Author: editor.udayarashmi@gmail.com

ದೇವರಹಿಪ್ಪರಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ | ಮೆರವಣಿಗೆ ದೇವರಹಿಪ್ಪರಗಿ: ಜೆಡಿಎಸ್ ಅಭ್ಯರ್ಥಿ ಭೀಮನಗೌಡ(ರಾಜುಗೌಡ) ಪಾಟೀಲ, ಕುದರಿ ಸಾಲವಾಡಗಿ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.ಪಟ್ಟಣದ ಟಿಪ್ಪುಸುಲ್ತಾನ ವೃತ್ತದಲ್ಲಿ ಮಂಗಳವಾರ ರಾಜುಗೌಡ ಪಾಟೀಲ ನೇತೃತ್ವದಲ್ಲಿ ಸಭೆ ಸೇರಿದ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೆರವಣಿಗೆಯ ಮೂಲಕ ಹೋರಟು ತಹಶೀಲ್ದಾರ ಕಚೇರಿ ತಲುಪಿ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಯಾದ ರಾಜುಗೌಡ ಪಾಟೀಲ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ 20 ತಿಂಗಳ ಅಧಿಕಾರವಧಿಯಲ್ಲಿ ಕೈಗೊಂಡ ಜನಪರ ಕಾರ್ಯಕ್ರಮಗಳು, ಪಂಚರತ್ನ ಯೋಜನೆಗಳು ಈ ಬಾರಿ ಜೆಡಿಎಸ್ ಗೆಲುವಿಗೆ ಸಹಕಾರಿಯಾಗಲಿವೆ. ಜೊತೆಗೆ ಕಳೆದ ಎರಡು ಚುನಾವಣೆಯಲ್ಲಿ ಕೆಲವೇ ಅಂತರದ ಮತಗಳ ಸೋಲು ನನಗೆ ಸಾಕಷ್ಟು ಪಾಠ ಕಲಿಸಿದೆ. ಈ ಬಾರಿ ಕ್ಷೇತ್ರದ ಮತದಾರರು ಅಭಿವೃದ್ಧಿ ಹಾಗೂ ಅನುಕಂಪದ ಮೂಲಕ ನನಗೆ ಅಪಾರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ನನಗೂ ಸಹ ಕ್ಷೇತ್ರದ ಜನತೆಯ ನಾಡಿಮಿಡಿತ ಅರ್ಥವಾಗಿದ್ದು, ಖಂಡಿತವಾಗಿಯೂ ಈ ಬಾರಿ 10…

Read More

ವಿಜಯಪುರ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಹಿನ್ನಲೆಯಲ್ಲಿ ಮೇ.10ರಂದು ಮತದಾನ ಜರುಗಲಿದ್ದು, ಮತದಾನ ಮುಕ್ತಾಯವಾಗುವ 48ಗಂಟೆಗಳ ಪೂರ್ವದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಸುಗಮ ಹಾಗೂ ಪಾರದರ್ಶಕ ಚುನಾವಣೆ ನಡೆಸುವ ದೃಷ್ಟಿಯಿಂದ ದಂಡ ಸಂಹಿತೆ 1973 ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ವಿಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ.ಪ್ರತಿಬಂಧಕಾಜ್ಞೆ ಆದೇಶದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಚುನಾವಣಾ ಅಭ್ಯರ್ಥಿ, ಬೆಂಬಲಿಗರು ಸೇರಿ 5 ಜನರಿಗಿಂತ ಹೆಚ್ಚಿನ ಸಂಖ್ಯೆ ಜನರು ಸೇರುವಂತಿಲ್ಲ ಎಂದು ಆದೇಶಿಸಲಾಗಿದೆ.ಕಲ್ಲುಗಳನ್ನು ಮತ್ತು ಕ್ಷಾರಪದಾರ್ಥ ಇಲ್ಲವೇ ಸ್ಪೋಟಕ್ ವಸ್ತುಗಳು, ಯಾವುದೇ ದಾಹಕ ವಸ್ತುಗಳು, ಶಸ್ತç, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನುಂಟು ಮಾಡುವ ಮಾರಕಾಸ್ತçಗಳನ್ನು ತೆಗೆದುಕೊಂಡು ಹೋಗುವುದು ಹಾಗೂ ತಿರುಗಾಡುವುದನ್ನು ನಿಷೇಧಿಸಲಾಗಿದೆ.ಮತಗಟ್ಟೆಗಳ 100 ಮೀಟರ್ ಒಳಗೆ ಚುನಾವಣೆ ಪ್ರಚಾರ ನಡೆಸುವುದನ್ನು…

Read More

ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರ | ನಾಮಪತ್ರ ಸಲ್ಲಿಸುವ 4ನೇ ದಿನ ವಿಜಯಪುರ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಸಲು ನಾಲ್ಕನೇ ದಿನವಾದ ಏಪ್ರಿಲ್ 18ರ ಮಂಗಳವಾರ ದ0ದು ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ 24 ಅಭ್ಯರ್ಥಿಗಳಿಂದ ಒಟ್ಟು 25 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ 02, 27-ದೇವರಹಿಪ್ಪರಗಿ ಮತಕ್ಷೇತ್ರದಿಂದ 02, 28-ಬಸವನಬಾಗೇವಾಡಿ ಮತಕ್ಷೇತ್ರದಿಂದ 02, 29-ಬಬಲೇಶ್ವರ ಮತಕ್ಷೇತ್ರದಿಂದ 04, 30-ಬಿಜಾಪುರ ನಗರ ಮತಕ್ಷೇತ್ರದಿಂದ 01, 31-ನಾಗಠಾಣ (ಎಸ್ಸಿ) ಮತಕ್ಷೇತ್ರದಿಂದ 07, 32-ಇಂಡಿ ಮತಕ್ಷೇತ್ರದಿಂದ 03 ಹಾಗೂ 33-ಸಿಂದಗಿ ಮತಕ್ಷೇತ್ರದಿಂದ 04 ನಾಮಪತ್ರಗಳು ಸೇರಿದಂತೆ ಒಟ್ಟು 25 ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ.ಮುದ್ದೇಬಿಹಾಳ ಮತಕ್ಷೇತ್ರದಿಂದ ಕಾಶಿನಾಥ ದೊಡಮನಿ ( ಬಹುಜನ ಸಮಾಜ ಪಕ್ಷ), ಚನ್ನಬಸಪ್ಪ ಸೋಲಾಪುರ (ಜನತಾ ದಳ ಜಾತ್ಯಾತೀತ) ಅವರು ನಾಮಪತ್ರ ಸಲ್ಲಿಸಿದ್ದಾರೆ.ದೇವರಹಿಪ್ಪರಗಿ ಮತಕ್ಷೇತ್ರದಿಂದ ಭೀಮನಗೌಡ (ರಾಜುಗೌಡ) ಬಸನಗೌಡ ಪಾಟೀಲ (ಜನತಾ ದಳ (ಜಾತ್ಯಾತೀತ)), ದುಂಡಸಿ…

Read More

ಮುದ್ದೇಬಿಹಾಳ: ಸಿಮೆಂಟ್ ಹೇರಿಕೊಂಡು ಬಂದಿದ್ದ ಲಾರಿ ಹಾಯ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಪಟ್ಟಣದ ಎಪಿಎಂಸಿ ಬಳಿ ನಡೆದಿದೆ.ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮದ ಬುಡ್ಡೇಸಾ ಹಸನಸಾಬ ನದಾಫ (55) ಮೃತ ದುರ್ದೈವಿ. ಘಟನೆ ಕುರಿತು ಮೃತರ ಮಗ ಮಲ್ಲಿಕಸಾಬ ನದಾಫ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read More

ಸಿಂದಗಿ: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ಸಿದ್ದು ತಮದೊಡ್ಡಿ ಇವರನ್ನು ತಾಲೂಕಾಧ್ಯಕ್ಷ ಸಂತೋಷ ಯರನಾಳ ಇವರು ಆಯ್ಕೆ ಮಾಡಿ ಸಿಂದಗಿ ಗ್ರಾಮೀಣ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸುವಂತೆ ಸೂಚಿಸಿದ್ದಾರೆ ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಇವರ ಸಮ್ಮತಿಯೊಂದಿಗೆ ಈ ಸಿದ್ದು ಇವರನ್ನು ನೇಮಕ ಮಾಡಲಾಗಿದ್ದು ಗ್ರಾಮೀಣ ಕ್ಷೇತ್ರದಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ಪರವಾಗಿ ಕೆಲಸ ಮಾಡಿ ಜನರಲ್ಲಿ ಪಂಚರತ್ನ ಯೋಜನೆಯ ಕುರಿತು ಮಾಹಿತಿ ನೀಡುವುದರ ಮೂಲಕ ಈ ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡು ಘಟಕ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.

Read More

ವಿವಿಧ ಗ್ರಾಪಂಗಳಿಗೆ ಜಿಪಂ ಸಿಇಓ ಶಿಂಧೆ ಭೇಟಿ, ಪರಿಶೀಲನೆ ವಿಜಯಪುರ: ಮೇ.10ರಂದು ನಡೆಯುವ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಮತಗಟ್ಟೆಗೆ ತೆರಳಿ ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಹೇಳಿದರು. ಮಂಗಳವಾರು ನಿಡಗುಂದಿ ತಾಲೂಕಿನ ವಂದಾಲ ಮತ್ತು ಗೊಳಸಂಗಿ ಹಾಗೂ ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿವಿಧ ಕಾಮಗಾರಿ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿ, ಕೂಲಿ ಕಾರ್ಮಿಕರಿಗೆ ಮತದಾನದ ಮಹತ್ವದ ಕುರಿತು ತಿಳಿ ಹೇಳಿದರು.ನಿಡಗುಂದಿ ತಾಲ್ಲೂಕಿನ ವಂದಾಲ ಗ್ರಾಮದಲ್ಲಿ ಕಾಲುವೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೂಲಿ ಕಾರ್ಮಿಕರ ಜೊತೆ ಸಂವಾದ ನಡೆಸಿ, ಅವರ ಕುಂದು ಕೊರತೆ ಆಲಿಸಿದರು.ಕಾಮಗಾರಿಯ ಸ್ಥಳದಲ್ಲಿಯೇ ರಂಗೋಲಿ ಮೂಲಕ “ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ, ಕೂಲಿ ಕೆಲಸಕ್ಕೂ ಸೈ, ಮೇ 1೦ಕ್ಕೆ ಮತದಾನಕ್ಕೂ ಸೈ, ಸ್ವೀಪ್ ಚಟುವಟಿಕೆಯ ಜಾಗೃತಿ ಚಿತ್ರಗಳನ್ನು ಬಿಡಿಸಿ…

Read More

ವಿಜಯಪುರ: ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಡಾ.ಬಗಾದಿ ಗೌತಮ್ ಅವರು ಮಂಗಳವಾರ ಜಿಲ್ಲೆಯ ನಿಡಗುಂದಿ ಪಟ್ಟಣದ ಮತಗಟ್ಟೆ ಸಂಖ್ಯೆ 218ಹಾಗೂ ಆಲಮಟ್ಟಿ ಡ್ಯಾಂ ಸೈಟ್ ಮತಗಟ್ಟೆ-229ಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಮಾಹಿತಿ ಪಡೆದುಕೊಂಡರು.ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತದಾನ ಕೇಂದ್ರಕ್ಕೆ ಭೇಟಿ ನೀಡಿ, ಮತದಾನ ಜಾಗೃತಿ ಕುರಿತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಹಾಗೂ ಮತಗಟ್ಟೆ ಅಧಿಕಾರಿಗಳೊಂದಿಗೆ (ಃಐಔ) ಚರ್ಚಿಸಿದರು. ಮತದಾನ ಕೇಂದ್ರದ ಮೂಲಭೂತ ಸೌಕರ್ಯಗಳು, ಮತದಾನ ಜಾಗೃತಿ ಅಭಿಯಾನದ ಮೂಲಕ ಗ್ರಾಮ ಪಂಚಾಯತಿ ಮಟ್ಟದಲ್ಲಿ ಈಗಾಗಲೇ ಹಮ್ಮಿಕೊಂಡ ಹಾಗೂ ಮುಂಬರುವ ದಿನಗಳಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.ಜಿಪಂ ಸಿಇಓ ರಾಹುಲ್ ಶಿಂಧೆ ಅವರು ಜಿಲ್ಲಾ ಸ್ವೀಪ್ ಸಮಿತಿ ಮೂಲಕ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮತದಾರರಿಗೆ ಮತದಾನದ ಮಹತ್ವ ಕುರಿತ ವಿಭಿನ್ನ ರೀತಿಯಿಂದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಯೋಜಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿವರ ನೀಡಿದರು.ಈ ಸಂದರ್ಭದಲ್ಲಿ ನಿಡಗುಂದಿ…

Read More

ಬಾಡೂಟದಲ್ಲಿ ಪಾಲ್ಗೊಂಡ ಶಿಕ್ಷಕರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ದಾಖಲು | ಕ್ರಮಕ್ಕೆ ಆಗ್ರಹ ವಿಜಯಪುರ: ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯು ಅಲ್ಲಿಯ ಚುನಾವಣೆ ಕಾರ್ಯಕ್ಕೆ ನಿಯೋಜಿತರಾದ ಅಧಿಕಾರಿಗಳಿಗೆ, ಬೂತ್ ಮಟ್ಟದ ಶಿಕ್ಷಕರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಸೆ-ಆಮಿಷಗಳನ್ನು ಒಡ್ಡುವ ಮೂಲಕ ಚುನಾವಣೆಯಲ್ಲಿ ಅವರನ್ನು ದುರುಪಯೋಗ ಪಡಿಸಿಕೊಳ್ಳುವ ಹುನ್ನಾರ ಹೊಂದಿದ್ದಾರೆAದು ಬಬಲೇಶ್ವರ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಆರೋಪಿಸಿದರು.ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಬಬಲೇಶ್ವರ ಕಾಂಗ್ರೆಸ್ ಅಭ್ಯರ್ಥಿಯು ಬಬಲೇಶ್ವರ ಕ್ಷೇತ್ರದ ವ್ಯಾಪ್ತಿಯ ಶಿಕ್ಷಕರಿಗೆ ದ್ಯಾಬೇರಿ ಗ್ರಾಮದ ತೋಟವೊಂದರಲ್ಲಿ ಔತಣಕೂಟದ ನೆಪದಲ್ಲಿ ಬಾಡೂಟ ಮತ್ತು ಮದ್ಯದ ಪಾರ್ಟಿ ಏರ್ಪಡಿಸಿ ಅವರಿಂದ ಚುನಾವಣೆಯಲ್ಲಿ ಗೋಲ್‌ಮಾಲ್ ಮಾಡಿಸುವ ಯೋಜನೆ ಹೊಂದಿದ್ದಾರೆ. ಕೆಎ ೦೧ ಎಂಕ್ಯೂ ೮೬೯೬ ನಂಬರಿನ ಶಿಕ್ಷಕರ ಸಂಘದ ಇನ್ನೋವಾ ಕಾರು ಸೇರಿದಂತೆ ಹಲವು ವಾಹನಗಳಲ್ಲಿ ಬಿಎಲ್‌ಓಗಳು ಆಗಮಿಸಿದ್ದರು. ಈ ಬಾಡೂಟದಲ್ಲಿ ಶಿಕ್ಷಕಿಯರೂ ಪಾಲ್ಗೊಂಡಿದ್ದರು ಎಂಬುದಕ್ಕೆ…

Read More

ಶಿಥಿಲಾವಸ್ಥೆಯ ವಿದ್ಯುತ್ ಕಂಬಗಳು | ಕೈಗೆಟಕುವ ವಿದ್ಯುತ್ ತಂತಿಗಳು ಮುದ್ದೇಬಿಹಾಳ : ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಜಮೀನಿಗೆ ನದಿ ನೀರು ಹಾಯಿಸಿಕೊಳ್ಳಲು ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸುವಂತೆ ಕಳೆದ ನಾಲ್ಕು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷö್ಯ ವಹಿಸಿದ್ದಾರೆ ಎಂದು ತಾಲೂಕಿನ ಹಂಡರಗಲ್ ಗ್ರಾಮದ ರೈತರು ಆರೋಪಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ರೈತರು ತಹಸೀಲದಾರ್ ರೇಖಾ ಟಿ.ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.ರೈತರಾದ ಸಂಗನಗೌಡ ಪಾಟೀಲ್, ಸÀದಾನಂದ ವಾಲೀಕಾರ, ಶರಣಪ್ಪ ನರಸಣಗಿ, ಬಸವರಾಜ ನರಸಣಗಿ ಮೊದಲಾದವರು ಮಾತನಾಡಿ, ಏ.೫ ರಂದು ಹೆಸ್ಕಾಂ ಇಲಾಖೆಯ ಸೆಕ್ಷನ್ ಅಧಿಕಾರಿ ಬಿ.ಎಸ್.ಯಲಗೋಡ ಅವರು ಹದಿನೈದು ದಿನಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದರು. ಆದರೆ ಈವರೆಗೂ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಬ್ಬು ಇತ್ಯಾದಿ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಿದ್ದು ಕಾಲುವೆಗಳ ನೀರು ಬಳಸಿಕೊಳ್ಳಲು ಮತ್ತು ಬೋರ್‌ವೆಲ್ ಮೂಲಕ ನೀರು ಬಳಸಿಕೊಳ್ಳಲು ಹೆಸ್ಕಾಂ ಇಲಾಖೆ ಅಧಿಕಾರಿಗಳು ಸಮರ್ಪಕ…

Read More

ಬಿ.ಎಲ್.ಸಂತೋಷ ಕರೆ | ಬಿಜೆಪಿ ಟಿಕೆಟ್ ಧಿಕ್ಕರಿಸಿ ಕಟಕದೊಂಡರನ್ನು ಗೆಲ್ಲಿಸಲು ಪಣ | ರಾಜು ಆಲಗೂರ ಹೇಳಿಕೆ ನಾಗಠಾಣ: ನನಗೆ ಸ್ವತಃ ಬಿ.ಎಲ್. ಸಂತೋಷ್ ಕರೆ ಮಾಡಿ ಟಿಕೆಟ್ ಹಾಗೂ ಹಣ ಎರಡನ್ನೂ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದರು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಸ್ಫೋಟಕ ಮಾಹಿತಿ ಹೊರ ಹಾಕಿದರು.ಮಂಗಳವಾರ ರಾತ್ರಿ ನಾಗಠಾಣದಲ್ಲಿ ನಡೆದ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಟಿಕೆಟ್ ಧಿಕ್ಕರಿಸಿ ನಾನು ಕಟಕದೊಂಡ ಅವರ ಜತೆಗೆ ನಿಂತಿದ್ದೇನೆ. ಕಾಂಗ್ರೆಸ್ ಬಿಡಲು ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ತತ್ವ-ಸಿದ್ಧಾಂತ ಬಿಟ್ಟು ಕಾರ್ಯಕರ್ತರನ್ನು ಅನಾಥರಾಗಿ ಮಾಡಲು ನಾನು ಹೋಗಲಿಲ್ಲ ಎಂದು ಆಲಗೂರ್ ಸ್ಪಷ್ಟಪಡಿಸಿದರು.ಎಂ.ಬಿ. ಪಾಟೀಲರು ಕೂಡಿಸಿಕೊಂಡು ಕಟಕದೊಂಡ ಅವರ ಜತೆ ಇರಿ ಎಂದು ಹೇಳಿದರು. ನಾನು ಪ್ರಾಮಾಣಿಕವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಲು ಕೆಲಸ ಮಾಡುತ್ತೇನೆ. ಯಾವುದೇ ಸಂಶಯ ಬೇಡ. ಈ ಸರಕಾರದಲ್ಲಿ ಕಾರಜೋಳರಿಂದ ನಾಗಠಾಣ ಕ್ಷೇತ್ರದ ಪೊಲೀಸ್ ಠಾಣೆಗಳು ಬಿಜೆಪಿ ಕಚೇರಿಗಳಾಗಿದ್ದವು. ನಮ್ಮ ಪಕ್ಷದ ಕಾರ್ಯಕರ್ತರಿಗೆ ವಿಪರೀತ…

Read More