ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಅಧ್ಯಕ್ಷ ರಫೀಕ ಶಿರೋಳ ಸೇರಿದಂತೆ ಪ್ರಮುಖರಾದ ವಿಜಯಕುಮಾರ ಗೂಳಿ, ಸದಾಶಿವ ಹಿರೇಮಠ, ಮಾಬೂಬಿ ಬಾಗವಾನ, ನಿರ್ಮಲಾ ರಾಯಗೊಂಡ, ಸವಿತಾ ನಾಲತವಾಡ, ಅಂಬರಿಶ ಬಿರಾದಾರ ಮತ್ತು ಶಿವನಗೌಡ ಪಾಟೀಲ ಇವರನ್ನು ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
ಈ ಆಯ್ಕೆ ಸಾರ್ವಜನಿಕ ವಲಯದಲ್ಲಿ ಸಂತಸ ಹಾಗೂ ಪ್ರಶಂಸೆಗೂ ಕಾರಣವಾಗಿದ್ದು, ಆರೋಗ್ಯ ಸೇವಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ, ಪರಿಣಾಮಕಾರಿ ಮತ್ತು ಜನಪರವಾಗಿಸಲು ಮಹತ್ವದ ಪಾತ್ರ ವಹಿಸಲಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.
ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಸೌಲಭ್ಯಗಳ ಲಭ್ಯತೆ ಖಚಿತಪಡಿಸುವುದು, ಆಸ್ಪತ್ರೆಯ ಸ್ವಚ್ಛತೆ, ಶಿಸ್ತು ಮತ್ತು ಮೂಲಸೌಕರ್ಯಗಳ ಮೇಲ್ವಿಚಾರಣೆ, ಔಷಧಿ, ಪರೀಕ್ಷಾ ಸೇವೆ, ವೈದ್ಯರ ಹಾಜರಾತಿ ಸೇರಿದಂತೆ ಸೇವೆಗಳ ಗುಣಮಟ್ಟ ಪರಿಶೀಲನೆ, ಬಡವರಿಗೆ ಸರ್ಕಾರದ ಆರೋಗ್ಯ ಯೋಜನೆಗಳು ಸರಿಯಾಗಿ ತಲುಪುವಂತೆ ನೋಡಿಕೊಳ್ಳುವುದು, ರೋಗಿಗಳ ದೂರು–ಸಲಹೆಗಳನ್ನು ಸ್ವೀಕರಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದು, ಆಸ್ಪತ್ರೆಯಲ್ಲಿ ನಡೆಯುವ ಜನಪರ ಸೇವೆಗಳು ಪಾರದರ್ಶಕವಾಗಿ ಜಾರಿಯಾಗುವಂತೆ ಗಮನ ವಹಿಸುವುದು, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು, ಆರೋಗ್ಯ ಶಿಬಿರಗಳ ಆಯೋಜನೆಯಲ್ಲಿ ಸಹಕಾರ, ಆಸ್ಪತ್ರೆ ಅಭಿವೃದ್ಧಿಗೆ ಬಲವಾದ ನಿರೀಕ್ಷೆ, ಈ ನಾಮನಿರ್ದೇಶನದ ಮೂಲಕ ಆಸ್ಪತ್ರೆಯ ಸೇವೆಗಳಲ್ಲಿ ಇನ್ನಷ್ಟು ಸುಧಾರಣೆ, ಜನರಿಗೆ ಉತ್ತಮ ಸ್ಪಂದನೆ, ಮತ್ತು ಆರೋಗ್ಯ ಸೇವೆಗಳ ಮೇಲ್ವಿಚಾರಣೆ ಬಲಗೊಳಿಸುವದು ನಾಮನಿರ್ದೇಶಿತ ಸದಸ್ಯರ ಪ್ರಮುಖ ಕಾರ್ಯಗಳು ಮತ್ತು ಹೊಣೆಗಾರಿಕೆಗಳಾಗಿವೆ.

