Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ ಬಂಗಾರ ಆಭರಣಗಳ ತಯಾರಕರು ಹಾಗೂ ಮಾರಾಟಗಾರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಆರೋಪ ಉದಯರಶ್ಮಿ ದಿನಪತ್ರಿಕೆ ಇಂಡಿ: ಕಾನೂನನ್ನು ರಕ್ಷಿಸಬೇಕಾದ ಪೊಲೀಸರೇ ಭಕ್ಷಕರಾಗುತ್ತಿದ್ದಾರೆ, ಸುಖಾ ಸುಮ್ನೆ ಬಂಗಾರ ಅಂಗಡಿಗಳ ಮಾಲೀಕನ ಮೇಲೆ ಸಿಂದಗಿ ಹಾಗೂ ಆಲಮೇಲ ಪೊಲೀಸರು ಹಲ್ಲೆ ನಡೆಸಿ ಯುವಕನ ಹಲ್ಲು ಮುರಿದಿದ್ದಾರೆ. ಮಾಡದ ತಪ್ಪನ್ನು ಮಾಡಿದ್ದೇನೆ ಒಪ್ಪಿಕೋ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಇಂಡಿ ಬಂಗಾರ ಆಭರಣಗಳ ತಯಾರಕರು ಹಾಗೂ ಮಾರಾಟಗಾರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಆರೋಪಿಸಿದರು.ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪೊಲೀಸರು ಮಾಹಿತಿ ನೀಡದೆ ನೋಟಿಸ್ ಜಾರಿಗೊಳಿಸದೆ ತಮ್ಮ ಸಮವಸ್ತ್ರದಲ್ಲಿಯೂ ಬರದೆ ಖಾಸಗಿ ವಾಹನದಲ್ಲಿ ಬಂದು ಒಬ್ಬ ಬಂಗಾರ ಅಂಗಡಿಯ ಮಾಲೀಕನನ್ನು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಂಬಿಸಿದ್ದಲ್ಲದೆ ತಮಗೆ ಮನಬಂದಂತೆ ಥಳಿಸಿದ್ದಾರೆ. ಕಳ್ಳತನದ ಬಂಗಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದರೂ ನೀನು ತೆಗೆದುಕೊಂಡಿಲ್ಲವಾದರೂ ಸಹ ತೆಗೆದುಕೊಂಡಿದ್ದೇನೆ ಎಂದು ಒಪ್ಪಿಕೋ. ಇಲ್ಲವಾದಲ್ಲಿ ನಿನ್ನ ಮೇಲೆ ಪ್ರಕರಣ ದಾಖಲಿಸಿ ಒದ್ದು ಒಳಗೆ ಹಾಕುತ್ತೇವೆ ಎಂದು ಬೆದರಿಕೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಅಧ್ಯಕ್ಷ ರಫೀಕ ಶಿರೋಳ ಸೇರಿದಂತೆ ಪ್ರಮುಖರಾದ ವಿಜಯಕುಮಾರ ಗೂಳಿ, ಸದಾಶಿವ ಹಿರೇಮಠ, ಮಾಬೂಬಿ ಬಾಗವಾನ, ನಿರ್ಮಲಾ ರಾಯಗೊಂಡ, ಸವಿತಾ ನಾಲತವಾಡ, ಅಂಬರಿಶ ಬಿರಾದಾರ ಮತ್ತು ಶಿವನಗೌಡ ಪಾಟೀಲ ಇವರನ್ನು ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.ಈ ಆಯ್ಕೆ ಸಾರ್ವಜನಿಕ ವಲಯದಲ್ಲಿ ಸಂತಸ ಹಾಗೂ ಪ್ರಶಂಸೆಗೂ ಕಾರಣವಾಗಿದ್ದು, ಆರೋಗ್ಯ ಸೇವಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ, ಪರಿಣಾಮಕಾರಿ ಮತ್ತು ಜನಪರವಾಗಿಸಲು ಮಹತ್ವದ ಪಾತ್ರ ವಹಿಸಲಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಸೌಲಭ್ಯಗಳ ಲಭ್ಯತೆ ಖಚಿತಪಡಿಸುವುದು, ಆಸ್ಪತ್ರೆಯ ಸ್ವಚ್ಛತೆ, ಶಿಸ್ತು ಮತ್ತು ಮೂಲಸೌಕರ್ಯಗಳ ಮೇಲ್ವಿಚಾರಣೆ, ಔಷಧಿ, ಪರೀಕ್ಷಾ ಸೇವೆ, ವೈದ್ಯರ ಹಾಜರಾತಿ ಸೇರಿದಂತೆ ಸೇವೆಗಳ ಗುಣಮಟ್ಟ ಪರಿಶೀಲನೆ, ಬಡವರಿಗೆ ಸರ್ಕಾರದ ಆರೋಗ್ಯ ಯೋಜನೆಗಳು ಸರಿಯಾಗಿ ತಲುಪುವಂತೆ ನೋಡಿಕೊಳ್ಳುವುದು, ರೋಗಿಗಳ ದೂರು–ಸಲಹೆಗಳನ್ನು ಸ್ವೀಕರಿಸಿ ಪರಿಹಾರಕ್ಕೆ ಕ್ರಮ…
ಉದಯರಶ್ಮಿ ದಿನಪತ್ರಿಕೆ ಹೊನವಾಡ: ಹಲವು ದಶಕಗಳ ಹಿಂದೆ ಹಳ್ಳಿಗಳಲ್ಲಿ ನಡೆಯುತ್ತಿದ್ದ ಸಂಪ್ರದಾಯ, ಬೀಸುವುದು, ಕುಟ್ಟುವುದು ಸೇರಿದಂತೆ ಜಾನಪದ ನೃತ್ಯ, ಬಯಲಾಟಗಳಂತಹ ಮನರಂಜನೆ ಈಗ ನೋಡಲು ಸಿಗುವುದೇ ಅಪರೂಪ. ಅಂಥ ಹಳ್ಳಿ ಸೊಗಡು ಸ್ಥಳೀಯ ತಿಕೋಟಾ ತಾಲ್ಲೂಕಿನ ಹೊನವಾಡ ಬಸವಂತರಾಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಮರುಕಳಿಸುವಂತೆ ಮಾಡಿದ್ದು ಸಂಸ್ಕೃತಿ ಹಬ್ಬ.ಮಕರ ಸಂಕ್ರಮಣದ ಪ್ರಯುಕ್ತ ಗುಡಿಸಲು ನಿರ್ಮಾಣ ಮಾಡಿ ಹೂವು, ಕಬ್ಬು, ವಿವಿಧ ಧಾನ್ಯಗಳೊಂದಿಗೆ ಬಸವಂತರಾಯ ಪ್ರೌಢ ಶಾಲೆಯ ಸಮಾರಂಭದ ಬಯಲು ವೇದಿಕೆಯನ್ನು ಅಲಂಕರಿಸಲಾಗಿತ್ತು. ಹಳ್ಳಿಯ ಸಂಸ್ಕೃತಿ ಸೊಗಡು ಎಲ್ಲೆಡೆ ಎದ್ದು ಕಾಣುತ್ತಿತ್ತು.ಶಿಕ್ಷಕರಾದ ಐ ಕೆ ನದಾಫ ಮಾತನಾಡಿ, ಜಗತ್ತನ್ನು ಬೆಳಗುವ ಸೂರ್ಯ ದಕ್ಷಿಣಾಯನದಿಂದ ದಿಕ್ಕು ಬದಲಿಸಿ ಉತ್ತರಾಯಣದಿಂದ ಹುಟ್ಟುತ್ತಾನೆ. ಇದನ್ನು ಭಾರತೀಯ ಸಂಸ್ಕೃತಿಯಲ್ಲಿ ಶುಭದಿನವೆಂದು ಪರಿಗಣಿಸುತ್ತಿದ್ದು, ಈ ಪ್ರಯುಕ್ತ ಮಕರ ಸಂಕ್ರಮಣ ಆಚರಿಸಲಾಗುತ್ತಿದೆ ಎಂದು ಹೇಳಿದರು.ಶಾಲಾ ಆವರಣ ಇಲಕಲ್ ಸೀರೆ, ಹಸಿರು ಬಳೆ, ಮುಡಿತುಂಬ ಮಲ್ಲಿಗೆ ಹೂ ಧರಿಸಿಕೊಂಡು ಓಡಾಡುತ್ತಿದ್ದ ವಿದ್ಯಾರ್ಥಿನಿಯರು, ಧೋತಿ, ಪಂಚೆ, ಶೆಲ್ಲೆ ಧರಿಸಿದ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು.ಸಂಸ್ಥೆಯ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಮಾನವನ ಸ್ವಾರ್ಥಕ ಬದುಕಿಗೆ ಬೇಕಾಗುವ ಸಂಸ್ಕಾರ, ಸಾಮರಸ್ಯ, ಉತ್ತಮ ಆಚಾರ ವಿಚಾರ, ಮೌಲ್ಯಗಳನ್ನು ಪಸರಿಸುವ ೧೨ನೇ ಶತಮಾನದ ಶರಣ ವಚನ ಸಾಹಿತ್ಯ, ಮನುಕುಲಕ್ಕೆ ದಾರೀದೀಪವಾಗಿದೆ ಎಂದು ಗುರುಮಾತೆ ಸರೋಜಿನಿ ಮಾವಿನಮರ ಹೇಳಿದರು.ಅವರು ನಗರದ ಶ್ರೀ ಸತ್ಯಸಾಯಿ ಸೇವಾ ಕೇಂದ್ರ ಬೀರಪ್ಪನಗರದಲ್ಲಿ ಗುರುವಾರ ನಡೆದ ದತ್ತಿ ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಅಧ್ಯಕ್ಷತೆ ವಹಿಸಿದ್ದ ವಿಜಯಲಕ್ಷ್ಮೀ ದೇಸಾಯಿ ಮಾತನಾಡಿ, ಅನ್ನ, ಅಕ್ಷರ, ಹಾಗೂ ಅರಿವು ಮೂಡಿಸುವಲ್ಲಿ ಮಠಗಳ ಕೊಡುಗೆ ಅಪಾರವಾಗಿದೆ. ಅನುಭವ ಮಂಟಪದಲ್ಲಿ ಶರಣರನ್ನು ಗುರುತಿಸಿ, ಅನುಭವ ಮಂಟಪ ಮೂಲಕ ಮನುಷ್ಯ ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬದನ್ನು ತೋರಿಸಿದ್ದಾರೆ ಎಂದರು.ಗಂಗಾ ಗಲಗಲಿ ಉಪನ್ಯಾಸಕ ಚಂದುಗೌಡ ಬಿರಾದಾರ, ಪಾರ್ವತಿ ದಳವಾಯಿ, ರಾಜಶ್ರೀ ಕ್ಷತ್ರಿ, ಲತಾ ಕಕ್ಕಳಮೇಲಿ, ಪಾರ್ವತಿ ಸೊನ್ನದ, ರಿಯಾನಾ ಸುತಾರ, ಭವಾನಿ ಗುಳೇದಗುಡ್ಡ ಮಾತನಾಡಿದರು.ಕವಿಯತ್ರಿಗಳಾದ ಸುಮಾ ಸಣ್ಣಕ್ಕಿ, ಪೂಜಾ ಕನ್ನೊಳ್ಳಿ, ಮಂಜುಳಾ ದಳವಾಯಿ, ಪ್ರೀತಿ ಕ್ಷತ್ರಿ, ಪ್ರೀಯಾಂಕಾ ಬೋರಗಿ, ಸನಾ ಅರಳಿಕಟ್ಟಿ, ಸುಧಾ ಬೀಳಗಿ ಕವನ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿದ್ಯಾರ್ಥಿಗಳು ತಂದೆ-ತಾಯಿಗಳಿಗೆ, ಶಿಕ್ಷಣ ಕೊಟ್ಟ ಗುರುಗಳಿಗೆ ಗೌರವವನ್ನು ಸಲ್ಲಿಸುವುದರ ಜೊತೆಗೆ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಮಾದರಿಯ ವ್ಯಕ್ತಿಗಳಾಗಿ ರೂಪಗೊಳ್ಳಬೇಕೆಂದು ಹೂವಿನಹಿಪ್ಪರಗಿಯ ಯೋಗೇಶ್ವರ ಮಾತಾ ಕಲಾ ಮತ್ತು ವಾಣಿಜ್ಯ ಪಪೂ ಕಾಲೇಜಿನ ಉಪನ್ಯಾಸಕಿ, ಸಾಹಿತಿ ಶಾಂತಾ ಬಿರಾದಾರ ಹೇಳಿದರು.ಪಟ್ಟಣದ ಬಸವೇಶ್ವರ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಬುಧವಾರ ಹಮ್ಮಿಕೊಂಡಿದ್ದ ಲಿಂ.ಶಾಂತಾಬಾಯಿ ಕೊಟ್ಲಿ, ಲಿಂ.ಮಲ್ಲಪ್ಪ ಕೊಟ್ಲಿ, ಲಿಂ. ಶಿವಮ್ಮ ಕ್ವಾಟಿ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಶಿವಯೋಗಿ ಸಿದ್ರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾನವೀಯ ಮೌಲ್ಯಗಳ ಕುರಿತು ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ನಾಳಿನ ಭವ್ಯ ಭಾರತದ ಪ್ರಜೆಗಳಾಗಿ ನಿರ್ಮಾಣಗೊಳ್ಳುವದಲ್ಲಿ ಯಾವುದೇ ಸಂದೇಹವಿಲ್ಲ. ಮಕ್ಕಳು ಶಾಲಾ ಹಂತದಲ್ಲಿ ಪ್ರಶ್ನಿಸುವ ಗುಣ ಬೆಳೆಸಿಕೊಂಡು ವಿಷಯಗಳನ್ನು ಗ್ರಹಿಸಬೇಕು. ಮಕ್ಕಳು ದೇಶದ ಭವಿಷ್ಯವಾಗಿದ್ದು. ಅವರಿಗೆ ಸುರಕ್ಷಿತ ಪರಿಸರ, ಗುಣಮಟ್ಟದ ಶಿಕ್ಷಣ, ಆರೋಗ್ಯ ಮತ್ತು ಗೌರವಯುತ ಜೀವನ ಒದಗಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಮಕ್ಕಳು ಬಸವಾದಿ ಶರಣರು ಹಾಕಿಕೊಟ್ಟ ಜೀವನದ…
ಲಿಂಗಾಯತ ಮತ್ತು ಬಸವ ಕಾರ್ಯಕರ್ತರಲ್ಲಿ ರಾಜಕೀಯ ಜಾಗೃತಿ ಮೂಡಿಸಲು ಮತ್ತು ಸಮುದಾಯವನ್ನು ಬಲಪಡಿಸಲು ಈ ಸಮಾವೇಶ ಬೆಂಗಳೂರು: ಲಿಂಗಾಯತ ಮತ್ತು ಬಸವ ಕಾರ್ಯಕರ್ತರು ಯಾವುದೇ ಪಕ್ಷಕ್ಕೆ ಕೇವಲ ಮತಬ್ಯಾಂಕ್ ಆಗಿ ಉಳಿಯಲು ಬಯಸುವುದಿಲ್ಲ, ಮತ್ತು ರಾಜಕೀಯ ಜಾಗೃತಿ ಮೂಡಿಸಲು ಮತ್ತು ಸಮುದಾಯವನ್ನು ಬಲಪಡಿಸಲು ‘ಬಸವ ಶಕ್ತಿ’ ಸಮಾವೇಶ ಎಂಬ ಕಾರ್ಯಕ್ರಮವನ್ನು ಯೋಜಿಸುತ್ತಿದ್ದಾರೆ.ಜೈನ, ಬೌದ್ಧ ಮತ್ತು ಸಿಖ್ ಧರ್ಮದ ಮಾದರಿಯಲ್ಲಿ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಬೇಡಿಕೆಯೊಂದಿಗೆ, ಲಿಂಗಾಯತ ಸಮುದಾಯದ ಗುರುತನ್ನು ಎತ್ತಿ ತೋರಿಸುವ ಇತ್ತೀಚಿನ ಜನಸಾಮಾನ್ಯರ ಅಭಿಯಾನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಲಿಂಗಾಯತ ಮತಗಳನ್ನು ಬಳಸಿಕೊಂಡು ಚುನಾಯಿತರಾಗುವ ಆದರೆ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುವ ರಾಜಕಾರಣಿಗಳ ವಿರುದ್ಧ ಕಾರ್ಯಕರ್ತರು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.ಕಳೆದ ವರ್ಷ, ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಸಭೆಗಳ ಸರಣಿಯನ್ನು ನಡೆಸಲಾಯಿತು. ಹಲವಾರು ಜಿಲ್ಲೆಗಳಲ್ಲಿ ಸರಾಸರಿ 50,000 ಜನರು ಭಾಗವಹಿಸಿದ್ದರು. ಈ ಅಭಿಯಾನವು 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಮೇಲೆ ಕೇಂದ್ರೀಕರಿಸಿತು.…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ರೈತರ ಪಂಪ್ ಸೆಟ್ಟುಗಳಿಗೆ ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ ಕೇವಲ 50 ರೂಪಾಯಿ ಪಾವತಿಸಿ ನೋಂದಣಿ ಮಾಡಿಕೊಂಡ ಗ್ರಾಹಕರು ಜನವರಿ 20 ರ ಒಳಗಾಗಿ ಭದ್ರತಾ ಠೇವಣಿ ಮತ್ತು ಸಕ್ರಮೀಕರಣ ಶುಲ್ಕ ಪಾವತಿಸಿ ಸಕ್ರಮ ಮಾಡಿಕೊಳ್ಳಬೇಕು ಎಂದು ನಿಡಗುಂದಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.ಕೊಲ್ಹಾರ ತಾಲೂಕು ವ್ಯಾಪ್ತಿಯಲ್ಲಿ ಬರುವ ರೈತರು ಸನ್ 2018 ರಲ್ಲಿ 50 ರೂ. ಪಾವತಿ ಮಾಡಿ ಆರ್.ಆರ್. ನಂಬರ ಪಡೆದುಕೊಂಡು ಭದ್ರತಾ ಠೇವಣಿ, ಮಾಪಕ ಭದ್ರತಾ ಠೇವಣಿ ಮತ್ತು ಸಕ್ರಮೀಕರಣ ಶುಲ್ಕು ಪಾವತಿಸದೇ ಇರುವವರು ದಿನಾಂಕ: 20.01.2026 ರೊಳಗೆ ಸದರಿ ಶುಲ್ಕವನ್ನು ಉಪ-ವಿಭಾಗ ಕಛೇರಿ ನಿಡಗುಂದಿ ಯಲ್ಲಿ ಪಾವತಿಸಲು ಸೂಚಿಸಲಾಗಿದೆ. ಇಲ್ಲವಾದರೆ ಮೋಟರ್ ಸಂಪರ್ಕವನ್ನು ನಿರ್ದಾಕ್ಷಿಣವಾಗಿ ಕಡಿತಗೊಳಿಸುವುದಾಗಿ ಅವರು ಹೇಳಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ನಾಗಠಾಣ ಗ್ರಾಮದ ದಿ.ಶ್ರೀಮತಿ ಭಾಗವ್ವ ಚನ್ನಪ್ಪ ಮಸಳಿ ವಯಸ್ಸು 95, ಇವರು ವಯೋಸಹಜ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ದಿ. 16-01-2026 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸ್ವಗ್ರಾಮ ನಾಗಠಾಣ ಗ್ರಾಮದ ಊರ ಮುಂದಿನ ತೋಟದಲ್ಲಿ ನೆರವೇರುವದು. ಮೃತರು ಹಿರಿಯ ಪತ್ರಕರ್ತ ಶರಣು ಮಸಳಿ ಅವರ ಅಜ್ಜಿಯವರಾಗಿದ್ದು, ಇಬ್ಬರು ಗಂಡು ಮಕ್ಕಳು ಹಾಗೂ ನಾಲ್ವರು ಹೆಣ್ಣು ಮಕ್ಕಳು, ಎಂಟು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಸ್ವಚ್ಛತೆ ಕಾಡುತ್ತಿದೆ ಇಲ್ಲಿನ ಕಲುಷಿತ ನೀರು ಹಾಗೂ ಮಲ ಮೂತ್ರ ವಿಸರ್ಜನೆ ಸಾರ್ವಜನಿಕ ಚರಂಡಿಗಳಲ್ಲಿ ಹರಿದು ಬರುತ್ತಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ನಮ್ಮ ಕರ್ನಾಟಕ ಸೇನೆಯ ಹೋಬಳಿ ಕಾರ್ಮಿಕ ಘಟಕದ ಅಧ್ಯಕ್ಷ ಗುರುರಾಜ ಎಸ್ ಅಂಗಡಿ ಆರೋಪಿಸಿದ್ದಾರೆ.ಈ ಕುರಿತು ತಾಲೂಕು ಆರೋಗ್ಯಾಧಿಕಾರಿಗೆ ಬರೆದ ಮನವಿ ಪತ್ರವನ್ನು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಮೂಲಕ ಸಲ್ಲಿಸಿದ್ದು ಆರೋಗ್ಯ ಕೇಂದ್ರವು ಸಾರ್ವಜನಿಕರ ಪಾಲಿಗೆ ಆಶಾಕಿರಣವಾಗಬೇಕಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯು ರೋಗಗಳನ್ನು ಹರಡುವ ಕೇಂದ್ರವಾಗಿ ಮಾರ್ಪಡುತ್ತಿರುವುದು ಅತ್ಯಂತ ವಿಷಾದನೀಯ, ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಹಲವು ಬಾರಿ ವೈದ್ಯಾಧಿಕಾರಿಗಳ ಗಮನಕ್ಕೆ ತಂದರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ, ಕಲುಷಿತ ನೀರನ್ನು ಬೇಕಾಬಿಟ್ಟಿಯಾಗಿ ಸಾರ್ವಜನಿಕ ಚರಂಡಿಗೆ ಬಿಡುತ್ತಿರುವುದು ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಸ್ವಚ್ಛತೆಯ ಜವಾಬ್ದಾರಿ ಹೊತ್ತ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಸಿಬ್ಬಂದಿಗಳು ಸಾರ್ವಜನಿಕರ ಹಿತದೃಷ್ಟಿಯನ್ನು ಮರೆತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಕಠಿಣ ಕ್ರಮ…
ಉದಯರಶ್ಮಿ ದಿನಪತ್ರಿಕೆ ವರದಿ: ರಾಜಶೇಖರ ಡೋಣಜಮಠಚಡಚಣ: ಮಹಾರಾಷ್ಟ್ರ-ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಕೊನೆಯ ಪುಟ್ಟ ಪಟ್ಟಣ, ಸ್ವಾತಂತ್ರ್ಯ ಸಂಗ್ರಾಮಕ್ಕೆ 50ಜನ ಹೋರಾಟಗಾರರನ್ನು ಕೊಟ್ಟ ಕನ್ನಡನಾಡಿನ ಇತಿಹಾಸದ ಹೆಮ್ಮೆಯ ತಾಣ ಹಾಗೂ ಕರ್ನಾಟಕ ಮಹಾರಾಷ್ಟ್ರ ದ ಸುತ್ತಮುತ್ತಲೂ 42 ಹಳ್ಳಿಗಳು ವ್ಯಾಪಾರಕ್ಕಾಗಿ ಅವಲಂಬಿತವಾಗಿರುವ ವಿಜಯಪುರ ಜಿಲ್ಲೆಯಲ್ಲಿಯೆ ಹೆಸರು ಮಾಡಿದ ವಾಣಿಜ್ಯ ಕೇಂದ್ರ ಚಡಚಣದಲ್ಲಿ ಶ್ರೀ ಸಂಗಮೇಶ್ವರ ದೇವರ ಜಾನುವಾರ ಜಾತ್ರೆಯು ರವಿವಾರ ಜ.18 ರಿಂದ ಗುರುವಾರ ಜ.22 ರವರೆಗೆ 5 ದಿನಗಳ ಕಾಲ ಲಕ್ಷಾಂತರ ಸಂಖ್ಯೆಯ ವಿವಿಧ ತಳಿಯ ಜಾನುವಾರ ಮಾರಾಟದ ಜಾತ್ರೆ ಜರುಗಲಿದೆ.ಅವರಾತ್ರಿ ಅಮವಾಸ್ಯೆಯದಿನ ಜ.18 ರಂದು ಬೆಳಿಗ್ಗೆ 9.00 ಗಂಟೆಗೆ ಶ್ರೀ ಸಂಗಮೇಶ್ವರ “ದೇವರ ನುಡಿ” ಯನ್ನು ವೇ.ಸಂಗಯ್ಯ ಡೋಣಜಮಠ ಅವರಿಂದ 2026ನೇ ವರ್ಷದ ಆಗು ಹೋಗುಗಳ ಕುರಿತು ಭವಿಷ್ಯದ ನುಡಿಗಳು (ಮಳೆ, ಬೆಳೆ, ರಾಜಕೀಯ ಹಾಗೂ ಇನ್ನಿತರ) ಜರುಗಿದ ನಂತರ ಜಾತ್ರೆಯು ಆರಂಭಗೊಳ್ಳುತ್ತದೆ.ಜ.19 ಸೋಮವಾರ ರಾತ್ರಿ 9.00 ಗಂಟೆಗೆ “ಚಿತ್ರ–ವಿಚಿತ್ರ ಸುಡುಮದ್ದು” ಪ್ರದರ್ಶನ. ಜ.20 ಮಂಗಳವಾರ “ಪ್ರಸಿದ್ಧ ಮಲ್ಲರ” ಕುಸ್ತಿಗಳು…
