ಉದಯರಶ್ಮಿ ದಿನಪತ್ರಿಕೆ
ವಿಜಯಪುರ: 2026-27ನೇ ಶೈಕ್ಷಣಿಕ ಸಾಲಿಗೆ ಗ್ರಾಮೀಣ ವಿದ್ಯಾರ್ಥಿನಿಯರಿಗಾಗಿ ನಗರದಲ್ಲಿ ಉಚಿತ ವಸತಿ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುದಾನದಲ್ಲಿ ವಿಜಯಪುರದ ಶ್ರೀ ಶರಣ ಜ್ಯೋತಿ ವಿದ್ಯಾ ಸಂಸ್ಥೆಯ ಗ್ರಾಮೀಣ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಪದವಿ ಪೂರ್ವ ಹಾಗೂ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮಾತ್ರ ಇಲ್ಲಿ ಅವಕಾಶವಿದೆ.
ಮೇ.೪ ರಿಂದ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಜೂನ್ ೧೦ ಕೊನೆಯ ದಿನವಾಗಿದೆ.
ಅರ್ಜಿಗಳನ್ನು ಶ್ರೀ ಶರಣ ಜ್ಯೋತಿ ವಿದ್ಯಾ ಸಂಸ್ಥೆ, ಬಿಡಿಎ ಕ್ರಾಸ್, ಮನಖಾದ್ರಿ ದರ್ಗಾ ಹತ್ತಿರ, ಕೆ.ಕೆ. ಕಾಲೋನಿ, ವಿಜಯಪುರ ಇಲ್ಲಿ ಪಡೆಯಬಹುದು ಎಂದು ವಸತಿ ನಿಲಯ ಅಧಿಕ್ಷಕಿ ವಿಜಯಲಕ್ಷ್ಮಿ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ವಿದ್ಯಾರ್ಥಿನಿಯರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8660626216 ಮತ್ತು 8123478500 ಸಂಖ್ಯೆಗಳಿಗೆ ಸಂಪರ್ಕಿಸಬಹುದು.

