ಶಿಥಿಲಾವಸ್ಥೆಯ ವಿದ್ಯುತ್ ಕಂಬಗಳು | ಕೈಗೆಟಕುವ ವಿದ್ಯುತ್ ತಂತಿಗಳು
ಮುದ್ದೇಬಿಹಾಳ : ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಜಮೀನಿಗೆ ನದಿ ನೀರು ಹಾಯಿಸಿಕೊಳ್ಳಲು ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸುವಂತೆ ಕಳೆದ ನಾಲ್ಕು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷö್ಯ ವಹಿಸಿದ್ದಾರೆ ಎಂದು ತಾಲೂಕಿನ ಹಂಡರಗಲ್ ಗ್ರಾಮದ ರೈತರು ಆರೋಪಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ರೈತರು ತಹಸೀಲದಾರ್ ರೇಖಾ ಟಿ.ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ರೈತರಾದ ಸಂಗನಗೌಡ ಪಾಟೀಲ್, ಸÀದಾನಂದ ವಾಲೀಕಾರ, ಶರಣಪ್ಪ ನರಸಣಗಿ, ಬಸವರಾಜ ನರಸಣಗಿ ಮೊದಲಾದವರು ಮಾತನಾಡಿ, ಏ.೫ ರಂದು ಹೆಸ್ಕಾಂ ಇಲಾಖೆಯ ಸೆಕ್ಷನ್ ಅಧಿಕಾರಿ ಬಿ.ಎಸ್.ಯಲಗೋಡ ಅವರು ಹದಿನೈದು ದಿನಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದರು. ಆದರೆ ಈವರೆಗೂ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಇತ್ಯಾದಿ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಿದ್ದು ಕಾಲುವೆಗಳ ನೀರು ಬಳಸಿಕೊಳ್ಳಲು ಮತ್ತು ಬೋರ್‌ವೆಲ್ ಮೂಲಕ ನೀರು ಬಳಸಿಕೊಳ್ಳಲು ಹೆಸ್ಕಾಂ ಇಲಾಖೆ ಅಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಕೆ ಮಾಡದೇ ಇರುವುದರಿಂದ ಅಡಚಣೆಯುಂಟಾಗಿದೆ. ಎಲ್ಲೋ ದೂರದ ವಿದ್ಯುತ್ ಕಂಬದಿAದ ವಿದ್ಯುತ್ ಬಳಸಿಕೊಳ್ಳಬೇಕೆಂದರೆ ಅಗತ್ಯ ವೋಲ್ಟೇಜ್ ಇರುವುದಿಲ್ಲ. ಕೇವಲ ಸಿಂಗಲ್ ಫೇಸ್ ವಿದ್ಯುತ್ ಮಾತ್ರ ಇರುತ್ತದೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ನದಿ ತೀರದ ಜಮೀನುಗಳ ಅಕ್ಕ ಪಕ್ಕದಲ್ಲಿರುವ ವಿದ್ಯುತ್ ಕಂಬಗಳು ಬಿದ್ದು ಹೋಗುವ ಸ್ಥಿತಿಯಲ್ಲಿವೆ. ಜೊತೆಗೆ ವಿದ್ಯುತ್ ತಂತಿಯೂ ಕೂಡ ನೆಲಕ್ಕೆ ತುಂಬಾ ಹತ್ತಿರ ಇರುವುದರಿಂದ ಆಗಾಗ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಈಗಾಗಲೇ ಹತ್ತಕ್ಕೂ ಹೆಚ್ಚು ಜಾನುವಾರಗಳು ಸಾವನ್ನಪ್ಪಿವೆ. ರೈತರು ಜೀವ ಕೈಯಲ್ಲಿ ಹಿಡಿದು ವ್ಯವಸಾಯ ಮಾಡುವ ಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ರೇಖಾ ಟಿ. ಸಂಬAಧಿಸಿದ ಇಲಾಖೆಯ ಅಧಿಕಾರಿಯೊಂದಿಗೆ ಮಾತನಾಡುವುದಾಗಿ ಹೇಳಿದರು.
ಈ ವೇಳೆ ತಹಸೀಲ್ದಾರ್ ಕಚೇರಿ ಆವರಣದಲ್ಲಿಯೇ ಇದ್ದ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸೈ ಆರೀಫ ಮುಶಾಪುರಿ, ಸದ್ಯಕ್ಕೆ ಚುನಾವಣೆ ನಡೆಯುತ್ತಿದ್ದು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಲು ಅವಕಾಶವಿರುವುದಿಲ್ಲ. ನಿಮ್ಮ ಬೇಡಿಕೆ ಯಾವ ಇಲಾಖೆಗೆ ಸಂಬAಧಿಸಿದೆಯೋ ಅಲ್ಲಿ ಮನವಿ ಕೊಡಿ ಎಂದು ಹೇಳಿ ರೈತರನ್ನು ತಹಸೀಲ್ದಾರ್ ಕಚೇರಿಯಿಂದ ಮರಳಿ ಕಳಿಸಿದರು.
ಪ್ರತಿಭಟನೆಯಲ್ಲಿ ರೈತರಾದ ಸೋಮಣ್ಣ ತುರುಡಗಿ, ಬುಡ್ಡಾ ಮೊಕಾಶಿ, ಮಲ್ಲಿಕಾರ್ಜುನ ಬಾದರದಿನ್ನಿ, ಇಬ್ರಾಹಿಂ ಮಾಗಿ, ಹೊಳೆಪ್ಪ ಬಾದರದಿನ್ನಿ, ಮುತ್ತಪ್ಪ ಗಡೇದ, ನಾಗಪ್ಪ ವಾಲೀಕಾರ, ಮಲ್ಲನಗೌಡ ಬಿರಾದಾರ, ಶೇಖಪ್ಪ ಬಾದರದಿನ್ನಿ, ಬಸಪ್ಪ ಗಡೇದ, ಹಣಮಂತ ಬೋಳಿ, ಫಯಾಜ್ ಮುದ್ದೇಬಿಹಾಳ, ನೀಲಪ್ಪ ಬೀಸಲದಿನ್ನಿ, ರುದ್ರಗೌಡ ದೇಸಾಯಿಗೌಡರ, ಭೀಮಣ್ಣ ಪತ್ತಾರ, ಹುಸೇನಬಾಷಾ ನದಾಫ, ನಾಗು ದೇಸಾಯಿಗೌಡರ, ದ್ಯಾಮಣ್ಣ ನಾಗೂರ, ಸೇರಿದಂತೆ ಹಲವರು ಇದ್ದರು.