Author: editor.udayarashmi@gmail.com

ಚಡಚಣ: ನಾನು ನಾಗಠಾಣ ಕ್ಷೇತ್ರದ ಅಭ್ಯರ್ಥಿ ಅಲ್ಲ, ಕಾರ್ಯಕರ್ತರಾದ ಪ್ರತಿಯೊಬ್ಬರೂ ಅಭ್ಯರ್ಥಿ ಇದ್ದೀರಿ. ಹಾಗಾಗಿ ನಿಮ್ಮ ಗೆಲುವು ನಿಮ್ಮ ಕೈಯಲ್ಲೇ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ವಿಶ್ವಾಸ ತುಂಬಿದರು.ಇಲ್ಲಿನ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದರು.ಎಲ್ಲರೂ ಸಹಕರಿಸಿಕೊಂಡು ಚುನಾವಣೆ ಎದುರಿಸಬೇಕು. ಒಬ್ಬರಿಗೊಬ್ಬರು ಕೋಆರ್ಡಿನೇಟ್ ಮಾಡಿಕೊಂಡು ಆಯಾ ಜಿಪಂ ವ್ಯಾಪ್ತಿಯ ತಂಡಗಳು ಕಾರ್ಯನಿರ್ವಹಿಸಬೇಕು. ಜಿಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳ ಮರದಾರರರನ್ನು ತಲುಪಬೇಕು ಎಂದರು. ದೊಡ್ಡದಾದ ಕ್ಷೇತ್ರ ಇರುವುದರಿಂದ ನನಗೊಬ್ಬನಿಗೆ ಎಲ್ಲೆಡೆ ತಲುಪಲಾಗುವುದಿಲ್ಲ. ಆದ್ದರಿಂದ ತಾವೆಲ್ಲ ಕಾರ್ಯಕರ್ತರೇ ಅಭ್ಯರ್ಥಿ ನೀವೇ ಎಂದು ತಿಳಿದು ಎಲ್ಲರನ್ನು ಭೇಟಿಯಾಗಿ ಮತಯಾಚಿಸಬೇಕು. ಗ್ರಾಪಂನಿಂದ ಹಳ್ಳಿ ಹಳ್ಳಿ, ಅಲ್ಲಿಂದ ತಾಪಂ ಮತ್ತೆ ಜಿಪಂ ವರೆಗೆ ನೀವು ಪ್ರತಿ ಮತದಾರ ಎಲ್ಲಿದ್ದಾರೆ ಎಂದು ಗುರುತಿಸಿ ಅವರನ್ನು ಬೂತ್‌ಗೆ ತರುವ ಜವಾಬ್ದಾರಿ ನಿಮ್ಮದು. ಮನೆ ಮನೆ ತಲುಪಿ ಮತದಾರರನ್ನು ಕಾಂಗ್ರೆಸ್ ಕಡೆಗೆ ಸೆಳೆದು, ಆ ಅಲೆಯಲ್ಲಿ ಪಕ್ಷವನ್ನು ಅಧಿಕಾರದ ದಡ ಮುಟ್ಟಿಸಬೇಕು ಎಂದು ಕೇಳಿಕೊಂಡರು.ಪಕ್ಷದ ಬ್ಲಾಕ್…

Read More

5೦ ಸಾವಿರ ಮತಗಳ ಅಂತರದಿಂದ ಗೆಲ್ಲುವ ಭರವಸೆ :ಯತ್ನಾಳ ವಿಜಯಪುರ: ಶಕ್ತಿ ಪ್ರದರ್ಶನ ಹೆಸರಲ್ಲಿ ಜನ ಸೇರಿಸದೆ, ಅನಗತ್ಯವಾಗಿ ಖರ್ಚು ಮಾಡದೆ, ಅತ್ಯಂತ ಸರಳ ರೀತಿಯಲ್ಲಿ, ನಗರ ವಿಧಾನಸಭೆ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಬುಧವಾರ ನಾಮಪತ್ರ ಸಲ್ಲಿಸಿದರು. ತಮ್ಮ ಪ್ರಚಾರ ಕಾರ್ಯಾಲಯ ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರೆ, ಮೊದಲ ಸಲ ಸುಂದರೇಶ್ವರ ದೇವಸ್ಥಾನ ಹಾಗೂ ಕಪಿಲೇಶ್ವರ ದೇವಸ್ಥಾನ ಹಾಗೂ ಸರ್ವಸಿದ್ದಿ ವಿನಾಯಕ ಮಂದಿರದಲ್ಲಿ ಪೂಜೆ ಸಲ್ಲಿಸಿ, ನೇರವಾಗಿ ಎಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಆಡಂಬರ ಇಲ್ಲದೇ, ಅನಗತ್ಯ ಖರ್ಚು ಮಾಡಬಾರದೆಂದು, ಅತ್ಯಂತ ಸರಳ ರೀತಿಯಲ್ಲಿ ಎರಡು ನಾಮಪತ್ರ ಸಲ್ಲಿಸಿದ್ದೇನೆ. ಹಿಂದಿನ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮನೆ ಮನೆಗೆ ತೆರಳಿ ಮತ ಯಾಚಿಸಲಾಗುವುದು. ನಗರ ಜನತೆಯ ಉತ್ಸಾಹ ನೋಡಿದರೆ, ಕನಿಷ್ಠ 50 ಸಾವಿರ ಮತಗಳಿಂದ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ನೆಚ್ಚಿನ ನಾಯಕನ ಮಾದರಿ…

Read More

ನಾಗಠಾಣ: ‘ಮತವನ್ನು ಯಾರಿಗೆ ಮಾಡಿದರೆ ಸತ್ಪಾತ್ರಕ್ಕೆ ಸಲ್ಲುತ್ತದೆ ಎಂದು ಯೋಚನೆ ಮಾಡಿ’ ಎಂದು ನಾಗಠಾಣ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಹೇಳಿದರು.ಮಂಗಳವಾರ ಇಂಗನಾಳ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ರೈತರ ಬಗ್ಗೆ ಕಾಳಜಿ ಇರುವ ಮತ್ತು ಜನಪರವಾದ ಸರಕಾರ ಬರಲು ತಾವು ಕಾಂಗ್ರೆಸ್‌ಗೆ ಮತ ನೀಡಿ ನೀವುಗಳು ನಿಮ್ಮ ಮತವನ್ನು ಸತ್ಪಾತ್ರಕ್ಕೆ ಸಲ್ಲುವಂತೆ ಮಾಡಿ ಎಂದು ಮನವಿ ಮಾಡಿದರು.ರೈತರಿಗೆ ಸರಿಯಾದ ಬೆಲೆ ಇಲ್ಲ. ಅವರ ಬದುಕು ದುಸ್ತರವಾಗಿದೆ. ನಾವು ಹೋರಾಟ ಮಾಡಿ ನಮ್ಮ ಹಕ್ಕು ಪಡೆವ ಸ್ಥಿತಿ ಇದೆ. ರೈತ ತನಗಿಷ್ಟು ನೀರು ಕೊಡಿ ಅಂತ ಕೇಳುವುದು ಬಿಟ್ಟು ಏನನ್ನೂ ಬಯಸುವುದಿಲ್ಲ. ಆತ ನೀರಿಗಾಗಿಯೂ ಬಡಿದಾಡುವಂತಿದೆ. ನಾಗಠಾಣ ಕ್ಷೇತ್ರ ಸಂಪೂರ್ಣ ನೀರಾವರಿ ಮಾಡಲು ಚಿಂತಿಸಿ ನಾನು ಚುನಾವಣೆಗೆ ನಿಂತಿದ್ದೇನೆ ಹೊರತು ಬೇರೆ ಯಾವ ವೈಯಕ್ತಿಕ ಹಿತಾಸಕ್ತಿ ನನಗಿಲ್ಲ. ಎಂ.ಬಿ. ಪಾಟೀಲರು ಬೆನ್ನಿಗಿರುವುದರಿಂದ ನಮ್ಮದೇ ಸರಕಾರ ಬಂದರೆ ಈ ಕ್ಷೇತ್ರದ ಚಿತ್ರಣವೇ ಬದಲಾಗಲಿದೆ. ಮೂಲ ಸೌಕರ್ಯ ಸೇರಿ ಎಲ್ಲ…

Read More

ದ್ಯಾಬೇರಿ: ‘ನಮಗ ರೊಕ್ಕಾ ಬ್ಯಾಡ, ರುಪಾಯಿ ಬ್ಯಾಡ.. ನಮ್ಮ ನಾಗಠಾಣ ಕ್ಷೇತ್ರ ಮತ್ತ ನಮ್ಮೂರಿಗಿ ಛೊಲೊ ಆದರ ಸಾಕು’ ಎಂದು ಪ್ರಗತಿ ಪರ ರೈತ ಮಲ್ಲು ನಾಗರಬೋಜಿ ಹೇಳಿದರು.ಇಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಪರವಾದ ಪ್ರಚಾರ ಸಭೆಯಲ್ಲಿ ಮಾತನಾಡಿ, ನಾವು ಆಮಿಷಕ್ಕೆ ಬಲಿಯಾಗದೇ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಮೊದಲು ನಾವು ದ್ಯಾಬೇರಿಯಿಂದ ವಿಜಯಪುರಕ್ಕೆ ಮದಭಾವಿ ಮೇಲಿಂದ ಹೋಗುತ್ತಿದ್ದೆವು. ಈಗ ಚುನಾವಣೆ ಬಂದಿದೆ ಎಂದು ಅಲಿಯಾಬಾದ್ ರಸ್ತೆ ಸರಿ ಮಾಡಿದ್ದಾರೆ. ಇಷ್ಟು ದಿನ ಏಕೆ ರಸ್ತೆ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಟಕದೊಂಡರಿಗೆ ಯಾವ ಆಸೆಗಳಿಲ್ಲ. ಅವರು ಯಾವತ್ತೂ ಜನಪರವಾಗಿದ್ದಾರೆ. ಇವರು ಗೆದ್ದರೆ ನಾವು ಉದ್ಧಾರವಾಗುತ್ತೇವೆ. ನಾವು ದುಡ್ಡಿನ ಆಸೆಗೆ ಬಲಿಯಾಗಿ ಯಾರಿಗೋ ಮತ ಹಾಕಬಾರದು ಎಂದರು.ಈ ಹದಿನೈದು ದಿನ ನಿಮ್ಮನ್ನು ನಾವು ಆಕಾಶದಾಗ ತೇಲಿಸಿ ಬಿಡುತ್ತೇವೆ. ಪ್ರಜೆಗಳೇ ಪ್ರಭುಗಳು ಅನ್ನೋದು ಮರೆಯಾಗಿ ನೀವೇ ಸೇವಕರಾಗೀರಿ, ನಾವೇ ಮಾಲೀಕರಾಗೀವಿ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಸಂಕಟದಿಂದ ಹೇಳಿದರು.ನನಗೇ…

Read More

ವಿಜಯಪುರ: ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷರನ್ನಾಗಿ ಎಂ.ಎಸ್.ಲೋಣಿ ಅವರನ್ನು ನೇಮಕ ಮಾಡಲಾಗಿದೆ. ಈ ನೇಮಕಾತಿ ಆದೇಶ ಪ್ರತಿಯನ್ನು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಎಂ.ಎಸ್.ಲೋಣಿ ಅವರಿಗೆ ನೀಡಿದರು. ನಂತರ ಮಾತನಾಡಿದ ಎಂ.ಬಿ.ಪಾಟೀಲ ಅವರು, ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ. ಕಾಂಗ್ರೆಸ್ ಪಕ್ಷದ ಕೊಡುಗೆಗಳು, ಗ್ಯಾರಂಟಿ ಸ್ಕೀಂ ಗಳು ಮತ್ತು ಬಿಜೆಪಿಯ ವೈಫಲ್ಯಗಳ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಸ್.ಲೋಣಿ ನನ್ನನ್ನು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಎಂ.ಬಿ.ಪಾಟೀಲರು ಆದೇಶ ಪ್ರತಿ ನೀಡಿರುವುದು ಅತೀವ ಸಂತೋಷ ಉಂಟು ಮಾಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸಂಘಟನೆಗಾಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಎಲ್ಲ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ನನ್ನ ಬೆಂಬಲಿಗರನ್ನು ಪಕ್ಷಕ್ಕೆ ಕರೆ ತರುತ್ತೇನೆ. ಅಲ್ಲದೇ, ಎರಡೂ ಜಿಲ್ಲೆಗಳ ಎಲ್ಲ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು. ಈ ಮುಂಚೆ…

Read More

ವಿಜಯಪುರ: ಆರ್ಥಿಕವಾಗಿ ಹಿಂದುಳಿದ ಮತ್ತು ಸರ್ವ ಜನರೊಂದಿಗೆ ಸಹಬಾಳ್ವೆ ನಡೆಸುತ್ತಿರುವ ಎಲ್ಲ ಸ್ವಾಭಿಮಾನಿ ಜನರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದೇನೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದ್ದಾರೆ. ನಗರದಲ್ಲಿ ನಡೆದ ನಾನಾ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಾಯಕ ನಿಷ್ಠೆಯಿಂದ ಕೆಲಸ ಮಾಡುತ್ತ ಇತರ ಸಮುದಾಯಗಳೊಂದಿಗೆ ಸಹಬಾಳ್ವೆ ನಡೆಸುತ್ತಿರುವವರು ಯಾವುದೇ ಹಿಂಜರಿಕೆ ಇಲ್ಲದೆ ನಿರಾತಂಕವಾಗಿ ತಮ್ಮ ಕಾಯಕ ಮುಂದುವರೆಸಬೇಕು ಎಂದು ಹೇಳಿದರು. ಹಿಂದುಳಿದವರು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಆರ್ಥಿಕವಾಗಿ ಸ್ವಾವಲಂಭಿಯಾಗಬೇಕು. ಈ ಹಿಂದಿನಿಂದಲೂ ನಮ್ಮ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಈ ಜನರ ಬಗ್ಗೆ ನಮಗೂ ಹೆಮ್ಮೆ ಮತ್ತು ಕಾಳಜಿ ಇದೆ ಎಂದು ಅವರು ಹೇಳಿದರು. ಕುಡಿಯಲು ನೀರಿಗಾಗಿ ಪರದಾಡುತ್ತಿದ್ದ ರೈತರ ಭೂಮಿಗೆ ನೀರೊದಗಿಸುವ ಮೂಲಕ ಮುಂದಿನ ಪೀಳಿಗೆಗೂ ನೆಮ್ಮದಿಯಿಂದ ಬದುಕು ಸಾಗಿಸಲು ಶಾಶ್ವತ ಪರಿಹಾರ ಒದಗಿಸಿದ್ದೇವೆ. ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತೆ ಮಾಡಿದ್ದೇವೆ. ರೈತರು ವೈಜ್ಞಾನಿಕವಾಗಿ ಕೃಷಿ ಮಾಡಲು ಮಾಹಿತಿ…

Read More

ಎಂ.ಬಿ.ಪಾಟೀಲರು ಮಾಡಿದ ನೀರಾವರಿ ಕೆಲಸಗಳಿಂದ ಸಂತಸಗೊಂಡ ರೈತ ಶೇಖಪ್ಪ ವಿಜಯಪುರ: ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಮಾಡಿರುವ ನೀರಾವರಿ ಕೆಲಸಗಳಿಂದ ಸಂತಸನಾದ ರೈತರೊಬ್ಬರು ಎಂ. ಬಿ. ಪಾಟೀಲರ ಚುನಾವಣೆ ಖರ್ಚಿಗೆ ಕಾಣಿಕೆಯಾಗಿ ರೂ.50 ಸಾವಿರ ಚೆಕ್‍ನ್ನು ನೀಡಿ ಅಭಿಮಾನ ತೋರಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಬೆಳಿಗ್ಗೆ ಎಂ.ಬಿ.ಪಾಟೀಲರ ನಿವಾಸಕ್ಕೆ ರೈತ ಸ್ನೇಹಿತರೊಂದಿಗೆ ಆಗಮಿಸಿದ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್.ಎಚ್. ಗ್ರಾಮದ ರೈತ ಶೇಖಪ್ಪ ಚಿಕ್ಕಗಲಗಲಿ ಚೆಕ್ ನೀಡಿ ಸಂಭ್ರಮಿಸಿದರು. ಬಳಿಕ ಮಾತನಾಡಿದ ಶೇಖಪ್ಪ ಚಿಕ್ಕಗಲಗಲಿ, ನಮ್ಮ ಭಾಗದಲ್ಲಿ ಈ ಮುಂಚೆ ಕುಡಿಯುವ ನೀರಿಗೆ ಹಾಹಾಕಾರವಿತ್ತು. ಕೆರೆಗಳಿಗೂ ನೀರು ಸಿಗುತ್ತಿರಲಿಲ್ಲ. ಎಂ. ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾದ ನಂತರ ನಮ್ಮ ಭಾಗದಲ್ಲಿ ಸಂಪೂರ್ಣ ನೀರಾವರಿ ಮಾಡಿ ಎಲ್ಲವನ್ನು ಸಮೃದ್ಧಿ ಮಾಡಿದ್ದಾರೆ. ಈ ಮುಂಚೆ ಪ್ರತಿ ಎಕರೆ ಭೂಮಿಯ ಬೆಲೆ ರೂ.10 ಸಾವಿರ ಮಾತ್ರ ಇತ್ತು. ಈಗ ಪ್ರತಿ ಎಕರೆಗೆ ಕನಿಷ್ಠ ರೂ.50 ಸಾವಿರರಂತೆ ಬೆಳೆ ಬೆಳೆಯುತ್ತಿದ್ದೇವೆ. ಎಲ್ಲ…

Read More

ಎಂ.ಪಿ.ನಾಡಗೌಡ ನಾಮಪತ್ರ ಸಲ್ಲಿಕೆ | ರೋಡ್ ಶೋ | ಅಪಾರ ಜನಸ್ತೋಮ ಮುದ್ದೇಬಿಹಾಳ : ಈ ಬಾರಿ ಮತಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಜೋರಾಗಿಯೇ ಬೀಸಿದೆ. ನನ್ನ ನಿರೀಕ್ಷೆಗಿಂತ ಎರಡು ಮೂರು ಪಟ್ಟು ಹೆಚ್ಚಿನ ಜನ ಇಂದು ನನಗೆ ಬೆಂಬಲಿಸಿದ್ದಾರೆ. ಇಷ್ಟೊಂದು ಜನ ಕಾಂಗ್ರೇಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟಿದ್ದು ನೋಡಿದರೆ ಈ ಬಾರಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ವಿಜಯೋತ್ಸವ ಆಚರಿಸುವುದರಲ್ಲಿ ಸಂಶಯವೇ ಇಲ್ಲ ಎಂದು ಮಾಜಿ ಸಚಿವ, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಮ್ಮ ಅಪಾರ ಅಭಿಮಾನಿಗಳ ಬೆಂಬಲದೊAದಿಗೆ ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರನ್ನುದ್ದೇಶಿಸಿ ಅವರು ಮಾತನಾಡಿದರು.ನನ್ನ ಜೀವನದಲ್ಲಿಯೇ ಇಷ್ಟೊಂದು ಅಪಾರÀ ಸಂಖ್ಯೆಯಲ್ಲಿ ಜನರು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲವನ್ನು ನೀಡಿರುವುದನ್ನು ನೋಡಿರಲಿಲ್ಲ. ಸ್ವಯಂಪ್ರೇರಿತರಾಗಿ 25 ಸಾವಿರಕ್ಕೂ ಅಧಿಕ ಜನ ಭಾಗಿಯಾಗಿದ್ದಾರೆ. ನನ್ನ ಮೇಲೆ ಮತ್ತು ಕಾಂಗ್ರೇಸ್ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಯಾವತ್ತೂ ಧಕ್ಕೆ ಬರದ ಹಾಗೆ ಜನತೆಯ ಸೇವೆ ಮಾಡುತ್ತೇನೆ. ಜನರನ್ನು…

Read More

ವಿಜಯಪುರ: ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾಗಿ, ನಿಷ್ಕಾಳಜಿತನ ತೋರಿ ಕರ್ತವ್ಯಲೋಪವೆಸಗಿರುವ ಆಲಮೇಲದ ಕಾಡಾ ಕಚೇರಿಯ ಲೆಕ್ಕ ಸಹಾಯಕ ರಮೇಶ ಬಗಲಿ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳನ್ವಯ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶಿಸಿದ್ದಾರೆ.ಅಮಾನತ್ತಾದ ಲೆಕ್ಕ ಸಹಾಯಕ ಮೇಲಾಧಿಕಾರಿಗಳ ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಡುವಂತಿಲ್ಲ ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮ ೯೮ರನ್ವಯ ಜೀವನಾಂಶ ಭತ್ಯೆ ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Read More

ವಿಜಯಪುರ: ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ರಾಹುಲ್ ಶಿಂಧೆ ಅವರ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.ಈ ನಿಟ್ಟಿನಲ್ಲಿ ಮಂಗಳವಾರ ತಾಳಿಕೋಟಿ ತಾಲ್ಲೂಕಿನ ಅಸ್ಕಿ ಗ್ರಾಮ ಪಂಚಾಯತಿಯ ಅಸ್ಕಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ, ಕೂಲಿಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆರೆ ಅಂಗಳದಲ್ಲಿ ಮತದಾನ ಜಾಗೃತಿ ಸಂಬAಧಿಸಿದ “ನನ್ನ ಮತ ನನ್ನ ಹಕ್ಕು” ಘೋಷಣೆಯೊಂದಿಗೆ ಕೂಲಿಕಾರ್ಮಿಕರಿಗೆ “ಮತದಾನ ಪ್ರತಿಜ್ಞಾವಿಧಿ” ಬೋಧಿಸಲಾಯಿತು.ಈ ಸಂದರ್ಭ ಪಂಚಾಯತ ಅಭಿವೃದ್ಧಿ ಅಧಿಕಾರಿ ನಿಂಗಣ್ಣ ದೊಡಮನಿ ಅವರು ಮಾತನಾಡಿ, ಮೇ ೧೦ರಂದು ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ನಿಮ್ಮ ಮತ ಅಮೂಲ್ಯವಾಗಿದ್ದು, ಯಾರೂ ಸಹ ಮತದಾನದಿಂದ ಹೊತಗುಳಿಯಬಾರದು.ತಮ್ಮ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಮಲಕಪ್ಪ ಬಿ.ಎಮ್, ಪಂಚಾಯತ ಕಾರ್ಯದರ್ಶಿ ಮಲ್ಲಿಕಾರ್ಜುನ, ಗ್ರಾಮ ಪಂಚಾಯತಿಯ ಸಿಬ್ಬಂದಿಗಳು,…

Read More