ಬಸವನಬಾಗೇವಾಡಿ: ತಾಲೂಕಿನ ಮುಳ್ಳಾಳ ಗ್ರಾಮದಿಂದ ಸುಮಾರು ೧೨ ಕಿಮೀ ಅಂತರದಲ್ಲಿರುವ ಉಕ್ಕಲಿ ಗ್ರಾಮದ ಅವ್ವಪ್ಪ ಮುತ್ಯಾನ ದೇವಸ್ಥಾನದವರೆಗೆ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಶಿವಾನಂದ ಪಾಟೀಲರು ಮತ್ತೊಮ್ಮೆ ಆಯ್ಕೆಯಾಗಲಿ ಎಂದು ಪ್ರಾರ್ಥಿಸಿ ಗುರುವಾರ ಮುಳ್ಳಾಳ ಗ್ರಾಮದ ಶಶಿಧರ ಮುಳ್ಳಾಳ ದೀರ್ಘದಂಡ ನಮಸ್ಕಾರ ಹಾಕಿದರು.
ಮುಳ್ಳಾಳ ಗ್ರಾಮದ ತಮ್ಮ ಮನೆಯಿಂದ ಬೆಳಗ್ಗೆ ಎಂಟು ಗಂಟೆಗೆ ದೀರ್ಘದಂಡ ನಮಸ್ಕಾರ ಹಾಕಲು ಆರಂಭಿಸಿದ ಶಶಿಧರ ಮುಳ್ಳಾಳ ಉಕ್ಕಲಿ ಗ್ರಾಮದ ಅವ್ವಪ್ಪ ಮುತ್ಯಾನ ದೇವಸ್ಥಾನಕ್ಕೆ ಮಧ್ಯಾನ್ಹ ೧೨ ಗಂಟೆಗೆ ಸುಮಾರಿಗೆ ತಲುಪಿದರು. ನಂತರ ಮಾತನಾಡಿದ ಅವರು, ಒಂದು ದಶಕದ ಅವಽಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಶಾಸಕರು ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಇಂತಹ ಶಾಸಕರು ಮತ್ತೊಮ್ಮೆ ಆಯ್ಕೆಯಾಗಬೇಕೆಂದು ಭಗವಂತನಲ್ಲಿ ಪ್ರಾರ್ಥಿಸಿ ದೀರ್ಘದಂಡ ನಮಸ್ಕಾರ ಹಾಕುತ್ತಿರುವುದಾಗಿ ಹೇಳಿದರು.
ನಂತರ ಕಾಂಗ್ರೆಸ್ ವಿಧಾನಸಭಾ ಕಾರ್ಯಾಲಯದಲ್ಲಿ ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಡೋಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಮ್ಯಾಗೇರಿ ದೀರ್ಘದಂಡ ನಮಸ್ಕಾರ ಹಾಕಿದ ಶಶಿಧರ ಮುಳ್ಳಾಳ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅಬ್ದುಲ ನದಾಫ, ಬಸವರಾಜ ಸೋಮಪುರ, ಶರಣಬಸು ನಡಗೇರಿ, ಪರಶುರಾಮ ಜ್ಯೋತಿ, ಬಸವರಾಜ ಮಸಳಿ, ಸುರೇಶ ಕಾಖಂಡಗಿ,ರಫೀಕ ಹಳ್ಳಿ, ಶರೀಪ ಹಳ್ಳಿ, ಮುತ್ತುರಾಜ ಮುಳ್ಳಾಳ, ಶಿವಾನಂದ ಹಿಟ್ನಳ್ಳಿ, ಕಮಲಸಾಬ ನದಾಫ, ಅವ್ವಪ್ಪ ಮುಳ್ಳಾಳ, ಅಜುರುದ್ದೀನ ಹಳ್ಳಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment