ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಗೋಲಗೇರಿ ಶ್ರೀ ಗೊಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿ ವರಪುತ್ರ ಹೊಳೆಪ್ಪಸಾಹು ಶರಣ ದೇವರಮನಿ ಹಾಗೂ ಸಿದ್ದರಾಮಶರಣ ದೇವರಮನಿ ಅವರ ನೇತೃತ್ವದಲ್ಲಿ ಗೊಲ್ಲಾಳೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿತು.
ಪುರವಂತರ ಸೇವೆ ಹಾಗೂ ಸಕಲ ವಾದ್ಯ ವೈಭವದೊಂದಿಗೆ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಗೊಲ್ಲಾಳೇಶ್ವರನ ಪಲ್ಲಕ್ಕಿ ಮೆರವಣಿಗೆ ಸಂಭ್ರಮದಿಂದ ನಡೆಯಿತು.
ವಿಜಯಪುರ, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಿಂದ ಭಕ್ತರು ಲಿಂಗದಶಮಿ ಉತ್ಸವಕ್ಕೆ ಆಗಮಿಸಿದ್ದರು. ಭಾನುವಾರ ಬೆಳಗ್ಗೆ ೫ ಗಂಟೆಯಿಂದಲೇ ಭಕ್ತರು ಸರದಿಯಲ್ಲಿ ನಿಂತು ಗೊಲ್ಲಾಳೇಶ್ವರನ ದರ್ಶನ ಪಡೆದರು. ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ದೇವಸ್ಥಾನ ಟ್ರಸ್ಟ್ ಕಮಿಟಿ ಕಾರ್ಯಾಧ್ಯಕ್ಷ ರವಿರಾಜ ದೇವರಮನಿ, ಪ್ರಕಾಶ ಸಾಹು ದೇವರಮನಿ, ಪ್ರಶಾಂತ ಮಠಪತಿ, ಬಸವರಾಜ ಹತ್ತಿ, ಸಂಗಮೇಶ ಇಂಡಿ, ಸುದೀಪ ಮಠಪತಿ, ಷಣ್ಮುಖ ಸಾತಿಹಾಳ, ಸುರೇಶ ಗಣಪುರ, ಮುತ್ತಣ್ಣ ಸಾತಿಹಾಳ, ರಾಜಶೇಖರ ಶಾಬಾದಿ ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು.

