ಆಲಮಟ್ಟಿ: ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಸಮೀಪದ ಬೇನಾಳ ಆರ್.ಎಸ್. ಗ್ರಾಮದ ಬಳಿ ಗುರುವಾರ ಜರುಗಿದೆ.
ಮೃತ ಯುವಕ ಬಸವನಬಾಗೇವಾಡಿ ತಾಂಡಾ (ಸೀಸಮಡ್ಡಿ)ದ ನಿವಾಸಿ ಉಮೇಶ ರಾಮಚಂದ್ರ ಚವ್ಹಾಣ (೨೫).
ಅನಿಲ ರಾಠೋಡ, ಜೀನಾಬಾಯಿ ಚವ್ಹಾಣ, ಸಂತೋಷ ಹಳ್ಳಿ, ಸಂದೇಶ ಕಾಸರ ಗಾಯಗೊಂಡ ಪ್ರಯಾಣಿಕರು.
ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Posts
Add A Comment