ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ರೈತರ ಪಂಪ್ ಸೆಟ್ಟುಗಳಿಗೆ ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ ಕೇವಲ 50 ರೂಪಾಯಿ ಪಾವತಿಸಿ ನೋಂದಣಿ ಮಾಡಿಕೊಂಡ ಗ್ರಾಹಕರು ಜನವರಿ 20 ರ ಒಳಗಾಗಿ ಭದ್ರತಾ ಠೇವಣಿ ಮತ್ತು ಸಕ್ರಮೀಕರಣ ಶುಲ್ಕ ಪಾವತಿಸಿ ಸಕ್ರಮ ಮಾಡಿಕೊಳ್ಳಬೇಕು ಎಂದು ನಿಡಗುಂದಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಕೊಲ್ಹಾರ ತಾಲೂಕು ವ್ಯಾಪ್ತಿಯಲ್ಲಿ ಬರುವ ರೈತರು ಸನ್ 2018 ರಲ್ಲಿ 50 ರೂ. ಪಾವತಿ ಮಾಡಿ ಆರ್.ಆರ್. ನಂಬರ ಪಡೆದುಕೊಂಡು ಭದ್ರತಾ ಠೇವಣಿ, ಮಾಪಕ ಭದ್ರತಾ ಠೇವಣಿ ಮತ್ತು ಸಕ್ರಮೀಕರಣ ಶುಲ್ಕು ಪಾವತಿಸದೇ ಇರುವವರು ದಿನಾಂಕ: 20.01.2026 ರೊಳಗೆ ಸದರಿ ಶುಲ್ಕವನ್ನು ಉಪ-ವಿಭಾಗ ಕಛೇರಿ ನಿಡಗುಂದಿ ಯಲ್ಲಿ ಪಾವತಿಸಲು ಸೂಚಿಸಲಾಗಿದೆ. ಇಲ್ಲವಾದರೆ ಮೋಟರ್ ಸಂಪರ್ಕವನ್ನು ನಿರ್ದಾಕ್ಷಿಣವಾಗಿ ಕಡಿತಗೊಳಿಸುವುದಾಗಿ ಅವರು ಹೇಳಿದ್ದಾರೆ.
