ್ಹಾಣ, ಥಾವರಪ್ಪ ಜಾಧವ, ಮುತ್ತಣ್ಣ ರಾಠೋಡ, ಎಂ ಕೆ ಮುತ್ತಣ್ಣವರ, ರಾಜು ನಾಯಕ, ಲಕ್ಷö್ಮಣ ಲಮಾಣಿ, ಅಶೋಕ ರಾಠೋಡ, ಎಂ ಎಸ್ ನಾಯಕ, ಶಾಂತು ಮೇಲಿನಮನಿ, ಸೇರಿದಂತೆ ಹಲವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment