ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಹಡಪದ ನೌಕರರ ಸಂಘ ಬೆಂಗಳೂರು. ವಿಜಯಪುರ ಜಿಲ್ಲಾ ಘಟಕದ ನೇತೃತ್ವದಲ್ಲಿ ೨೦೨೫-೨೬ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. ೮೦ ರ ಮೇಲೆ ಅಂಕ ಗಳಿಸಿದ ಹಡಪದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ಮಾಡಲು ಕರ್ನಾಟಕ ರಾಜ್ಯ ಹಡಪದ ನೌಕರರ ಸಂಘ ವಿಜಯಪುರ ಜಿಲ್ಲಾ ಘಟಕ ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಶೇ. ೮೦ ರ ಮೇಲೆ ಅಂಕ ಗಳಿಸಿದ ಮಕ್ಕಳು ಅರ್ಜಿ ನಮೂನೆ ಭರ್ತಿಮಾಡಿ, ಅಂಕ ಪಟ್ಟಿ (ಮಾರ್ಕ್ಸ್ ಕಾರ್ಡ್), ಆಧಾರ ಕಾರ್ಡ್ ಇತ್ತೀಚಿನ ೧ ಭಾವಚಿತ್ರ (ಫೋಟೋ) ಗಳನ್ನು ಶ್ರೀ ಮಂಜುನಾಥ ಕೃಪಾ ನಿವಾಸ, ಏಕತಾ ನಗರ , ಸಾಯಿ ಪಾರ್ಕð ರಸ್ತೆ, ವಿಜಯಪುರ – ೫೮೬೧೦೯ ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ನೌಖರರ ಸಂಘದ ಜಿಲ್ಲಾಧ್ಯಕ್ಷರಿಗೆ ನೇರವಾಗಿ ಮೇ ೨೦ ನೇ ತಾರಿಖಿನೊಳಗಾಗಿ ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ (ಮೊ: ೯೯೮೬೦೯೧೩೭೪) ಸಂಖ್ಯೆಗೆ ಸಂಪರ್ಕಿಸಬೇಕೆಂದು ಕರ್ನಾಟಕ ರಾಜ್ಯ ಹಡಪದ ನೌಕರರ ಸಂಘದ ಜಿಲ್ಲಾಧ್ಯಕ್ಷ ಶ್ರೀ ದಶರಥ ನಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
