Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 25,2026

ವಿಶ್ವಮಾನ್ಯ ಮಹಾಕಾವ್ಯ ರಾಮಾಯಣ ಮತ್ತು ಆದಿಕವಿ ವಾಲ್ಮೀಕಿ

ಸ್ವಾಭಿಮಾನ-ಶೌರ್ಯದ ಸಂಕೇತ ರಾಣಿ ಚೆನ್ನಮ್ಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ವಿಶ್ವಮಾನ್ಯ ಮಹಾಕಾವ್ಯ ರಾಮಾಯಣ ಮತ್ತು ಆದಿಕವಿ ವಾಲ್ಮೀಕಿ
ವಿಶೇಷ ಲೇಖನ

ವಿಶ್ವಮಾನ್ಯ ಮಹಾಕಾವ್ಯ ರಾಮಾಯಣ ಮತ್ತು ಆದಿಕವಿ ವಾಲ್ಮೀಕಿ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನಾಳೆ (ಅಕ್ಟೋಬರ್ ೨೬, ಸೋಮವಾರ) ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಈ ವಿಶೇಷ ಲೇಖನ

ಲೇಖನ
*– ಮನು ಪತ್ತಾರ (ಕಲಕೇರಿ).*
ಸಾಹಿತಿ, ಬರಹಗಾರ
ವಿಜಯಪುರ

ಉದಯರಶ್ಮಿ ದಿನಪತ್ರಿಕೆ

ವಿಶ್ವವು ಭಾರತವನ್ನು ಪೂಜ್ಯ ಭಾವನೆಯಿಂದ ಕಾಣುವುದು ಎರಡು ವಿಷಯಗಳಿಗಾಗಿ. ಒಂದು ‘ಆಧ್ಯಾತ್ಮ’, ಇನ್ನೊಂದು ‘ಮನುಕುಲದ ಸಂಸ್ಕೃತಿಯ ಪ್ರತೀಕವಾಗಿರುವ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ’ಗಳು ನಿರೂಪಿತಗೊಂಡ ಬಗೆ.
ಈ ಎರಡು ಮಹಾಕಾವ್ಯಗಳು ಎಲ್ಲ ಕಾಲದ ಸಂಕಟಗಳಿಗೆ ಪರಿಹಾರವನ್ನು ಒದಗಿಸುತ್ತಾ, ಹೊಸ ಹೊಳವುಗಳನ್ನು ಬಿತ್ತರಿಸುತ್ತಾ ಸಾಗಿವೆ. ರಾಮಾಯಣ ಮತ್ತು ಮಹಾಭಾರತಗಳು ಸಾವಿರಾರು ವರ್ಷಗಳ ಹಿಂದೆ ರಚಿತವಾಗಿದ್ದರೂ, ಇಂದಿನ ಕವಿ ಮತ್ತು ಬರಹಗಾರರಿಗೆ ಇಂದಿಗೂ ಪ್ರೇರಣೆಯಾಗಿವೆ.
ಭಾರತದ ಚರಿತ್ರೆ, ಸಂಸ್ಕೃತಿ, ಪರಂಪರೆಗೆ ಸಾಕ್ಷಿಯಾಗಿರುವ ವಾಲ್ಮೀಕಿ ರಾಮಾಯಣವನ್ನೇ ಆಧಾರವಾಗಿಟ್ಟುಕೊಂಡು ಸಹಸ್ರಾರು ರಾಮಾಯಣಗಳು ಭಾರತೀಯ ಭಾಷೆಗಳಲ್ಲಿ ಮರುಸೃಷ್ಟಿಗೊಂಡಿವೆ. ಇವುಗಳಿಗೆಲ್ಲ ಮೂಲ ಮಹರ್ಷಿ ವಾಲ್ಮೀಕಿಯವರ ರಾಮಾಯಣ ಎನ್ನುವುದು ಸೂರ್ಯನಷ್ಟೇ ಸತ್ಯ.
ರಾಮಾಯಣ ಎಂದರೆ ವಾಲ್ಮೀಕಿ, ವಾಲ್ಮೀಕಿ ಎಂದರೆ ರಾಮಾಯಣ ಎಂಬ ಮಾತು ಜನಜನಿತವಾಗಿದೆ. ಆದರೆ ರಾಮಾಯಣದ ಕುರಿತಾದ ಚರ್ಚೆಗಳು ಆದಷ್ಟು ಕವಿ ವಾಲ್ಮೀಕಿಯವರ ಕುರಿತಾಗಿ ನಡೆಯದೇ ಹೋದದ್ದು ವಿಪರ್ಯಾಸದ ಪಾಠವಾಗಿ ಇತಿಹಾಸದಲ್ಲಿ ಉಳಿದುಕೊಂಡಿದೆ.
ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ನಲುಗುತ್ತಿರುವ ಭಾರತಕ್ಕೆ ವ್ಯಕ್ತಿಯ ಪಾಂಡಿತ್ಯಕ್ಕಿಂತಲೂ ಜಾತಿಗೆ ಮಣೆ ಹಾಕುವ ಹುನ್ನಾರ ಎಗ್ಗಿಲ್ಲದೆ ಸಾಗಿದೆ. ಇಂತಹ ಸಂದರ್ಭದಲ್ಲಿ ಬೇಡ ಸಮುದಾಯದ ರತ್ನಾಕರನು ತನ್ನ ಸ್ವ-ಪ್ರತಿಭೆಯಿಂದ ಮಹರ್ಷಿ ವಾಲ್ಮೀಕಿಯಾಗಿ ಹೊರಹೊಮ್ಮಿ, ರಾಮಾಯಣ ಎನ್ನುವ ಅಮೋಘ ಕಾವ್ಯವನ್ನು ರಚಿಸಿಕೊಟ್ಟಿರುವುದನ್ನು ಸಹಿಸಿಕೊಳ್ಳಲಾಗದ ಪಟ್ಟಭದ್ರ ಹಿತಾಸಕ್ತಿಗಳು ಹತ್ತಾರು ಮಿಥ್ಯೆಗಳನ್ನು ಸೃಷ್ಟಿಸಿ, ಪುರಾಣ ಮತ್ತು ಇತಿಹಾಸಗಳ ದಿಕ್ಕನ್ನು ತಪ್ಪಿಸುವ ಪ್ರಯತ್ನ ಮಾಡಿ ಮುಖಭಂಗಕ್ಕೊಳಗಾಗಿರುವುದನ್ನು ಕಾಣಬಹುದು.


ಸಾಮಾನ್ಯನಾಗಿದ್ದ ರತ್ನಾಕರನು ತನ್ನ ಮನೋಬಲದ ಮೂಲಕವೇ ವಾಲ್ಮೀಕಿಯಾದ ಕಥೆ ರೋಚಕವಾಗಿದೆ. ಇದನ್ನು ಬದಿಗಿಟ್ಟು ಅವರು ರಚಿಸಿದ ವಿಶ್ವಮಾನ್ಯ ರಾಮಾಯಣ ಕಾವ್ಯವನ್ನು ಅವಲೋಕಿಸುತ್ತಾ ಮಹರ್ಷಿ ವಾಲ್ಮೀಕಿಯ ಬದುಕನ್ನು ಗ್ರಹಿಸಿಕೊಳ್ಳಬಹುದಾಗಿದೆ. ಸುಮಾರು ಸಾವಿರಾರು ವರ್ಷಗಳ ಹಿಂದೆ ಸಂಸ್ಕೃತದಲ್ಲಿ ವಾಲ್ಮೀಕಿಯವರಿಂದ ರಚಿತವಾದ ರಾಮಾಯಣವು ವೇದ, ಸ್ಮೃತಿ, ಉಪನಿಷತ್ತುಗಳಿಗಿಂತಲೂ ಮಾನವನ ಜೀವನ ಮೌಲ್ಯಗಳನ್ನು ಲೋಕಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಮೊದಲ ಶ್ಲೋಕದ ಜನನ:
ಜ್ಞಾನಗಿರಿಯಾದ ಮಹರ್ಷಿ ವಾಲ್ಮೀಕಿ ಸತ್ಯಶೀಲ, ನ್ಯಾಯನಿಷ್ಠುರಿ, ಪ್ರತಿಭಾಸಂಪನ್ನನಾದ ರಾಮನ ಕಥೆಯನ್ನು ಹೇಳುವ ಮೂಲಕ ಬದುಕಿನ ಸೌಂದರ್ಯವನ್ನು ಕಟ್ಟಿಕೊಟ್ಟಿದ್ದಾರೆ. ಆಶ್ರಮವಾಸಿಯಾದ ವಾಲ್ಮೀಕಿಯ ಮೂಲ ನೆಲೆ ಉತ್ತರ ಭಾರತ. ಒಮ್ಮೆ ಅಲ್ಲಿನ ತಮಸಾ ನದಿಗೆ ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಇಂಪಾದ ಧ್ವನಿಯಿಂದ ಕೂಡಿ ಒಂದನ್ನೊಂದು ಎಡೆಬಿಡದೆ ಹಾರಾಡುತ್ತಿದ್ದ ಕ್ರೌಂಚ ಪಕ್ಷಿಯ ಜೋಡಿಯೊಂದನ್ನು ಕಂಡರು.
ಅಲ್ಲಿದ್ದ ಒಬ್ಬ ಬೇಟೆಗಾರನು ಕ್ರೌಂಚ ಗಂಡು ಪಕ್ಷಿಯನ್ನು ನೋಡನೋಡುತ್ತಿರುವಂತೆಯೇ ಹೊಡೆದು ಕೆಡವಿದನು. ಗಂಡು ಪಕ್ಷಿ ನೆಲದಲ್ಲಿ ಬಿದ್ದು ರಕ್ತದ ಮಡುವಿನಲ್ಲಿ ಹೊರಳಾಡುವುದನ್ನು ಕಂಡ ಹೆಣ್ಣು ಪಕ್ಷಿಯು ದೀನದಿಂದ ಅರಚಿಕೊಳ್ಳುತ್ತಿತ್ತು. ಕೆಂಪಾದ ತಲೆ, ಪುಷ್ಟಿಯಾಗಿ ಬೆಳೆದ ರೆಕ್ಕೆಗಳಿಂದ ಕೂಡಿದ ತನ್ನ ಒಡನಾಡಿಯನ್ನು ಕಳೆದುಕೊಂಡ ಆ ಹೆಣ್ಣು ಪಕ್ಷಿಯ ಗೋಳಾಟವನ್ನು ಕಂಡು ದುಃಖಿತನಾದ ವಾಲ್ಮೀಕಿಯು ಬೇಟೆಗಾರನನ್ನು ಶಪಿಸಿದನು.
ಆ ಸಂದರ್ಭದಲ್ಲಿಯೇ ಅವರ ಹೃದಯದಾಳದಿಂದ ಕರುಣೆಯ ಕಡಲು ಉಕ್ಕಿ ‘ಮಾ ನಿಷಾದ ಪ್ರತಿಷ್ಠಾಂ…’ ಎಂಬ ಶ್ಲೋಕ ಹೊರಹೊಮ್ಮಿತು. ಇದುವೇ ಮುಂದೆ ರಾಮಾಯಣಕ್ಕೆ ಮೂಲ ಶ್ಲೋಕವಾಯಿತು ಮತ್ತು ಇದು ಜಗತ್ತಿನ ಮೊಟ್ಟಮೊದಲ ವಿರಹದ ಪದ್ಯವೂ ಆಯಿತು.
ರಾಮಾಯಣದ ಶ್ರೇಷ್ಠತೆ
ಮಹಾಮಾನವತಾವಾದಿಯಾಗಿದ್ದ ವಾಲ್ಮೀಕಿಯು ಜಗತ್ತಿಗೆ ಮತ್ತು ಭಾರತಕ್ಕೆ ರಾಮಾಯಣ ಕಾವ್ಯದ ಮೂಲಕ ಸರ್ವಧರ್ಮಗಳು ಒಪ್ಪುವಂತಹ ವಿಚಾರಗಳನ್ನು ತಿಳಿಸಿದ್ದಾರೆ. ರಾಮಾಯಣದಂತಹ ಕಾವ್ಯ ರಚಿಸಲು ಬೇಕಾದ ಆತ್ಮನಿಗ್ರಹ, ತಪಸ್ಸು, ಅಹಿಂಸಾವ್ರತ, ಸತ್ಯ, ದೀನತ್ವ, ದಯಾಗುಣ, ಲೋಕಾನುಭವ ಇಂತಹ ಮೌಲ್ಯಗಳು ವಾಲ್ಮೀಕಿಯಲ್ಲಿ ಇದ್ದ ಕಾರಣ ರಾಮಾಯಣವು ಶ್ರೇಷ್ಠ ಕಾವ್ಯವಾಗಿ ಹೊರಹೊಮ್ಮಿತು.
ಶ್ರೀರಾಮನು ವಾಲ್ಮೀಕಿ ಮಹರ್ಷಿಗಳ ಸಮಕಾಲೀನ. ಈ ಕಾವ್ಯದ ಮೂಲ ಉದ್ದೇಶ ಅಧರ್ಮವನ್ನು ಹೋಗಲಾಡಿಸುವುದಾಗಿದೆ. ಒಬ್ಬ ರಾಜ ಪ್ರಜೆಗಳ ರಕ್ಷಕನೆಂದು ಪ್ರಜಾಪ್ರಭುತ್ವದ ಪರಿಕಲ್ಪನೆಯ ಅರಿವನ್ನು ತಂದುಕೊಟ್ಟ ಕವಿ ಕೋಕಿಲ ವಾಲ್ಮೀಕಿ, ಪ್ರಾಚೀನ ರಾಷ್ಟ್ರದ ಕುರಿತಾದ ಒಳನೋಟವನ್ನು, ಆಳ್ವಿಕೆಯ ಪೈಪೋಟಿಯನ್ನು ಭಾರತೀಯ ಸಂಸ್ಕೃತಿಯ ಮೂಲಕ ಹೇಳಿದ್ದಾರೆ.
ರಾಮಾಯಣ ಮಹಾಕಾವ್ಯದಲ್ಲಿ ಶೃಂಗಾರ, ಮಾನಸಿಕ ವಿಕಸನ, ಗುರು-ಹಿರಿಯರೊಂದಿಗಿನ ಬಾಂಧವ್ಯ, ಪಿತೃ ಗೌರವ, ತಾಯಿ ವಾತ್ಸಲ್ಯ… ಹೀಗೆ ನಾಗರಿಕ ಜೀವನಕ್ಕೆ ಬೇಕಾದ ಎಲ್ಲ ಉದಾತ್ತ ಅಂಶಗಳು ಶೇಖರಣೆಗೊಂಡಿವೆ.
ಅಮರ ಪಾತ್ರಗಳು


ರಾಮಾಯಣ ಕಾವ್ಯದಲ್ಲಿ ಸೃಷ್ಟಿಸಿರುವ ಪಾತ್ರಗಳು ಯಾವುದೇ ಯುಗಕ್ಕೂ ಸ್ಪಂದಿಸುವ ಹಾಗಿವೆ. ದಶರಥ, ಕೌಸಲ್ಯೆ, ಕೈಕೇಯಿ, ಮಂಥರೆ, ಶ್ರೀರಾಮ, ಸೀತೆ, ಭರತ, ಲಕ್ಷ್ಮಣ, ಸುಮಿತ್ರೆ, ಶತ್ರುಘ್ನ, ರಾವಣ, ವಿಭೀಷಣ, ಶೂರ್ಪಣಖಿ, ಕುಂಭಕರ್ಣ, ಇಂದ್ರಜಿತ್, ಮಂಡೋದರಿ, ಸುಗ್ರೀವ, ಹನುಮಂತ, ಶಬರಿ ಮತ್ತು ಜಟಾಯುವಿನಂತಹ ಪಾತ್ರಗಳು ಹೃದಯಂಗಮವಾಗಿವೆ ಮತ್ತು ಎಲ್ಲ ಪಾತ್ರಗಳಿಗೂ ನ್ಯಾಯ ಒದಗಿಸಲಾಗಿದೆ.
ರಾಮನ ಸರಳತೆ, ಪ್ರಾಮಾಣಿಕತೆ, ಮಾತಿಗೆ ತಪ್ಪದ ನುಡಿ, ನಿಷ್ಠುರತೆ, ಜನಹಿತ, ಆಜ್ಞೆಯ ಪರಿಪಾಲಕತನ ಇವೆಲ್ಲವನ್ನೂ ಆದರ್ಶದ ಮೌಲ್ಯಗಳಾಗಿ ಚಿತ್ರಿಸಿದ ವಾಲ್ಮೀಕಿಯವರು, ಮಹಾ ಸಂಯಮಶೀಲೆ, ಗುಣವಂತೆ, ಭೂಮಿತೂಕದ ಮಹಾಸಾಧ್ವಿಯಂತೆ ಸೀತೆಯನ್ನು ಕೂಡಾ ಚಿತ್ರಿಸಿದ್ದಾರೆ. ಮೋಹಿಗಳನ್ನು, ವಂಚಕರನ್ನು, ಪ್ರಜಾಪೀಡಕರನ್ನು ಸಂಹರಿಸುವ ಕಲೆಯನ್ನು ಕೂಡಾ ರಾಮಾಯಣದಲ್ಲಿ ಅನನ್ಯವಾಗಿ ಸೃಷ್ಟಿಸಿದ್ದಾರೆ. ಇಂತಹ ಕಾರಣಗಳಿಗಾಗಿ ರಾಮಾಯಣವು ಸಮಾಜದ ಕನ್ನಡಿಯಾಗಿದೆ.
ಕಾವ್ಯದ ರೂಪ:
ವಾಲ್ಮೀಕಿ ರಾಮಾಯಣ ಕಾವ್ಯವು ಅರ್ಥಾಲಂಕಾರ ಮತ್ತು ಶಬ್ದಾಲಂಕಾರದಿಂದ ಕೂಡಿ ಹಾಡುಗಬ್ಬವಾಗಿ ಹೊರಹೊಮ್ಮಿದೆ. ಈ ಕಾರಣವಾಗಿಯೇ ಸಾವಿರಾರು ವರ್ಷಗಳಿಂದಲೂ ಮೌಖಿಕವಾಗಿ ಮತ್ತು ಬರಹದ ರೂಪದಲ್ಲಿ ಕಾಲಮಾನದ ತುರ್ತಿಗೆ ಸ್ಪಂದಿಸುವ ಗುಣವನ್ನು ಹೊಂದಿದೆ. ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳ ಈ ಮಹಾಕಾವ್ಯವು ಬಾಲಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂಧಾ ಕಾಂಡ, ಸುಂದರ ಕಾಂಡ ಮತ್ತು ಯುದ್ಧಕಾಂಡ ಎಂಬ ಉಪವಿಭಾಗಗಳ ಕ್ರಮದಲ್ಲಿ ಹೊಳೆಯಂತೆ ಹರಿದು ಓದುಗರನ್ನು, ಕೇಳುಗರನ್ನು ಪಾವನಗೊಳಿಸುತ್ತಾ ಸಾಗಿದೆ.
ಮಹರ್ಷಿ ವಾಲ್ಮೀಕಿಯವರ ರಾಮಾಯಣದಿಂದ ಪ್ರೇರಣೆ ಪಡೆದ ಭಾರತೀಯ ಕವಿಗಳು ಅವರವರ ಭಾಷೆಯಲ್ಲಿ ಮಹಾಕಾವ್ಯಗಳನ್ನು ರಚಿಸಿ ಪುರಸ್ಕೃತರಾಗಿದ್ದಾರೆ. ಕುಮಾರ ವಾಲ್ಮೀಕಿಯ ತೊರವೆ ರಾಮಾಯಣ, ತುಳಸೀ ರಾಮಾಯಣ, ಜೈನ ರಾಮಾಯಣ, ಕುವೆಂಪುರವರ ‘ರಾಮಾಯಣ ದರ್ಶನಂ’, ವೀರಪ್ಪ ಮೊಯಿಲಿ ಅವರ ‘ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯಗಳಿಗೆ ಮಹರ್ಷಿ ವಾಲ್ಮೀಕಿಯವರ ರಾಮಾಯಣವೇ ಮೂಲ ದ್ರವ್ಯವಾಗಿದೆ.
ಕಾವ್ಯಕುಲಕ್ಕೆ ಗುರುವರ್ಯರಾದ ವಾಲ್ಮೀಕಿ ಹಾಗೂ ರಾಮಾಯಣವು ಇಡೀ ಮಾನವಕುಲಕ್ಕೆ ದಾರಿದೀಪವಾಗಿ, ಹೊಸ ಹೊಸ ಹೊಳವುಗಳನ್ನು ಸೂಚಿಸುತ್ತಾ, ಕಾಲಕಾಲಕ್ಕೆ ಸಮಾಜದ ಹಸಿವನ್ನು ತಣಿಸುತ್ತಲೇ ಇದೆ. ಮಹಾತ್ಮ, ಕವಿಕೋಕಿಲ, ಕವಿಶ್ರೇಷ್ಠ, ಕಾವ್ಯಗುರು, ಋಷಿಕವಿ, ಆದಿಕವಿ, ವಿಶ್ವಮಾನವ ಎಂದು ಪ್ರಖ್ಯಾತರಾದ ಮಹರ್ಷಿ ವಾಲ್ಮೀಕಿಯವರು ಶತ-ಶತಮಾನಗಳು ಉರುಳಿ ಹೋದರೂ ಅವರ ಹೆಸರು ಹಾಗೂ ಅವರು ಬೋಧಿಸಿದ ತತ್ವ ಸಿದ್ಧಾಂತಗಳು ಇಂದಿಗೂ, ಮುಂದಿನ ಕಾಲಕ್ಕೂ ಜ್ಯೋತಿಸಂಜೀವಿನಿಯಾಗಿ ಬೆಳಗುತ್ತಲೇ ಇರುತ್ತವೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 25,2026

ಸ್ವಾಭಿಮಾನ-ಶೌರ್ಯದ ಸಂಕೇತ ರಾಣಿ ಚೆನ್ನಮ್ಮ

ಜೆಡಿಎಸ್ ಮಹಿಳಾ ಘಟಕದಅಧ್ಯಕ್ಷೆಯಾಗಿ ಅಪ್ಪರಾ ಬೇಗಂ ನೇಮಕ

ಜಾಲಗೇರಿಯ ಇಬ್ಬರು ಶಿಕ್ಷಕಿಯರಿಗೆ ‘ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 25,2026
    In ದಿನಪತ್ರಿಕೆ
  • ವಿಶ್ವಮಾನ್ಯ ಮಹಾಕಾವ್ಯ ರಾಮಾಯಣ ಮತ್ತು ಆದಿಕವಿ ವಾಲ್ಮೀಕಿ
    In ವಿಶೇಷ ಲೇಖನ
  • ಸ್ವಾಭಿಮಾನ-ಶೌರ್ಯದ ಸಂಕೇತ ರಾಣಿ ಚೆನ್ನಮ್ಮ
    In (ರಾಜ್ಯ ) ಜಿಲ್ಲೆ
  • ಜೆಡಿಎಸ್ ಮಹಿಳಾ ಘಟಕದಅಧ್ಯಕ್ಷೆಯಾಗಿ ಅಪ್ಪರಾ ಬೇಗಂ ನೇಮಕ
    In (ರಾಜ್ಯ ) ಜಿಲ್ಲೆ
  • ಜಾಲಗೇರಿಯ ಇಬ್ಬರು ಶಿಕ್ಷಕಿಯರಿಗೆ ‘ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ
    In (ರಾಜ್ಯ ) ಜಿಲ್ಲೆ
  • ಕರವೇ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಧೈರ್ಯ & ಸ್ವಾಭಿಮಾನಕ್ಕೆ ಪ್ರತೀಕ ರಾಣಿ ಚನ್ನಮ್ಮ
    In (ರಾಜ್ಯ ) ಜಿಲ್ಲೆ
  • ಚೆನ್ನಮ್ಮರ ಶೌರ್ಯ ಮತ್ತು ತ್ಯಾಗ ಸದಾ ಸ್ಮರಣೀಯ :ಪ್ರಭುಶ್ರೀ
    In (ರಾಜ್ಯ ) ಜಿಲ್ಲೆ
  • ದಾಂಡಿಯಾ ನೃತ್ಯ ನಮ್ಮ ನಾಡಿನ ಸಂಸ್ಕೃತಿ ಗತವೈಭವದ ಪ್ರತೀಕ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.