Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ಅನಾಫೆಲಿಸ್ ಎನ್ನುವ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ರೋಗ ಹರಡುತ್ತದೆ. ನಿಂತ ನೀರು ಸೊಳ್ಳೆಗಳ ತವರಿನಂತಿದ್ದು, ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಿ, ಮಲೇರಿಯಾ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇಲಾಖೆಯ ಮಾರ್ಗದರ್ಶನದಲ್ಲಿ ಮುಂಜಾಗೃತ ವಹಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ರಾಜೇಶ ಕೋಳೆಕರ ಹೇಳಿದರು.ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಲೇರಿಯಾ ತೀವ್ರವಾದ, ಕೆಲವೊಮ್ಮೆ ಮಾರಕವಾಗಬಹುದು. ಪ್ಲಾಸ್ಮೋಡಿಯಂ ಪರಾವಲಂಬಿಗಳು ಸಂಕೀರ್ಣ ಜೀವನ ಚಕ್ರವನ್ನು ಪಡೆದು, ಆವರ್ತಕ ಜ್ವರಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ರೋಗಿಗಳು ಚಿಕಿತ್ಸೆಯ ನಂತರ ಮಲೇರಿಯಾ ಲಕ್ಷಣಗಳಿಂದ ಬೇಗ ಚೇತರಿಸಿಕೊಳ್ಳುತ್ತಾರೆ. ಆದರೆ, ಚಿಕಿತ್ಸೆ ವಿಳಂಬವಾದರೆ ತೀವ್ರ ರಕ್ತಹೀನತೆ, ಸೆರೆಬ್ರಲ್, ಕೋಮಾ ಅಥವಾ ಸಾವೂ ಸಂಭವವಿದೆ ಎಂದು ತಿಳಿಸಿದರು.ತಾಲೂಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಮಾತನಾಡಿ, ಜ್ವರದ ಲಕ್ಷಣಗಳಿದ್ದರೆ ರಕ್ತ ಪರೀಕ್ಷೆ ಮಾಡಿಸಿ, ಸಂಪೂರ್ಣ ಚಿಕಿತ್ಸೆ ಪಡೆಯಿರಿ. ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸೊಳ್ಳೆ ಪರದೆ…

Read More

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ರಾಜ್ಯದ ಒಂದೂವರೆ ಲಕ್ಷ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಸದಸ್ಯತ್ವ ಹೊಂದಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ಕೆಎಸ್ ಪಿಎಸ್ ಟಿಎ ) ೨೦೨೬-೩೧ರ ಅವಧಿಯ ಚುನಾವಣೆಗೆ ಸಂಬಂಧಿಸಿದ ಪರಿಷ್ಕೃತ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾಧಿಕಾರಿಗಳು ಮಂಗಳವಾರ ಪ್ರಕಟಿಸಿದ್ದಾರೆ.ಈ ಹಿಂದೆ ಏಪ್ರಿಲ್ ೧ಕ್ಕೆ ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಹೈಕೋರ್ಟ್ ಏಕಸದಸ್ಯ ಪೀಠದ ತಡೆಯಾಜ್ಞೆಯಿಂದಾಗಿ ಏ.೧೮ರಂದು ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಗೌರವಾನ್ವಿತಮುಖ್ಯ ನ್ಯಾಯಮೂರ್ತಿಗಳಿದ್ದ ಹೈಕೋರ್ಟ್ ಪ್ರಧಾನ ವಿಭಾಗೀಯ ಪೀಠ ಮಂಗಳವಾರ ತಡೆಯಾಜ್ಞೆ ತೆರವುಗೊಳಿಸಿತ್ತು. ಇದರಿಂದ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದ್ದ ಹಂತದಿಂದಲೇ ಚುನಾವಣೆ ಪ್ರಕ್ರಿಯೆ ಪುನರಾರಂಭಗೊಂಡಿದೆ.*ತಾಲ್ಲೂಕು/ ಯೋಜನಾ ಸಂಘಗಳ ಕಾರ್ಯಕಾರಿ ಸಮಿತಿಗೆ ಚುನಾವಣೆ;ತಾಲ್ಲೂಕು/ ಯೋಜನಾ ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಸ್ಸಾತಿ, ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪ್ರಕಟಣೆವರೆಗೂ ಚುನಾವಣಾ ಪ್ರಕ್ರಿಯೆಗಳು ಮುಗಿದು, ನಿಗದಿತ ಸ್ಥಾನದಷ್ಟೇ ಅಭ್ಯರ್ಥಿಗಳು ಚುನಾಚಣೆ ಕಣದಲ್ಲಿ ಉಳಿದರೆ ಅವಿರೋಧ ಆಯ್ಕೆಯ ಫಲಿತಾಂಶ ಘೋಷಣೆಯಾಗಿತ್ತು. ನಿಗದಿತ ಸ್ಥಾನಕ್ಕಿಂತ ಹೆಚ್ಚು…

Read More

ಲೇಖನ- ಬಸಲಿಂಗಯ್ಯ ಹಿರೇಮಠಶಿಕ್ಷಕರುಸಿಂದಗಿಮೊ: 9972658355 ಉದಯರಶ್ಮಿ ದಿನಪತ್ರಿಕೆ ಬಸವಣ್ಣನವರ ತತ್ವಗಳು ಮತ್ತು ಆದರ್ಶಗಳು ಕೇವಲ 12ನೇ ಶತಮಾನಕ್ಕೆ ಸೀಮಿತವಾಗದೆ, ಇಂದಿನ ಆಧುನಿಕ ಸಮಾಜದ ಜ್ವಲಂತ ಸಮಸ್ಯೆಗಳಿಗೆ ರಾಮಬಾಣದಂತಿವೆ. ಪ್ರಸ್ತುತ ಸಮಾಜ ಎದುರಿಸುತ್ತಿರುವ ಅಸಮಾನತೆ, ಭ್ರಷ್ಟಾಚಾರ ಮತ್ತು ಮಾನಸಿಕ ಅಶಾಂತಿಗೆ ಬಸವಣ್ಣನವರ ‘ವಚನ ಸಂಸ್ಕೃತಿ’ ಒಂದು ದಾರಿದೀಪ.​​ಇಂದಿಗೂ ಸಮಾಜದಲ್ಲಿ ಜಾತಿ ಮತ್ತು ವರ್ಗದ ಹೆಸರಿನಲ್ಲಿ ತಾರತಮ್ಯಗಳು ಜೀವಂತವಾಗಿವೆ. ಬಸವಣ್ಣನವರು ಅಂದೇ “ಇವನಾರವ ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ” ಎಂದು ಸಾರುವ ಮೂಲಕ ಸಾರ್ವತ್ರಿಕ ಭ್ರಾತೃತ್ವದ ಸಂದೇಶ ನೀಡಿದ್ದರು. ಮೇಲು-ಕೀಳು ಎಂಬ ಭೇದಭಾವವಿಲ್ಲದ ‘ಅನುಭವ ಮಂಟಪ’ವು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯದಂತಿದೆ.​ಇಂದಿನ ಕಾಲದಲ್ಲಿ ನಿರುದ್ಯೋಗ ಮತ್ತು ಕೆಲಸದ ಬಗ್ಗೆ ಅಸಡ್ಡೆ ಹೆಚ್ಚಾಗುತ್ತಿದೆ. ಬಸವಣ್ಣನವರು “ಕಾಯಕವೇ ಕೈಲಾಸ” ಎಂಬ ಸಿದ್ಧಾಂತದ ಮೂಲಕ ಪ್ರತಿಯೊಬ್ಬರೂ ತಮ್ಮ ಶ್ರಮದಿಂದಲೇ ಜೀವನ ನಡೆಸಬೇಕೆಂದು ಬೋಧಿಸಿದರು. ಯಾವುದೇ ಕೆಲಸವು ಕೀಳಲ್ಲ, ಅದು ಪ್ರಾಮಾಣಿಕವಾಗಿದ್ದರೆ ಅದೇ ದೈವತ್ವಕ್ಕೆ ಸಮಾನ ಎಂಬ ಅವರ ಮಾತುಗಳು ಇಂದಿನ ಯುವಜನತೆಗೆ ಪ್ರೇರಣಾದಾಯಕ. ​​ಸಂಪತ್ತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಕಾಯಚಿಕಿತ್ಸೆ ವಿಭಾಗದ ವತಿಯಿಂದ ಮೇ 4 ರಿಂದ ಮೇ 9ರ ವರೆಗೆ ಸೋಮವಾರದಿಂದ ಶನಿವಾರದ ವರೆಗೆ ಹಿರಿಯ ನಾಗರಿಕರಲ್ಲಿ ಕಂಡುಬರುವ ವಯೋಸಹಜವಾದ ನೆನಪಿನ ಶಕ್ತಿ ಸಮಸ್ಯೆ ಕುರಿತು ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಡೆಯಲಿದೆ.ಈ ಶಿಬಿರದಲ್ಲಿ ನೆನೆಪಿನ ಶಕ್ತಿ ಕ್ಷೀಣಿಸುವಿಕೆ, ಆಲೋಚನೆ ಮತ್ತು ನಿರ್ಧಾರದ ಸಮಸ್ಯೆ, ಸ್ಥಳ ಮತ್ತು ಸಮಯದ ಅರಿವು ಕಡಿಮೆಯಾಗುವುದು, ವರ್ತನೆ ಮತ್ತು ಮನಸ್ಥಿತಿಯಲ್ಲಿನ ಬದಲಾವಣೆ ಸಮಸ್ಯೆ ಎದುರಿಸುತ್ತಿರುವ 60 ರಿಂದ 75 ವರ್ಷದೊಳಗಿನ ಹಿರಿಯ ನಾಗರಿಕರು ಚಿಕಿತ್ಸೆ ಪಡೆಯಬಹುದಾಗಿದೆ.ಇಂಥ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಮೊಬೈಲ್ ಸಂಖ್ಯೆ- 9513397413 ಸಂಪರ್ಕಿಸಬಹುದಾಗಿದೆ.

Read More

ವಿಜಯಪುರದಲ್ಲಿ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ | ಈ ಪ್ರಕರಣವನ್ನು ಎಸ್.ಐ.ಟಿ. ತಂಡ ರಚಿಸಿ ತನಿಖೆ ನಡೆಸಬೇಕೆಂದು ಒತ್ತಾಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಳೆದ 23/24. ಏಪ್ರಿಲ್ ರಂದು ನಡೆದ ಸಿಇಟಿ ಪರೀಕ್ಷೆಯಲ್ಲಿ ಬೆಂಗಳೂರಿನ ಮಡಿವಾಳದ ಕೃಪಾನಿಧಿ. ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಿದ್ದ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರವನ್ನು ಕಾಲೇಜಿನ ಆಡಳಿತ ಮಂಡಳಿ ತೆಗೆಸಿದ್ದನ್ನು ಖಂಡಿಸಿ ಈ ಪ್ರಕರಣವನ್ನು ಎಸ್.ಐ.ಟಿ. ತಂಡ ರಚಿಸಿ ತನಿಖೆ ನಡೆಸಬೇಕೆಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ವಿಜಯಪುರ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಮುಕುಂದ ಕುಲಕರ್ಣಿಮಾತನಾಡಿ, ಜನಿವಾರ ಧರಿಸುವುದು ಬ್ರಾಹ್ಮಣ ಸಮಾಜದ ಸಾಂಪ್ರದಾಯಿಕ ಗುರುತು. ಜನಿವಾರ ನಮ್ಮ ಸಮಾಜದ ಹೆಮ್ಮೆ. ನಮ್ಮ ಸಮಾಜದ ಗರ್ವದ ಪ್ರತೀಕವಾದ ಜನಿವಾರವನ್ನು ತೆಗೆಸಿದ್ದು ಆಘಾತಕಾರಿ. ಜನಿವಾರದಿಂದ ಯಾವ ರೀತಿಯಾಗಿ ಪರೀಕ್ಷೆಯಲ್ಲಿ ನಕಲು ಮಾಡಲು ಸಾಧ್ಯ? ಅನವಶ್ಯಕವಾಗಿ ವಿದ್ಯಾರ್ಥಿಯ ಜನಿವಾರ ತೆಗೆಸಿ ನಮ್ಮ ಸಮಾಜಕ್ಕೆ ಅಪಮಾನಿಸಿದ್ದುಖಂಡನಾರ್ಹ. ಕಳೆದ ವರ್ಷವೂ ಸಹಿತ ಇದೇ ರೀತಿಯಾಗಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: 2026-27ನೇ ಶೈಕ್ಷಣಿಕ ಸಾಲಿಗೆ ಗ್ರಾಮೀಣ ವಿದ್ಯಾರ್ಥಿನಿಯರಿಗಾಗಿ ನಗರದಲ್ಲಿ ಉಚಿತ ವಸತಿ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುದಾನದಲ್ಲಿ ವಿಜಯಪುರದ ಶ್ರೀ ಶರಣ ಜ್ಯೋತಿ ವಿದ್ಯಾ ಸಂಸ್ಥೆಯ ಗ್ರಾಮೀಣ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ.ಪದವಿ ಪೂರ್ವ ಹಾಗೂ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮಾತ್ರ ಇಲ್ಲಿ ಅವಕಾಶವಿದೆ.ಮೇ.೪ ರಿಂದ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಜೂನ್ ೧೦ ಕೊನೆಯ ದಿನವಾಗಿದೆ.ಅರ್ಜಿಗಳನ್ನು ಶ್ರೀ ಶರಣ ಜ್ಯೋತಿ ವಿದ್ಯಾ ಸಂಸ್ಥೆ, ಬಿಡಿಎ ಕ್ರಾಸ್, ಮನಖಾದ್ರಿ ದರ್ಗಾ ಹತ್ತಿರ, ಕೆ.ಕೆ. ಕಾಲೋನಿ, ವಿಜಯಪುರ ಇಲ್ಲಿ ಪಡೆಯಬಹುದು ಎಂದು ವಸತಿ ನಿಲಯ ಅಧಿಕ್ಷಕಿ ವಿಜಯಲಕ್ಷ್ಮಿ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆಸಕ್ತ ವಿದ್ಯಾರ್ಥಿನಿಯರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8660626216 ಮತ್ತು 8123478500 ಸಂಖ್ಯೆಗಳಿಗೆ ಸಂಪರ್ಕಿಸಬಹುದು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಹಡಪದ ನೌಕರರ ಸಂಘ ಬೆಂಗಳೂರು. ವಿಜಯಪುರ ಜಿಲ್ಲಾ ಘಟಕದ ನೇತೃತ್ವದಲ್ಲಿ ೨೦೨೫-೨೬ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. ೮೦ ರ ಮೇಲೆ ಅಂಕ ಗಳಿಸಿದ ಹಡಪದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ಮಾಡಲು ಕರ್ನಾಟಕ ರಾಜ್ಯ ಹಡಪದ ನೌಕರರ ಸಂಘ ವಿಜಯಪುರ ಜಿಲ್ಲಾ ಘಟಕ ನಿರ್ಧರಿಸಿದೆ.ಈ ನಿಟ್ಟಿನಲ್ಲಿ ಶೇ. ೮೦ ರ ಮೇಲೆ ಅಂಕ ಗಳಿಸಿದ ಮಕ್ಕಳು ಅರ್ಜಿ ನಮೂನೆ ಭರ್ತಿಮಾಡಿ, ಅಂಕ ಪಟ್ಟಿ (ಮಾರ್ಕ್ಸ್ ಕಾರ್ಡ್), ಆಧಾರ ಕಾರ್ಡ್ ಇತ್ತೀಚಿನ ೧ ಭಾವಚಿತ್ರ (ಫೋಟೋ) ಗಳನ್ನು ಶ್ರೀ ಮಂಜುನಾಥ ಕೃಪಾ ನಿವಾಸ, ಏಕತಾ ನಗರ , ಸಾಯಿ ಪಾರ್ಕð ರಸ್ತೆ, ವಿಜಯಪುರ – ೫೮೬೧೦೯ ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ನೌಖರರ ಸಂಘದ ಜಿಲ್ಲಾಧ್ಯಕ್ಷರಿಗೆ ನೇರವಾಗಿ ಮೇ ೨೦ ನೇ ತಾರಿಖಿನೊಳಗಾಗಿ ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ (ಮೊ: ೯೯೮೬೦೯೧೩೭೪) ಸಂಖ್ಯೆಗೆ ಸಂಪರ್ಕಿಸಬೇಕೆಂದು ಕರ್ನಾಟಕ ರಾಜ್ಯ ಹಡಪದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಿಕೋಟಾ ಪಟ್ಟಣದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಐಟಿಐ ಯಲ್ಲಿ ೨೦೨೬-೨೭ನೇ ಸಾಲಿನ ಪ್ರವೇಶಾವಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಎರಡು ವರ್ಷದ ಎಲೆಕ್ಟ್ರಿಷಿಯನ್, ಫಿಟ್ಟರ್, ವೃತ್ತಿಗಳಲ್ಲಿ ಪ್ರವೇಶ ಪಡೆಯಲು ಏ.೨೭ ರಿಂದ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ೦೮-೦೪-೨೦೨೬ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಟಾಟಾ ಯೋಜನೆ ಅಡಿಯಲ್ಲಿ ಮೆಕ್ಯಾನಿಕ್ ಎಲೆಕ್ಟ್ರಿಕ್ ವಾಹನ, ಇಂಡಸ್ಟ್ರಿಯಲ್ ರೊಬೋಟಿಕ್ ಡಿಸೈನಿಂಗ್ ಅಂಡ್ ಮ್ಯಾನುಫ್ಯಾಕ್ಚರಿಂಗ್, ಸಿಎನ್‌ಸಿ ಮ್ಯಾನುಫ್ಯಾಕ್ಚರಿಂಗ್ ಪ್ರೊಸೆಸ್, ಆಟೋನಾಮಸ್, ವರ್ಚುವಲ್ ಅನಾಲಿಸಿಸ್ ಅಂಡ್ ಡಿಸೈನರ್ ಹಾಗೂ ಎಂಜಿನಿಯರಿAಗ್ ಡಿಸೈನ್ ಟೆಕ್ನಿಷಿಯನ್ ಸೇರಿದಂತೆ ಒಟ್ಟು ೦೬ ವೃತ್ತಿಗಳಲ್ಲೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳುwww.emptrg.kar.nic.in ºÁUÀÆ www.detkarnataka.org.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೋ ಸಂಖ್ಯೆ: ೯೪೪೯೫೦೧೬೬೩, ೯೭೩೯೯೮೫೪೨೨, ೯೮೮೬೨೪೭೭೧೮, ೯೯೦೨೧೦೯೭೫೦. ಮೂಲಕ ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗರಿಕಾ ತರಬೇತಿ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಕೊಡುಗೆ ಅವಶ್ಯಕ. ಆ ನಿಟ್ಟಿನಲ್ಲಿ ಇಂತಹ ಎನ್ ಎಸ್ ಎಸ್ ಶಿಬಿರದಲ್ಲಿ ಭಾಗವಹಿಸಿ ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ನಿವೃತ್ತ ಪ್ರಾಚಾರ್ಯೆ ಡಾ. ಆರ್.ಎಂ. ಮಿರ್ಧೆ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಮತ್ತು ೨ ರ ಸಹಯೋಗದಲ್ಲಿ ಏ.೨೭ ರಂದು ದತ್ತು ಗ್ರಾಮ ಅರಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ, ನಿಸ್ವಾರ್ಥ ಸೇವೆ ಮನೋಭಾವ ಅದು ಎನ್ ಎಸ್ ಎಸ್, ಇಂತಹ ಶಿಬಿರದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ನಿಮ್ಮ ವ್ಯಕ್ತಿತ್ವ,ಸ್ವಯಂ ಸೇವಾ ಮನೋಭಾವ ವಿಕಸನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ಈ ವೇಳೆ ಅರಕೇರಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ಜಿ. ಮುಲ್ಲಾ ಮಾತನಾಡಿ,…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದಿಂದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಹರಿಯುವ ಘಟಪ್ರಭಾ ಎಡದಂಡೆ ಕಾಲುವೆಯ ಜಮಖಂಡಿ ಉಪ ಕಾಲುವೆಯ ಸೇತುವೆಗೆ ತಡೆಗೋಡೆ ನಿರ್ಮಿಸಬೇಕೆಂದು ಈ ಭಾಗದ ರೈತರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.ಗ್ರಾಮದಿಂದ ಜಗದಾಳ, ಕುಳಲಿ ಮಾರ್ಗದ ಈ ರಸ್ತೆಯು ೨೦೨೦-೨೧ ನೇ ಸಾಲಿನ ಅಪೆಂಡಿಕ್ಸ -ಇ ಯೋಜನೆಯಡಿಯಲ್ಲಿ ಸುಮಾರು ೬ ಕೋಟಿ ರೂ.ಗಳ ವೆಚ್ಚದಲ್ಲಿ ದ್ವಿಪಥ ಮಾರ್ಗವಾಗಿ ಕಳೆದ ಎರಡು ವರ್ಷಗಳ ಹಿಂದೆ ಅಭಿವೃದ್ದಿ ಪಡಿಸಲಾಗಿದ್ದು, ಈ ರಸ್ತೆಯನ್ನು ಎತ್ತರಿಸಿದ ಕಾರಣ ಸೇತುವೆಯ ತಡೆಗೋಡೆ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ. ಜನ ಜಾನುವಾರುಗಳು ಕಾಲುವೆಗೆ ಬೀಳುವ ಅಪಾಯ ಹೆಚ್ಚಿದ್ದು, ಪ್ರತಿದಿನ ಶಾಲಾ ವಾಹನಗಳು ಹಾಗೂ ಗುಡ್ಡದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನಕ್ಕೆ ಮತ್ತು ಈ ಭಾಗದ ರೈತರು ತಮ್ಮ ಹೊಲ ಗದ್ದೆಗಳಿಗೆ ತೆರಳುವ ಏಕೈಕ ಮಾರ್ಗ ಇದಾಗಿದ್ದರಿಂದ ರಾತ್ರಿವೇಳೆ ಸಂಚರಿಸುವಾಗ ಸೇತುವೆ ಕಾಣದೆ ವಾಹನಗಳು ಕಾಲುವೆಗೆ ಬೀಳುವ ಅಪಾಯವಿದ್ದು, ಅನಾಹುತ ಸಂಭವಿಸುವ ಮುನ್ನ ಈ ಸೇತುವೆಗೆ ತಡೆಗೋಡೆ ನಿರ್ಮಿಸಿ…

Read More