ಎಂ.ಪಿ.ನಾಡಗೌಡ ನಾಮಪತ್ರ ಸಲ್ಲಿಕೆ | ರೋಡ್ ಶೋ | ಅಪಾರ ಜನಸ್ತೋಮ
ಮುದ್ದೇಬಿಹಾಳ : ಈ ಬಾರಿ ಮತಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಜೋರಾಗಿಯೇ ಬೀಸಿದೆ. ನನ್ನ ನಿರೀಕ್ಷೆಗಿಂತ ಎರಡು ಮೂರು ಪಟ್ಟು ಹೆಚ್ಚಿನ ಜನ ಇಂದು ನನಗೆ ಬೆಂಬಲಿಸಿದ್ದಾರೆ. ಇಷ್ಟೊಂದು ಜನ ಕಾಂಗ್ರೇಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟಿದ್ದು ನೋಡಿದರೆ ಈ ಬಾರಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ವಿಜಯೋತ್ಸವ ಆಚರಿಸುವುದರಲ್ಲಿ ಸಂಶಯವೇ ಇಲ್ಲ ಎಂದು ಮಾಜಿ ಸಚಿವ, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಮ್ಮ ಅಪಾರ ಅಭಿಮಾನಿಗಳ ಬೆಂಬಲದೊAದಿಗೆ ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರನ್ನುದ್ದೇಶಿಸಿ ಅವರು ಮಾತನಾಡಿದರು.
ನನ್ನ ಜೀವನದಲ್ಲಿಯೇ ಇಷ್ಟೊಂದು ಅಪಾರÀ ಸಂಖ್ಯೆಯಲ್ಲಿ ಜನರು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲವನ್ನು ನೀಡಿರುವುದನ್ನು ನೋಡಿರಲಿಲ್ಲ. ಸ್ವಯಂಪ್ರೇರಿತರಾಗಿ 25 ಸಾವಿರಕ್ಕೂ ಅಧಿಕ ಜನ ಭಾಗಿಯಾಗಿದ್ದಾರೆ. ನನ್ನ ಮೇಲೆ ಮತ್ತು ಕಾಂಗ್ರೇಸ್ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಯಾವತ್ತೂ ಧಕ್ಕೆ ಬರದ ಹಾಗೆ ಜನತೆಯ ಸೇವೆ ಮಾಡುತ್ತೇನೆ. ಜನರನ್ನು ದಾರಿ ತಪ್ಪಿಸುವ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಲು ಮತಕ್ಷೇತ್ರದ ಜನತೆ ಮುಂದಾಗಬೇಕು ಎಂದರು.
ಸಹಸ್ರಾರು ಜನರು, ಕಾರ್ಯಕರ್ತರು ಹಾಗೂ ಹಿರಿಯ ಮುಖಂಡರ ನೇತೃತ್ವದಲ್ಲಿ ಕುಟುಂಬ ಸಮೇತ ಬ್ರಹತ್ ಮೆರವಣಿಗೆ, ರೋಡ ಶೋ ನಡೆಸುವ ಮೂಲಕ ತಹಶೀಲ್ದಾರ ಕಾರ್ಯಾಲಯಕ್ಕೆ ನಾಡಗೌಡರು ತೆರಳಿದರು.
ಈ ವೇಳೆ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಧರ್ಮಪತ್ನಿ ಸುವರ್ಣಾ ನಾಡಗೌಡ, ಪುತ್ರಿ ಪಲ್ಲವಿ ನಾಡಗೌಡ, ಅಳಿಯ ಆದಿತ್ಯ ಶೆಟ್ಟಿ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ರಾಯನಗೌಡ ತಾತರಡ್ಡಿ, ಗೋವಾ ಕನ್ನಡ ಹೋರಾಟ ಸಮೀತಿಯ ಅಧ್ಯಕ್ಷ ಸಿದ್ದಣ್ಣ ಮೇಟಿ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಗಫೂರಸಾಬ ಮಕಾಂದಾರ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್, ವೀರಶೈವ ಲಿಂಗಾಯತ್ ಸಮಾಜದ ಅಧ್ಯಕ್ಷ ಪ್ರಭುರಾಜು ಕಲಬುರ್ಗಿ, ಸುಧೀರ ನಾವದಗಿ, ಗಣ್ಯ ಉದ್ಯಮಿ ಶರಣು ಸಜ್ಜನ, ಸಂಗು ಬಿರಾದಾರ, ಮಲ್ಲಿಕಾರ್ಜುನ ನಾಡಗೌಡ, ಮಹೆಬೂಬ ಗೊಳಸಂಗಿ, ಕಾಮರಾಜ ಬಿರಾದಾರ, ಪಿಂಟು ಸಾಲಿಮನಿ, ಶ್ರೀಕಾಂತ ಚಲವಾದಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಪ್ರಶಾಂತ ಕಾಳೆ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಮಹಾಂತೇಶ ಬೂದಿಹಾಳಮಠ, ತಾಲೂಕಾ ಕಾಂಗ್ರೇಸ್ ಮಹಿಳಾ ಅಧ್ಯಕ್ಷೆ ಶೋಭಾ ಶಳ್ಳಗಿ, ಸಾಧನಾ ಮಹಿಳಾ ಒಕ್ಕೂಟದ ಗಿರಿಜಾ ಕಡಿ, ಸರಸ್ವತಿ ಪೀರಾಪೂರ, ನೀಲಮ್ಮ ಮೇಟಿ, ಸುಜಾತಾ ಸಿಂಧೆ, ಯುವ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ ರಫೀಕ ಶಿರೋಳ, ಸೇರಿದಂತೆ ಹಲವರು ಇದ್ದರು.
ಘಟಾನುಘಟಿ ನಾಯಕರ ಸಾಥ್
ಪ್ರಮುಖ ನಾಯಕರಾದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಬಾಲಾಜಿ ಶರ‍್ಸ್ ನ ಎಂ.ಡಿ.ವೆAಕಟೇಶಗೌಡ ಪಾಟೀಲ, ಹಾಲಿ ಶಾಸಕ ನಡಹಳ್ಳಿ ಅವರ ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಪಂಚಮಸಾಲಿ ಸಮಾಜದ ಮುಖಂಡ ಶಂಕರಗೌಡ ಹಿರೇಗೌಡರ, ನಿವೃತ್ತ ಡಿವಾಯ್‌ಎಸ್‌ಪಿ ಎಸ್.ಎಸ್.ಹುಲ್ಲೂರ ತೆರೆದ ವಾಹನದಲ್ಲಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು.
ದೇಶದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿAದ ಜನರು ನೆಮ್ಮದಿಯಿಂದ ಜೀವನ ಮಾಡುತ್ತಿಲ್ಲ. ಪೇಟ್ರೋಲ್, ಡಿಸೇಲ್, ಅಡುಗೆ ಎಣ್ಣೆ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಡವರು ಹೇಗೆ ಜೀವನ ನಡೆಸಬೇಕು ಎನ್ನುವ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಇಂತಹ ಜನ ವಿರೋಧಿ, ರೈತ ವಿರೋಧಿ ಸರಕಾರವನ್ನು ಕಿತ್ತೊಗೆದು ಬಡವರ, ದೀನ ದಲಿತರ ಪರವಾದ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸುವ ಮೂಲಕ, ಕಾಂಗ್ರೇಸ್ ಸರಕಾರವನ್ನು ಅಧಿಕಾರಕ್ಕೆ ತರಲು ಜನತೆ ಈಗಾಗಲೇ ತೀರ್ಮಾನಿಸಿದ್ದಾರೆ.
-ಸಿ.ಎಸ್.ನಾಡಗೌಡ ಅಪ್ಪಾಜಿ. ಮಾಜಿ ಸಚಿವರು ಹಾಗೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ.