ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗಣೇಶ ಹಬ್ಬವನ್ನು ಇಲಾಖೆಯ ನಿಯಮಾವಳಿ ಪಾಲಿಸಿ, ಶಾಂತಿಯುತವಾಗಿ ಆಚರಿಸುವುದರ ಮೂಲಕ ಪ್ರತಿಯೊಬ್ಬರು ಪಟ್ಟಣದ ಸಾಂಪ್ರದಾಯಿಕ ಸೌಹಾರ್ದತೆಯನ್ನು ಮುಂದುವರೆಸಬೇಕು ಎಂದು ಪಿ.ಎಸ್.ಐ ಸಚೀನ ಆಲಮೇಲಕರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಗಣೇಶ ಹಬ್ಬದ ಪ್ರಯುಕ್ತ ಜರುಗಿದ ಶಾಂತಿಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣ ಹಿಂದಿನಿಂದಲೂ ಶಾಂತಿ, ಸುವ್ಯವಸ್ಥೆ, ಸೌಹಾರ್ದತೆ, ಭಾತೃತ್ವಕ್ಕೆ ಹೆಸರಾಗಿದೆ. ಇಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲ. ಅದಾಗ್ಯೂ ಇಲಾಖೆಯ ನಿರ್ದೇಶನದಂತೆ ಸಭೆ ನಡೆಸಬೇಕಾಗುತ್ತದೆ. ಸಾರ್ವಜನಿಕರ ಹಿತರಕ್ಷಣೆಕ್ಕಾಗಿ ಇಲಾಖೆ ಕೈಗೊಳ್ಳುವ ಅಬ್ಬರದ ಸಂಗೀತಕ್ಕೆ ಕಡಿವಾಣ, ಸಿಸಿ ಕ್ಯಾಮೆರಾ ಅಳವಡಿಕೆ, ಸಾಮೂಹಿಕ ವಿಸರ್ಜನೆ ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಸದಸ್ಯರಾದ ಗುರುರಾಜ್ ಗಡೇದ, ಬಶೀರ್ ಅಹ್ಮದ್ ಬೇಪಾರಿ ಹಾಗೂ ಪ್ರಕಾಶ ಮಲ್ಲಾರಿ, ವಿನೋದ ಪಾಟೀಲ ಅಂಜುಮನ್ ಸಮಿತಿಯ ಮಹಿಬೂಬ್ ಹುಂಡೇಕಾರ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ(ಜಲಕತ್ತಿ), ನಜೀರ್ ಕಲಕೇರಿ, ಶ್ರೀಧರ ನಾಡಗೌಡ, ಮಾಂತೇಶ ವಂದಾಲ, ಶಶಿಧರ ರೂಗಿ, ಮಲ್ಲು ಜಮಾದಾರ, ಕಾಶೀನಾಥ ತಳಕೇರಿ, ರಮೇಶ ಮಶಾನವರ, ರಮೇಶ ದಳವಾಯಿ, ಸಿಬ್ಬಂದಿ ಸಿದ್ದು ಗಂಗನಳ್ಳಿ, ಭೀಮರಾವ್ ನಿಕ್ಕಮ್, ಸಂಜೀವ ಹೊಸಮನಿ, ಬಾಬುಗೌಡ ಆನಂದಿ ಸಹಿತ ಇತರರು ಇದ್ದರು.

