ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ತಿಕೋಟಾ ಸಂಯುಕ್ತಾಶ್ರಯದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನ 148ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಿತ್ತೂರು ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹೊನವಾಡದ ಖ್ಯಾತ ಪ್ರವಚನಕಾರ ಬಾಬುರಾವ್ ಮಹಾರಾಜರು ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮನವರ ಆದರ್ಶ ನಮಗೆಲ್ಲ ಮಾದರಿ ಎಂದು ಅಭಿಪ್ರಾಯಪಟ್ಟರು.
ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿ, ಚೆನ್ನಮ್ಮನ ಜಯಂತಿಯನ್ನು ವಿಜಯೋತ್ಸವದ ದಿನವನ್ನಾಗಿ ಆಚರಿಸುತ್ತಿರುವುದು ಯುವ ಜನತೆಯಲ್ಲಿ ಧೈರ್ಯ ಸಾಹಸ ಮತ್ತು ರಾಷ್ಟ್ರಪ್ರೇಮವನ್ನು ತುಂಬಿದ ಸಂಕೇತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ ಕೆ ಬಗಲಿ ಮಾತನಾಡಿದರು.
ಮಾಜಿ ಗ್ರಾಪಂ ಅಧ್ಯಕ್ಷ ಸದಾಶಿವ ಪೂಜಾರಿ, ಪ್ರಭು ಅವಟಿ, ನಿಕಟ ಪೂರ್ವ ಅಧ್ಯಕ್ಷ ಸೋಮಶೇಖರ ಜತ್ತಿ, ಸದಾಶಿವ ಮಂಗಸೂಳಿ, ಗುಂಡು ನಾವಿ, ವಿದ್ಯಾ ಸವನಹಳ್ಳಿ, ಬಿ ಜಿ ವಿಭೂತಿ, ಗೀತಾ ಕುಲಕರ್ಣಿ, ಆರ್ ಕೆ ಬಿಸ್ನಾಳ್, ಎಂ ಆರ್ ಕುಡವಕ್ಕಲಿಗ, ಅನಿಲ್ ಪೂಜಾರಿ, ಆಲ್ಗೂರ ಗುರು ಮಾತೆ, ಸಣ್ಣಕ್ಕ ಗುರುಮಾತೆ, ಸುನೀತಾ ಭಜಂತ್ರಿ ಭಾಗವಹಿಸಿದ್ದರು.
ಬಿ ಕೆ ಬಿರಾದಾರ ನಿರೂಪಿಸಿದರು. ಸುರೇಶ ಚಾವರ ಸ್ವಾಗತಿಸಿದರು. ಎಲ್ ಡಿ ಜಮಾದಾರ್ ವಂದಿಸಿದರು.

