ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಾನವನ ಸ್ವಾರ್ಥಕ ಬದುಕಿಗೆ ಬೇಕಾಗುವ ಸಂಸ್ಕಾರ, ಸಾಮರಸ್ಯ, ಉತ್ತಮ ಆಚಾರ ವಿಚಾರ, ಮೌಲ್ಯಗಳನ್ನು ಪಸರಿಸುವ ೧೨ನೇ ಶತಮಾನದ ಶರಣ ವಚನ ಸಾಹಿತ್ಯ, ಮನುಕುಲಕ್ಕೆ ದಾರೀದೀಪವಾಗಿದೆ ಎಂದು ಗುರುಮಾತೆ ಸರೋಜಿನಿ ಮಾವಿನಮರ ಹೇಳಿದರು.
ಅವರು ನಗರದ ಶ್ರೀ ಸತ್ಯಸಾಯಿ ಸೇವಾ ಕೇಂದ್ರ ಬೀರಪ್ಪನಗರದಲ್ಲಿ ಗುರುವಾರ ನಡೆದ ದತ್ತಿ ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಜಯಲಕ್ಷ್ಮೀ ದೇಸಾಯಿ ಮಾತನಾಡಿ, ಅನ್ನ, ಅಕ್ಷರ, ಹಾಗೂ ಅರಿವು ಮೂಡಿಸುವಲ್ಲಿ ಮಠಗಳ ಕೊಡುಗೆ ಅಪಾರವಾಗಿದೆ. ಅನುಭವ ಮಂಟಪದಲ್ಲಿ ಶರಣರನ್ನು ಗುರುತಿಸಿ, ಅನುಭವ ಮಂಟಪ ಮೂಲಕ ಮನುಷ್ಯ ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬದನ್ನು ತೋರಿಸಿದ್ದಾರೆ ಎಂದರು.
ಗಂಗಾ ಗಲಗಲಿ ಉಪನ್ಯಾಸಕ ಚಂದುಗೌಡ ಬಿರಾದಾರ, ಪಾರ್ವತಿ ದಳವಾಯಿ, ರಾಜಶ್ರೀ ಕ್ಷತ್ರಿ, ಲತಾ ಕಕ್ಕಳಮೇಲಿ, ಪಾರ್ವತಿ ಸೊನ್ನದ, ರಿಯಾನಾ ಸುತಾರ, ಭವಾನಿ ಗುಳೇದಗುಡ್ಡ ಮಾತನಾಡಿದರು.
ಕವಿಯತ್ರಿಗಳಾದ ಸುಮಾ ಸಣ್ಣಕ್ಕಿ, ಪೂಜಾ ಕನ್ನೊಳ್ಳಿ, ಮಂಜುಳಾ ದಳವಾಯಿ, ಪ್ರೀತಿ ಕ್ಷತ್ರಿ, ಪ್ರೀಯಾಂಕಾ ಬೋರಗಿ, ಸನಾ ಅರಳಿಕಟ್ಟಿ, ಸುಧಾ ಬೀಳಗಿ ಕವನ ವಾಚಿಸಿದರು.
ಗುರುಬಾಯಿ ಪಾಟೀಲ, ಕವಿತಾ ಪೂಜಾರಿ, ಶಾವಲಾ ಬಗಲಿ, ಬಿ.ಎಚ್.ಪೊಲೀಸ್ ಪಾಟೀಲ, ಭಾರತಿ ಪ್ತರಿಮಠ, ಭಾರತಿ ಪಾಟೀಲ, ಸರೋಜಿನಿ ಕಕ್ಕಳಮೇಲಿ, ಪಾರ್ವತಿ ಸುರಪೂರ, ರೇಣುಕಾ ಸಂಖ, ಸಂಗಿತಾ ಸುರಪೂರ, ಜಯಶ್ರೀ ಹೂಗಾರ, ಕಲಾವತಿ ಯರನಾಳ ಇದ್ದರು.

