Author: editor.udayarashmi@gmail.com

ದೇವರಹಿಪ್ಪರಗಿ: ಸದೃಡ ಭಾರತ ನಿರ್ಮಾಣಕ್ಕಾಗಿ ನಾವೆಲ್ಲ ಯುವಕರು ಒಗ್ಗೂಡಿ ಮೋದಿಯವರನ್ನು ಇನ್ನೊಂದು ಬಾರಿ ಪ್ರಧಾನಿ ಮಾಡೋಣ ಎಂದು ನಮೋ ಬ್ರಿಗೇಡ್ ಅಧ್ಯಕ್ಷ ಹಾಗೂ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಪಟ್ಟಣಕ್ಕೆ ಶುಕ್ರವಾರ ಜನ ಗಣ ಮನ ಯಾತ್ರೆಯ ಅಂಗವಾಗಿ ಬೈಕ್ರ‍್ಯಾಲಿ ಮೂಲಕ ಆಗಮಿಸಿ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಪುಷ್ಪವೃಷ್ಠಿ ನೆರವೇರಿಸಿ ಅವರು ಮಾತನಾಡಿದರು.ಭಾರತಕ್ಕೆ ಅದ್ಭುತ ಗೌರವ ತಂದುಕೊಟ್ಟ ಪ್ರಧಾನಿ ಮೋದಿಯವರೆಗೆ ಇನ್ನೊಂದು ಬಾರಿ ಅವಕಾಶ ನೀಡುವ ನಿಟ್ಟಿನಲ್ಲಿ ಈ ಯಾತ್ರೆ ಆರಂಭಿಸಲಾಗಿದೆ. ಮೋದಿಯವರ ನೇತೃತ್ವದಲ್ಲಿ ಭಾರತ ಅತೀ ಹೆಚ್ಚು ಡಿಜಿಟಲ್ ವಹಿವಾಟು ಮಾಡುವ ರಾಷ್ಟçವಾಗಿ ಗುರುತಿಸಿಕೊಂಡಿದೆ. ದೇಶದ ೫೦ಕೋಟಿ ಜನ ಬ್ಯಾಂಕಿಗೆ ಬಂದಿರಲ್ಲಿಲ್ಲ. ಅದಕ್ಕಾಗಿ ಮೋದಿ ತಮ್ಮ ೬ ವರ್ಷಗಳ ಅಧಿಕಾರಾವಧಿಯಲ್ಲಿ ಜನಧನ ಖಾತೆಯ ಮೂಲಕ ಬ್ಯಾಂಕಿಗೆ ಬರುವಂತೆ ಮಾಡಿದರು. ಎಲ್ಲರಿಗೂ ಆಯುಷ್ಮಾನ ಕಾರ್ಡ ನೀಡಿ ಉಚಿತ ಚಿಕಿತ್ಸೆಗೆ ನೆರವು ನೀಡಿದರು.ಜನೌಷಧಿ ಅಂಗಡಿಗಳ ಮೂಲಕ ಕಡಿಮೆ ದರದಲ್ಲಿ ಔಷಧಿ ದೊರೆಯುವಂತ ಅವಕಾಶ ಕಲ್ಪಿಸಿ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದರು. ಮಹಿಳೆಯರಿಗೆ…

Read More

ವಿಜಯಪುರ: ವಿದ್ಯಾರ್ಥಿಗಳು ತರಗತಿ ಚಟುವಟಿಕೆಗಳ ಜೊತೆಗೆ ಕ್ರೀಡೆಗಳಲ್ಲೂ ಉತ್ಸಾಹದಿಂದ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕ್ರೀಡಾಭಿರುಚಿ ಅಗತ್ಯ ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಹೇಳಿದರು.ಬಂಜಾರಾ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಗುರುವಾರದಂದು ಬೆಳಗಾವಿ ವಿಭಾಗ ಮಟ್ಟದ ೨೦೨೩-೨೪ನೆ ಸಾಲಿನ ದಸರಾ ಕ್ರೀಡಾಕೂಟದ ‘ಬಾಸ್ಕೇಟ್ ಬಾಲ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಟ್ರೋಫಿ ವಿತರಣೆ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವನೆ ಹೊಂದಿದಾಗ ಮಾತ್ರ ಜೀವನದಲ್ಲಿನ ಗುರಿ ತಲುಪಲು ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಕರು, ಪಾಲಕರು ಇನ್ನಷ್ಟು ಶ್ರಮಿಸಬೇಕಾಗಿದೆ ಎಂದು ಹೇಳಿದರು.ಕ್ರೀಡೆಯಲ್ಲಿ ಸಾಧನೆ ಮಾಡಿದ್ದ ಕೀರ್ತಿ ಚವ್ಹಾಣ್, ಸಾಕ್ಷಿ ವಾಲಿಕಾರ, ಶಿವುಬಾಯಿ ಮಠ, ಶ್ವೇತಾ ಬಡಿಗೇರ, ಮಾಬುಬಿ ಮುಲ್ಲಾ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಿ.ಎಲ್.ಚವ್ಹಾಣ್, ಕಾರ್ಯಾಧ್ಯಕ್ಷ ಕೆ.ಜಿ.ರಾಠೋಡ, ಕಾರ್ಯದರ್ಶಿ ಆರ್.ಡಿ.ಚವ್ಹಾಣ್, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರು ಸಂದೀಪ ರಾಠೋಡ, ಪ್ರಾಥಮಿಕ ಶಾಲೆಯ ಮುಖ್ಯ ಗುರು ಎಂ.ಬಿ.ಪೂಜಾರಿ,…

Read More

ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಮಾತುಕತೆ | ರಾಜ್ಯದ ಬರ-ಕೃಷಿ ಪರಿಸ್ಥಿತಿ ವಾಸ್ತವಾಂಶ ವಿವರಣೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮನ್ನು ಭೇಟಿಯಾದ ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಮಾತುಕತೆ ನಡೆಸಿ, ರಾಜ್ಯದ ರೈತರ ರಕ್ಷಣೆಗೆ ಪೂರಕವಾಗಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.ರಾಜ್ಯದ ಬರ ಪರಿಸ್ಥಿತಿಯನ್ನು ವಿವರಿಸಿದ ಮುಖ್ಯಮಂತ್ರಿಗಳು, ಕೇಂದ್ರದ ಮಾರ್ಗಸೂಚಿಯನ್ವಯ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ 32 ತಾಲ್ಲೂಕುಗಳು ನಿಗದಿತ ಮಾನದಂಡಗಳನ್ನು ಪೂರೈಸುತ್ತಿವೆ. ರಾಜ್ಯದಲ್ಲಿ ನೈಋತ್ಯ ಮುಂಗಾರು ವಿಳಂಬದಿಂದ ಹಾಗೂ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯದಲ್ಲಿ ಶೇ. 90 ರಷ್ಟು ಬಿತ್ತನೆ ಆಗಿದ್ದು, ಅದರಲ್ಲಿ 42 ಲಕ್ಷ ಹೆಕ್ಟೇರ್‌ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ರೈತರ ಜಮೀನಿನಲ್ಲಿ ಹಸಿರು ಕಾಣಿಸಿದರೂ ಬೆಳೆಯಿಲ್ಲದ ಪರಿಸ್ಥಿತಿ ಉಂಟಾಗಿದ್ದು, ರಾಜ್ಯದಲ್ಲಿ ಹಸಿರು ಬರ ತಲೆದೋರಿದೆ ಎಂದು ವಾಸ್ತವ ಪರಿಸ್ಥಿತಿಯನ್ನು ವಿವರಿಸಿದರು.ಪ್ರವಾಸದ ಸಂದರ್ಭದಲ್ಲಿ ರಾಜ್ಯದ ವಸ್ತುಸ್ಥಿತಿಯನ್ನು ಅರಿತು ಕೇಂದ್ರಕ್ಕೆ ಮನವರಿಕೆ ಮಾಡುವ ಮೂಲಕ…

Read More

ಇಂಡಿ: ಶಿಕ್ಷಕರು ಜ್ಞಾನದ ಸಾಗರವಿದ್ದಂತೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ. ಶಿಕ್ಷಕರಿಂದ ದೇಶದ ಪ್ರಗತಿ ಸಾಧ್ಯ. ಶಿಕ್ಷಕರು ತಮ್ಮ ಇಡೀ ಜೀವನವನ್ನು ಮಕ್ಕಳ ಅಭಿವೃದ್ಧಿಗೆ ಮುಡಿಪಾಗಿಡುತ್ತಾರೆ. ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಗುರುವಾರದಂದು ಜರುಗಿದ ವಿಶ್ವ ಶಿಕ್ಷಕರ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಟ್ಟು ಅವರ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಕರ ಈ ಸೇವೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಈ ದಿನದ ಆಚರಣೆಯ ಉದ್ದೇಶವಾಗಿದೆ ಎಂದು ಹೇಳಿದರು.ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ, ವಿದ್ಯಾರ್ಥಿಗಳ ಜೀವನದ ಗುರಿ, ಉದ್ದೇಶಗಳನ್ನು, ಸಾಧಿಸುವ ಮಾರ್ಗಗಳನ್ನು ಶಿಕ್ಷಕರು ತಿಳಿಸಿಕೊಡುತ್ತಾರೆ. ಅಂಧಕಾರದ ಹಾದಿಯನ್ನು ಕಳೆದು ಜ್ಞಾನದ ಬೆಳಕನ್ನು ತುಂಬುವವವನೇ ಶಿಕ್ಷಕ ಎಂದರು.ಶಿಕ್ಷಕರಾದ ಎಸ್ ಎಂ ಪಂಚಮುಖಿ, ಎಸ್ ಪಿ ಪೂಜಾರಿ ಸೇರಿದಂತೆ ಅನೇಕರು…

Read More

ಬರದ ನಾಡು ಬಂಗಾರದ ನಾಡಾಗಿಸಿದ ಧೀಮಂತ ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅದರಲ್ಲೂ ವಿಶೇಷವಾಗಿ ಪಂಚನದಿಗಳ ಬೀಡಾಗಿದ್ದು ಬರಗಾಲದ ಹಣೆ ಪಟ್ಟಿಯನ್ನು ಶಾಶ್ವತವಾಗಿ ಅಂಟಿಸಿಕೊಂಡಿದ್ದ ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ 2013 ರಿಂದ 2018 ರ 5 ವರ್ಷಗಳ ಅವಧಿ ಅಭಿವೃದ್ಧಿ ದೃಷ್ಟಿಯಿಂದ ಸುವರ್ಣ ಯುಗವೆಂದರೆ ಅತಿಶಯೋಕ್ತಿಯಾಗಲಾರದು. ಬರದ ನಾಡನ್ನು ಬಂಗಾರದ ನಾಡನ್ನಾಗಿಸಿದ 2013ರಲ್ಲಿ ಜಲಸಂಪನ್ಮೂಲ ಸಚಿವರಾಗಿ ಎಂ ಬಿ ಪಾಟೀಲರು ಮಾಡಿದ ಸಾಧನೆ ನಿಜಕ್ಕೂ ಅನನ್ಯವಾದದ್ದು.ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ಒಂದು ಹೋಬಳಿಗೆ 1300ಕೋಟಿ ರೂಪಾಯಿಗಳ ರೈತರ ಬದುಕನ್ನು ಹಸನಾಗಿಸಿದ ಜೊತೆಗೆ ಜಿಲ್ಲೆಯ ಬಹುತೇಕ ಕೆರೆಗಳನ್ನು, ಕೆರೆ ತುಂಬಿಸುವ ಯೋಜನೆಯನ್ನು ತಂದು ನೀರು ತುಂಬಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನೀರಾವರಿಗೆ ಒಳಪಡಿಸಲು ಸಾಧ್ಯವೇ ಇಲ್ಲ ಎಂದು ನೀರಾವರಿ ತಜ್ಞರು ಅಭಿಪ್ರಾಯಪಟ್ಟಿದ್ದ ಅತಿ ಎತ್ತರದ ಪ್ರದೇಶವಾದ ನಮ್ಮ ಕ್ಷೇತ್ರದ ಕನಮಡಿ ಗ್ರಾಮದವರೆಗೆ ನೀರು ತರುವುದು ಭಗೀರಥ ಪ್ರಯತ್ನವೇ.. ಅಂತ ಸಾಹಸವನ್ನು ಮಾಡಿ ಶಾಶ್ವತವಾಗಿ ಜನರ ಹೃದಯದಲ್ಲಿ ಆಧುನಿಕ ಭಗೀರಥ ಎನ್ನುವ ಬಿರುದನ್ನು ಪಡೆದವರು ನಮ್ಮ…

Read More

ಆಲಮಟ್ಟಿ: ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಸಮೀಪದ ಬೇನಾಳ ಆರ್.ಎಸ್. ಗ್ರಾಮದ ಬಳಿ ಗುರುವಾರ ಜರುಗಿದೆ.ಮೃತ ಯುವಕ ಬಸವನಬಾಗೇವಾಡಿ ತಾಂಡಾ (ಸೀಸಮಡ್ಡಿ)ದ ನಿವಾಸಿ ಉಮೇಶ ರಾಮಚಂದ್ರ ಚವ್ಹಾಣ (೨೫).ಅನಿಲ ರಾಠೋಡ, ಜೀನಾಬಾಯಿ ಚವ್ಹಾಣ, ಸಂತೋಷ ಹಳ್ಳಿ, ಸಂದೇಶ ಕಾಸರ ಗಾಯಗೊಂಡ ಪ್ರಯಾಣಿಕರು.ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮುದ್ದೇಬಿಹಾಳ: ಅ.೬ ರಂದು ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧೨ರವರೆಗೆ ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿ ದೇವಸ್ಥಾನದ ಸಮುದಾಯ ಭವನದ ಮೇಲೆ ನಿರ್ಮಿಸಿರುವ ನೂತನ ಯಾತ್ರಿನಿವಾಸ, ಹೊಸ ಕಟ್ಟಡದ ಕಾರ್ಯಾಲಯ, ಸಭಾಮಂಟಪದ ಉದ್ಘಾಟನೆ, ಧರ್ಮಸಭೆ ಹಾಗೂ ದಾನಿಗಳ ಸನ್ಮಾನ ಸಮಾರಂಭ, ಮಂಗಲ ವಾದ್ಯಘೋಷ, ಧ್ವಜಾರೋಹಣ, ೧೦೦೮ ಪಾಶ್ವನಾಥ ಭಗವಾನರಿಗೆ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ಷೋಡೋಪಚಾರ ಪೂಜೆ, ಕುಂಕುಮಾರ್ಚನೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದ್ದು ಭಕ್ತಾದಿಗಳು ಭಾಗಿಯಾಗುವಂತೆ ದೇವಸ್ಥಾನ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮದ್ಯಾಹ್ನ ೨ ಗಂಟೆಗೆ ಶುರುವಾಗುವ ಉದ್ಘಾಟನೆ, ಧರ್ಮಸಭೆ ಮತ್ತು ದಾನಿಗಳಿಗೆ ಸನ್ಮಾನ ಸಮಾರಂಭದ ಪಾವನ ಸಾನಿಧ್ಯ ಹಾಗೂ ಉದ್ಘಾಟನೆಯನ್ನು ಶಿವಮೊಗ್ಗದ ಹೊಂಬುಜ ಜೈನಮಠದ ಪ.ಪೂ ಸ್ವಸ್ತಿಶ್ರೀ ಯವರು ಹಾಗೂ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ನೆರವೇರಲಿಸಲಿದ್ದು, ಅಭಿನಂದನ ಪಾಶ್ವನಾಥ ಗೋಗಿ, ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಪದ್ಮರಾಜ ದಂಡಾವತಿ, ಗಣಪತರಾವ್ ಹಜಾರೆ, ಬಾಹುಬಲಿ ಮುತ್ತಿನ, ಅಪ್ಪಾಸಾಹೇಬ ಮುತ್ತಿನ, ಬಾಹುಬಲಿ…

Read More

ಹಳೆ ಪಿಂಚಣಿ ಯೋಜನೆ ಜಾರಿಗೆ ದೆಹಲಿ ತಲುಪಿದ ಭಾರತ ಯಾತ್ರೆ ಆಲಮಟ್ಟಿ: ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಭಾರತ ಬಂದ್ ನಡೆಸಲು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಯೋಜನೆ ರೂಪಿಸುತ್ತಿದೆ ಎಂದು ಎಐಪಿಟಿಎಫ್ ಸಂಘಟನೆಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು. ಗುರುವಾರ ನವದೆಹಲಿಯ ಸಿರಿಪೋರ್ಟ್ ಅಡಿಟೋರಿಯಂ ನಲ್ಲಿ ಅಂತರರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಪ್ರಯುಕ್ತ ನಡೆದ ಭಾರತ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಹಳೆ ಪಿಂಚಣಿ ಯೋಜನೆ ಜಾರಿ ನಮ್ಮ ಹಕ್ಕು, ಎನ್ ಪಿಎಸ್ ನಿಂದ ನೌಕರರ ನಿವೃತ್ತಿ ಬಾಳು ಗಂಭೀರವಾಗಲಿದೆ. ಅದನ್ನು ಹಲವು ರಾಜ್ಯಗಳಲ್ಲಿ ಈಗಾಗಲೇ ರದ್ದಾಗಿದೆ. ಇಡೀ ದೇಶಾದ್ಯಂತ ಈ ಯೋಜನೆ ರದ್ದಾಗಬೇಕು ಎಂಬುದು ನಮ್ಮ ಹೋರಾಟ ಎಂದರು. ಕನ್ಯಾಕುಮಾರಿಯಿಂದ ಆರಂಭವಾದ ಭಾರತ ಯಾತ್ರೆ ೧೦,೦೦೦ ಕಿ.ಮೀ ಸಂಚರಿಸಿ ನವದೆಹಲಿ ತಲುಪಿದೆ. ಆಸ್ಸಾಂನ ಗುಹಾಹಟಿಯಿಂದ ನವದೆಹೆಲಿ, ಪಂಜಾಬ್ ನ ವಾಗಾ ಬಾರ್ಡರ್ ನಿಂದ ನವದೆಹಲಿ, ಗುಜರಾತ್ ನ ಸೋಮನಾಥಪುರದಿಂದ ನವದೆಹಲಿಯವರೆಗೆ ನಾಲ್ಕು ತಂಡಗಳಲ್ಲಿ ಭಾರತ ಯಾತ್ರೆ…

Read More

ಇಂಡಿ: ಪರಿಸರ ಹಾನಿಗೆ ಕಾರಣವಾಗುವ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದ್ದರೂ ಪಟ್ಟಣದ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಚೀಲಗಳ ಬಳಕೆ ನಿಂತಿಲ್ಲ. ಇದನ್ನರಿತ ಆಡಳಿತ ಅಧಿಕಾರಿ, ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಹಾಗೂ ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ ಅಂಗಡಿಗಳ ಮೇಲೆ ದಾಳಿ ಮಾಡಿ ವ್ಯಾಪಾರಸ್ಥರಿಗೆ ದಂಡ ಹಾಕಿದ್ದಾರೆ.ಪಟ್ಟಣದ ವಿಜಯಪುರ ಮುಖ್ಯ ರಸ್ತೆಯಲ್ಲಿ ಟಿಪ್ಪು ಸುಲ್ತಾನ್ ವೃತ್ ಹಾಗೂ ಇತರೆ ಕಡೆ ಪ್ಲಾಸ್ಟಿಕ್ ಮಾರುವ ಅಂಗಡಿಗಳ ಮೇಲೆ ದಾಳಿ ಸುಮಾರು 65 ಕೆಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 10 ಸಾವಿರ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.ಅದಲ್ಲದೇ ಪಟ್ಟಣದ ವ್ಯಾಪ್ತಿಯ ವ್ಯಾಪಾರ ಮಳಿಗೆಗಳು, ರಸ್ತೆ ಬದಿ ವ್ಯಾಪಾರಸ್ಥರು, ಎಗ್‌ರೈಸ್‌ ಅಂಗಡಿಗಳು, ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದರು. ಒಂದು ವೇಳೆ ಕೆಟ್ಟ ಅಭ್ಯಾಸ ಮುಂದುವರೆಸಿದ್ರೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತೆದೆ ಎಂದು ಹೇಳಿದರು.ಪಟ್ಟಣದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ನಿಷೇಧಿಸಲಾಗಿದ್ದು ವ್ಯಾಪಾರಸ್ಥರು ಪ್ಲಾಸ್ಟಿಕ್‌ ಬಳಕೆ ಮಾಡಿದರೆ ದಂಡ ಕೊಡಬೇಕಾಗುತ್ತದೆ. ಕಿರಿಯ ಆರೋಗ್ಯ ನಿರೀಕ್ಷ ಎಲ್ ಎಸ್ ಸೋಮನಾಯಕ,…

Read More

ಯಡ್ರಾಮಿ: ತಾಲೂಕಿನ ಮಳ್ಳಿ ಗ್ರಾಮದ ಯುವ ರೈತ ಶಿವಾನಂದ ಅಯ್ಯಪ್ಪ ಕೋಟ್ಯಾಳ ಇವರು ಎತ್ತುಗಳಿಂದ ಗುರುವಾರ ನಿರಂತರ 10 ಗಂಟೆಗಳ ಕಾಲ ಗಳೆ ಹೊಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ. ಗ್ರಾಮದ ಹಸನ್ ಸಾಬ ಇವರ ಜಮೀನಿನಲ್ಲಿನ 20 ಎಕರೆ ವಿಸ್ತೀರ್ಣದ ಹತ್ತಿ ಬೆಳೆಯಲ್ಲಿ ಎತ್ತುಗಳ ಗಳೆಯಿಂದ ಬದು ಕಟ್ಟಿ ಯುವ ರೈತ ಶಿವಾನಂದ ತನ್ನ ರಾಸುಗಳೊಂದಿಗೆ ಸಾಹಸ ಮೆರೆದಿದ್ದಾನೆ.ಗ್ರಾಮದ ಪ್ರಗತಿಪರ ರೈತ ರಾಜೇಸಾಬ ಮನಿಯಾರ, ಮುಖಂಡ ಖತಾಲ್ ಸಾಬ್ ಬಗರೀಕಾರ, ಮುದುಕಪ್ಪ ಪ್ರಕಾಶ ವಾಲೀಕಾರ, ಸುರೇಶ್ ನಾಟೀಕಾರ ಸಾಹಸವನ್ನು ಮೆಚ್ಚಿ ರಾಸುಗಳಿಗೆ ಬೆಳ್ಳಿ ಕಡೆ ಬಹುಮಾನ ನೀಡಿದರು.ಗ್ರಾಮಸ್ಥರಿಂದ ಮೆಚ್ಚುಗೆ: ಯುವ ರೈತ ಆತನ ರಾಸುಗಳ ಈ ಸಾಹಸಕ್ಕೆ ಗ್ರಾಪಂ ಅಧ್ಯಕ್ಷೆ ಖಾದರಬಿ ರಾಜೇಸಾಬ ಗುಡಿಮನಿ, ಉಪಾಧ್ಯಕ್ಷ ಬಸನಗೌಡ ಮಾಲಿಪಾಟೀಲ್, ಗ್ರಾಪಂ ಸದಸ್ಯರು ಹಾಗೂ ರೈತರಾದ ನಿಂಗನಗೌಡ ಲಕ್ಕೊಂಡ, ಮಲ್ಲಿಕಾರ್ಜುನ ಸಾಲಿ, ಅರವಿಂದಗೌಡ ಪೊಲೀಸ್ ಪಾಟೀಲ, ದೇವು ಮಡಿವಾಳರ, ಧರೆಪ್ಪ ಭಾವಿಕಟ್ಟಿ, ಸುನೀಲ ಕೊಂಡಗೂಳಿ, ಮೋನುದ್ದೀನ್ ಗುಡಿಮನಿ, ಸುರೇಶ ಮಾಳಳ್ಳಿ, ಶಿವಯ್ಯ ಹಿರೇಮಠ,…

Read More