ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ.ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಐಐಸಿ, ಎನ್ ಎಸ್‌ಎಸ್ ಘಟಕದ ಸಂಯೋಜನೆಯಡಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಷಾದೇವಿ ಹಿರೇಮಠ ಮಾತನಾಡಿ, ಯೋಗವು ಒಂದು ಸರ್ವ ಸಿದ್ದಿಸಾಧನವಾಗಿದೆ,ನಮ್ಮ ದೈಹಿಕ, ಮಾನಸಿಕ ಸದೃಡತೆಗೆ ಅಂತ್ಯಂತ ಅವಶ್ಯಕವಾಗಿದೆ. ಯೋಗವು ನಮ್ಮ ನಿತ್ಯದ ಬದುಕಿನಲ್ಲಿ ಸದಾ ಯೋಗಾಸನ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಡಿಕೊಳ್ಳವಂತಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದೈಹಿಕ ನಿರ್ದೇಶಕ ಎಸ್ ಕೆ ಪಾಟೀಲ್, ಡಾ.ಎಂ.ಬಿ.ಪಾಟೀಲ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಮಿಲನ್ ರಾಠೋಡ್, ಡಾ.ಕೆ.ಮಹೇಶಕುಮಾರ, ಎನ್ ಸಿಸಿ ಅಧಿಕಾರಿ ಡಾ.ರಾಮಚಂದ್ರ ನಾಯಕ ಮಹಾವಿದ್ಯಾಲಯದ ಇನ್ನಿತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

