5೦ ಸಾವಿರ ಮತಗಳ ಅಂತರದಿಂದ ಗೆಲ್ಲುವ ಭರವಸೆ :ಯತ್ನಾಳ
ವಿಜಯಪುರ: ಶಕ್ತಿ ಪ್ರದರ್ಶನ ಹೆಸರಲ್ಲಿ ಜನ ಸೇರಿಸದೆ, ಅನಗತ್ಯವಾಗಿ ಖರ್ಚು ಮಾಡದೆ, ಅತ್ಯಂತ ಸರಳ ರೀತಿಯಲ್ಲಿ, ನಗರ ವಿಧಾನಸಭೆ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಬುಧವಾರ ನಾಮಪತ್ರ ಸಲ್ಲಿಸಿದರು.
ತಮ್ಮ ಪ್ರಚಾರ ಕಾರ್ಯಾಲಯ ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರೆ, ಮೊದಲ ಸಲ ಸುಂದರೇಶ್ವರ ದೇವಸ್ಥಾನ ಹಾಗೂ ಕಪಿಲೇಶ್ವರ ದೇವಸ್ಥಾನ ಹಾಗೂ ಸರ್ವಸಿದ್ದಿ ವಿನಾಯಕ ಮಂದಿರದಲ್ಲಿ ಪೂಜೆ ಸಲ್ಲಿಸಿ, ನೇರವಾಗಿ ಎಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಆಡಂಬರ ಇಲ್ಲದೇ, ಅನಗತ್ಯ ಖರ್ಚು ಮಾಡಬಾರದೆಂದು, ಅತ್ಯಂತ ಸರಳ ರೀತಿಯಲ್ಲಿ ಎರಡು ನಾಮಪತ್ರ ಸಲ್ಲಿಸಿದ್ದೇನೆ. ಹಿಂದಿನ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮನೆ ಮನೆಗೆ ತೆರಳಿ ಮತ ಯಾಚಿಸಲಾಗುವುದು. ನಗರ ಜನತೆಯ ಉತ್ಸಾಹ ನೋಡಿದರೆ, ಕನಿಷ್ಠ 50 ಸಾವಿರ ಮತಗಳಿಂದ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ನೆಚ್ಚಿನ ನಾಯಕನ ಮಾದರಿ ಕಾರ್ಯಕ್ಕೆ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಪ್ರಜ್ಞಾವಂತ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ಮಾಜಿ ಸದಸ್ಯ ಪಾಂಡು ಸಾಹುಕಾರ ದೊಡ್ಡಮನಿ, ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ, ವಕೀಲ ತುಳಸಿರಾಮ ಸೂರ್ಯವಂಶಿ ಇದ್ದರು.